ಪ್ರಚಲಿತ

ರಾಹುಲ್ ಗಾಂಧಿಗೆ ಕಿಕ್ ಔಟ್: ಗಾಂಧಿ ಕುಟುಂಬಕ್ಕೆ ಛೀಮಾರಿ ಹಾಕಿದ ಕೋರ್ಟ್!

ಭಾರತದ ನ್ಯಾಯಾಂಗ ವ್ಯವಸ್ಥೆ ಸಮರ್ಥವಾಗಿದೆ. ಒಂದು ಅಸಮರ್ಥ ರಾಷ್ಟ್ರೀಯ ಪಕ್ಷದ ಅಸಮರ್ಥ ನಾಯಕರೊಬ್ಬರು ಭಾರತದ ನ್ಯಾಯಾಂಗ ವ್ಯವಸ್ಥೆ ಸಮರ್ಥವಾಗಿ ಇರುವ ಕಾರಣದಿಂದ ಲೋಕಸಭೆ ಯಿಂದ ಅನರ್ಹರಾಗಿ ಹೊರ ನಡೆಯುವಂತಾಗಿದೆ. ವ್ಯಕ್ತಿ ಎಷ್ಟೇ ಪ್ರಭಾವಿಯಾಗಿರಲಿ, ಆತ ತಪ್ಪು ಮಾಡಿದರೆ ಅವನ ಯಾವ ಪ್ರಭಾವವೂ ನ್ಯಾಯಾಂಗ ವ್ಯವಸ್ಥೆಯ ಮುಂದೆ ಲೆಕ್ಕಕ್ಕಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷೀಭೂತವಾಗಿ ನಿಂತಿದೆ.

ಯಾರು ಅಂತಹ ವ್ಯಕ್ತಿ. ತನ್ನ ಎಲುಬಿಲ್ಲದ ನಾಲಿಗೆ ಮೂಲಕ ಲೋಕಸಭೆಯಿಂದಲೇ ಅನರ್ಹ ಎಂಬ ಹಣೆಪಟ್ಟಿ ಹೊತ್ತು ಹೊರನಡೆದವರು ಎಂದಿರಾ. ಅವರೇ ಭಾರತ, ಈ ದೇಶದ ಪ್ರಜಾಪ್ರಭುತ್ವವನ್ನು ವಿದೇಶದ ಮುಂದೆ ನಿಂದಿಸಿದವರು. ಈ ದೇಶದ ಪ್ರಧಾನಿಗಳನ್ನು ತೆಗಳಲು ಹೋಗಿ ‘ಮೋದಿ’ ಎಂಬ ಉಪನಾಮವಿರುವ ಎಲ್ಲರನ್ನೂ ಕಳ್ಳರೆಂದು ೨ ವರ್ಷಗಳ ಜೈಲುವಾಸಕ್ಕೆ ತುತ್ತಾಗಿ, ಸದ್ಯ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ಪಕ್ಷದ ಐವತ್ತರ ಹರೆಯದ ಯುವ ನಾಯಕ ‘ರಾಹುಲ್ ಗಾಂಧಿ’.

೨೦೧೯ ರ ಮಾನ ನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟಿನಿಂದ ಶಿಕ್ಷೆಗೆ ತುತ್ತಾಗಿರುವ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಎರಡು ವರ್ಷಗಳ ಅವಧಿಗೆ ಶಿಕ್ಷೆಗೆ ಗುರಿಯಾಗಿರುವ ಅವರನ್ನು ಸಂಸದೀಯ ನಿಯಮಗಳ ಅನ್ವಯ ಲೋಕಸಭೆಯಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರು ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ.

ನಿಗದಿತ ಪ್ರಕರಣದಲ್ಲಿ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದ ಲೋಕಸಭಾ, ರಾಜ್ಯಸಭಾ ಸದಸ್ಯರು ತಾವು ಹೊಂದಿರುವ ಸದನದ ಸದಸ್ಯತ್ವದಿಂದ ಅಮರ್ಹರಾಗುವ ನಿಯಮವೇ ಇದ್ದು, ಅದರನ್ವಯ ರಾಹುಲ್ ಅವರನ್ನು ತಮ್ಮ ಸ್ಥಾನದಿಂದ ಅನರ್ಹರೆಂದು ಆದೇಶಿಸಿ, ಮನೆಗೆ ಕಳುಹಿಸಲಾಗಿದೆ. ಮುಂದೆ ವಯನಾಡ್‌ನಲ್ಲಿ ಮತ್ತೆ ಚುನಾವಣೆ ಘೋಷಣೆ ರಾಗ ಬಹುದು. ಹಾಗೆಯೇ ಈ ತೀರ್ಪನ್ನು ಉನ್ನತ ನ್ಯಾಯಾಲಯ ವಜಾ ಮಾಡದೆ ಹೋದಲ್ಲಿ ಮುಂದಿನ ೬ ವರ್ಷಗಳ ಕಾಲ ರಾಹುಲ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಹ ಇರುವುದಿಲ್ಲ.

ಒಟ್ಟಿನಲ್ಲಿ ಇರಲಾರದೆ ಇರುವೆ ಬಿಟ್ಟುಕೊಂಡ ಎಂಬಂತೆ ತಮ್ಮ ಅಪ್ರಬುದ್ಧ ಮತ್ತು ಅತಿಯಾದ ಹೇಳಿಕೆಯಿಂದ ಕಾಂಗ್ರೆಸ್ ರಾಜಕುಮಾರ ತಮ್ಮನ್ನು ತಾವು ಜನರೆದುರು ಬೆತ್ತಲುಗೊಳಿಸಿಕೊಂಡಿದ್ದಾರೆ. ನಾವು ಆಡಿದ್ದೇ ಮಾತು, ಹೇಳಿದ್ದೇ ಶಾಸನ ಎಂದು ಬೇಕಾಬಿಟ್ಟಿ ವರ್ತಿಸುತ್ತಿದ್ದ ಕಾಂಗ್ರೆಸ್ ನಾಯಕರು ಇನ್ನಾದರೂ ಸರಿ ತಪ್ಪುಗಳನ್ನು ವಿಮರ್ಶಿಸಿ ಮಾತನಾಡುವಂತಾಗಲಿ. ಕಾಂಗ್ರೆಸಿಗರಿಗೆ ಇನ್ನಾದರೂ ಬುದ್ಧಿ ಬರಲಿ ಎನ್ನುವುದೇ ಸಾರ್ವಜನಿಕರ ಅಭಿಪ್ರಾಯ.

Tags

Related Articles

Close