ಪ್ರಚಲಿತ

ಭಾರತ್ ಜೋಡೋ ಯಾತ್ರೆಯ ಕೊನೆಯಲ್ಲಿ ಮೋದಿ ಪರವಾಗಿ ಪ್ರಚಾರ ಮಾಡಿದ ರಾಹುಲ್: ಏನಿದು ಹೊಸ ಆಟ?

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಹೆಸರಿನಲ್ಲಿ ನಡೆದ ಯಾತ್ರೆ ಮೊನ್ನೆಯಷ್ಟೇ ಜಮ್ಮು ಕಾಶ್ಮೀರದಲ್ಲಿ ಸಮಾರೋಪವಾಗಿದೆ. ಭಾರತವನ್ನು ಜೋಡಿಸುವ ಹೆಸರಿನಲ್ಲಿ, ಭಾರತವನ್ನು ತುಂಡರಿಸುವ, ದ್ವೇಷ ಬಿತ್ತುವ ಯಾತ್ರೆ ಕೊನೆಗೂ ಅಂತ್ಯವಾಗಿದೆ.

ಈ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ಅವರು ‘ಕಾಶ್ಮೀರದ ಜನರು ಈ ಯಾತ್ರೆಗೆ ಪ್ರೀತಿ, ವಾತ್ಸಲ್ಯಗಳನ್ನು ನೀಡಿದ್ದಾರೆ. ಬದಲಾಗಿ ಗ್ರೆನೇಡ್ ದಾಳಿ ನಡೆಸಿಲ್ಲ’ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ನಾಯಕರು ಸಹ ನನ್ನ ಹಾಗೆ ಯಾವುದೇ ಭಯವಿಲ್ಲದೆ ಓಡಾಡಬಹುದು. ಕಾಶ್ಮೀರದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸುವ ಬಗೆಗೂ ಭಾವನಾತ್ಮಕವಾಗಿ ಮಾತನಾಡಿರುವ ರಾಹುಲ್ ಗಾಂಧಿ, ಆ ಮೂಲಕ ಕಾಶ್ಮೀರದ ಜನರ ಕಿವಿಗೂ ದಾಸವಾಳ ಹೂವಿಟ್ಟು ಮೋಸಗೊಳಿಸಲು ಪ್ರಯತ್ನ ನಡೆಸಿದ್ದಾರೆ.

ರಾಹುಲ್ ಗಾಂಧಿಯವರು ಮಾತಿನ ಭರದಲ್ಲಿ, ಜಮ್ಮು ಕಾಶ್ಮೀರದಲ್ಲಾಗಿರುವ ಅಮೋಘ ಬದಲಾವಣೆಯನ್ನು ಗುರುತಿಸಿರುವುದು ಸ್ವಾಗತಾರ್ಹ. ಈ ಹಿಂದೆ ಭಾರತದ ಆಡಳಿತ ಚುಕ್ಕಾಣಿಯನ್ನು ಪ್ರಧಾನಿ ಮೋದಿ ಅವರು ವಹಿಸಿಕೊಳ್ಳುವುದಕ್ಕೂ ಮುನ್ನ ಅಂದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಹೋಗಲು ಗುಂಡಿಗೆ ಗಟ್ಟಿ ಇರಬೇಕಿತ್ತು. ಪ್ರಾಣದ ಮೇಲೆ ಆಸೆ ಇಲ್ಲದವರಷ್ಟೇ ಕಾಶ್ಮೀರಕ್ಕೆ ತೆರಳಬಹುದು ಎನ್ನುವ ಸ್ಥಿತಿ ನಿರ್ಮಾಣ ಆಗಿತ್ತು. ಭಯೋತ್ಪಾದಕರ ತಾಣವಾಗಿದ್ದ ಜಮ್ಮು ಕಾಶ್ಮೀರ ಹಿಂಸಾತ್ಮಕ ಘಟನೆಗಳು ಕಡಿಮೆಯಾಗಿ, ಭಾರತೀಯರೆಲ್ಲರಿಗೂ ಮುಕ್ತವಾಗಿದ್ದು ಪ್ರಧಾನಿ ಮೋದಿ ಅವರ ಕಾರಣದಿಂದಾಗಿ. ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ ೩೭೦ ನೇ ವಿಧಿಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ ಎನ್ನುವುದರ ಅನುಭವ ಸಂಪೂರ್ಣ ದೇಶಕ್ಕಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯಾವ ಉಗ್ರರನ್ನು ರಾಹುಲ್ ಗಾಂಧಿ ಅವರ ಕೇಂದ್ರ ಸರ್ಕಾರ ಪೋಷಿಸುತ್ತಿತ್ತೋ, ಅಂತಹ ಭಯೋತ್ಪಾದಕರನ್ನು ಮಟ್ಟ ಹಾಕಿದ್ದು ಸಹ ಇದೇ ಮೋದಿ ಸರ್ಕಾರ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾಶ್ಮೀರದಲ್ಲಿ ದೇಶದ್ರೋಹದ ಕೃತ್ಯಗಳೇ ನಡೆಯುತ್ತಿದ್ದಿದ್ದು. ಆದರೆ, ಮೋದಿ ಆಡಳಿತಕ್ಕೆ ಬಂದ ಬಳಿಕ ಉಗ್ರ ಸಂಖ್ಯೆ ಅಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಮಾತ್ರವಲ್ಲದೆ ದೇಶವನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿದೆ.

ಹೀಗಿರುವಾಗ ಪ್ರಧಾನಿ ಮೋದಿ ಅವರಿಂದ ಕಾಶ್ಮೀರ ಮಂಜಿನಂತೆ ಕೂಲ್ ಕೂಲ್ ಆಗಿರುವಾಗ, ಅಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವುದು ಹೇಗೆ ಸಾಧ್ಯ ಕಾಂಗ್ರೆಸಿಗರೇ. ಕಾಶ್ಮೀರ ವನ್ನು ಮೋದಿ ಅವರು ಭಾರತದ್ದೇ ಒಂದು ರಾಜ್ಯ ಎಂದು ಪರಿಚಯಿಸಿದ ಮೇಲೆ, ಕಾಶ್ಮೀರವನ್ನು ಭಾರತದಿಂದ ವಿಭಜಿಸುವ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ಕಾಶ್ಮೀರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?

ಅದೇನೇ ಇರಲಿ, ಒಟ್ಟಿನಲ್ಲಿ ಕಾಂಗಿಗಳ ಆಡಳಿತದಲ್ಲಿ ಹಿಂಸೆಗೆ ಹೆಸರಾಗಿದ್ದ ಕಾಶ್ಮೀರ, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಕೂಲ್ ಕೂಲ್ ಆಗಿದೆ. ಈ ಸತ್ಯವನ್ನು ಸ್ವತಃ ಕಾಂಗ್ರೆಸ್ ನಾಯಕ ಪಪ್ಪುವೇ ಒಪ್ಪಿದ್ದಾಗಿದೆ. ದೇಶ ಅಭಿವೃದ್ಧಿ ಹೊಂದುತ್ತಿರುವುದನ್ನು ಮನಗಂಡಾದರೂ ಕಾಂಗ್ರೆಸ್ ಪಕ್ಷ ದೇಶ ಒಡೆಯುವ, ದೇಶಕ್ಕೆ ಮಾರಕವಾಗುವ ಬುದ್ಧಿ ಬಿಡುವಂತಾಗಲಿ ಎನ್ನುವುದೇ ದೇಶವಾಸಿಗಳ ಮನದಾಳ.

Tags

Related Articles

Close