ಪ್ರಚಲಿತ

ರಾಹುಲ್ ಗಾಂಧಿಯನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ‘ಇಂಡಿ’ ಒಕ್ಕೂಟ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸುವುದು ಅಸಾಧ್ಯ ಎಂದು ವಿರೋಧ ಪಕ್ಷಗಳಿಗೆ ಬಹಳ ಹಿಂದೆಯೇ ಮನದಟ್ಟಾಗಿದೆ.

ಇದಕ್ಕಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿ ವಿರೋಧಿಗಳೆಲ್ಲರೂ ಸೇರಿಕೊಂಡು, ಒಗ್ಗಟ್ಟಿನ ನಾಟಕವಾಡಿ ರಚನೆ ಮಾಡಿಕೊಂಡ ‘ಇಂಡಿ’ ಒಕ್ಕೂಟ ಪ್ರಸ್ತುತ ಸಮಸ್ಯೆಗಳ ಗೂಡಾಗಿದೆ. ತನ್ನೊಂದಿಗೆ ಸೇರಿ ಒಕ್ಕೂಟ ರಚನೆಗೆ ಸಹರಕಿಸಿರುವ ಪಕ್ಷಗಳಿಗೆ ಸಮಾಧಾನವಾಗುವಂತೆ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌ಗೆ ತಾನು ರಚಿಸಿದ ಸಂಘವೇ ಭಂಗ ತರುತ್ತಿದೆ. ಇಂಡಿ ಒಕ್ಕೂಟ ಒಂದರ್ಥದಲ್ಲಿ ಈಗ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಅನ್ನು ಹಿಂಡಿ ಹಿಪ್ಪೆ ಮಾಡಿ ತಿಪ್ಪೆಗೆ ಎಸೆಯುವ ಹಾಗೆ ಕಾಣುತ್ತಿದೆ.

ಅಂದ ಹಾಗೆ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಒಟ್ಟಾದ ಪಕ್ಷಗಳ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಾಂಗ್ರೆಸ್ ದಬ್ಬಾಳಿಕೆಗೆ ಇಂಡಿ ಒಕ್ಕೂಟದ ಎಲ್ಲಾ ಪಕ್ಷಗಳೂ ತಕ್ಕ ಶಾಸ್ತಿ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ನಗೆಪಾಟಿಲಿಗೆ ಈಡಾಗುತ್ತಿದೆ ಎನ್ನುವುದು ಸತ್ಯ.

ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಎನ್ನುತ್ತಲೇ ಹುಟ್ಟಿಕೊಂಡು, ಆ ಬಳಿಕ ತಾನೂ ಭ್ರಷ್ಟಾಚಾರಕ್ಕೆ ತೆರೆದು ಕೊಂಡು, ಕೊನೆಗೆ ದೇಶದ ಅತ್ಯಂತ ಭ್ರಷ್ಟ‌ ಪಕ್ಷ ಕಾಂಗ್ರೆಸ್‌ನ ಇಂಡಿ ಒಕ್ಕೂಟಕ್ಕೆ ಕೈ ಜೋಡಿಸಿತ್ತು. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಮುನಿಸಾಗಿ, ತನ್ನ ಅಭ್ಯರ್ಥಿಯನ್ನು ‌ಯಾವುದೇ ಹೊಂದಾಣಿಕೆಗೆ ಸಿದ್ದವಿಲ್ಲದೆ ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿತು. ಆ ಮೂಲಕ ಇಂಡಿ ಒಕ್ಕೂಟಕ್ಕೆ ಟಕ್ಕರ್ ನೀಡಿತ್ತು. ಇದೇ ರೀತಿ ಕಾಂಗ್ರೆಸ್ ಮತ್ತು ಈ ಒಕ್ಕೂಟದ ಇತರ ಪಕ್ಷಗಳ ನಡುವೆ ಇದೇ ರೀತಿಯ ಸಮಸ್ಯೆಗಳು ಬೀದಿ ರಂಪವಾಗಿ ಮಾರ್ಪಟ್ಟಿದ್ದು ಎಲ್ಲರಿಗೂ ಗೊತ್ತು.

ಇದೆಲ್ಲದರ ನಡುವೆ ರಾಹುಲ್ ಗಾಂಧಿಗೆ ಮತ್ತೆ ಶಾಕ್ ಆಗುವಂತ ಘಟನೆ ನಡೆದಿದೆ. ಕಾಂಗ್ರೆಸ್ ಜೊತೆಗೆ ಸೀ ಟು ಹಂಚಿಕೆ ವಿವಾದ ಬಗೆ ಹರಿಯುವ ವರೆಗೆ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಸೀಟು ಹಂಚಿಕೆಗೆ ಸಂಬಂಧಿಸಿದ ಹಾಗೆ ಮಾತುಕತೆಗಳು ನಡೆಯುತ್ತಿವೆ. ಕಾಂಗ್ರೆಸ್ ‌ನಿಂದ ಪಟ್ಟಿ ಬಂದಿದೆ. ನಮ್ಮ ಪಕ್ಷ ನಮ್ಮ ಪಟ್ಟಿಯನ್ನು ಸಹ ನೀಡಿದೆ. ಸಿಟಿ ಹಂಚಿಕೆ ಮುಗಿದ ಬಳಿಕ ನಮ್ಮ ಪಕ್ಷ ರಾಹುಲ್ ಗಾಂಧಿಯ ನ್ಯಾಯ ನ್ಯಾಯ ಯಾತ್ರೆಗೆ ಸೇರುತ್ತದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಹ ಈ ಯಾತ್ರೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು.

ಒಟ್ಟಿನಲ್ಲಿ ಇಂಡಿ ಒಕ್ಕೂಟದ ಎಲ್ಲಾ ಎಂಜಿನ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ದಿನಕ್ಕೊಂದರ ಹಾಗೆ ಇಂಡಿ ಒಕ್ಕೂಟಕ್ಕೆ ಸೇರಿದ ವಿಪಕ್ಷಗಳ‌ ನಡೆಯೇ ಸಾಕ್ಷಿ ಹೇಳುತ್ತಿವೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ಜಯಿಸಲು ಒಕ್ಕೂಟ ಕಟ್ಟಿಕೊಂಡರೂ, ಒಟ್ಟಾಗಿ ಸಾಗಲಾರದೆ ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿರುವುದು ಹಾಸ್ಯಾಸ್ಪದ.

Tags

Related Articles

Close