ಅಂಕಣ

ಹಿಂದೂಗಳನ್ನು ಮತಾಂತರ ಮಾಡುವ ದಂಧೆಗೆ ಅಡ್ಡಿಯಾಗುವವರ ಮೇಲೆ ಸುಳ್ಳು ಕೇಸು ದಾಖಲಿಸುವ ಸೋನಿಯಾ ಗಾಂಧಿಯ ಪರದೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!!

ಆಕೆ ಭಾರತಕ್ಕೆ ಕಾಲಿಟ್ಟಿದೆ ಸುಳ್ಳು ಹೆಸರಿನಿಂದ. ಹಿಂದೂ ಹೆಸರಿನ ಛದ್ಮ ವೇಷಧಾರಿಗಳ ಪರಿವಾರದಲ್ಲಿ ಮೆಲ್ಲನೆ ನುಸುಳಿದ ಆಕೆ ಸದ್ದಿಲ್ಲದೆ ಭಾರತದ ಅತ್ಯುಚ್ಚ ಪದವಿಯನ್ನೆ ಏರಿ ಕುಳಿತುಕೊಳ್ಳುವಂತಾಗಬೇಕಾದರೆ ಆಕೆಯೆ ಹಿಂದಿರುವ ಶಕ್ತಿಗಳು ಅದೆಷ್ಟು ಬಲಿಷ್ಟವಾಗಿರಬೇಕು? ಆಕೆಯ ಮಾರ್ಗಕ್ಕೆ ಅಡ್ಡ ಬರುವ ಯಾವ ವ್ಯಕ್ತಿಯೂ ಜೀವಂತವಾಗಿ ಉಳಿದಿಲ್ಲ. ಕನಿಷ್ಟ ಹತ್ತನೆ ತರಗತಿ ಕೂಡಾ ತೇರ್ಗಡೆಯಾಗದ ಸೋನಿಯಾ ಗಾಂಧಿ ತನ್ನ ಬುದ್ದಿ ಮತ್ತೆಯಿಂದ ಈ ಮಟ್ಟಕ್ಕೆ ಬೆಳೆದದ್ದು ಅಲ್ಲವೆ ಅಲ್ಲ. ಭಾರತವನ್ನು ಮತ್ತು ಹಿಂದೂಗಳನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ವಿದೇಶಿ “ಕೈ”ಗಳೆ ಆವತ್ತಿನಿಂದ ಈವತ್ತಿನವರೆಗೆ ಆಕೆಯನ್ನು ಕಾಯುತ್ತಿರುವುದು.

ಬದ್ದ ಹಿಂದೂ ದ್ವೇಷಿ ಸೋನಿಯಾ, ತನ್ನ ಮತಾಂತರದ ದಂಧೆಗೆ ಅಡ್ಡಿಯಾಗುವವರ ಮೇಲೆ ಒಂದೊ ಸುಳ್ಳು ಕೇಸು ದಾಖಲಾಗುವಂತೆ ಮಾಡುತ್ತಾರೆ ಇಲ್ಲವೆ ಅವರನ್ನು ಈ ಲೋಕದಿಂದಲೇ ಮೇಲೆ ಕಳುಹಿಸಿ ಬಿಡುತ್ತಾರೆ. ಈ ವಿಷಯವನ್ನ ಸ್ವತಃ ಕಾಂಗ್ರೆಸಿನ ವರಿಷ್ಠ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ “ದ ಕೋಯಲಿಶನ್ ಇಯರ್ಸ್ 1996-2012” ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸೋನಿಯಾ ಗಾಂಧಿಯನ್ನು ಪ್ರಣಬ್ ಮುಖರ್ಜಿ ಬಹಳ ಹತ್ತಿರದಿಂದ ನೋಡಿದ್ದಾರೆ. ಆದ್ದರಿಂದ ಆಕೆಯ ಎಲ್ಲಾ ರಹಸ್ಯಗಳು ಅವರಿಗೆ ಗೊತ್ತು. ತಮ್ಮ ಪುಸ್ತಕದಲ್ಲಿ ಯೂಪಿಎ ಕಾಲದ ಸಮ್ಮಿಶ್ರ ಸರಕಾರದ ಕಾಲದಲ್ಲಿ ಹಿಂದುಗಳ ಮೇಲೆ ಮಾಡಲಾದ ಅತ್ಯಾಚಾರಗಳ ಎಳೆ ಎಳೆಯನ್ನು ಬಿಚ್ಚಿಟ್ಟಿದ್ದಾರೆ.

ಸೋನಿಯಾ ಹಿಂದೂ ದ್ವೇಷಕ್ಕೆ ಒಂದು ಉದಾಹರಣೆಯನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಪ್ರಣಬ್ ದಾ. 2004ರಲ್ಲಿ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಕೂಡಲೆ ಯೂಪಿಎ ಮಾಡಿದ ಮೊದಲ ಕೆಲಸ ಕಂಚಿ ಕಾಮಕೋಟಿಯ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರ ಮೇಲೆ ಕೊಲೆ, ಅಶ್ಲೀಲ ಸಿ.ಡಿ ನೋಡುವಿಕೆ ಮತ್ತು ಲೈಂಗಿಕ ಶೋಷಣೆಯ ಆರೋಪದಡಿ ಬಂಧಿಸಿದ್ದು. ಅದೂ ಕೂಡಾ 2500 ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಂತಹ ಪರಂಪರೆಯಾದ ತ್ರಿಕಾಲ ಪೂಜೆಯ ಆಚರಣೆ ಮಾಡಲು ಆಚಾರ್ಯರು ತಯಾರಾಗಿರುವ ಹೊತ್ತಿನಲ್ಲೆ ಅವರನ್ನು ಬಂಧಿಸಲಾಗಿತ್ತು. ಈ ಘಟನೆಯಿಂದ ಪ್ರಣಬ್ ದಾ ಆಘಾತಕ್ಕೊಳಗಾಗಿದ್ದರು. ತಮ್ಮ ಪುಸ್ತಕದಲ್ಲಿ ಅವರು ” ಈ ಬಂಧನದ ಘಟನೆ ನನಗೆ ತುಂಬಾ ಬೇಜಾರುಂಟು ಮಾಡಿತ್ತು. ನಾನು ಕ್ಯಾಬಿನೆಟ್ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದೆ ಕೂಡಾ. ಈ ದೇಶದಲ್ಲಿ ಜಾತ್ಯಾತೀತತೆ ಕೇವಲ ಹಿಂದೂ ಸಂತ-ಮಹಾತ್ಮಾಗಳಿಗಷ್ಟೆ ಸೀಮಿತವೆ? ಯಾವುದೆ ರಾಜ್ಯದ ಪೋಲಿಸರಿಗೆ ಒಬ್ಬ ಮೌಲ್ವಿಯನ್ನು ಈದ್ ಸಮಯದಲ್ಲಿ ಬಂಧಿಸುವ ಛಾತಿ ಇದೆಯೆ?” ಎಂದು ಕೇಳಿದ್ದೆನೆಂದು ಬರೆಯುತ್ತಾರೆ. ಇದೆ ಪುಸ್ತಕದಲ್ಲಿ ತಾವು ರಾಷ್ಟ್ರಪತಿ ಹುದ್ದೆ ಚುನಾಯಿತರಾಗುವ ಮೊದಲು ಬಾಳಾ ಸಾಹೇಬ್ ಠಾಕ್ರೆಯನ್ನು ಭೇಟಿ ಮಾಡಲು ಹೋಗಿದ್ದು ಸೋನಿಯಾ ಅವರಿಗೆ ಇಷ್ಟವಾಗಿರಲಿಲ್ಲ ಎನ್ನುವುದನ್ನೂ ದಾಖಲಿಸಿದ್ದಾರೆ.

ಇಡಿಯ ದಕ್ಷಿಣ ಭಾರತವನ್ನೆ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಮಿಶನರಿಗಳ ಹುನ್ನಾರಕ್ಕೆ ಕಾಂಚಿ ಕಾಮಕೋಟಿಯ ಜಯೇಂದ್ರ ಸರಸ್ವತಿ ಸ್ವಾಮಿಗಳು ಬಲವಾದ ಏಟು ನೀಡಿದ್ದರು. ತಮಿಳುನಾಡಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ದಲಿತರ ಮತಾಂತರವನ್ನು ತಡೆದದ್ದೆ ಅವರು ಮಾಡಿದ ತಪ್ಪು. ದೇವಸ್ಥಾನಕ್ಕೆ ದಲಿತರಿಗೆ ಬರಲಾಗುವುದಿಲ್ಲ ಎಂದು ಮನಗಂಡ ಸ್ವಾಮಿಗಳು ಮೀನಾಕ್ಷಿಪುರಂನಲ್ಲಿ ಸಚಲ ದೇವಸ್ಥಾನಗಳನ್ನು ಮಾಡಿದರು. ದಲಿತರಿಗೆ ದೇವಸ್ಥಾನಕ್ಕೆ ಬರಲಾಗದಿದ್ದರೆ ದೇವಸ್ಥಾನವೇ ದಲಿತರ ಬಳಿ ಬರುವುದು ಎನ್ನುತ್ತಾ ಸಚಲ ದೇವಸ್ಥಾನಗಳನ್ನು ದಲಿತರ ಕೇರಿಗೆ ಕಳುಹಿಸಿ ಮಿಶನರಿಗಳಿಗೆ ಸಡ್ಡು ಹೊಡೆದರು. ಅವರ ಹೊಡೆತ ತಾಲಲಾರದೆ ವಿಷದ ನರಿಗಳು ವಿಲ ವಿಲ ಒದ್ದಾಡತೊಡಗಿದವು ಇದನ್ನು ಅರಿತ ವೆಟಿಕನ್, ಸೋನಿಯಾ ಮತ್ತು ಆಕೆಯ ಸ್ನೇಹಿತೆ ಜಯಲಲಿತಾ ಮೂಲಕ ಜಯೇಂದ್ರ ಸರಸ್ವತಿ ಸ್ವಾಮಿಯವರ ಮೇಲೆ ಸುಳ್ಳು ಅಪವಾದಗಳನ್ನು ಹಾಕಿ ಅವರನ್ನು ಬಂಧಿಸಿ ಅವರಿಗೆ ಕೊಡಬಾರದ ಕಷ್ಟಗಳನ್ನು ಕೊಟ್ಟಿತು.

ಇದೆ ತೆರನಾಗಿ ಕರ್ನಾಟಕದ ರಾಘವೇಶ್ವರ ಭಾರತಿ ಸ್ವಾಮಿಯವರ ಮೇಲೆಯೂ ಲೈಗಿಂಕ ಶೋಷಣೆಯ ಆರೋಪ ದಾಖಲಿಸಿ ಬಂಧಿಸಿರುವುದನ್ನು ನೆನಪಿಸಿ. ಜಯೇಂದ್ರ ಸರಸ್ವತಿ ಸ್ವಾಮಿಗಳ ಮೇಲೆ ಅಥವಾ ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಹಾಕಿದ ಆರೋಪ ಸಾಬೀತು ಮಾಡಲು ಆರೋಪಿಗಳಿಗೆ ಸಾಧ್ಯವಾಗಿಲ್ಲ. ಇಂತಹದೆ ಆರೋಪ ಕರ್ನಲ್ ಪುರೋಹಿತ್, ಸ್ವಾಮಿ ಅಸೀಮಾನಂದ ಮತ್ತು ಸಾಧ್ವಿ ಪ್ರಜ್ಞಾ ಠಾಕೂರರ ಮೇಲೆಯೂ ಹಾಕಲಾಗಿದೆ. ಇದೆಲ್ಲವೂ ವೆಟಿಕನ್ ಪ್ರಾಯೋಜಿತ “ಭಗವಾ ಆತಂಕವಾದದ” ನಾಟಕದ ಅಂಕಗಳು. ಭಾರತದಲ್ಲಿ ಹಿಂದೂ ರಾಷ್ಟ್ರವಾದ ಮರುಕಳಿಸುವುದು ಸೋನಿಯಾ ಮತ್ತು ಆಕೆಯ ಬಾಸ್ ಗಳಿಗೆ ಸುತರಾಂ ಇಷ್ಟವಿಲ್ಲ. ಹಿಂದೂಗಳ ಬಹು ದೊಡ್ಡ ಕೊರತೆ ಅವರಲ್ಲಿ ಒಗ್ಗಟ್ಟಿಲ್ಲದಿರುವುದು. ಹಿಂದೂಗಳ ಈ ಕೊರತೆಯನ್ನು ತನ್ನ ಮತಾಂತರ-ಜಿಹಾದ್ ಧಂಧೆಗಳಿಗೆ ಸೋನಿಯಾ ಗಾಂಧಿಯ ಬಾಸ್ ಗಳು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇಂಥವರ ಕೈಗಳಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ಹಿಂದೂಗಳ ಗತಿ ಏನಾಗುವುದು ಯೋಚಿಸಿ.

ನೇರವಾಗಿ ನಮ್ಮನ್ನೆದುರಿಸುವ ಶತ್ರುಗಳನ್ನು ಸದೆ ಬಡಿಯಬಹುದು ಆದರೆ ತೆರೆಮರೆಯಲ್ಲಿ ನಿಂತು ಯುದ್ದ ಮಾಡುವ ಶತ್ರುಗಳನ್ನು ಸೋಲಿಸುವುದು ಬಲು ಕಷ್ಟ. 2019 ರಲ್ಲಿ ನಾವು ಸೋಲಿಸಬೇಕದ್ದು ಕಾಂಗ್ರೆಸ್-ಕಮ್ಯೂನಿಷ್ಟರನ್ನಲ್ಲ, ಬದಲಾಗಿ ವೆಟಿಕನ್ ಮತ್ತು ದಾವೂದ್ ನಂತಹ ಹಿಂದೂ ದ್ವೇಷಿಗಳನ್ನು. ಮೋದಿ ಪ್ರಧಾನ ಮಂತ್ರಿ ಆದ ಬಳಿಕ ಹೆಚ್ಚುತ್ತಿರುವ ಹಿಂದೂಗಳ ಅಖಂಡತೆಯ ಒಗ್ಗಟ್ಟೆ ಧರ್ಮ ಒಡೆಯುವ ಧರ್ಮಾಂಧರಿಗೆ ಬಹು ದೊಡ್ದ ತಲೆನೋವಾಗಿದೆ. ಅದಕ್ಕೆ ಮೋದಿಯವರನ್ನೆ ಗುರಿಯಾಗಿಸಿ ಅವರ ಮೇಲೆ ತರತರದ ಆರೋಪ ಹೊರಿಸಿ ಗದ್ದುಗೆಯಿಂದ ಇಳಿಸಿ ಬಿಟ್ಟರೆ ಅವರ ಹಾದಿ ಸುಗಮವಾಗುತ್ತದೆ. ಅದಾಗಲು ಹಿಂದೂ ರಾಷ್ಟ್ರವಾದಿಗಳು ಬಿಡಬಾರದು. ಹಿಂದೂಗಳ ಒಗ್ಗಟ್ಟಿನಿಂದಲೆ ಮತಾಂಧರಿಗೆ ಬಲವಾದ ಪೆಟ್ಟು ನೀಡಬೇಕು. ಇಲ್ಲವಾದಲ್ಲಿ ಇಡಿಯ ಭಾರತವನ್ನೆ ಮತಾಂತರ ಮಾಡಿ ಬಿಡುತ್ತಾರೆ ಎಚ್ಚರಿಕೆ ಹಿಂದೂಗಳೆ ಎಚ್ಚರಿಕೆ…

-ಶಾರ್ವರಿ

Tags

Related Articles

Close