ಪ್ರಚಲಿತ

ಬ್ರಿಟನ್ ಪ್ರಜೆ ರಾಹುಲ್ ಅಸಲಿಮುಖ ಅನಾವರಣ.! ಭಾರತೀಯನೇ ಅಲ್ಲದ ರಾಹುಲ್ ಭಾರತದ ಪ್ರಧಾನಿ ಅಭ್ಯರ್ಥಿಯೇ?

ರಾಹುಲ್ ಗಾಂಧಿ… ಓಹ್ ಕ್ಷಮಿಸಿ, ರೌಲ್ ವಿಂಚಿ. ಸದ್ಯ ಈ ಒಂದು ಹೆಸರಿನ ಬಗೆಗೆ ಇರುವ ಗೊಂದಲ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅದೂ ಈ ಪುಣ್ಯಾತ್ಮ ಈ ದೇಶದ ಪ್ರಜೆಯೋ ಅಥವಾ ವಿದೇಶಿಗನಾ ಎಂದು.! 132 ವರ್ಷಗಳ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ಇಂತಹಾ ದುರಂತ ನಾಯಕ ಅಧ್ಯಕ್ಷನಾಗಿರುವಾಗಲೇ ದೇಶಕ್ಕೆ ದುರಂತ ಕಾದಿತ್ತು. ಇದೀಗ ಪ್ರಧಾನಿ ಅಭ್ಯರ್ಥಿ ಬೇರೆ. ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ನಾಗರಿಕತ್ವದ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಹೇಳ್ತೇವೆ ನೋಡಿ…

ಅದೆಷ್ಟೋ ವರ್ಷಗಳ ಹಿಂದೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. “ರಾಹುಲ್ ಗಾಂಧಿ ನಿಜವಾದ ಗಾಂಧಿ ಅಲ್ಲ. ಆತ ಭಾರತೀಯ ಪ್ರಜೆಯೇ ಅಲ್ಲ. ಆತ ಬ್ರಿಟನ್ ಪ್ರಜೆ” ಎಂದು ಹೇಳಿದ್ದರು. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಸ್ವಾಮಿ ವಿರುದ್ಧ ಅಪಹಾಸ್ಯ ಮಾಡಿದ್ದರು. ಈ ಬಗ್ಗೆ 2016ರಲ್ಲಿ ದಾಖಲೆ ಸಮೇತವಾಗಿ ಲೋಕಸಭಾಧ್ಯಕ್ಷರಿಗೆ ಲಿಖಿತವಾಗಿ ಸ್ವಾಮಿ ಬರೆದುಕೊಡುತ್ತಾರೆ. ಸ್ವಾಮಿ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದ ಸಭಾಧ್ಯಕ್ಷರು ಇದನ್ನು ಲೋಕಸಭಾ ಸದಾಚಾರ ಸಮಿತಿಗೆ ವರ್ಗಾವಣೆ ಮಾಡಿದ್ದರು. ಇದರ ಅಧ್ಯಕ್ಷರಾಗಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಾರ್ಯನಿರ್ವಹಿಸುತ್ತಿದ್ದರು. ಈ ವಿಚಾರವಾಗಿ ಮೊದಲ ಹಂತದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸಮಿತಿ ರಾಹುಲ್ ಗಾಂಧಿಯನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ರಾಹುಲ್ ಗಾಂಧಿ ಹಾಜರಾಗದೆ ಇದ್ದ ಕಾರಣ ಇದು ಸ್ಥಗಿತಗೊಂಡಿತ್ತು.

ಸ್ವಾಮಿ ವಾದವೇನು?

ರಾಹುಲ್ ಗಾಂಧಿ ಬ್ರಿಟನ್ ನಾಗರಿತ್ವ ಹೊಂದಿದ್ದಾರೆಂದು ದಾಖಲೆ ಸಮೇತ ಬಹಿರಂಗಪಡಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೋರ್ವ ನಕಲಿ ಗಾಂಧಿ ಎಂದಿದ್ದರು. “ರಾಹುಲ್ ನಿಜವಾದ ಹೆಸರು ರೌಲ್ ವಿಂಚಿ. ಆತ ಭಾರತೀಯ ಪ್ರಜೆಯೇ ಅಲ್ಲ. ಆತ ಬ್ರಿಟನ್ ಪ್ರಜೆ. ಹೀಗಾಗಿ ಭಾರತದಲ್ಲಿ ಪ್ರಧಾನಿ ಆಗೋದು ಬಿಡಿ, ಸಂಸದ ಸ್ಥಾನಕ್ಕೆ ಸ್ಪರ್ಧಿಸಲೂ ಆತ ಅನರ್ಹ. ರಾಹುಲ್ 4 ಪಾಸ್ ಪೋರ್ಟ್ ಹೊಂದಿದ್ದು ಇದರಲ್ಲಿ ರೌಲ್ ವಿಂಚಿ ಎಂಬ ಹೆಸರಿದೆ. ಬ್ರಿಟನ್ ನಲ್ಲಿ ರೌಲ್ ವಿಂಚಿ ಎಂಬ ಹೆಸರಿನಲ್ಲೇ ಅಧ್ಯಯನ ನಡೆಸಿರುವ ರಾಹುಲ್ ಎಂಫಿಲ್ ಪದವಿ ಹೊಂದಿಲ್ಲ. ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಮಾತ್ರವಲ್ಲದೆ ಈತ ಹಿಂದು ಅಲ್ಲ. ಈತನ ಮನೆಯಲ್ಲಿ ಚರ್ಚ್ ನಿರ್ಮಾಣ ಮಾಡಲಾಗಿದೆ. ಅವರು ಕ್ರೈಸ್ತರು”. ಇದು ಬಿಜೆಪಿ ನಾಯಕ ಸ್ವಾಮಿಯರ ಆರೋಪವಾಗಿದೆ.

ನಾಮಪತ್ರ ತಿರಸ್ಕಾರ?

ಇದೀಗ ಸ್ವಾಮಿ ಅವರ ಆರೋಪ ರಾಹುಲ್ ಕನಿಷ್ಟ ಸಂಸದನಾಗುವ ಆಸೆಗೂ ಕುತ್ತು ತರುವ ಸಂಭವ ಕಾಣುತ್ತಿದೆ. ಅಮೇಥಿಯಲ್ಲಿ ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲಿ ರಾಹುಲ್ ಬ್ರಿಟನ್ ಪ್ರಜೆ ವಿಚಾರವಾಗಿ ದಾಖಲೆ ಸಲ್ಲಿಸಿದ್ದು ನಾಮಪತ್ರ ಅಸಿಂಧುವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಈ ಬಗ್ಗೆ ಅಮೇಥಿಯ ಪಕ್ಷೇತರ ಅಭ್ಯರ್ಥಿ ಧ್ರುವಲಾಲ್ ಎಂಬವರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ “ರಾಹುಲ್ ನಾಮಪತ್ರದಲ್ಲಿನ ಅಂಶಗಳು ಸಮರ್ಪಕವಾಗಿಲ್ಲ. ಈ ಹಿಂದೆ ಅವರು ಬ್ರಿಟನ್ ನಾಗರಿಕ ಪೌರತ್ವ ಹೊಂದಿದ್ದ ಬಗ್ಗೆ ಮಾಹಿತಿ ನೀಡಿಲ್ಲ. 2005ರಲ್ಲಿ ರಾಹುಲ್ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ್ದ ಆದಾಯ ತೆರಿಗೆ ಪ್ರಮಾಣ ಪತ್ರದಲ್ಲಿ ತಾನೋರ್ವ ಬ್ರಿಟನ್ ಪ್ರಜೆ ಎಂದು ಉಲ್ಲೇಖಿಸಿದ್ದರು. ಭಾರತದ ಕಾನೂನು ಪ್ರಕಾರ ಎರಡು ದೇಶದ ನಾಗರಿಕತ್ವ ಹೊಂದಲು ಅವಕಾಶ ಇಲ್ಲ. ಹೀಗಾಗಿ ಅವರ ನಾಮಪತ್ರ ಅಸಿಂಧುಗೊಳಿಸಬೇಕು. ಅವರ ಪ್ರಮಾಣ ಪತ್ರದಲ್ಲಿ ಎಂಫಿಲ್ ಬಗ್ಗೆ ಉಲ್ಲೇಖವಿದೆ. ಆದರೆ 2004, 2009,2015 ಹಾಗೂ 2019ರ ಪ್ರಮಾಣಪತ್ರದಲ್ಲಿ ವಿಭಿನ್ನವಾದ ಶೈಕ್ಷಣಿಕ ವಿವರ ನೀಡಲಾಗಿದೆ. ರಾಹುಲ್ ಅಧ್ಯಯನ ಮಾಡಿದ ವಿಷಯ ಕೂಡಾ ಭಿನ್ನವಾಗಿ ಉಲ್ಲೇಖ ಮಾಡಲಾಗಿದೆ” ಎಂದು ದೂರಿನಲ್ಲಿ ಹೇಳಲಾಗಿದೆ. ಇನ್ನು 2004ರಲ್ಲಿ ನಾಮಪತ್ರ ಸಲ್ಲಿಸುವಾಗ ಬ್ಯಾಕಾಪ್ಸ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಷೇರು ಹೊಂದಿರುವುದಾಗಿ ಹೇಳಿದ್ದು ಈ ಬಾರಿಯ ನಾಮಪತ್ರದಲ್ಲಿ ಅದು ಕಾಣೆಯಾಗಿದೆ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ರಾಹುಲ್ ನೀಡಿಲ್ಲ.

ಪ್ರಶ್ನೆಗಳು…

* ರಾಹುಲ್ ಭಾರತೀಯರೋ ಅಥವಾ ಬ್ರಿಟನ್ ನಾಗರಿಕರೋ?
* ರಾಹುಲ್ ಗಾಂಧಿ ಹಾಗೂ ರೌಲ್ ವಿಂಚಿ ಎನ್ನುವ ಹೆಸರು ಒಬ್ಬರದ್ದಾ ಅಥವಾ ಇಬ್ಬರಿದ್ದಾರಾ?
* ಒಂದೊಮ್ಮೆ ಒಬ್ಬರೇ ಆಗಿದ್ದರೆ ಹೇಗೆ ಹಾಗೂ ಹೆಸರು ಬದಲಿಸಿದ್ದು ಎಲ್ಲಿ?
* ರೌಲ್ ವಿಂಚಿ ಎಂಬ ಹೆಸರು ಸುಳ್ಳಾಗಿದ್ದರೆ ಪ್ರಮಾಣ ಪತ್ರ ನಕಲಿಯೇ?
* ಬ್ರಿಟನ್ ನಾಗರಿಕ ಎಂದು ಘೋಷಿಸಿಕೊಳ್ಳುವ ಮುನ್ನ ಭಾರತೀಯ ನಾಗರಿಕತ್ವ ಯಾವಾಗ ತ್ಯಜಿಸಿದ್ದರು.?
* ಒಂದೊಮ್ಮೆ ಬ್ರಿಟನ್ ನಾಗರಿಕತ್ವ ತ್ಯಜಿಸಿ ಭಾರತೀಯರಾಗಿ ಮತ್ತೆ ನಾಗರಿಕತ್ವ ಸ್ವೀಕರಿಸಿದ್ದರೆ ಹೇಗೆ?
* ಇಂತಹಾ ಸೂಕ್ಷ್ಮ ಮಾಹಿತಿಗಳನ್ನು ರಹಸ್ಯವಾಗಿಟ್ಟಿರುವ ಆರೋಪದ ಮೇಲೆ ಅಭ್ಯರ್ಥಿಯನ್ನು ಯಾಕೆ ಅನರ್ಹಗೊಳಿಸಿ ನಾಮಪತ್ರ ತಿರಸ್ಕರಿಸಬಾರದು?

ಹೀಗೆ ದೂರು ಹಾಗೂ ಪ್ರಶ್ನೆಗಳೊಂದಿಗೆ ದೂರುದಾರ ಧ್ರುವಲಾಲ್ ದೂರು ಸಲ್ಲಿಸಿದ್ದು ಇದಕ್ಕೆ ಸ್ಪಂಧಿಸಿದ ಜಿಲ್ಲಾ ಚುನಾವಣಾ ಆಯೋಗ ನಾಮಪತ್ರ ಪರಿಶೀಲನೆಯನ್ನು ಮುಂದಕ್ಕೆ ದೂಡಿದೆ. ಈ ಬಗ್ಗೆ ರಾಹುಲ್ ಪರ ವಕೀಲರು ಸೋಮವಾರದವರೆಗೆ ಸಮಯ ಕೋರಿದ್ದು ಸೋಮವಾರ ನಾಮಪತ್ರ ಪರಿಶೀಲನೆ ನಡೆಯಲಿದೆ.

ಒಟ್ಟಾರೆ ದೇಶದ ಹಳೇಯ ಪಕ್ಷಕ್ಕೆ ಬ್ರಿಟನ್ ಪೌರತ್ವ ಹೊಂದಿರುವ ವ್ಯಕ್ತಿಯಾಗಿರುವ ರಾಹುಲ್ ಭಾರತದಲ್ಲಿ ಅಧಿಕಾರದ ಪಾರುಪತ್ಯ ಹಿಡಿಯಲು ಸುಳ್ಳು ಮಾಹಿತಿಗಳನ್ನು ಸಲ್ಲಿಸಿದ್ದು ತನ್ನ ನಾಮಪತ್ರ ತಿರಸ್ಕಾರ ಆಗುವ ಭೀತಿಯನ್ನು ಹೊಂದಿದ್ದಾರೆ. ಇಂತಹಾ ನಾಯಕನನ್ನು ನಮ್ಮ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close