ಪ್ರಚಲಿತ

ವಿದೇಶಿ ನೆಲದಲ್ಲಿ ಭಾರತವನ್ನು ಮತ್ತೊಮ್ಮೆ ಅವಮಾನಿಸಿದ ‘ಕೈ’ ನಾಯಕ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ಅನ್ನ, ಗಾಳಿ, ನೀರು ಸೇವಿಸುತ್ತಿದ್ದರೂ, ಅವರಿಗೆ ಈ ದೇಶದ ಮರ್ಯಾದೆಯ ಬಗ್ಗೆ ಕೊಂಚ ವೂ ಕಾಳಜಿ ಇಲ್ಲ. ಈ ದೇಶವನ್ನು ಅವಮಾನ ಮಾಡುವುದರಲ್ಲಿ ಸಂತೋಷ ಕಾಣುತ್ತಾರೆ ಎನ್ನುವುದನ್ನು ಆಗಾಗ್ಗೆ ಸಾಬೀತು ಮಾಡುತ್ತಲೇ ಇರುತ್ತಾರೆ.

ಸದ್ಯ ವಿದೇಶದಲ್ಲಿ ನಿಂತುಕೊಂಡು ಭಾರತವನ್ನು ಮತ್ತೊಮ್ಮೆ ಅವಮಾನ ಮಾಡುವ ಮೂಲಕ ರಾಗಾ ವಿವಾದ ಸೃಷ್ಟಿಸಿದ್ದಾರೆ. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಅವರು ಭಾರತದಲ್ಲಿ ಲೋಕಾರ್ಪಣೆಯಾದ ನೂತನ ಸಂಸತ್ ಭವನ ಮತ್ತು ಸೆಂಗೋಲ್ ಅನ್ನು ನಾಟಕ ಎಂಬುದಾಗಿ ಕುಹಕವಾಡಿದ್ದಾರೆ. ಬಿಜೆಪಿ ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಈ ನಾಟಕ ಮಾಡುತ್ತಿದೆ. ಬಿಜೆಪಿಗೆ ದೇಶದ ನೈಜ ಸಮಸ್ಯೆಗಳಾದ ಶಿಕ್ಷಣ, ನಿರುದ್ಯೋಗ, ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾಲಿಗೆ ಎಳೆದಿದ್ದಾರೆ.

ಪ್ರಧಾನಿ ಮೋದಿ ಅವರನ್ನು ವಿರೋಧಿಸುವುದು, ಅವರ ವಿರುದ್ಧ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿರುವ ರಾಗ, ಭಾರತದಲ್ಲಿ ಮುಸಲ್ಮಾನ, ಕ್ರೈಸ್ತ, ದಲಿತ ಮೊದಲಾದ ಸಮುದಾಯಗಳು ದ್ವೇಷ ಹರಡುವಿಕೆಯ ಕಾರಣದಿಂದ ಆಕ್ರಮಣಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಕೆಲ ಜನರಿಗೆ ತಮಗೆ ಎಲ್ಲಾ ತಿಳಿದಿದೆ ಎನ್ನುವ ಭಾವನೆ ಇದ್ದು, ಅವರು ಬೇರೆಯವರ ಮಾತನ್ನು ಕೇಳಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ಭಾರತವನ್ನು ವಿದೇಶಿ ನೆಲದಲ್ಲಿ ಅವಹೇಳನ ಮಾಡಿದ್ದಾರೆ. ಆ ಮೂಲಕ ಭಾರತವನ್ನು ಪ್ರೀತಿಸುವ ದೇಶ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆಯೂ ಗೂಬೆ ರೂಪಿಸುವ ಕೆಲಸ ಮಾಡಿರುವ ರಾಗಾ, ನಿಜವಾದ ಭಾರತದ ಸ್ಥಿತಿಗತಿಯನ್ನು ಮಾಧ್ಯಮಗಳು ತೋರಿಸುವ ಕೆಲಸವನ್ನು ಮಾಡುತ್ತಿಲ್ಲ. ಬಿಜೆಪಿಯ ಹಿತಾಸಕ್ತಿ ಕಾಪಾಡಲು ಮಾಧ್ಯಮಗಳು ನಿರ್ದಿಷ್ಟ ನಿರೂಪಣೆಯನ್ನು ತೋರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದಾಗಿಯೂ ನಂಜು ಕಾರಿದ್ದಾರೆ.

ಈ ಹಿಂದೆ ಬ್ರಿಟನ್ನಿನಲ್ಲಿಯೂ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕವೂ ರಾಗಾ ಭಾರತದ ಮಾನ ಹರಾಜು ಮಾಡಿದ್ದರು. ಇದೀಗ ಅಮೆರಿಕ ನೆಲದಲ್ಲಿ ನಿಂತು ಭಾರತವನ್ನು ಮತ್ತೆ ವಿದೇಶಿಯರ ಮುಂದೆ ಕೀಳು ಮಟ್ಟಕ್ಕೆ ತಳ್ಳುವ ಪ್ರಯತ್ನ ಮಾಡಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Tags

Related Articles

Close