ಪ್ರಚಲಿತ

ಅತ್ಯಾಚಾರಿಯ ಶಿರಚ್ಛೇಧನ ಮಾಡಿದರೆ ತಾನೇ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ ಬಿಜೆಪಿ ನಾಯಕ!!

874 Shares
ಭಾರತದಾದ್ಯಂತ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಧಿಕಾರಿಗಳ ನಿರ್ಲಕ್ಯದಿಂದ ಕಾಮಾಂಧರು ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿರುವ ಪ್ರಕರಣಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ!! ಆದರೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಮಂಡ್ಸಾರ್ ಅತ್ಯಾಚಾರ ಪ್ರಕರಣದ ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಬಿಜೆಪಿ ಮುಖಂಡರೊಬ್ಬರು ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ, ಜಮ್ಮು-ಕಾಶ್ಮೀರದ ಕಠುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಲೇ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸಲಾಯಿತು, ಮೇಣದ ಬತ್ತಿ ಹಿಡಿದು ಹೋರಾಟ ಮಾಡಲಾಯಿತು. ಸಿನೆಮಾ ರಂಗದ ನಟ ನಟಿಯರ ದಂಡು ಅತ್ಯಾಚಾರಿಗಳ ವಿರುದ್ಧ ಹೋರಾಡಿದ್ದೇ ಹೋರಾಡಿದ್ದು!! ಆದರೆ ಈಗ ಆ ನಟ ನಟಿ ಮಣಿಯರ ಸುದ್ದಿಯೇ ಇಲ್ಲ!!

ಮಧ್ಯಪ್ರದೇಶದ ಮಂಡ್ಸಾರ್ ಜಿಲ್ಲೆಯಲ್ಲಿ 7 ವರ್ಷದ ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರೂ, ಮಾಡಿರುವ ಆರೋಪಿಗಳು ಮುಸ್ಲಿಮರೇ ಎಂಬ ಆರೋಪವಿದ್ದರೂ ಇದುವರೆಗೂ ದೇಶದಲ್ಲಿ ಯಾವುದೇ ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು ಪ್ರತಿಭಟನೆ ನಡೆಸದೆ, ತಮ್ಮ ಇಬ್ಬಂದಿತನ ಪ್ರದರ್ಶಿಸಿದ್ದಾರೆ. ಆದರೆ ಮಧ್ಯಪ್ರದೆಶದ ಮಂಡ್ಸಾರ್ ನಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಹೇಳಿದ್ದಾರೆ.

ಮಧ್ಯಪ್ರದೆಶದ ಮಂಡ್ಸಾರ್ ನಲ್ಲಿ 7 ವರ್ಷದ ಬಾಲಕಿಯ ಮೇಲೆ ಇರ್ಫಾನ್ ಖಾನ್ (20) ಆಸೀಫ್ (24) ಭೀಕರವಾಗಿ ಅತ್ಯಾಚಾರ ನಡೆಸಿದ್ದರು. ನಿರ್ಭಯಾ ಪ್ರಕರಣದ ಮಾದರಿಯಲ್ಲೆ 7 ವರ್ಷದ ಬಾಲಕಿಯ ಮರ್ಮಾಂಗವನ್ನು ಘಾಸಿಗೊಳಿಸಿದ್ದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕೆಂಬ ಒತ್ತಾಯ ದೇಶಾದ್ಯಂತ ಕೇಳಿಬರುತ್ತಿದ್ದರೆ, ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಗ್ಯಾಂಗ್ ರೇಪ್ ಆರೋಪಿಗಳ ಶಿರಚ್ಛೇಧ ಮಾಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಹೌದು… ಈಗಾಗಲೇ ಕೇಂದ್ರ ಸರಕಾರ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಾಗಿ ತಿಳಿಸಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಭೋಪಾಲ್ ನಲ್ಲಿ ರಾಜ್ಯ ಸರಕಾರವು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ಬಂಧನಕ್ಕೆ ಆದೇಶಿಸುವ ಮೂಲಕ ಬಿಜೆಪಿ ನೇತೃತ್ವದ ಸರಕಾರ ಅತ್ಯಾಚಾರಿಗಳ ವಿರೋಧ ಎಂಬುದು ಸಾಬೀತು ಪಡಿಸಿದೆ.

BJP Leader Sanjeev Mishra

ಬಾಲಕಿ ಶಾಲೆ ಮುಗಿಸಿಕೊಂಡು ವಾಪಸ್ಸಾಗಬೇಕಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ಯಲು ಪೋಷಕರು ಬರುವ ವೇಳೆಗೆ ತಡವಾಗಿತ್ತು. ಇದೇ ಪರಿಸ್ಥಿತಿಯ ಲಾಭ ಪಡೆದಿದ್ದ ಇರ್ಫಾನ್ ಖಾನ್ (20) ಆಸೀಫ್ (24) ಬಾಲಕಿಗೆ ಸಿಹಿ ತಿನಿಸುಗಳ ಆಮಿಷವೊಡ್ಡಿ ಕರೆದೊಯ್ದು ಭೀಕರವಾಗಿ ಅತ್ಯಾಚಾರವೆಸಗಿ, ಗುದದ್ವಾರದ ಚರ್ಮವನ್ನು ಛಿದ್ರಗೊಳಿಸಿ ಜನನಾಂಗದಲ್ಲಿ ವಸ್ತುಗಳನ್ನು ತುರುಕಿ ತಮ್ಮ ಕ್ರೌರ್ಯವನ್ನು ಪ್ರದರ್ಶಿಸಿದ್ದರು ಈ ನೀಚರು!! ಆದರೆ ಇದೀಗ ಈ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೂಲ:
https://twitter.com/KannadaPrabha/

– ಅಲೋಖಾ

874 Shares
Tags

Related Articles

Close