ಪ್ರಚಲಿತ

ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ಬದ್ದ: ಪ್ರಧಾನಿ ಮೋದಿ

ಸಾಮಾಜಿಕ ನ್ಯಾಯದ ಬಗ್ಗೆ ವಿಪಕ್ಷಗಳು ಸುಮ್ಮನೆ ಮಾತನಾಡುತ್ತಾರೆ. ಆದರೆ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿಯ ೪೪ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅವರು, ಪ್ರತಿಪಕ್ಷಗಳು ಹತಾಶ ಸ್ಥಿತಿಗೆ ಬಂದು ತಲುಪಿವೆ. ಆದರೆ ೨೦೨೪ ರಲ್ಲಿಯೂ ಬಿಜೆಪಿಯನ್ನು ಸೋಲಿಸುವುದಕ್ಕೆ ಯಾವ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಈ ಹಿಂದೆ ಪ್ರತಿಭಟನೆ ಕೊ ದರ ಸಂದರ್ಭದಲ್ಲಿ ‘ಮೋದಿ ನಿಮ್ಮ ಸಮಾಧಿ ತೋಡುತ್ತೇವೆ’ ಎಂಬುದಾಗಿ ಹೇಳಿದ್ದನ್ನು ಸಹ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕನೊಬ್ಬನ ವಿರುದ್ಧ ಪ್ರಕರಣ ದಾಖಲಾದ ಸುಂದರ್ಭದಲ್ಲಿ ಕಾಂಗ್ರೆಸ್ ಈ ಹೇಳಿಕೆ ನೀಡಿತ್ತು. ಈ ಘಟನೆಯನ್ನು ಸಹ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ಭಾರತದಲ್ಲಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥಿತೆ ಕಾಪಾಡುವ ನಡುವೆ ಇರುವ ಸವಾಲುಗಳನ್ನು ಜಯಿಸಲು ಬಿಜೆಪಿ ಹೋರಾಟ ನಡೆಸುತ್ತದೆ. ಇದಕ್ಕಾಗಿ ಬಿಜೆಪಿ ಹನುಮಂತ ದೇವರಿಂದ ಸ್ಪೂರ್ತಿ ಪಡೆದಿದೆ. ಹನುಮನಂತೆ ನಾವು ಸಮಯಕ್ಕನುಗುಣವಾಗಿ ಕಠೋರವಾಗಿ, ವಿನಮ್ರರಾಗಿ, ಸಹಾನುಭೂತಿ ಹೊಂದಿದವರಾಗಿರುವುದಾಗಿಯೂ ಅವರು ಹೇಳಿದ್ದಾರೆ.

ಬಿಜೆಪಿ ೨೦೧೪ ರಲ್ಲಿ ಪೂರ್ಣ ಬಹುಮತದೊಂದಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದು ೮೦೦ ವರ್ಷಗಳ ಗುಲಾಮಗಿರಿಗೆ ವಿದಾಯ ಹಾಡುವ ಬದಲಾವಣೆಯನ್ನು ಭಾರತೀಯ ರಾಜಕೀಯದಲ್ಲಿ ತಂದಿರುವುದಾಗಿ ಅವರು ಹೇಳಿದ್ದಾರೆ. ಬಿಜೆಪಿಗೆ ದೇಶವೇ ಮೊದಲು ಆಗಿದ್ದು, ಪಕ್ಷ ದೇಶದ ಎಲ್ಲಾ ವರ್ಗಗಳ ಸಬಲೀಕರಣಕ್ಕಾಗಿ ಶ್ರಮಿಸಿರುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲರ ಕೈ, ಎಲ್ಲರ ಬೆಂಬಲ, ಎಲ್ಲರ ಪ್ರಯತ್ನದಲ್ಲಿ ಬಿಜೆಪಿ ನಂಬಿಕೆ ಇರಿಸಿರುವುದಾಗಿಯೂ ಮೋದಿ ಹೇಳಿದ್ದಾರೆ.

Tags

Related Articles

Close