ಪ್ರಚಲಿತ

ಪ್ರಧಾನಿ ಮೋದಿ ಅವರಿಗೆ ಮತ್ತೆರಡು ದೇಶಗಳ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪ್ರದಾನ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆರಡು ದೇಶಗಳ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಗಿದೆ.

ಫಿಜಿ ಮತ್ತು ಪಪುವಾ ನ್ಯೂಗಿನಿಯೂ ದೇಶಗಳು ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಿವೆ. ಈ ಪ್ರಶಸ್ತಿಗಳನ್ನು ಪ್ರಧಾನಿ ಮೋದಿ ಅವರು ಮೂರನೇ ಭಾರತ – ಪೆಸಿಫಿಕ್ ದ್ವೀಪಗಳ‌ ಸಹಕಾರ ಶೃಂಗಸಭೆಯಲ್ಲಿ ಭಾಗವಹಿಸಲು ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರದಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ‘ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ’ ಪುರಸ್ಕಾರವನ್ನು ಫಿಜಿಯ ಸಹವರ್ತಿ ಸಿತಿವೇನಿ ರಬುಕಾ ಅವರು ನೀಡಿ ಗೌರವಿಸಿದ್ದಾರೆ. ಹಾಗೆಯೇ ಫಿಜಿ ಹೊರತಾದಂತೆ ಕೇವಲ ಬೆರಳೆಣಿಕೆಯ ಜನರಿಗಷ್ಟೇ ಈ ಪುರಸ್ಕಾರ ಲಭಿಸಿದೆ. ಹಾಗೆಯೇ ‘ಕಂಪ್ಯಾನಿಯನ್ ಆಫ್ ಆರ್ಡರ್ ಆಫ್ ಲೋಗೊಹು’ ನಾಗರಿಕ ಪ್ರಶಸ್ತಿಯನ್ನು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಏಕತೆಯ ಕಾರಣಕ್ಕಾಗಿ ಮತ್ತು ಜಾಗತಿಕ ದಕ್ಷಿಣ ಕಾರಣವನ್ನು ಮುನ್ನಡೆಸಿದ್ದಕ್ಕಾಗಿ ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಸರ್ ಸಾಬ್ ಅವರು ಪ್ರಧಾನಿ ಮೋದಿ ಅವರಿಗೆ ಪ್ರದಾನಿಸಿದರು.

Tags

Related Articles

Close