ರಾಜ್ಯ

ಮೋದಿ ವಿದೇಶದ ನೆಲದಲ್ಲಿ ನಿಂತು ಭಾರತದ ಗೌರವ ಹೆಚ್ಚಿಸಿದರೆ ರಾಹುಲ್ ವಿದೇಶದಲ್ಲಿ ನಿಂತು ಭಾರತದ ಮಾನ ಕಳೆದುಬಿಟ್ಟ! ಅಷ್ಟಕ್ಕೂ ದುಬೈನಲ್ಲಿ ರಾಹುಲ್ ಹೇಳಿದ್ದೇನು ಗೊತ್ತಾ?

ಭಾರತದಲ್ಲಿ ಭಾರತೀಯರು ಎದೆಯುಬ್ಬಿಸಿ ನಡೆಯುವುದಕ್ಕೂ, ವಿದೇಶದಲ್ಲಿ ಅನಿವಾಸಿ ಭಾರತೀಯರು ಎದೆಯುಬ್ಬಿಸಿ ರಾಜಾರೋಷವಾಗಿ ನಡೆಯುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಯಾಕೆಂದರೆ ವಿದೇಶಿಗರ ಆಳಾಗಿ ದುಡಿಯುವ ಭಾರತೀಯರ ಜೀವನ ಅಲ್ಲಿ ದಿನ‌ ಕಳೆದವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಈಗ ಅನಿವಾಸಿ ಭಾರತೀಯರು ಕೂಡ ಹೇಳುತ್ತಿದ್ದಾರೆ, ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರದಲ್ಲಿ ನಾವೂ ಕೂಡ ಎದೆಯುಬ್ಬಿಸಿ ನಡೆಯುವಂತಾಗಿದೆ, ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ ಎಂದು. ಹಾಗಾದರೆ ಮೋದಿ ವಿದೇಶಿ ನೆಲದಲ್ಲಿ ಮಾಡಿದ ಮ್ಯಾಜಿಕ್ ಏನು? ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು ಅಲ್ವೇ.! ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ವಿದೇಶಿ ಪ್ರವಾಸ ಕೈಗೊಂಡರು, ಅದರಲ್ಲೂ ದುಬೈ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಭಾರತೀಯರ ಜೊತೆ ಸಂವಾದ ಕೂಡ ನಡೆಸಿದರು. ಆದರೆ ರಾಹುಲ್ ಅರಬ್ ನೆಲದಲ್ಲಿ ನಿಂತು ಭಾರತದ ಮಾನ‌ ಕಳೆದುಬಿಟ್ಟರು ಎಂದರೆ ನೀವು ನಂಬುತ್ತೀರಾ? ನಂಬಲು ಅಸಾಧ್ಯವಾದರೂ ನಂಬಲೇಬೇಕು. ಯಾಕೆಂದರೆ ಮೋದಿ ಅರಬ್ ನೆಲದಲ್ಲಿ ನಿಂತು ಭಾರತವೇ ಜಗತ್ತಿನ ಶ್ರೇಷ್ಠ ರಾಷ್ಟ್ರ ಎಂದು ಘಂಟಾಘೋಷವಾಗಿ ಹೇಳಿದರೆ, ಇತ್ತ ರಾಹುಲ್ ಭಾರತ ಒಂದು ಅಸಹಿಷ್ಣು ದೇಶ ಎಂದು ಹೇಳಿಬಿಟ್ಟ. ಮೋದಿ ಮಾತಿಗೆ ಕಿಕ್ಕಿರಿದು ಕೇಳಿಬಂದ ಸಿಳ್ಳೆ ಚಪ್ಪಾಳೆ, ರಾಹುಲ್ ಮಾತು ಕೇಳುತ್ತಿದ್ದಂತೆ ಮೌನವಾಗಿ ಬಿಟ್ಟಿತ್ತು.!

ದುಬೈ ದೇಶದಲ್ಲಿ ರಾಹುಲ್ ಹೇಳಿದ್ದೇನು- ಮಾಡಿದ್ದೇನು?

ಅಷ್ಟಕ್ಕೂ ರಾಹುಲ್ ವಿದೇಶ ಪ್ರವಾಸ ಮಾಡುವ ಅಗತ್ಯ ಏನಿತ್ತು ಎಂದು ಕೇಳಿದರೆ ಕಾಂಗ್ರೆಸಿಗರಲ್ಲಿ ಉತ್ತರವಿಲ್ಲ. ಆದರೂ ಮುಂದಿನ ಲೋಕಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವ ಸಲುವಾಗಿ ರಾಹುಲ್ ವಿದೇಶ ಪ್ರವಾಸ ಕೈಗೊಂಡರು ಎಂದು ಒಪ್ಪಿಕೊಳ್ಳೋಣ. ಆದರೆ ಭಾರತದಲ್ಲಿ ಈತ ಜನರಿಗೆ ಸುಳ್ಳು ಹೇಳಿ, ಜನರನ್ನು ಮೂರ್ಖರನ್ನಾಗಿಸಿ, ಕೊನೆಗೆ ತನ್ನ ಮಾತಿಗೆ ಯಾವ ಬೆಲೆಯೂ ಇಲ್ಲ ಎಂದು ಬಿಟ್ಟಿ ಕಾಮಿಡಿ ಶೋ ಕೊಡುವ ರಾಹುಲ್, ವಿದೇಶ ನೆಲದಲ್ಲೂ ಕೂಡ ಭಾರತದ ಮಾನ ಮರ್ಯಾದೆ ಕಳೆದುಬಿಟ್ಟ. ವಿದೇಶಕ್ಕೆ ತೆರಳಿ ಭಾರತದ ಗತವೈಭವವನ್ನು‌ ಅರಬ್ಬರಿಗೆ ಹೇಳುತ್ತಿದ್ದರೆ ಇಂದು ನಾವೂ ಕೂಡ ರಾಹುಲ್ ಚೆನ್ನಾಗಿ ಮಾತನಾಡಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಹಾಗಾಗಲಿಲ್ಲ, ರಾಹುಲ್ ಬಹಳ ತರಾತುರಿಯಲ್ಲಿ ದುಬೈಗೆ ಹೋಗಿ ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತ ಒಂದು ಅಸಹಿಷ್ಣು ದೇಶ, ಭಾರತದಲ್ಲಿ ಜೀವಿಸಲು ಕಷ್ಟ ಎಂದು ಪರೋಕ್ಷವಾಗಿ ಹೇಳಿಬಿಟ್ಟರು. ರಾಹುಲ್ ಮಾತಿಗೆ ಸೇರಿದ್ದ ಜನ ಚಪ್ಪಾಳೆ ಹೊಡೆಯಬೇಕಿತ್ತು, ಆದರೆ ಅಲ್ಲಿನ‌ ಭಾರತೀಯರಿಗೆ ಸದ್ಯ ಮೋದಿ‌ ಆಡಳಿತದಲ್ಲಿ ಭಾರತ ಯಾವ ರೀತಿ ಅಭಿವೃದ್ಧಿ ಹೊಂದುತ್ತಿದೆ ಎಂಬುದರ ಅರಿವಿದ್ದ ಕಾರಣ ಸಭೆಯಲ್ಲಿ ಮೌನ ಆವರಿಸಿಬಿಟ್ಟಿತ್ತು.‌ ಇತ್ತ ರಾಹುಲ್ ತನ್ನ ಮಾತು ನಿಲ್ಲಿಸಲಿಲ್ಲ, ತನ್ನಷ್ಟಕ್ಕೇ ತಾನೇ ಮಾತನಾಡುತ್ತಾ ಭಾರತದ ಮಾನವನ್ನು ಮುಸ್ಲಿಂ ರಾಷ್ಟ್ರದ ಮುಂದೆ ಕಳೆದುಬಿಟ್ಟರು.‌ ಇದು ರಾಹುಲ್ ಗಾಂಧಿಯ ವಿದೇಶ ಪ್ರವಾಸದ ಫಲ. ಮೋದಿ‌ ವಿದೇಶಕ್ಕೆ ಹೋಗಿ ಮಹತ್ವದ ಒಪ್ಪಂದವನ್ನು, ಭಾರತಕ್ಕೆ ಹೊಸ ಹೊಸ ಯೋಜನೆಯನ್ನು ಹೊತ್ತು ತಂದರೆ, ರಾಹುಲ್ ತನ್ನ ಮಾನದ ಜೊತೆಗೆ ನಮ್ಮ ದೇಶದ ಮಾನವನ್ನೂ ಹರಾಜಿಗಿಟ್ಟು ಬಂದಿದ್ದಾರೆ. ಭಾರತೀಯರಿಗೆ ಸ್ಪಷ್ಟವಾಗಿ ಗೊತ್ತಿದೆ ಯಾರ ಆಡಳಿತ ಭಾರತಕ್ಕೆ ಬೇಕಿದೆ ಎಂದು.!

ರಾಹುಲ್ ಪ್ರವಾಸದಿಂದ ಭಾರತಕ್ಕೇನು‌ ಲಾಭ?

ಈ ಪ್ರಶ್ನೆ ನಾವು ಕೇಳಬೇಕಾದ ಅನಿವಾರ್ಯತೆ ಇದೆ, ಯಾಕೆಂದರೆ ಒಂದು ರಾಷ್ಟ್ರೀಯ ಪಕ್ಷದ ನಾಯಕ ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಾನೆ, ಭಾರತದಲ್ಲಿ ಇದ್ದು ಸಾಕಾಗಿ ವಿಶ್ರಾಂತಿಗೆಂದು ವಿದೇಶಕ್ಕೆ ಹೋಗುತ್ತಾನೆ, ಎಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಆಲೋಚನೆ‌ ಇಟ್ಟುಕೊಂಡಿರುವ ಒಬ್ಬ ವ್ಯಕ್ತಿಯ‌ ಕೈಗೆ ನಮ್ಮ ದೇಶದ ಚುಕ್ಕಾಣಿ ನೀಡಿದರೆ ಭಾರತದ ಗತಿ ಏನಾಗಬಹುದು ಎಂಬುದನ್ನು ನಾವು ಆಲೋಚಿಸಬೇಕಿದೆ. ಯಾಕೆಂದರೆ ರಾಹುಲ್ ದುಬೈಗೆ ಹೋಗಿದ್ದು ಕಾರ್ಮಿಕರ ಜೊತೆ ಸಂವಾದ ನಡೆಸಲು, ಸಂವಾದ ಏನೋ ನಡೆದುಹೋಯಿತು, ಭಾರತದ ಮಾನವನ್ನೂ ಅರಬ್ ದೇಶದಲ್ಲಿ ಕಳೆದಿದ್ದಾಯಿತು, ಆದರೆ ಭಾರತಕ್ಕಾದ ಲಾಭವೇನು? ಈ ಪ್ರಶ್ನೆ ನಮ್ಮ ಕಣ್ಣ ಮುಂದೆ ಇದೆ, ಯಾಕೆಂದರೆ ಮೋದಿ ವಿದೇಶಕ್ಕೆ ತೆರಳಿ ಸಾವಿರಾರು ಕೋಟಿಯ ಒಪ್ಪಂದ ಮಾಡಿಕೊಂಡು ಬರುತ್ತಾರೆ, ಅಥವಾ ಭಾರತಕ್ಕೆ ಹೊಸ ರೀತಿಯ ಯೋಜನೆಗಳನ್ನು ಹೊತ್ತು ತರುತ್ತಾರೆ. ಆದರೆ ರಾಹುಲ್ ಮಾಡಿದ್ದೇನು? ಇತ್ತ ಭಾರತಕ್ಕೆ ಲಾಭವೂ ಇಲ್ಲ, ಅನಿವಾಸಿ ಭಾರತೀಯರಿಗೆ ಲಾಭವೂ ಇಲ್ಲ. ಯಾಕೆಂದರೆ ನಮ್ಮ ದೇಶದ ನಾಯಕನೊಬ್ಬ ಬರುತ್ತಿದ್ದಾನೆ ಎಂದು ಆತನ ಮಾತು ಕೇಳಲು ಹೋದ ಜನರಿಗೆ ನಿರಾಸೆ ಉಂಟಾಗಿತ್ತು ರಾಹುಲ್ ಮಾತು ಕೇಳಿ.!

ರಾಹುಲ್‌ಗೆ ಒಂದು ರೀತಿಯ ಮುಖಭಂಗ ಕೂಡ ಉಂಟಾಗಿತ್ತು, ಯಾಕೆಂದರೆ ರಾಹುಲ್ ವಿಮಾನ ನಿಲ್ದಾಣದಿಂದ ತೆರಳುತ್ತಲೇ ಅಲ್ಲಿ “ಮೋದಿ ಮೋದಿ ಮೋದಿ” ಎಂಬ ಘೋಷಣೆ ಕೇಳಿ ಬಂದಿತ್ತು. ಅದಾಗಲೇ ರಾಹುಲ್ ತಿಳಿದುಕೊಳ್ಳಬೇಕಿತ್ತು ಪ್ರಧಾನಿ ನರೇಂದ್ರ ಮೋದಿಯವರ ಈ ಹಿಂದಿನ‌ ಪ್ರವಾಸ ಯಾವ ರೀತಿ ಫಲ ನೀಡಿದೆ ಮತ್ತು ಯಾವ ರೀತಿ ಪ್ರಭಾವ ಬೀರಿದೆ ಎಂದು. ಆದರೂ ಮಕ್ಕಳಂತೆ ವರ್ತಿಸುವ ರಾಹುಲ್ ಮಾತಿನಿಂದ ಇಡೀ ನಮ್ಮ ದೇಶದ ಮಾನವೇ ಹೋಯಿತು..!

–ಅರ್ಜುನ್

Tags

Related Articles

FOR DAILY ALERTS
Close