ಪ್ರಚಲಿತ

ಮೋದಿಯನ್ನೇ ಬೆಚ್ಚಿ ಬೀಳಿಸಿದ ಮಂಗಳೂರು ಜನತೆ.! ಭದ್ರತೆಯನ್ನು ಮೀರಿಯೂ ರಸ್ತೆಮಧ್ಯೆಯೇ ಕಾರಿನಿಂದ ಹೊರಬಂದ ವಿಶ್ವನಾಯಕ…

ಹಿಂದಿನಿಂದಲೂ ಮಂಗಳೂರು ಸಮಾವೇಶ ಎಂದರೆ ಪ್ರಧಾನಮಂತ್ರಿ ಮೋದಿಯವರಿಗೆ ಅಚ್ಚು ಮೆಚ್ಚು. ಮಂಗಳೂರಿನ ಸಮಾವೇಶ ಕೇವಲ ಜನಸೇರಿಸುವ ಸಮಾವೇಶವಾಗದೆ ಅದು ಅಕ್ಷರಶಃ ಅಬ್ಬರಿಸುವ ಕಡಲಿನ ಅಲೆಗಳಾಗುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿಂದೆಯೂ ಮೋದಿಯವರು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಅಭೂತಪೂರ್ವ ಸ್ವಾಗತ ಕೋರಿದ್ದ ಮಂಗಳೂರು ಜನತೆ ಇದೀಗ ಮತ್ತೆ ಮೋದಿಯವರನ್ನೇ ಬೆಚ್ಚಿ ಬೀಳಿಸುವಂತೆ ತಮ್ಮ ಬೆಂಬಲವನ್ನು ತೋರ್ಪಡಿಸಿದ್ದಾರೆ.

ಕಡಲ ಕಿನಾರೆಯಲ್ಲಿ ಅಲೆಗಳಬ್ಬರ.!

ಕಡಲ ಕಿನಾರೆ ಮಂಗಳೂರಿನಲ್ಲಿ ಬೃಹತ್ ಮೋದಿ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಸುಮಾರು 1 ಲಕ್ಷದ ಅಂದಾಜಿನ ಸಂಖ್ಯೆಯಲ್ಲಿ ಜನ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪ್ರತೀ ಬಾರಿಯಂತೆ ಈ ಬಾರಿಯೂ ಮೋದಿ ಸಮಾವೇಶ ತ್ಸುನಾಮಿಯಾಗಿ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸುವ 2 ಗಂಟೆಗಳ ಮೊದಲೇ ಮಂಗಳೂರಿನ ಕೇಂದ್ರ ಮೈದಾನ ಭರ್ತಿಯಾಗಿತ್ತು. ತುಂಬಿ ತುಳುಕುತ್ತಿದ್ದ ಕೇಂದ್ರ ಮೈದಾನ ಕೇಸರಿ ಅಲೆಗಳಂತೆ ಕಾಣುತ್ತಿತ್ತು. ಮೋದಿಯವರು ಆಗಮಿಸುವ ಮಂಗಳೂರಿನ ಬಜಪೆ ಕೆಂಜಾರು ವಿಮಾನ ನಿಲ್ದಾಣದಿಂದ ಮಂಗಳೂರಿನವರೆಗೂ ಜನರು ದಾರಿ ಬದಿಯಲ್ಲಿ ನಿಂತು ಭರ್ಜರಿ ಸ್ವಾಗತವನ್ನು ಕೋರಿದ್ದರು. ಇಂತಹಾ ಸ್ವಾಗತವನ್ನು ಕಂಡು ಸ್ವತಃ ಮೋದಿಯವರೇ ಬೆರಗಾಗಿದ್ದರು.

2 ಲಕ್ಷದವರೆಗಿನ ಜನತೆ ಮೈದಾನದಲ್ಲೇ ಭರ್ತಿಯಾಗಿದ್ದರೆ ಲಕ್ಷಕ್ಕೂ ಅಧಿಕ ಮಂದಿ ಮೈದಾನದ ಹೊರಗೆ ಅಂದರೆ ದಾರಿಯುದ್ದಕ್ಕೂ ಇದ್ದರು. ಇದನ್ನು ಕಂಡು ಪ್ರಧಾನಿ ಮೋದಿಯವರು ಜನರ ಪ್ರೀತಿಗೆ ಮೈಮರೆತಿದ್ದರು. ಭದ್ರತೆಯನ್ನು ಲೆಕ್ಕಿಸದೇ ಕಾರಿನಿಂದ ಹೊರಬಂದು ಜನರತ್ತ ಕೈಬೀಸಿದರು. ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆರೆದಿದ್ದ ಜನರು ಮೋದಿ ಮೋದಿ ಘೋಷಣೆ ಕೂಗಿದ್ದರು. ಪ್ರಧಾನಿಯವರು ಮಂಗಳೂರು ಜನತೆಯ ಪ್ರೀತಿಗೆ ಮಾರುಹೋಗಿದ್ದರು.

ತನ್ನ ಭಾಷಣ ಆರಂಭಿಸುವಾಗಲೂ ಮೋದಿ ಜನರ ಪ್ರೀತಿಯನ್ನು ಕಣ್ಣಾರೆ ಕಂಡಿದ್ದರು. ಮೈದಾನದಲ್ಲಿ ಕಿಕ್ಕಿರಿದು ಜನಸ್ತೋಮಕ್ಕೆ ಅನೇಕ ಜನರು ಮೈದಾನದಿಂದ ಹೊರಗುಳಿದಿದ್ದರೆ ಇನ್ನೂ ಕೆಲವರು ಮೋದಿಯವರ ಭಾಷಣವನ್ನು ನೋಡಲೇಬೇಕು ಎನ್ನುವ ಹಂಬಲದೊಂದಿಗೆ ಮರವನ್ನೇರಿದ್ದರು. ಇದನ್ನು ಕಂಡ ಮೋದಿಯವರು “ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ದಯವಿಟ್ಟ ಮರದಿಂದ ಕೆಳಗಿಳಿಯಿರಿ. ನಿಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಿ” ಎಂದು ಹೇಳಿದ್ದರು. ಮಾತ್ರವಲ್ಲದೆ ವಿಮಾಣ ನಿಲ್ದಾಣದಿಂದ ಇಲ್ಲಿಯವರೆಗೂ ಜನರಸ್ತೋಮವನ್ನು ಕಂಡು ಪುಳಕಿತನಾಗಿದ್ದೇನೆ ಎಂದು ಹೇಳಿದ್ದರು. ಇನ್ನು ತನ್ನ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲೂ ಮಂಗಳೂರಿನ ಜನತೆಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಒಟ್ಟಾರೆ ಮಂಗಳೂರಿನ ಜನತೆ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಭವ್ಯವಾಗಿ ಸ್ವಾಗತಿಸುವುದರ ಮೂಲಕ ಮೋದಿಯವರ ಮೂಕವಿಸ್ಮಿತೆಗೆ ಕಾರಣವಾಗಿದ್ದಾರೆ. ಇಡಿಯ ದೇಶದಲ್ಲಿ ಮಂಗಳೂರು ಸಮಾವೇಶದ ಬಗ್ಗೆ ಚರ್ಚೆ ನಡೆಯುತ್ತಿದ್ದು ಮತ್ತೊಮ್ಮೆ ಮಂಗಳೂರು ಹಾಗೂ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close