ಪ್ರಚಲಿತ

ಬಿಗ್ ನ್ಯೂಸ್! ಸಂಘ ವೇದಿಕೆಯಲ್ಲಿ ಆರ್ಭಟಿಸಿದ ಮಾಜಿ ರಾಷ್ಟ್ರಪತಿ! ಕಾಂಗ್ರೆಸ್ ವಿರೋಧಕ್ಕೆ ಡೋಂಟ್ ಕೇರ್ ಎಂದ ದಾದಾ..!

ದೇಶದೆಲ್ಲೆಡೆ ಭಾರೀ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆರ್ ಎಸ್ ಎಸ್ ವೇದಿಕೆಯಲ್ಲಿ ನಿಂತು ಮಾತನಾಡಿದ್ದಾರೆ!!

ಮೊದಲು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಹೆಡ್ಗೇವಾರ್ ಅವರ ಸ್ಮಾರಕ ಭವನಕ್ಕೆ ತೆರಳಿ  ಗೌರವ ವಂದನೆಯನ್ನು ಸಲ್ಲಿಸಿದರು. ಈ ವೇಳೆ ಅಲ್ಲಿನ ಸಂದರ್ಶನ ಪುಸ್ತಕದಲ್ಲಿ ಬರೆದುಕೊಂಡ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಘ ದಿಗ್ಗಜನನ್ನು ಹಾಡಿ ಹೊಗಳಿದ್ದಾರೆ. ‘ನಾನು ಇಂದು ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮಿಸಲು ಬಂದಿದ್ದೇನೆ.ಹೆಡ್ಗೇಯವರು ಈ ಮಣ್ಣಿನ ಮಗ’ ಎಂದು ಆರಂಭಿಕ ಗೌರವ ಸಲ್ಲಿಸಿದರು.

ನಂತರ ಸಂಘದ ಕೇಂದ್ರ ಕಛೇರಿಗೆ ಭೇಟಿ ನೀಡಿದ ದಾದಾಗೆ ಸಂಘದ ನಾಯಕರು ಸ್ವಾಗತವನ್ನು ಕೋರಿದರು. ನಂತರ ವೇದಿಕೆಯನ್ನೇರಿದ ಪ್ರಣಬ್ ಮುಖರ್ಜಿ ಸಂಘದ ಧ್ವಜಕ್ಕೆ ಹಾಗೂ ಧ್ವಜಗೀತೆಗೆ ವಂದಿಸಿ ಸ್ವಯಂ ಸೇವಕರ ವ್ಯಾಯಾಮಗಳನ್ನು ವೀಕ್ಷಿಸಿದರು.

ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ರಾಷ್ಟ್ರಪತಿಯವರನ್ನು ಆರ್.ಎಸ್.ಎಸ್. ಸಂಘದ ಚಾಲಕ ಮೋಹನ್ ಭಾಗವತ್ ಅಭಿನಂದಿಸಿ ಮಾತನಾಡಿದರು. ‘ಇಂದು ಮಾಜಿ ರಾಷ್ಟ್ರಪತಿಯವರು ಈ ಕಾರ್ಯಕ್ರಮಕ್ಕೆ ಆಗಮಿಸಿದ ವಿಚಾರ ದೇಶದೆಲ್ಲೆಡೆ ಚರ್ಚೆಗಳಾಗುತ್ತಿವೆ. ಪಕ್ಷ ವಿಪಕ್ಷಗಳು ಈ ಬಗ್ಗೆ ವಿಶ್ಲೇಷಣೆಯನ್ನು ಮಾಡುತ್ತಿದ್ದಾವೆ. ಆದರೆ ಇದೊಂದು ಸಾಮಾನ್ಯ ವಿಷಯ. ಪ್ರತಿ ವರ್ಷವೂ ನಮ್ಮ ಕಾರ್ಯಕ್ರಮ ನಡೆಯುತ್ತಿರುತ್ತದೆ. ಇದೊಂದು ಸಾಮಾಜಿಕ ಸಂಘಟನೆ. ಸಂಘ ದೇಶದ ಜನತೆಗೆ ಸೇರಿದ್ದು. ಪ್ರತಿಯೊಬ್ಬರಿಗೂ ಗೌರವ ಕೊಡುವುದು ಅಂತರಾತ್ಮದ ವಿಚಾರವಾಗಿದೇ. ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಂತಹ ದೇಶವಾಗಿದೆ.

Image result for mohan bhagwatv

ಪ್ರಣಬ್ ಅವರು ತಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಕ್ಕೆ ಅವರನ್ನು ಅಭಿನಂದಿಸುತ್ತೇವೆ. ಸಂಘ ಇರುವುದು ಎಲ್ಲಾ ಭಾರತೀಯರಿಗಾಗಿ.ಕೇವಲ ಹಿಂದೂಗಳಿಗೆ ಮಾತ್ರ ಸಂಘ ಅಲ್ಲ. ಎಲ್ಲಾ ಭಾರತೀಯರನ್ನು ಒಗ್ಗೂಡಿಸಿಕೊಂಡು ಹೋಗುವುದೇ ಸಂಘದ ಧ್ಯೇಯ. ಭಾರತದ ಸಹಿಷ್ಣುತೆಗೆ ಅಮೋಘ ಇತಿಹಾಸವಿದೆ. ಆದರೆ ಇಷ್ಟೆಲ್ಲಾ ಅಸಹಿಷ್ಣುತೆ ಇಟ್ಟುಕೊಳ್ಳುವುದು ಸರಿಯಲ್ಲ. ಪ್ರಣಬ್ ರಂತಹ ಮಾರ್ಗದರ್ಶನವನ್ನು ಸಂಘ ಬಯಸುತ್ತದೆ. ಹಿಂದೂ ಸಮಾಜ ಭಾರತದ ಜವಭ್ಧಾರಿಯುತ ಸಮಾಜ. ಕಾಂಗ್ರೆಸ್ ಕೂಡಾ ದೇಶ ಕಟ್ಟುವ ಕೆಲಸದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಬಹುದು.ಈ ಹಿಂದೆಯೂ ಕಾಂಗ್ರೆಸ್ ನಾಯಕರು ನಮ್ಮೊಂದಿಗೆ ಕೆಲಸ ಮಾಡಿದ್ದರು. ಹೆಡ್ಗೇವಾರ್ ಕೂಡಾ ಕಾಂಗ್ರೆಸ್ ಸದಸ್ಯರಾಗಿ ಜೈಲು ಸೇರಿದ್ದರು’ ಎಂದು ಸಂಘ ವಿರೋಧಿಗಳಿಗೆ ಇತಿಹಾಸದ ಪಾಠವನ್ನು ಭಾಗವತ್ ಹೇಳಿದರು.

Image result for pranb mukhaji

ಆರ್‍ಎಸ್‍ಎಸ್ ಅನ್ನು ಹಾಡಿ ಹೊಗಳಿದ ಮಾಜಿ ರಾಷ್ಟ್ರಪತಿ

ಕಾಂಗ್ರೆಸ್ಸಿಗರೆ ವಿರೋಧದ ನಡುವೆಯೂ ಭಾಷಣ ಆರಂಭಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್ ಅನ್ನು ಹಾಡಿ ಹೊಗಳಿದ್ದಾರೆ!! ಭಾರತದ ಸಂಸ್ಕøತಿಗೆ ಇಡೀ ರಾಷ್ಟ್ರವೇ ತಲೆಬಾಗಿದಲ್ಲದೆ, ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ!! ಅದಲ್ಲದೆ ಇಡೀ ಏಷ್ಯಾದಲ್ಲಿಯೂ ಹಿಂದೂ ಪ್ರಭಾವ ಅತೀವವಾಗಿ ಬೆಳೆದಿದೆ!! ಭಾರತ ದೇಶದಲ್ಲಿ ತಕ್ಷಶಿಲಾ, ನಲಂದಾ ವಿಶ್ವವಿದ್ಯಾನಿಲಯದಂತಹ ಶಿಕ್ಷಣ ಕ್ಷೇತ್ರಗಳಿದ್ದು, ಇಂದು ನಾವು ಶಿಕ್ಷಣ ಕ್ಷೇತ್ರದಲ್ಲಿ ಮೇಲ್ಗೈ ಸಾಧಿಸಿದ್ದೇವೆ!! ಅದಲ್ಲದೆ ಭಾರತದಲ್ಲಿರುವ ಎಲ್ಲಾ ಜನರು ವಿಶಾಲ ಹೃದಯಿಗಳಾಗಿದ್ದು ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿದೆ!! ಭಾರತ ದೇಶವು ಮಹಾನ್ ವಿದ್ವಾಂಸರನ್ನೊಳಗಿದ್ದು ಮೌರ್ಯ, ಗುಪ್ತರಂತಹ ಅನೇಕ ರಾಜವಂಶಗಳು ಇಲ್ಲಿ ಆಳ್ವಿಕೆ ನಡೆಸಿದ್ದು ಭಾರತವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ!! ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶವು ಧಾರ್ಮಿಕ ಎಲ್ಲೆಯನ್ನೂ ಎಲ್ಲೂ ಮೀರಲಿಲ್ಲ!! ಎಲ್ಲಾ ಧರ್ಮಗಳ ಸಮ್ಮಿಲನವೇ ಭಾರತ!! ಸರ್ಧಾರ್ ವಲ್ಲಭಬಾಯಿಯಂತಹ ಅನೇಕ ಜನರು ಈ ದೇಶದ ಜನರ ಒಗ್ಗೂಡಿಕೆಗೆ ಶ್ರಮವನ್ನು ವಹಿಸಿದ್ದಾರೆ ಎಂದರು. ಒಟ್ಟಿನಲ್ಲಿ ಎಲ್ಲಾ ಕಾಂಗ್ರೆಸ್ಸಿಗರ ವಿರೋಧರ ನಡುವೆಯೂ ಮಾಜಿ ರಾಷ್ಟ್ರಪತಿ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜವಾಗಿಯೂ ಆರ್‍ಎಸ್‍ಎಸ್‍ನ್ನು ದೂರುತ್ತಿದ್ದವರು ಕ್ರಮೇಣವಾಗಿ ಆರ್‍ಎಸ್‍ಎಸ್‍ನ್ನು ಅಪ್ಪಿಕೊಳ್ಳುತ್ತಿದ್ದು ಹಿಂದೂ ಸಂಸ್ಕøತಿ ಎಲ್ಲಡೆ ಬೇರೂರಿದೆ ಅಂತನಿಸುತ್ತಿದೆ!!

sunil panapila

Tags

Related Articles

Close