ಪ್ರಚಲಿತ

ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದಿರುವ ರಾಹುಲ್ ಗಾಂಧಿ!! ಕೊನೆಗೂ ಮಕ್ಕಳನ್ನೂ ಬಿಡಲಿಲ್ಲವೇ ರಾಗಾ??

ಅಲೂಗಡ್ಡೆಯಿಂದಲೂ ಚಿನ್ನವನ್ನು ತೆಗೆಯಬಹುದು ಎಂದು ದೇಶಾದ್ಯಂತ ಸುದ್ದಿಯಾಗಿ ದೇಶದ ಜನತೆಯನ್ನು ನಗೆಗಡಲಿನಲ್ಲಿ ತೇಲಿಸಿದ್ದ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ!! ಈಗಾಗಲೇ ಕೋಕಾಕೋಲಾ ಸಂಸ್ಥಾಪಕ ಆರಂಭದಲ್ಲಿ ಅಮೆರಿಕದಲ್ಲಿ ಶರಬತ್ತು ವ್ಯಾಪಾರಿಯಾಗಿದ್ದರು, ಮೆಕ್ ಡೊನಾಲ್ಡ್ಸ್ ಸಂಸ್ಥಾಪಕ ಡಾಭಾ ನಡೆಸುತ್ತಿದ್ದರು ಎಂದು ಹೇಳಿ ತಮ್ಮ ಮಾನವನ್ನು ತಾವೇ ಕಳೆದುಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇದೀಗ ತಾವು ಮಾಡಿರುವ ಟ್ವೀಟ್ ನಿಂದಾಗಿ ಮತ್ತೆ ಸಂಕಷ್ಟವನ್ನು ಎದುರಿಸಲಿದ್ದಾರೆ!!

ಈಗಾಗಲೇ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಕೂಡ ಕಿಂಚಿತ್ತೂ ತಿಳುವಳಿಕೆಯನ್ನೂ ಹೊಂದಿಲ್ಲ ಎಂಬುವುದನ್ನು ಸಾಕಷ್ಟು ಬಾರಿ ನಿರೂಪಿಸಿರುವ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿ ಹುದ್ದೆಯನ್ನು ಏರುವ ಬಹುದೊಡ್ಡ ಕನಸನ್ನು ಹೊತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ಪ್ರತಿ ಬಾರಿಯೂ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ  ಹಾಸ್ಯಾಸ್ಪದ ಮಾತುಗಳನ್ನು ಆಡುತ್ತಲೇ ಬರುತ್ತಿರುವ ಇವರು ಸದಾ ಸುದ್ದಿಯಲ್ಲಿಯೇ ಇರಲು ಬಯಸುತ್ತಾರೋ ಏನೋ ಗೊತ್ತಿಲ್ಲ!! ಆದರೆ ಇದೀಗ ಟ್ವೀಟರ್ ಮೂಲಕ ನರೇಂದ್ರ ಮೋದಿ ನೇತೃತ್ವದ  ಭಾರತೀಯ ಜನತಾ ಪಕ್ಷವನ್ನು ತೆಗಳು ಹೋಗಿ ತಾನೇ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಹೌದು….. ಕೆಲವು ದಿನಗಳ ಹಿಂದಷ್ಟೇ, ದಲಿತ ಮಕ್ಕಳು ಎಂಬ ಕಾರಣಕ್ಕಾಗಿ ಉನ್ನತ ವರ್ಗದವರು ಹೊಡೆಯುತ್ತಿದ್ದಾರೆ ಎಂಬ ವೀಡಿಯೋ ಅಪ್ ಲೋಡ್ ಮಾಡಿದ್ದ ರಾಹುಲ್ ಗಾಂಧಿ, ನೇರವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್ ಎಸ್ ಎಸ್ ನ್ನು ಟೀಕಿಸುತ್ತಾ ಮಕ್ಕಳ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು!! ಆದರೆ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರವನ್ನು ಟೀಕಿಸುವ ಭರದಲ್ಲಿ ತಾವು ಮಾಡಿರುವ ಎಡವಟ್ಟು ಇಂದು ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ.

ಇತ್ತೀಚೆಗಷ್ಟೇ ನಡೆದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿಯೂ ತನ್ನ ಪೆದ್ದು ಪೆದ್ದು ಮಾತುಗಳಿಂದ ತನ್ನ ಅವಿದ್ಯೆತೆಯನ್ನು ಪ್ರದರ್ಶಿಸಿದ್ದ ರಾಹುಲ್ ಗಾಂಧಿಯವರು ಅದೆಷ್ಟೋ ಸಂವಾದದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿಯೂ ಭಾರೀ ಮುಜುಗರಕ್ಕೂ ಒಳಗಾಗಿದ್ದರು. ಆದರೆ ಇದೀಗ ಮತ್ತೆ ಇಂತಹ ಪ್ರಕರಣ ಮರುಕಳಿಸಿದ್ದು, ಈ ಕುರಿತಂತೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ!!

ಭಾರತೀಯ ಜನತಾ ಪಕ್ಷವನ್ನು ಟೀಕಿಸುವ ಭರದಲ್ಲಿ, “ದಲಿತ ಮಕ್ಕಳು ಎಂಬ ಕಾರಣಕ್ಕಾಗಿ ಉನ್ನತ ವರ್ಗದವರು ಹೊಡೆಯುತ್ತಿದ್ದಾರೆ” ಎಂದು ಮಕ್ಕಳ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಈ ಕುರಿತಂತೆ ಹತ್ತು ದಿನಗಳೊಳಗಾಗಿ ಉತ್ತರ ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದೆ. ಇನ್ನು, ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ವಿರೋಧಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಜೂನ್ 19 ರಂದು ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ!!

ರಾಹುಲ್ ಗಾಂಧಿ ಅವರು ಮಕ್ಕಳಿಗೆ ಹೊಡೆಯುತ್ತಿರುವ ವೀಡಿಯೋ ಅಪ್ ಲೋಡ್ ಮಾಡುವ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಇದು ಚಿಕ್ಕವಯಸ್ಸಿನ ಮಕ್ಕಳ ನ್ಯಾಯ ಕಾಯ್ದೆ 74 ಹಾಗೂ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪ್ರೋಕ್ಸೋ) ಉಲ್ಲಂಘನೆಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಕೆ.ಜಿ. ಮಾಪನದಲ್ಲಿ ಪೆಟ್ರೋಲ್ ಸಿಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ನಗೆಪಾಟಲಿಗೀಡಾಗಿದ್ದ ರಾಹುಲ್ ಗಾಂಧಿಯವರು ಇದೀಗ ನರೇಂದ್ರ ಮೋದಿ ಸರಕಾರವನ್ನು ದೂಷಿಸುವ ಭರದಲ್ಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಒಟ್ಟಿನಲ್ಲಿ ಪದೇ ಪದೇ ತನ್ನ ಪೆದ್ದು ಪೆದ್ದು ಮಾತುಗಳಿಂದಲೇ ಫೇಮಸ್ ಆಗುತ್ತಲೇ ಇರುವ ರಾಹುಲ್ ಗಾಂಧಿಯವರಿಗೆ ಇದೀಗ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ!!!

ಮೂಲ:
https://tulunadunews.com/tnn13615

– ಅಲೋಖಾ

Tags

Related Articles

Close