ಪ್ರಚಲಿತ

ಮತ್ತೆ ಎಡವಟ್ಟು ಮಾಡಿಕೊಂಡ ಎಡಚರ ಲದ್ದಿಜೀವಿ ಪ್ರಕಾಶ್ ರಾಜ್‌

ಪ್ರಕಾಶ್ ರಾಜ್ ನಟನಾಗಿ ಮಾತ್ರವಲ್ಲ, ದೇಶ ವಿರೋಧಿಯಾಗಿಯೂ ಈಗೀಗ ಹೆಚ್ಚು ಪ್ರ(ಕು)ಖ್ಯಾತಿ ಪಡೆಯುತ್ತಿದ್ದಾರೆ ಎನ್ನುವುದು ಸತ್ಯ. ನಟನಾಗಿ ತೆರೆ ಮೇಲೆ ಮಾತ್ರವಲ್ಲದೆ ದೇಶ ವಿರೋಧಿ ಖಳನಾಯಕನಾಗಿ ನಿಜ ಜೀವನದಲ್ಲಿಯೂ ಭಾರತೀಯರ ಆಕ್ರೋಶಕ್ಕೆ ತುತ್ತಾಗುವ ಮೂಲಕ ದೇಶವಾಸಿಗಳಿಂದ ಉಗಿಸಿಕೊಳ್ಳುತ್ತಿದ್ದಾರೆ. ದಿನಕ್ಕೊಂದರ ಹಾಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಕೊಳಕು ಮನಸ್ಥಿತಿಯನ್ನು ಪ್ರದರ್ಶನಕ್ಕೆ ಇರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಕಳೆದ ಎರಡು ದಿನಗಳ ಹಿಂದೆ ಸನಾತನ ಧರ್ಮದ ಬಗ್ಗೆ, ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಭಾರತೀಯರಿಂದ ಛೀ.. ಥೂ.. ಎಂದು ಉಗಿಸಿಕೊಂಡಿದ್ದ ಪ್ರಕಾಶ್ ರಾಜ್ ಈಗ ಮತ್ತೊಂದು ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಾನು ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆ. ಸನಾತನ ಧರ್ಮಕ್ಕೆ ಹುಟ್ಟಿಲ್ಲ ಎನ್ನುವ ಮೂಲಕ ಸನಾತನ ಹಿಂದೂ ಧರ್ಮವನ್ನು ಮತ್ತೊಮ್ಮೆ ಅವಮಾನಿಸಿದ್ದಾರೆ. ಅವರು ಹಿಂದೆ ಸನಾತನ ಧರ್ಮವನ್ನು ಅಪಮಾನಿಸಿದ್ದ ಟ್ವೀಟ್‌ಗೆ ಬಂದ ಕಾಮೆಂಟ್ ಒಂದರ ಬಗ್ಗೆ ಮಾತನಾಡಿದ್ದು, ನಾನು ‘ಸನಾತನ ಸಂಸತ್’ ಎಂದು ಟ್ವೀಟ್ ಮಾಡಿದ್ದಕ್ಕೆ ಯಾರೋ ಒಬ್ಬ ‘ನೀನು ಸನಾತನ ಧರ್ಮ ಅಲ್ವಾ’ ಎಂಬುದಾಗಿ ಮೇಲಿದ್ದ. ಅದಕ್ಕೆ ನಾನು ‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆ’ ಎಂಬುದಾಗಿ ಹೇಳಿದೆ ಎಂದು ಪ್ರಕಾಶ್ ರಾಜ್ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ಮತ್ತೆ ವಿವಾದವನ್ನು ಸೃಷ್ಟಿ ಮಾಡಿದೆ.

ನಾನು ಧರ್ಮದ ವಿರುದ್ಧ ಅಲ್ಲ. ನನ್ನ ವಿರೋಧ ಏನಿದ್ದರೂ ಪ್ರಧಾನಿ ಮೋದಿ ಮೇಲೆ. ಅವರು ಸಂಸತ್ ಭವನದಲ್ಲಿ ಹೋಮ, ಹವನ ಮಾಡಿದರು. ಅದು ನಮ್ಮದು. ಅಲ್ಲಿ ಹೋಮ ಹವನ ಮಾಡಬಾರದು. ಅದನ್ನು ಬಲವಂತವಾಗಿ ನಮ್ಮ ಮೇಲೆ ಹೇರುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು, ಸನಾತನ ಹಿಂದೂ ಧರ್ಮವನ್ನು ವಿರೋಧಿಸುವ ಭರದಲ್ಲಿ ಪ್ರಕಾಶ್ ರೈ ಅಂತಹ ಎಡಚರ ಕ್ರಿಮಿಗಳು, ಇಡೀ ದೇಶದ ಸ್ವಾಸ್ಥ್ಯ, ಸಮಾಧಾನ ಹಾಳು ಮಾಡುತ್ತಿದ್ದಾರೆ. ಈ ಹಿಂದೆ ಇಸ್ರೋದ ಚಂದ್ರಯಾನದ ಯಶಸ್ಸನ್ನು ಕುಹಕವಾಡಿ ಪ್ರಧಾನಿ ಮೋದಿ, ಇಸ್ರೋ‌ದ ಮಾಜಿ ಅಧ್ಯಕ್ಷ ಶಿವನ್ ಅವರನ್ನು ಅವಹೇಳನ ಮಾಡುವ ಮೂಲಕ ಇಡೀ ದೇಶದ ಜನರ ಕೆಂಗಣ್ಣಿಗೆ ಪ್ರಕಾಶ್ ರಾಜ್ ಗುರಿಯಾಗಿದ್ದರು. ಆ ಸಂದರ್ಭದಲ್ಲಿಯೂ ಪ್ರಕಾಶ್ ರಾಜ್ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮೂಲಕ ಪ್ರಕಾಶ್ ಎಡವಟ್ಟು ಮಾಡಿಕೊಂಡಿದ್ದರು. ಆಗಲೂ ಅವರನ್ನು ಜನತೆ ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಮತ್ತೆ ಸನಾತನ ಧರ್ಮವನ್ನು ಅವಹೇಳನ ಮಾಡುವಂತೆ ಹೇಳಿಕೆ ನೀಡಿ, ಮತ್ತೊಮ್ಮೆ ಕೋಟ್ಯಾಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾತ್ರವಲ್ಲದೆ, ತಾನೊಬ್ಬ ಬುದ್ಧಿ ಹೀನ ಕಿಡಿಗೇಡಿ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿ ನೀಡಿದ್ದಾರೆ. ತನ್ನ ತಲೆಯಲ್ಲಿ ಇರುವುದು ಕೇವಲ ಧೂಳು, ಅಲ್ಲಿ ಬೇರೆಯವರ ಭಾವನೆಗೆ ಬೆಲೆ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಬಲ ಪಂಥ, ಹಿಂದೂಗಳು, ಪ್ರಧಾನಿ ಮೋದಿ ಅವರನ್ನು ನಿಂದಿಸುವ ಮೂಲಕವೇ ಗಂಜಿ ಹುಟ್ಟಿಸಿಕೆೊಳ್ಳುತ್ತಿರುವ ಇಂತಹ ನಾಲಾಯಕ್ಕು ನಾಮರ್ಧರಿಗೆ ಅದ್ಯಾವಾಗ ಬುದ್ಧಿ ಬರುವುದೋ.. ದೇವರೇ ಬಲ್ಲ.

Tags

Related Articles

Close