ಪ್ರಚಲಿತ

ರಾಹುಲ್ ಫೇಲ್ ಆಗಿದ್ದು ಹೇಗೆ?ಚೌಕಿದಾರ್ ಚೋರ್ ಎಂದವನಿಗೆ ಕಪಾಳಮೋಕ್ಷ ಮಾಡಿದ ಸುಪ್ರೀಂ ಕೋರ್ಟ್.!

 ೨೦೧೯ ರ ಲೋಕ ಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಅತಿಯಾಗಿ ಬಳಸಿಕೊಂಡದ್ದು ರಫೆಲ್ ಡೀಲ್ ನ ವಿಷಯ.೫ ವರ್ಷಗಳ ಕಾಲ ಮೋದಿಜಿ ನೇತೃತ್ವದ ಬಿಜೆಪಿ ಸರಕಾರ ಯಾವುದೇ ಭ್ರಷ್ಟಾಚಾರ ಇಲ್ಲದೆಯೇ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ವಿಷಯವಾಗಿತ್ತು..ಹಲವಾರು ಉತ್ತಮ ಜನಪರ ಯೋಜನೆಗಳೊಂದಿಗೆ ಹೆದ್ದಾರಿ ನಿರ್ಮಾಣ,ಉಜ್ವಲ ಯೋಜನಾ ಮತ್ತಿತರ ಸಮಾಜ ಮುಖಿ ಕಾರ್ಯಗಳಿಂದ ಅದಾಗಲೇ ಜನರ ಮನದಲ್ಲಿ ಬಿಜೆಪಿ ಸರಕಾರದ ಬಗ್ಗೆ ಉತ್ತಮ ಭಾವನೆಗಳು ಮೂಡಿದ್ದವು..ಅಸಹಿಷ್ಣುತೆ,ಹಿಂದೂ ಕೋಮವಾದ ಇತ್ಯಾದಿಗಳಿಂದ ಜಾತಿ ರಾಜಕಾರಣ ಮಾಡಲು ಹೊರಟಿದ್ದ ಕಾಂಗ್ರೆಸ್ ಗೆ ಈ ಉಪಾಯವೂ ಫಲಿಸದೆಂದು ಖಂಡಿತವಾಗಿಯೂ ಗೊತ್ತಿತ್ತು.ಅದಕ್ಕಾಗಿ ಕಾಂಗ್ರೆಸ್ ಆಯ್ದುಕೊಂಡಿದ್ದೆ ರಫೆಲ್ ಒಪ್ಪಂದವನ್ನು. ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಜನರ ಮನದಲ್ಲಿ ಅದುವೇ ಸತ್ಯವೆಂಬ ಭಾವನೆ ನೆಲೆಸುತ್ತದೆ ಎಂಬ ವಿಷಯದ ಮೇಲೆ ಗಟ್ಟಿಯಾದ ನಂಬಿಕೆಯನ್ನು ಹೊಂದಿರುವ ಕಾಂಗ್ರೆಸ್ ಲೋಕಸಭೆಯ ಚುನಾವಣಾ ಪ್ರಚಾರದುದ್ದಕ್ಕೂ “ ಚೌಕಿದಾರ್ ಚೋರ್ ಹೇ” ಎಂಬುದನ್ನೇ ಘೋಷವಾಕ್ಯವನ್ನಾಗಿ ಬಳಸಿಕೊಂಡಿತ್ತು.ಆದರೆ ಈ ಬಾರಿ ಕಾಂಗ್ರೆಸ್ ನ ಕುಟಿಲ ತಂತ್ರ ಫಲಿಸಲಿಲ್ಲ..ನೂರಲ್ಲ ಸಾವಿರ ಬಾರಿ ಹೇಳಿದರೂ,ಸಾಮಾನ್ಯ ನಾಗರೀಕರಿಗೆ ಮೋದಿಜಿಯ ಮೇಲೆ ಗಟ್ಟಿಯಾದ ನಂಬಿಕೆಯಿತ್ತು.
  ಪ್ರತೀ ಬಾರಿ ರಾಹುಲ್ ಗಾಂಧಿಯ ಸುಳ್ಳುಗಳನ್ನು ಹಾಸ್ಯವೆಂದು ಪರಿಗಣಿಸಿ ನಕ್ಕು ಸುಮ್ಮನಾಗುತ್ತಿದ್ದ ಬಿಜೆಪಿ ಈ ಬಾರಿ ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿತು. ಡೆಲ್ಲಿಯ ಸಂಸದೆ ಮೀನಾಕ್ಷಿ ಲೇಖಿ ರಾಹುಲ್ ಗಾಂಧೀ ಸುಳ್ಳು ಹರಡುತ್ತಿದ್ದಾರೆ ಎಂದು ಎಫ್ ಐ ಆರ್ ದಾಖಲಿಸಿದರು. ಇದರ ನಡುವೆಯೇ ಕಾಂಗ್ರೆಸ್ ರಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೋರ್ಟ್ ನ ಮೊರೆ ಹೋಗಿತ್ತು. ಮತ್ತು ಸುಪ್ರೀಂ ಕೋರ್ಟ್ ಅಂತಹಾ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಕೇಂದ್ರ ಸರಕಾರದ ಪರವಾಗಿ ತೀರ್ಪು ನೀಡಿತ್ತು.ತೀರ್ಪು ತನ್ನ ಆರೋಪಗಳಿಗೆ ವಿರುದ್ಧವಾಗಿ ಬಂದರೂ ರಾಹುಲ್ ಗಾಂಧೀ ಸುಮ್ಮನಾಗಲಿಲ್ಲ..ಮತ್ತೆ ಮತ್ತೆ ಅದೇ ಸುಳ್ಳನ್ನು ಪ್ರಚಾರ ಮಾಡುವುದರಲ್ಲೇ ಮಗ್ನರಾದರು..ಇದರಿಂದ ಕೋಪಗೊಂಡ ಮೀನಾಕ್ಷಿ ಲೇಖಿ ಕೋರ್ಟ್ ನ ಮೊರೆ ಹೋಗಿದ್ದರು..ಕೋರ್ಟ್ ನ ತೀರ್ಪನ್ನು ಮಾನ್ಯ ಮಾಡದೆ ಸುಳ್ಳು ಪಸರಿಸುತ್ತಾ ತಿರುಗುತ್ತಿದ್ದ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್ ನ್ಯಾಯಾಂಗ ನಿಂದನೆಯ ಕೇಸ್ ದಾಖಲಿಸಿತ್ತು ಮತ್ತು ರಾಹುಲ್ ಗೆ ಛೀಮಾರಿ ಹಾಕಿತ್ತು. ಮುಂದೆ ರಾಹುಲ್ ಗಾಂಧೀ ಕ್ಷಮಾಪಣೆಯನ್ನೂ ಕೇಳಿದ್ದರು..ಅಷ್ಟಕ್ಕೇ ಬುದ್ದಿಕಲಿಯುವ ಜಾಯಮಾನ ಕಾಂಗ್ರೆಸ್ ಗೆ ಇಲ್ಲವಲ್ಲ .೩೬ ರಫೆಲ್ ಯುದ್ಧ ವಿಮಾನಗಳ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಡಿಸೆಂಬರ್ ೧೪ ೨೦೧೮ ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಅರ್ಜಿಯನ್ನು ಸಲ್ಲಿಸಿದ್ದರು.
See the source image
      ಇಂದು ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನಡೆಸಿ ಅರ್ಜಿಯನ್ನು ತಿರಸ್ಕರಿಸಿದರು..ಈ ಪ್ರಕರಣದ ಕುರಿತಾಗಿ ಎಫ್ ಐ ಆರ್ ದಾಖಲಿಸುವ ಯಾವುದೇ ಅವಶ್ಯಕತೆ ಇಲ್ಲ ಮತ್ತು ಖರೀದಿ ಪ್ರತಿಕ್ರಿಯೆ ಯಲ್ಲಿ ಅನುಮಾನ ಪಡುವಂತಹಾ ಯಾವುದೇ ಅಂಶಗಳು ಗೋಚರಿಸುತ್ತಿಲ್ಲ ಎಂದು ತೀರ್ಪು ನೀಡಿದರು ಮಾತ್ರವಲ್ಲದೆ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ಕೂಡಾ ನೀಡಿದ್ದಾರೆ.
ಐದು ಜನ ನ್ಯಾಯಾಧೀಶರನ್ನು ಹೊಂದಿದ್ದ ನ್ಯಾಯ ಪೀಠವು ಸುಳ್ಳನ್ನು ಹಾರಾಡುತ್ತಿದ್ದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡು ಚೌಕಿದಾರ್ ಚೋರ್ ಹೇ ಎನ್ನುತ್ತಿದ್ದ ರಾಹುಲ್ ಗೆ “ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಾಡಬೇಕು” ಎಂಬ ಎಚ್ಚರಿಕೆಯನ್ನೂ ನೀಡಿ ರಾಹುಲ್ ಗಾಂಧೀ ನ್ಯಾಯಾಂಗ ನಿಂದನೆಯ ಕುರಿತಾಗಿ ನೀಡಿದ್ದ ಕ್ಷಮಾಯಾಚನೆ ಮುಚ್ಚಳಿಕೆಯನ್ನು ಸ್ವೀಕರಿಸಿ,ನ್ಯಾಯಾಂಗನಿಂದನೆಯ ಮೊಕದ್ದಮೆಯನ್ನು ಕೈಬಿಟ್ಟಿದೆ…ಇನ್ನಾದರೂ ಶುದ್ಧ ಹಸ್ತ ಬಿಜೆಪಿ ಸರಕಾರದ ಮೇಲೆ ಸುಳ್ಳು ಆರೋಪ ಮಾಡುವ ಮೊದಲು ಸಾವಿರ ಬಾರಿ ಆಲೋಚಿಸಿ ರಾಹುಲ್ ಗಾಂಧೀ ಮತ್ತು ಕಾಂಗ್ರೆಸ್ಸಿಗರೇ..ದೇಶ ಮಾತ್ರವಲ್ಲ ದೇಶವಾಸಿಗಳೂ ಬದಲಾಗಿದ್ದಾರೆ..
-Deepashree M
Tags

Related Articles

FOR DAILY ALERTS
Close