ಪ್ರಚಲಿತ

ಮತ್ತೆ ಸುಳ್ಳು ಸುದ್ದಿ ಹರಿಬಿಟ್ಟ ಪ್ರಕಾಶ್ ರೈ ಅಲಿಯಾಸ್ ರಾಜ್!! ಈ ಸುಳ್ಳು ಸುದ್ದಿಗೆ ಕರ್ನಾಟಕ ಕಾಂಗ್ರೆಸ್ ಸರಕಾರ ಬಂಧನದ ಶಿಕ್ಷೆ ಕೊಡಲಿದೆಯೇ?!!

ವಾಸ್ತವವಾಗಿ, ಈ ಪ್ರಕಾಶ್ ರಾಜ್ ಅಲಿಯಾಸ್ ರೈ ಗೂ ನಮಗೂ ವೈಯುಕ್ತಿಕವಾದ ಯಾವ ದ್ವೇಷವೂ ಇಲ್ಲ! ಬದಲಾಗಿ, ಅವರ ದ್ವೇಷ ಮನೋಭಾವದ ಬಗೆಗಿದೆ ಅಷ್ಟೇ! ಅದರಲ್ಲಿಯೂ, ದೇಶದ ಒಬ್ಬ ಪ್ರಸ್ತುತ ಪ್ರಧಾನಿಯ ಬಗ್ಗೆ ತುಚ್ಛವಾಗಿ ಮಾತಮನಾಡುವುದು, ಅಥವಾ ಮಾತನಾಡಿದ್ದನ್ನು ಸಮರ್ಥಿಸಿಕೊಳ್ಳುವ ಈ ಮನುಷ್ಯ ಮಾತನಾಡುವುದು ಸೌಹಾರ್ದತೆಯ ಪಾಠವನ್ನು!

ಮನುಷ್ಯತ್ವ, ಭಾರತ, ಬಡತನ ನಿವಾರಣೆ, ಸೌಹಾರ್ದತೆ, ಮಣ್ಣು ಮಸಿ ಎನ್ನುವ ಪ್ರಕಾಶ್ ಮಾತ್ರ, ಹಿಂದೂ ಕಾರ್ಯಕರ್ತರು ಸತ್ತಾಗ ತುಟಿ ಪಿಟಿಕ್ ಎನ್ನುವುದಿಲ್ಲ! ನರೇಂದ್ರ ಮೋದಿ ದ್ವೇಷ ಹರಡುತ್ತಿದ್ದಾರೆ ಎಂದೆಲ್ಲ ಬೊಬ್ಬಿರಿಯುವ ಪ್ರಕಾಶ್ ರೈ ಗೆ ಅತ್ತ ಪಶ್ವಿಮ ಬಂಗಾಳದಲ್ಲಿ ಹಿಂದೂಗಳ ಹಿಂಸೆಯಾದಾಗ ನರ ಮೇಲೇಳುವುದೇ ಇಲ್ಲ! ಎಲ್ಲರಿಗೂ ಸಮಾನ ಹಕ್ಕೆನ್ನುವ ಮತ್ತಿದೇ ಪ್ರಕಾಶ್, ಸಮಾನ ಗೌರವ ಕೊಡಬೇಕೆನ್ನುವ ಈ ಮನುಷ್ಯ ದೇಶದ ಪ್ರಧಾನಿಗೆ ಮಾತ್ರ ‘ಈವ್ಯಾವುದೂ ಅನ್ವಯವಾಗುವುದಿಲ್ಲ” ಎನ್ನುತ್ತಾರೆ!! ಮೋದಿ ಬರೀ ಸುಳ್ಳು ಹೇಳುತ್ತಾರೆ , ನಾಟಕದಲ್ಲಿ ನನ್ನನ್ನೂ ಮೀರಿಸುತ್ತಾರೆ ಎಂದ ಈ ಪ್ರಕಾಶ್ ಸಾಚಾ ಎಂದುಕೊಳ್ಳಬೇಡಿ! ಪರರ ಬಗ್ಗೆ ಹೀಗಳೆಯುತ್ತಲೇ, ಪರರ ಮನೆಯಲ್ಲಿ ಚಾಪೆ ಹಾಸಿದ ಮಹಾಮಹಿಮರಿವರು!

ಅದರಲ್ಲೂ ಇತ್ತೀಚೆಗಂತೂ, ಸಿಕ್ಕಾಪಟ್ಟೆ ಎನ್ನುವಷ್ಟು ರಾಜಕೀಯದಲ್ಲಿ ಸಕ್ರಿಯವಾಗಿ ಮೇಲಿಂದ ಮೇಲೆ ಮಾತನಾಡುತ್ತಿರುವ ಪ್ರಕಾಶರಿಗೆ ಬಹುಷಃ ಈಗ ನಟನೆ ಮಾಡುವುದಕ್ಕೂ ಪುರುಸೊತ್ತಿಲ್ಲವೇನೋ?! ಬಿಡಿ‌‌! ನಿಜ ಬದುಕಿನಲ್ಲಿಯೇ ಖಳ ನಾಯಕನಾದ ಪ್ರಕಾಶ್ ಗೆ ಬಹುಷಃ ಬದುಕೇ ಒಂದು ನಾಟಕ ರಂಗ! ಇಲ್ಲದಿದ್ದರೆ, ಸೈಟು, ಪ್ರಚಾರದ ಹಪಾಹಪಿಗೆ ಬಿದ್ದು ಪೋಸು ಗಿಟ್ಟುಕೊಳ್ಳುತ್ತಿರಲಿಲ್ಲ ವ್ಯಕ್ತಿತ್ವವನ್ನು!

ಪ್ರಕಾಶ್ ರವರ ಎಂಟ್ರಿ ಮಾತ್ರ ಬಹಳ ಮಜವಾಗಿತ್ತು ಬಿಡಿ! ಪಾಪ! ‘ದ ಪರ್ಫೆಕ್ಟ್ ಆ್ಯಾಕ್ಟರ್’ ಆಗಿದ್ದ ಪ್ರಕಾಶ್ ಸುಮ್ಮನೇ ಬಣ್ಣದ ಬದುಕಿನಲ್ಲಿದ್ದಿದ್ದರೆ ಯಾರೇನೂ ಮಾತನಾಡುತ್ತಲೇ ಇರಲಿಲ್ಲ‌! ಆದರೆ ಅದೇನಾಯಿತೋ ನೋಡಿ‌! ಇದ್ದಕ್ಕಿದ್ದಂತೆ ಬಲಪಂಥೀಯರ ಮೇಲಕೆ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮಾಡಿದ ಹತ್ಯೆಯ ಆರೋಪವೊಂದು ಪ್ರಕಾಶ್ ರನ್ನು ಬೀದಿಗೆಳೆದು ಬಿಟ್ಟಿತು‌! ಸಾಮಾಜಿಕ ಜಾಲತಾಣದಲ್ಲಿ ತನ್ನ ರಂಗ ಪ್ರವೇಶವೊಂದು ಫ್ಲಾಪ್ ಆದಾಗಲೇ ಸುಮ್ಮನಾಗಬೇಕಿತ್ತು ಪ್ರಕಾಶ್! ಆದರೆ, ಅಂದುಕೊಂಡಂತೆ ಸುಮ್ಮನಾಗಲೇ ಇಲ್ಲ ಮನುಷ್ಯ! ಇನ್ನೂ ಮರ್ಯಾದೆಯನ್ನು ಹರಾಜಿಗಿಡುತ್ತಲೇ ಹೋದ ಪ್ರಕಾಶ್ ಗೆ ಇನ್ನೂ ಜ್ಞಾನೋದಯವಾಗಿಲ್ಲವೋ ಅಥವಾ, ದೇಶದ್ರೋಹಿ ಸಂಘಟನೆಯೆಂ್ದೇ ಹೆಸರಾದ ಎಸ್ ಡಿ ಪಿ ಐ ಗೆ ಕೈ ಹಿಡಿದು ನಡೆಸುತ್ತೇನೆ ಎಂದ ಫಲವೋ!! ಮೊನ್ನೆ ಮತ್ತೆ ಮೋದಿಯ ವಿರುದ್ಧ ಕಾರಿಕೊಂಡು ಬಿಟ್ಟಿದ್ದಾರೆ ಪ್ರಕಾಶ್!

ಹಾ!! ಪ್ರಧಾನಿ ಮೋದಿಯ ಯುಕೆ ಪ್ರವಾಸವೊಂದು ಯಶಸ್ವೀಯಾಗುತ್ತಿದ್ದಂತೆ, ಪ್ರಕಾಶ್ ರೈ ಗೆ ಏನಾಯಿತೋ ಗೊತ್ತಿಲ್ಲ! ಪ್ರಧಾನಿ ಮೋದಿಯ ಸಂವನವೊಂದು ಯಶಸ್ವಿಯಾಗಿದ್ದರೂ ಸಹ ಪ್ರಕಾಶ್ ಮಾತ್ರ ಉಲ್ಟಾ ಮಾತನಾಡಿದ್ಧಾರೆ! ತಮ್ಮ ಫೇಸ್ ಬುಕ್ ಖಾತೆಯಿಂದ ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿರುವ ಪ್ರಕಾಶ್, ಪ್ರಧಾನಿ ಮೋದಿಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ ಎಂಬರ್ಥದ ತಲೆಬರಹವನ್ನೂ ನೀಡಿದ್ದಾರೆ!!

“Centre can not hold things falling apart “ protests in Uk .. To those who abuse . Troll.. threaten me for #justasking..Do u hear voices getting stronger.. wider..louder ..across the world ..or will you continue to brand us anti national.. #justasking”

ಆದರೆ‌…..

ಅವೆಲ್ಲವೂ ಸುಳ್ಳೇ! ಅನಾದಿಕಾಲದ ಫೋಟೋಗಳನ್ನಿಟ್ಟುಕೊಂಡು ಏನು ಮಾಡಲು ಸಾಧ್ಯವಿದೆ ಹೇಳಿ?! ಮೋದಿಯ ಇತ್ತೀಚೆಗಿನ ಭೇಟಿಗೂ ಅದಕ್ಕೂ ಸಂಬಂಧವೇ ಇಲ್ಲದಿದ್ದರೂ, ಸಹ ಸುಖಾಸುಮ್ಮಬೇ ಸುಳ್ಳು ಸುದ್ದಿ ಹರಡಿರುವ ಪ್ರಕಾಶ್ ರೈ ಬಂಧನ ಯಾವಾಗ ಸ್ವಾಮಿ?! ಕಾಂಗ್ರೆಸ್ ಸರಕಾರ ಈಗ ನೀತಿ ಸಂಹಿತೆ ಎಂದು ಬೇರೆಯದೇ ಕೆಟಗರಿಯಲ್ಲಿ ಪ್ರಕಾಶ್ ರಿಗೆ ಸ್ವಾತಂತ್ರ್ಯ ಕೊಡುತ್ತಿದೆಯೇ?!

ಹಾ! ಪ್ರಕಾಶ್ ಹಾಕಿದ ಫೋಟೋಗಳನ್ನು ಗಮನಿಸಿ!!

ಪೋಟೋ ೧!

ಈ ಮೇಲಿನ ಫೋಟೋ ಇದೆಯಲ್ಲವಾ? ಇದು ೨೦೧೫ ರಲ್ಲಿ ತೆಗೆದದ್ದು! ನರೇಂದ್ರ ಮೋದಿ ಯುನ್ಓ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್ ಗೆ ಭೇಟಿಯಿಟ್ಟಾಗ ಅಲ್ಲಿನ ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು ಮೋದಿಯ ವಿರುದ್ಧ ನಡೆಸಿದ್ದ ಪ್ರತಿಭಟನೆಯ ಚಿತ್ರವಿದು! ಈ ಮುಷ್ಕರದಲ್ಲಿ ಪ್ರೋ-ಖಲಿಸ್ತಾನದ ಪರ ಮತ್ತು ಮೋದಿ-ವಿರೋಧಿ ಘೋಷಣೆಗಳ ಸದ್ದು ಕೇಳಿತ್ತು!

ಫೋಟೋ ೨!

ಇದು ೨೦೧೫ ರ ಸೆಪ್ಟೆಂಬರ್ ತಿಂಗಳಿನಲ್ಲಿ ತೆಗೆದ ಚಿತ್ರ! ಮೋದಿ ಎರಡನೇ ಬಾರಿಗೆ ಅಮೇರಿಕಾಕೆ ಭೇಟಿ ನೀಡಿದಂತಹ ಸಂದರ್ಭ! ಮಾರ್ಕ್ ಜುಕರ್ ಬರ್ಗ್ ನ ಜೊತೆಗಿನ ಸಂವಹನವೊಂದು ಭಾರೀ ಸುದ್ದಿ ಮಾಡಿತ್ತು ಕೂಡಾ!!

೨೦೦೨ ರಲ್ಲಿ ನಡೆದ ಗೋಧ್ರಾ ಗಲಭೆಗೆ ಸಂಬಂಧಿಸಿದಂತೆ ಮೋದಿಯವರ ಮೇಲಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಅಲಯನ್ಸ್ ಫಾರ್ ಜಸ್ಟೀಸ್ ಮತ್ತು ಅಕೌಂಟಾಬಿಲಿಟಿ ಎಂಬ ಸಂಘಟನೆಯೊಂದು ಪ್ರತಿಭಟಿಸುತ್ತಿರುವ ಚಿತ್ರ! ದುರಾದೃಷ್ಟವೇನೆಂದರೆ, ಸ್ವತಃ ಸರ್ವೋಚ್ಛ ನ್ಯಾಯಾಲಯವೇ ಮೋದಿಗೆ ಕ್ಲೀನ್ ಚಿಟ್ ನೀಡಿದ್ದರೂ ಸಹ, ಇವತ್ತಿಗೂ ಪ್ರಕಾಶ್ ರೈ ನಂತಹ ಎಡಪಂಥೀಯರು ಗುಜರಾತ್ ಗಲಭೆಗೆ ಮೋದಿಯೇ ಕಾರಣ ಎನ್ನುವುದು!

ಫೋಟೋ ೩!

ಇದು ೨೦೧೩ ರಲ್ಲಿ ತೆಗೆದ ಚಿತ್ರ! ಅಂದರೆ, ಮೋದಿ ಪ್ರಧಾನಿಯಾಗುವುದಕ್ಕಿಂತಲೂ ಮುಂಚೆ ತೆಗೆದ ಚಿತ್ರವಿದು! ಎಡಪಂಥೀಯ ವಿಚಾರಧಾರೆಗಳ ಕುರಿತು ಭಾಷಣ ಮಾಡಿದ್ದ ಮೋದಿ, ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸರಿಯಾಗಿಯೇ ಕಪಾಳ ಮೋಕ್ಷ ಮಾಡಿದ್ದರು! ಆಗ, ವಿಶ್ವವಿಉದ್ಯಾನಿಲಯದ ಮುಂದೆ ಎಡಪಂಥೀಯ ವಿಚಾರವಾದಿಗಳು ನಡೆಸಿದ್ದ ಪ್ರತಿಭಟನೆಯ ಚಿತ್ರವಿದು!!

ಫೋಟೋ ೪!

ಇದೂ ಸಹ ೨೦೧೫ ರಲ್ಲಿ ತೆಗೆದದ್ದು! ಎರಡನೇ ಫೋಟೋ ಇದೆಯಲ್ಲವಾ?! ಅದೇ ಸಮಯದಲ್ಲಿ ತೆಗೆದ ಫೋಟೋವಿದು!

ಆದರೆ, ಪ್ರಕಾಶ್ ರೈ ಹೇಳಿದ್ದು ಮಾತ್ರ ಬೇರೆಯದನ್ನೇ! ಮೊನ್ನೆ ಮೊನ್ನೆ ನಡೆದ ಪ್ರತಿಭಟನೆಯಿದು ಎಂದು! ಬಿಡಿ! ಪ್ರಕಾಶ್ ರೈ ಗೆ ಇದು ಹೊಸತಲ್ಲ .. ಪ್ರತೀ ದಿನದ ಕರ್ಮದಂತೆ ಸುಳ್ಳು ಸುದ್ದಿ ಹರಡುತ್ತಲೇ ಇರುವ ಪ್ರಕಾಶ್ ರಾಜ್ ಯಾವತ್ತಿಗೂ ಸಹ ಸತ್ಯಸಂಧನಾಗಿರಲೇ ಇಲ್ಲ ಎನ್ನುವುದೂ ಗೊತ್ತಿರುವ ಸಂಗತಿಯೇ! ಈ ಹಿಂದೆ, ಯೋಗಿ ಆದಿತ್ಯನಾಥ್ ರ ಮೇಲೆ ಸುಳ್ಳು ಸುದ್ದಿ ಹರಡಿದ್ದ ಕಾಂಗ್ರೆಸ್ ಸುದ್ದಿಗಳನ್ನು ಮತ್ತೆ ಮತ್ತೆ ಸಮರ್ಥನೆ ಮಾಡಿಕೊಂಡಿದ್ದ ಪ್ರಕಾಶ್ ಮತ್ತೆ ಸುಳ್ಳು ಸುದ್ದಿ ಹರಿಯ ಬಿಟ್ಟಿದ್ದರಷ್ಟೇ! ಅದಾದ ಮೇಲೆ, ಅನಂತ ಕುಮಾರ್ ಹೆಗಡರಯವರ ಹೇಳಿಕೆಗಳನ್ನೂ ಸಹ ಯಶಸ್ವಿಯಾಗಿ ತಿರುಚಿದ್ದ ಪ್ರಕಾಶ್ ರೈ ವಿವಾದ ಎಬ್ಬಿಸಿದ್ದರು!

ಅದರಲ್ಲೂ, ಪ್ರಕಾಶ್ ರೈ ನ ತಿಕ್ಕಲುತನವೊಂದು ರಾಜಕೀಯವಾಗಿ ಅದೆಷ್ಟು ಬಗೆಯಲ್ಲಿ ಬದಲಾಗುತ್ತದೆಂದರೆ, ಮಹಾದಾಯಿ ಬಗ್ಗೆ ಪುಂಖಾನು ಪುಂಖವಾಗಿ ಕಮೆಂಟು ಭಾಷಣ ಬೀಸಿದ್ದ ಇದೇ ಪ್ರಕಾಶ್ ರೈ ಕಾವೇರಿ ವಿವಾದ ದ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ! ಆಡಿದರೆ, ಅತ್ತ ತಮಿಳು ಚಿತ್ರರಂಗ ಹೊರದಬ್ಬುತ್ತದೆ ಎಂಬ ನಡುಕ!

Actor’ @prakashraaj & tale of 2 rivers.

Pic 1: When asked a question on Kaveri issue, walked out angrily. He’s just an actor & it is a political issue (business interests in TN?)

Pic 2: Wades into Mahadayi row, spreads false narratives against BJP.

Sudden Karnataka love?

#JustAsking ಎಂಬ ಟ್ರೆಂಟು ಹುಟ್ಟು ಹಾಕಿ, ಪ್ರಶ್ನೆ ಕೇಳಿದರೆ ನಾನು ದೇಶದ್ರೋಹಿ ಆಗುತ್ತೀನಾ ಎಂದೆಲ್ಲ ಬೋಂಗು ಬಡಾಯಿ ಕೊಚ್ಚಿದ್ದ ಈ ಪ್ರಕಾಶ್ ಗೆ ಸಮಾಜ ವಿರೋಧಿಸಿದ್ದು ಕೇವಲ ಪ್ರಶ್ನೆ ಕೇಳಿದ್ದಕ್ಕಲ್ಲ! ಬದಲಿಗೆ, ಅದೇ ಟ್ರೆಂಡಿಟ್ಟುಕೊಂಡು ದೇಶದ ಪ್ರಧಾನಿಯನ್ನು ಅವಮಾನಿಸಿದ್ದಕ್ಕೆ! ಆಸ್ಕಿಂಗ್ ಎನ್ನುತ್ತಲೇ ಸುಳ್ಳು ಸುದ್ದಿ ಹರಡಿದ್ದಕ್ಕೆ! ರಾಜಕೀಯವಾಗಿ ಬೆಳೆಯಬೇಕೆನ್ನುವ ತೆವಲಿಗೆ ಬಿದ್ದು ಎಸ್ ಡಿಪಿಐ ಎನ್ನುವ ದೇಶ ದ್ರೋಹಿ ಸಂಘದ ಪರ ನಿಂತಿದ್ದಕ್ಕೆ! ಇಂತಹವೆಲ್ಲ, ರಾಷ್ಟ್ರ ದ್ರೋಹದ ಕೆಲಸಗಳೇ!

ಕುಹಕವೆಂದರೆ, ಒಬ್ಬ ಪ್ರಧಾನಿತ ವೈಯುಕ್ತಿಕ ಬದುಕಿನಡೆಗೆ ಅಸಭ್ಯವಾಗಿ ಹೀಗಳೆಯುವ ಪ್ರಕಾಶ್ ರೈಗೆ, ನಾವೂ ಸಹ ವೈಯುಕ್ತಿಕವಾಗೇ ಪ್ರಶ್ನೆ ಮಾಡಿದ್ದೆವು!! ಅಷ್ಟಕ್ಕೇ ಮುರಕೊಂಡು ಬಿದ್ದವನು ನನಗೆ ದುಃಖವಾಗಿದೆ ಎಂದೆಲ್ಲ ಬೊಬ್ಬರಿದ ಇದೇ ಮನುಷ್ಯನಿಗೆ ಮೋದಿಯ ವೈಯುಕ್ತಿಕ ಬದುಕನ್ನು ಸಾರ್ವಜನಿಕವಾಗಿ ಹೀಗಳೆಯುವಾಗ ಅರ್ಥವೇ ಆಗಲಿಲ್ಲವೇ?!

ಇನ್ನಾದರೂ ಪ್ರಕಾಶ್ ಎಚ್ಚೆತ್ತುಕೊಂಡು ಕೊಟ್ಟಸ್ಟು ದುಡ್ಡಿಗೆ ನಟನೆ ಮಾಡಿಕೊಂಡಿದ್ದರೆ ಬಹುಷಃ ಸ್ವಲ್ಪವಾದರೂ ಮರ್ಯಾದೆ ಉಳಿದೀತು!! ಇಲ್ಲವಾದರೆ‌‌‌‌… ಪ್ರಕಾಶ್ ನನ್ನು ಮುಂದೊಂದು ದಿನ ಸಮಾಜವೇ ಬೆತ್ತಲೆ ನಿಲ್ಲಿಸಲಿದೆ ಅಷ್ಟೇ!


ತಪಸ್ವಿ

Tags

Related Articles

Close