ಅಂಕಣ

ಮೆಸಪಟೋಮಿಯಾವರೆಗೂ ಹಬ್ಬಿತ್ತು ಪ್ರಭು ಶ್ರೀರಾಮನ ಸಾಮ್ರಾಜ್ಯ!! ಇರಾಕಿನ ಪ್ರಾಚೀನ ನಗರದಲ್ಲಿ ನಡೆದ ಉತ್ಖನನದಲ್ಲಿ ದೊರೆಯಿತು ರಾಮನಿಗರ್ಪಿತ ಪೂಜಾಸ್ಥಳ!!

ಮೆಸಪಟೋಮಿಯಾ ಬಗ್ಗೆ ನಾವೆಲ್ಲರೂ ಕೇಳಿಯೆ ಇರುತ್ತೇವೆ. ಪ್ರಪಂಚಾದ್ಯಂತ ಎಡಚ್ಚರು ಗಬ್ಬೆಬಿಸಿದ ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆ ಎನ್ನುವ ಹೆಗ್ಗಳಿಕೆ ಹೊಂದಿದ ಮೆಸಪಟೋಮಿಯಾ ನಾಗರಿಕತೆಗಿಂತ ಭಾರತೀಯ ನಾಗರಿಕತೆ ಹಳೆಯದು ಎನ್ನುವುದು ಈಗ ಉತ್ಖನನಗಳಿಂದ ತಿಳಿಯುತ್ತಲಿದೆ. ಅರೇಬಿಯನ್ ಪ್ರಸ್ಥಭೂಮಿಯಲ್ಲಿರುವ, ಈಗಿನ ಇರಾಕ್, ಸಿರಿಯಾ ಮತ್ತು ಟರ್ಕಿಯ ಭಾಗಗಳೆ ಅಂದಿನ ಮೆಸಪಟೋಮಿಯಾ. ರಾಮ ಸುಳ್ಳು, ರಾಮ ಸೇತು ಸುಳ್ಳೆಂದವರ ಮುಖಕ್ಕೆ ಹೊಡೆಯುವಂತಹ ಸಾಕ್ಷ್ಯವೊಂದು ಮೆಸಪಟೋಮಿಯಾದ (ಈಗಿನ ಇರಾಕ್) ಲಾರ್ಸಾದ ಉರ್ ಎಂಬಲ್ಲಿ ದೊರಕಿದೆ!!

ಇನ್ನು ರಾಮ ಹುಟ್ಟೇ ಇಲ್ಲ, ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಬೇಡ ಎನ್ನುವ ಸಬೂಬು ನಡೆಯುವುದಿಲ್ಲ. ಅತ್ತ ಸರ್ವೋಚ್ಚ ನ್ಯಾಯಾಲಯದಿಂದ ಸಿಹಿ ಸುದ್ದಿ ಬರುವ ಎಲ್ಲಾ ಲಕ್ಷಣಗಳೂ ಕಾಣಸಿಗುತ್ತಿವೆ, ಇತ್ತ ರಾಮ-ಕೃಷ್ಣರು ಸತ್ಯವೆನ್ನುವ ಸಾಕ್ಷಿಗಳು ಮೊಗೆ ಮೊಗೆದು ಬರುತ್ತಿವೆ. ರಾಮ ಹುಟ್ಟೇ ಇರಲಿಲ್ಲವಾದರೆ ಮೆಸಪಟೋಮಿಯಾದಲ್ಲಿ ಸಾವಿರಾರು ವರ್ಷಗಳ ಹಿಂದಿನ ರಾಮನಿಗರ್ಪಿತ ಪೂಜಾಸ್ಥಳ ಎಲ್ಲಿಂದ ಬಂತು? ಸುಮೇರಿಯನ್ ನಾಗರಿಕತೆಯಲ್ಲಿ ರಾಮಚಂದ್ರನ ಹೆಸರು ಹೇಗೆ ದಾಖಲಾಯಿತು?

ಲಾರ್ಸಾ ನಗರದಲ್ಲಿದೆ ರಾಮ ಚಾಪೆಲ್!!

ಚಾಪೆಲ್ ಎಂದರೆ ಪೂಜಾಸ್ಥಳ. ಮೆಸಪಟೋಮಿಯಾದ ಲಾರ್ಸಾದ ‘ಉರ್’ ಎಂಬ ಪಾಳುಬಿದ್ದ ನಗರದಲ್ಲಿ ಸರ್ ಲಿಯೋನಾರ್ಡೋ ವೂಲೀ ಉತ್ಖನನ ನಡೆಸುತ್ತಿದ್ದಾಗ ಅವರಿಗೆ ಶಿಥಿಲವಾಗಿದ್ದ ಪೂಜಾಸ್ಥಳವೊಂದು ದೊರಕುತ್ತದೆ. ರಾಮಾಯಣದ ಬಗ್ಗೆ ಅರಿವಿಲ್ಲದಿರುವ ಅವರಿಗೆ ಇದು ಯಾರ ಪೂಜಾಸ್ಥಳ ಮತ್ತು ಯಾಕಾಗಿ ಕಟ್ಟಿದ್ದರು ಎನ್ನುವ ಅರಿವಾಗುವುದಿಲ್ಲ. ಆದರೆ ಸುಮೇರಿಯಾ ಮತ್ತು ಬ್ಯಾಬಿಲೋನಿನ ಪ್ರಾಚೀನ ಗ್ರಂಥಗಳ ಪ್ರಕಾರ ಇದು ರಾಮನಿಗರ್ಪಿತ ಪೂಜಾಸ್ಥಳವೆಂದು ತಿಳಿದು ಬರುತ್ತದೆ.

ಈ ಪೂಜಾಸ್ಥಳ ಇರಾಕಿನ ‘ಉರ್’ ಎನ್ನುವ ಸ್ಥಳದಲ್ಲಿದೆ. ಉರ್ ಮೆಸಪಟೋಮಿಯಾದ ಸುಮೇರಿಯನ್ ನಾಗರಿಕತೆಯ ಪ್ರಮುಖ ಸ್ಥಳ. ಉರ್ ಎನ್ನುವ ಶಬ್ದ ‘ಉರಿಮ್’ ದೇವತೆಯಿಂದ ಬಂದಿದೆ. ಈ ನಾಗರಿಕತೆಯ ಜನರು ‘ಸಿನ್’ ದೇವತೆಯ ಆರಾಧಕರು. ಸಿನ್ ಎಂದರೆ ‘ಚಂದ್ರ’ ಅಂದರೆ ಇಲ್ಲಿಯ ನಾಗರಿಕರು ಚಂದ್ರವಂಶಿಯರು. Assyrian-Babylonian ನಾಗರಿಕತೆಯಲ್ಲಿ ಚಂದ್ರನೆ ದೇವರು.

ಶತಮಾನಗಳ ಕಾಲ ಈ ಉರ್ ಎನ್ನುವ ಬಂದರು ಪರ್ಶಿಯಾ ಕೊಲ್ಲಿಯಲ್ಲಿತ್ತು ತದನಂತರ ಪ್ರಾಕೃತಿಕ ಕಾರಣಗಳಿಂದ ಸ್ಥಾನಪಲ್ಲಟಗೊಂಡಿತು ಎನ್ನುವುದು ಭೂವಿಜ್ಞಾನಿಗಳ ಅಂಬೋಣ. ಲಾರ್ಸಾದ ಪ್ರಾಚೀನ ಸಂಪ್ರದಾಯಗಳಲ್ಲಿ ‘ರಾಮ ಸಿನ್’ ನ ಉಲ್ಲೇಖವಿದೆ ಇದು ವಾಲ್ಮೀಕಿ ರಾಮಾಯಣದ “ರಾಮಚಂದ್ರ” ಎನ್ನುವುದು ಸಂಶೋಧಕರ ತರ್ಕ. ಲಾರ್ಸಾದ ‘ಅರರಾಮ’ ಕೂಡಾ ರಾಮ ನಾಮದ ಪ್ರತೀಕ ಎಂದು ಹೇಳಲಾಗುತ್ತಿದೆ. ಲಾರ್ಸಾದ ಈ ರಾಮ ಚಾಪೆಲ್ ಅನ್ನು ದಿಲ್ಮುನ್ ವ್ಯಾಪಾರಿಗಳು ಹಲವಾರು ವರ್ಷಗಳ ಹಿಂದೆ ಕಟ್ಟಿಸಿದ್ದರೆನ್ನಲಾಗುತ್ತಿದೆ. ದಿಲ್ಮುನ್, ಮಗಾನ್ ಮತ್ತು ಮೆಲುಕ್ಕಾ ನಗರಗಳಲ್ಲಿ ಗಾಢವಾದ ಸಂಬಂಧಗಳಿದ್ದವು.

ಅತ್ಯಂತ ಪ್ರಾಮಾಣಿಕವಾದ ಸುಮೇರಿಯನ್ ರಾಜರ ಇತಿಹಾಸದಲ್ಲಿ ವರದ ಸಿನ್ (ಭರತಚಂದ್ರ) ರಾಮ ಸಿನ್ (ರಾಮಚಂದ್ರ) ಎನ್ನುವ ಹೆಸರುಗಳು ಉಲ್ಲೇಖವಾಗಿವೆ. ಪ್ರಭು ರಾಮ ಚಂದ್ರವಂಶಿ ಕ್ಷತ್ರಿಯ ಎನ್ನುವುದು ಎಲ್ಲರಿಗೂ ತಿಳಿದಿದೆ. “ದಶರಥ ಜಾತಕ”ದಲ್ಲಿ ಭರತನು 1834-1822 BC ವರೆಗೆ ಅಂದರೆ 12 ವರ್ಷಗಳವರೆಗೆ ರಾಜ್ಯಭಾರ ಮಾಡಿದ್ದನು ಎಂದು ದಾಖಲಾಗಿದೆ. ಈ ಹದಿನೆರಡು ವರ್ಶಗಳನ್ನು ಶ್ರೀ ರಾಮ ವನವಾಸದಲ್ಲಿ ಕಳೆದಿರುವುದು ಗೊತ್ತಿರುವ ವಿಚಾರ. ಧಶರಥನ ಮೃತ್ಯುವಿನ ನಂತರ ವರದ ಸಿನ್ /ಭರತನಿಗೆ ಪಟ್ಟಾಭಿಷೇಕವಾದ ಬಗ್ಗೆ ಸುಮೇರಿಯಾದ ಇತಿಹಾಸದಲ್ಲಿಉಲ್ಲೇಖವಿದೆ.

ಈ ಜಾತಕದಲ್ಲಿ ಸಶಸ್ತ್ರನಾದ ಭುಜಬಲವುಳ್ಳ ರಾಮನು ಅರುವತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದನು ಎಂದು ಬರೆಯಲಾಗಿದೆ. ಈ ಉಲ್ಲೇಖ Assyriologists ಗಳ ಅಂಕಿ ಸಂಖ್ಯೆಯೊಂದಿಗೆ ಯಥಾವತ್ ತಾಳೆಯಾಗುತ್ತಿದೆ! ಈ ಗ್ರಂಥದ ಪ್ರಕಾರ ರಾಮಚಂದ್ರನು ಅರುವತ್ತು ವರ್ಷಗಳವರೆಗೆ ಮೆಸಪಟೋಮಿಯಾ ಭೂಮಿಯ ಮೇಲೆ ರಾಜ್ಯಭಾರ ಮಾಡಿದ್ದನು ಎಂದು ತಿಳಿದು ಬರುತ್ತದೆ. ನಮಗೆಲ್ಲಾ ತಿಳಿದಿರುವಂತೆ ತ್ರೇತಾಯುಗದ ಆರ್ಯಾವರ್ತ ಭಾರತದ ಸರಹದ್ದುಗಳು ಅರಬ್ ಪ್ರಸ್ಥಭೂಮಿಯನ್ನು ಮಾತ್ರವಲ್ಲ ರೋಮ್ ಅನ್ನೂ ಒಳಗೊಂಡಿತ್ತು. ವಾಸ್ತವವಾಗಿ ಆರ್ಯಾವರ್ತ ಭಾರತೀಯರು ಶತಮಾನಗಳ ಹಿಂದಿನಿಂದಲೂ ವಿಶ್ವದ ಬೇರೆ ಬೇರೆ ಜಾಗಗಳಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಉತ್ಖನನ ಕಾಲದಲ್ಲಿ ಶಿವ-ರಾಮ-ಕೃಷ್ಣ-ದುರ್ಗೆ-ಗಣೇಶ-ನರಸಿಂಹ ಮೂರ್ತಿಗಳು ಜಗತ್ತಿನೆಲ್ಲೆಡೆ ದೊರೆಯುತ್ತಿರುವುದು.

ಪಾಶ್ಚಾತ್ಯ ಇತಿಹಾಸಕಾರ ಜೊಆನ್ ಓಟ್ಸ್ ಗೆ ರಾಮಾಯಣದ ಬಗ್ಗೆ ಗೊತ್ತಿಲ್ಲ ಆದರೆ ಗಹನವಾದ ಅಂತರದೃಷ್ಟಿಯಿಂದ ತಮ್ಮ ಲೇಖನದಲ್ಲಿ ಅತ್ಯಂತ ಸ್ಪಷ್ಟವಾಗಿ ತಂದೆಯ ಸಾವಿನ ಬಳಿಕ ವರದಸಿನ್( ಭರತ)ನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲಾಗುತ್ತದೆ ಎಂದು ಬರೆಯುತ್ತಾರೆ. ರಾಮ ವನವಾಸದಿಂದ ಹಿಂತಿರುಗುವವರೆಗೂ ಭರತ ರಾಮನ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ರಾಮನ ಪ್ರತಿನಿಧಿಯಾಗಿ ಸಾಮ್ರಾಜ್ಯವನ್ನಾಳಿರುವುದು ನಮಗೆಲ್ಲ ಗೊತ್ತು. ಅರಬ್ ಮತ್ತು ರೋಮ್ ನಗರಗಳಲ್ಲಿ ನಡೆದ ಉತ್ಖನನಗಳಲ್ಲಿ ರಾಮ-ಲಕ್ಷಣ, ಸೀತೆ ಮತ್ತು ಹನುಮಂತನನ್ನು ಪ್ರತಿನಿಧಿಸುವ ಹಲವಾರು ಚಿತ್ರಗಳು ಕಂಡುಬಂದಿವೆ. ಇರಾಕಿನಲ್ಲಿ6000 ವರ್ಷಗಳಷ್ಟು ಪ್ರಾಚೀನವಾದ ರಾಮ ಮತ್ತು ಹನುಮಂತನ ಕೆತ್ತನೆ ಕಂಡುಬಂದಿದೆ.


ಈ ಎಲ್ಲಾ ಸಾಕ್ಷ್ಯಗಳು ರಾಮ ಸುಳ್ಳಲ್ಲ, ರಾಮ ಸೇತುವೂ ಸುಳ್ಳಲ್ಲ, ಅಯೋಧ್ಯೆಯಲ್ಲಿ ರಾಮ ಜನ್ಮ ತಾಳಿದ್ದೂ ಸುಳ್ಳಲ್ಲ ಎಂದು ಕೂಗಿ ಕರೆಯುತ್ತಿವೆ. ನಾವು ಕಿವಿ, ಬಾಯಿ , ಕಣ್ಣು ಮುಚ್ಚಿಕೊಂಡ ಕೂತರೆ ಸತ್ಯ ಸುಳ್ಳಾಗುವುದಿಲ್ಲ. ಮನಸಿಗೆ ಹತ್ತಿದ ಅಜ್ಞಾನದ ಪರದೆಯನ್ನು ಹರಿಸಿ ನೋಡಿ ರಾಮನೂ ಕಾಣುತ್ತಾನೆ, ಕೃಷ್ಣನೂ ದೊರೆಯುತ್ತಾನೆ…

-ಶಾರ್ವರಿ

images: artifacts found during excavation in various places depicting Rama-Sita and Laxmana

citation:kalyan97.wordpress

Tags

Related Articles

FOR DAILY ALERTS
Close