ಪ್ರಚಲಿತ

ರಾಮ ರಾಜ್ಯ ನಿರ್ಮಾಣಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಾಂದಿ

ಭಾರತ ರಾಮರಾಜ್ಯವಾಗುವ ಕನಸನ್ನು ನನಸಾಗಿಸುವ ಪ್ರಯತ್ನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು. ಆ ಮೂಲಕ ಗಾಂಧೀಜಿ ಅವರ ರಾಮ ರಾಜ್ಯದ ಕನಸಿಗೆ ನೀರೆರೆದಿರುವುದು ಬಿಜೆಪಿ ಸರ್ಕಾರ ಎಂದೇ ಹೇಳಬಹುದು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಲೋಕಾರ್ಪಣೆಯ ಮೂಲಕವೇ ಗಾಂಧಿ ಕಂಡ ಕನಸನ್ನು ನನಸು ಮಾಡಲು ಪ್ರಧಾನಿ ಮೋದಿ ಸರ್ಕಾರ ಶುಭಾರಂಭ ಮಾಡಿದೆ ಎಂದರೆ ತಪ್ಪಾಗಲಾರದು.

ಭಾರತದಲ್ಲಿ ಮುಂದಿನ ಸಾವಿರ ವರುಷಗಳ ವರೆಗೆ ರಾಮ ರಾಜ್ಯ ಸ್ಥಾಪನೆ ಮಾಡುವುದಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರ ನಾಂದಿಯಾಗಲಿದೆ ಎಂಬುದಾಗಿ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿು ಕಳೆದ ಜನವರಿ ತಿಂಗಳಿನಲ್ಲಿ ಭವ್ಯ ಶ್ರೀರಾಮನ ಮಂದಿರದಲ್ಲಿ ಬಾಲ ರಾಮನ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ.‌ ಈ‌ ಪುಣ್ಯ ಸಂದರ್ಭದಲ್ಲಿ ಕೋಟ್ಯಾನುಕೋಟಿ ರಾಮ ಭಕ್ತರು ಆನಂದ ಸಾಗರದಲ್ಲಿ ಮಿಂದೇಳುವಂತಾಗಿದೆ. ಇದು ರಾಷ್ಟ್ರೀಯ ಪ್ರಜ್ಞೆಯ ಧ್ಯೋತಕವಾಗಿದೆ. ಈ ಮಂದಿರ ವಿಕಸಿತ ಭಾರತ‌ ನಿರ್ಮಾಣ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ರಾಮರಾಜ್ಯವನ್ನು ನನಸಾಗಿಸಲು ಪ್ರಧಾನಿ ಮೋದಿ ಸರ್ಕಾರ ಶುಭಾರಂಭ ಮಾಡಿದೆ ಎನ್ನಬಹುದು.

ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಚೀನ ಧಾರ್ಮಿಕ ನಗರ. ಇಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಿರುವುದು ದೇಶದ ದೊಡ್ಡ ಸಾಧನೆಯೇ ಸರಿ. ಈ ಸಾಧನೆ ಮುಂದಿನ ಸಾವಿರ ವರ್ಷಗಳ ಕಾಲ ದೇಶದಲ್ಲಿ ಹೊಸ ಕಾಲಚಕ್ರದ ಆರಂಭದ ಜೊತೆಗೆ ಇತಿಹಾಸವನ್ನು ನಿರ್ಮಾಣ ಮಾಡಲಿದೆ ಎನ್ನಬಹುದು. ಹಾಗೆಯೇ ದೇಶದ ರಾಮ ರಾಜ್ಯದ ಕನಸಿಗೆ ನಾಂದಿ ಎಂದರೂ ತಪ್ಪಾಗಲಾರದು ಎಂದು ಈ ನಿರ್ಣಯದಲ್ಲಿ ತಿಳಿಸಲಾಗಿದೆ.

Tags

Related Articles

Close