ಪ್ರಚಲಿತ

ಇಫ್ತಾರ್ ಪಾರ್ಟಿಯಲ್ಲಿ ಜನಿವಾರದಾರಿ ಬ್ರಾಹ್ಮಣ ರಾಹುಲ್ ಗಾಂಧಿಯಿಂದ ಮುಸಲ್ಮಾನ ಬಾಂಧವರಿಗೆ ನಡೆದೇ ಹೋಯಿತು ಘೋರ ಅಪಮಾನ!! WATCH…

ಪ್ರತೀ ಬಾರಿಯೂ ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟನ್ನು ಮಾಡಿ ನಗೆಪಾಟಲೀಗೀಡಾಗುತ್ತಿರುವ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ನಿಮಿತ್ತ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಎಡವಟ್ಟು ಮಾಡಿ ಮತ್ತೆ ಸುದ್ದಿಯಾಗಿದ್ದಲ್ಲದೇ ಮುಸಲ್ಮಾನರ ಆಕ್ರೋಶಕ್ಕೂ ತುತ್ತಾಗಿದ್ದಾರೆ.

ರಂಜಾನ್ ನಿಮಿತ್ತ ನಿನ್ನೆ ದೆಹಲಿಯ ತಾಜ್ ಪ್ಯಾಲೆಸ್ ಹೋಟೆಲ್ ನಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಟದಲ್ಲಿ  ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರುಗಳಾದ ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದ ವಿಚಾರ ಗೊತ್ತೇ ಇದೆ!!

ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟ ಭಾರೀ ಸುದ್ದಿ ಮಾಡಿದೆ!! ಸುದ್ದಿ ಮಾಡಿರುವುದು ಇಫ್ತಾರ್ ಕೂಟದಲ್ಲಿ ಯಾವೆಲ್ಲ ಗಣ್ಯಾತಿಗಣ್ಯರು ಭಾಗವಹಿಸಿದರು ಎಂಬ ಕಾರಣಕ್ಕಲ್ಲ. ಬದಲಾಗಿ ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‍ಗಳಲ್ಲಿ ಅದನ್ನು ತೆಗೆದ ಕಾರಣಕ್ಕಾಗಿ!!

ಹೌದು… ಪ್ರತಿ ಬಾರಿಯು ಒಂದಲ್ಲ ಒಂದು ಗಿಮಿಕ್ ಗಳನ್ನು ಮಾಡುತ್ತಾ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ, ಇಫ್ತಾರ್ ಕೂಟ ನಡೆಸಿ ಮುಸಲ್ಮಾನರ ಮತ ಕೀಳುವ ಮುಂದಾಲೋಚನೆ ಮಾಡಿದ್ದೇ ಅವರಿಗೆ ಮುಳುವಾಯಿತೋ ಏನೋ ಗೊತ್ತಿಲ್ಲ!! ಆದರೆ ಮುಸ್ಲಿಂ ಧಾರ್ಮಿಕ ಅಸ್ಮಿತೆಯಾಗಿರುವ ಬಿಳಿ ಕ್ಯಾಪನ್ನು ಧರಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ರಾಹುಲ್ ಅದನ್ನು ತೆಗೆದಿರುವುದು ಮುಸ್ಲಿಂ ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಹೇಳಲಾಗಿದೆ.

ಪ್ರತಿ ಬಾರಿಯು ಹಿಂದೂಗಳನ್ನು ಕಡೆಗಾಣಿಸಿ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿಯವರು ಮುಸಲ್ಮಾನರಿಗೆ ಈ ಮೂಲಕ ಮುಜುಗರ ಉಂಟು ಮಾಡುವಂತೆ ಮಾಡಿದ್ದಂತೂ ಅಕ್ಷರಶಃ ನಿಜ!!  ಅಂತೆಯೇ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ಇದು ಕೇವಲ ಮತ ಪ್ರಚಾರದ ಗಿಮಿಕ್ ಎಂದು ಟೀಕಿಸಿದೆ. ಅಷ್ಟೇ ಅಲ್ಲದೇ, “ರಾಹುಲ್ ಗಾಂಧಿ ಅವರ ಇಫ್ತಾರ್ ಪಾರ್ಟಿ ಕೇವಲ ಒಂದು ನಾಟಕವಾಗಿದ್ದು, ಮುಸ್ಲಿಮರನ್ನು ಸಂಪ್ರೀತಗೊಳಿಸುವ ತಂತ್ರವಾಗಿದೆ!! ಅಷ್ಟೇ ಅಲ್ಲದೇ ಇದು ಕೇವಲ ಒಂದು ರಾಜಕೀಯ ಸ್ಟಂಟ್” ಎಂದು ಬಿಜೆಪಿ ಹೇಳಿದೆ!!

ಇತ್ತೀಚೆಗೆಷ್ಟೇ ವಿದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶದಿಂದ ಭಾರತಕ್ಕೆ ಬಂದ ನಂತರ ಮೊದಲ ಬಹಿರಂಗ ಸಭೆಯನ್ನು ಉದ್ಧೇಶಿಸಿ ಮಾತನಾಡಿದ್ದು,  ಕೋಕೋ ಕೋಲಾ ಕಂಪನಿಯ ಸ್ಥಾಪಕರ ಬಗ್ಗೆ ಪುರಾವೆ ಇಲ್ಲದ ಕಲ್ಪನಾ ಕಥೆಗಳನ್ನು ಕಟ್ಟುವ ಮೂಲಕ ರಾಷ್ಟ್ರವ್ಯಾಪಿ ಸುದ್ಧಿಯಾಗಿದ್ದರು!! ಹೌದು… “ಕೋಕೋ ಕಂಪನಿಯ ಮಾಲೀಕ ಈ ಹಿಂದೆ ಲೆಮನ್ ಜ್ಯೂಸ್ (ನಿಂಬೆ ರಸ) ಮಾರುತ್ತಿದ್ದರು” ಎಂದು ಹೇಳುವ ಮೂಲಕ ವಿಶ್ವದ್ಯಾಂತ ಟೀಕೆಗೊಳಗಾಗಿದ್ದಲ್ಲದೇ ನಗೆಪಾಟಲೀಗೀಡಾಗಿದ್ದರು!!

ಆದರೆ ಇದೀಗ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‍ಗಳಲ್ಲಿ ಅದನ್ನು ತೆಗೆದ ಕಾರಣಕ್ಕೆ ಮುಸ್ಲಿಂ ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಈ ಮೂಲಕ ತನ್ನ ಮುಸ್ಲಿಂ ಪ್ರೇಮ ಅದೆಷ್ಟಿದೆ ಎನ್ನುವುದನ್ನು ನಿರೂಪಿಸಿಯೇ ಬಿಟ್ಟಿದ್ದಾರೆ!!

ಮೂಲ:

http://zeenews.india.com/india/rahul-gandhi-wears-skull-cap-for-just-10-seconds-bjp-hits-back-calls-it-photo-op-2116474.html

– ಅಲೋಖಾ

Tags

Related Articles

Close