ಪ್ರಚಲಿತ

ಷರತ್ತು ವಿಧಿಸಿ, ತನ್ನ ದುಷ್ಕೃತ್ಯಗಳಿಗಾಗಿ ಮಕ್ಕಳನ್ನು ಬಳಸುತ್ತಿರುವ ನಕ್ಸಲರ ಅಸಲಿ ಮುಖ ಬಯಲು ಮಾಡಿದ ವಿಶ್ವಸಂಸ್ಥೆ!!

87 Shares

ಪಾಕಿಸ್ತಾನ ಮೂಲದ ನಿಷೇಧಿತ ಜೈಷೆ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳು ಜಮ್ಮು -ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧದ ಘರ್ಷಣೆಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿರುವ ಬೆನ್ನಲ್ಲೇ ನಕ್ಸಲರು ಇಂತಹದ್ದೇ ಕೃತ್ಯಕ್ಕೆ ಕೈ ಹಾಕಿರುವ ಆಘಾತಕಾರಿ ವರದಿಯೊಂದನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಿಡುಗಡೆ ಮಾಡಿದ್ದಾರೆ!!

ಭಯಂಕರ ಹತ್ಯೆಗಳನ್ನು ಮಾಡುತ್ತ ಇಡೀ ವಿಶ್ವಕ್ಕೆ ತಲೆನೋವಾಗಿರುವ ಐಸಿಸ್ ಉಗ್ರ ಸಂಘಟನೆ ಮುಗ್ದ ಮಕ್ಕಳಿಗೆ ಉಗ್ರವಾದದ ಕುರಿತು ತರಬೇತಿ ನೀಡುತ್ತಿದೆ. ಅವರಂತೆಯೇ ಇದೀಗ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ನಕ್ಸಲರು ಬಡವರು, ಶೋಷಿತರು, ದಲಿತರಿಗೆ ನ್ಯಾಯ ಒದಗಿಸುವ ಸೋಗು ಹಾಕಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಕಂಟಕವಾಗಿರುವ ಇವರು ಮಕ್ಕಳ ಕೈಗಳಿಗೆ ಪಿಸ್ತೂಲ್ ಬಳಕೆ ಕುರಿತು ತರಬೇತಿ ನೀಡುತ್ತಾ ಭಾವಿ ಹಂತಕರನ್ನಾಗಿಸಲು ಯತ್ನಿಸುತ್ತಿದ್ದಾರೆ ಎನ್ನುವ ಆಘಾತಕಾರಿ ವಿಚಾರವೊಂದನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೇರಸ್ ಹೇಳಿದ್ದಾರೆ.

ಈಗಾಗಲೇ ತನ್ನ ಕಠಿಣ ಕ್ರಮಗಳಿಂದಾಗಿ ನಕ್ಸಲರನ್ನು ಬಗ್ಗು ಬಡಿಯುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರವು ನಕ್ಸಲರನ್ನು ಹತ್ತಿಕ್ಕುತ್ತಿರುವುದೇ ನಕ್ಸಲರಿಗೆ ತೀವ್ರ ಸಂಕಷ್ಟಕ್ಕೀಡಾಗುವಂತೆ ಮಾಡಿದೆ!! ಇದರಿಂದ ಕಂಗೆಟ್ಟಿರುವ ಮಾವೋವಾದಿಗಳು ಮಕ್ಕಳ ಮೊರೆ ಹೋಗಿದ್ದಾರೆ!! ಅಷ್ಟೇ ಅಲ್ಲದೇ ಈ ನಕ್ಸಲರ ಹೋರಾಟದಲ್ಲಿ ಫಲವಿಲ್ಲ ಎಂಬುದನ್ನು ಅರಿತು ಹಿರಿಯ ನಕ್ಸಲರು ಸಾಮಾಜಿಕ ಮುನ್ನೆಲೆಗೆ ಬರುತ್ತಿರುವುದು ಒಂದೆಡೆಯಾದರೇ, ಮತ್ತೊಂದೆಡೆ ರಕ್ಷಣಾ ಪಡೆಗಳ ನಿರಂತರ ದಾಳಿಯಿಂದ ನಕ್ಸಲರ ಬಲ ದಿನೇ ದಿನೇ ಕುಸಿಯುತ್ತಿರುವುದಿಂದ ಅವರು ಮಕ್ಕಳನ್ನು ನೇಮಿಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ.

ಹೌದು… 16 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ನೇಮಕ ಮಾಡಿಕೊಳ್ಳುತ್ತಿದ್ದು, ಅರಣ್ಯದ ಪಕ್ಕದಲ್ಲಿರುವ ಗ್ರಾಮಗಳಲ್ಲಿ ಪ್ರತಿಕುಟುಂಬವೂ ಒಂದು ಮಗುವನ್ನು ಚಳುವಳಿಗಾಗಿ ಹೋರಾಟಕ್ಕೆ ದತ್ತು ನೀಡಬೇಕು ಎಂಬ ಷರತ್ತು ವಿಧಿಸುತ್ತಿರುವುದು ಬೆಳಕಿಗೆ ಬಂದಿದೆ. ಅದರಂತೆಯೇ ಲಾಟರಿ ಮೂಲಕ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಿ ಆರ್ ಫಿ ಎಫ್ ಅಧಿಕಾರಿ ರಾಜೀವ್ ರೈ ಭಟ್ನಾಗರ್ ತಿಳಿಸಿದ್ದಾರೆ.

Related image

ಅಷ್ಟೇ ಅಲ್ಲದೇ, ನೇಮಕ ಮಾಡಿಕೊಂಡಿರುವ ಮಕ್ಕಳನ್ನು ಬಾಲ ದಸ್ತಾಸ್ ಎಂದು ನಾಮಕರಣ ಮಾಡಿದ್ದು, ಅವರನ್ನು ನಕ್ಸಲರ ಮಾಹಿತಿದಾರರಾಗಿ, ತಂತ್ರಜ್ಞಾನ ಬಳಕೆಗೆ, ಉಪಕರಣ ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ನಕ್ಸಲರು ಬಲ ತೀವ್ರಗತಿಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ದಾಳಿ ವೇಳೆಯಲ್ಲಿ ಮಕ್ಕಳ ಮೇಲೆ ಗುಂಡು ಹಾರಿಸದಂತೆ ಸಿ ಆರ್ ಪಿ ಎಫ್ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಟ್ನಾಗರ್ ತಿಳಿಸಿದ್ದಾರೆ.

ಈ ಹಿಂದೆಯಷ್ಟೇ, ಜಾರ್ಖಂಡ್‍ನ ಹಲವು ಜಿಲ್ಲೆಗಳ ಹಳ್ಳಿಗಳಲ್ಲಿ ಮುಖಂಡರ ಸಹಾಯ ಪಡೆದು ಮಕ್ಕಳಿಗೆ ಗನ್ ನೀಡಿ ತರಬೇತಿ ನೀಡುತ್ತಿದ್ದಾರಲ್ಲದೆ ಪಂಚಾಯತ್ ಚುನಾವಣೆ ವೇಳೆ ತಮಗೆ ಬೆಂಬಲ ನೀಡಬೇಕೆಂದೂ ಸಹ ನಕ್ಸಲರು ಮುಖಂಡರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿತ್ತು!! ಇನ್ನು ಗುಮ್ಲಾ, ಲೋಹರ್‍ದಾಗಾ ಮತ್ತು ಲಟೇಹರ್ ಪ್ರದೇಶದ ಹಲವು ಹಳ್ಳಿಗಳಿಂದ ತಲಾ 10 ಮಕ್ಕಳನ್ನು ತಮಗೆ ನೀಡಬೇಕು ಎಂದು ಆಯಾ ಗ್ರಾಮಗಳ ಮುಖಂಡರಿಗೆ ನಕ್ಸಲರು ನೋಟಿಸ್ ನೀಡಿದ್ದು, ಇದಕ್ಕೆ ಬೆಂಬಲ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿರುವುದಾಗಿ ಮೂಲಗಳು ಹೇಳಿತ್ತು!!

ಆದರೆ ಇದೀಗ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೇರಸ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಛತ್ತೀಸಘಡ್ ಮತ್ತು ಜಾರ್ಖಂಡ್ ನಲ್ಲಿ ವಿಶೇಷವಾಗಿ ಮಕ್ಕಳನ್ನು ತೀವ್ರಗತಿಯಲ್ಲಿ ನಕ್ಸಲರು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಲಾಟರಿ ಮೂಲಕ ನೇಮಕ ಮಾಡಿಕೊಂಡು ಅವರಿಗೆ ತರಬೇತಿ ನೀಡಿ ಅವರನ್ನು ಹೋರಾಟಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿ ಕುಟುಂಬವೂ ಒಂದು ಮಗುವನ್ನು ಚಳುವಳಿಗಾಗಿ ಹೋರಾಟಕ್ಕೆ ದತ್ತು ನೀಡಬೇಕು ಎಂಬ ಷರತ್ತು ವಿಧಿಸಿ, ಅದರಂತೆ ಲಾಟರಿ ಮೂಲಕ ಮಕ್ಕಳನ್ನು ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಇದಕ್ಕಿಂತಲೂ ಕ್ರೂರ ವಿಚಾರ ಮತ್ತೊಂದಿಯೇ?? ಆದರೆ ನಕ್ಸಲರನ್ನು ಸಮಾಜ ಸೇವಕರಂತೆ ಬಿಂಬಿಸುವ ಬುದ್ದಿಜೀವಿಗಳು ವಿಶ್ವಸಂಸ್ಥೆ ನೀಡಿರುವ ಈ ವರದಿಗೆ ಅದೇನೂ ಹೇಳುತ್ತೋ ನಾ ಕಾಣೆ!!

ಮೂಲ:
https://timesofindia.indiatimes.com/

– ಅಲೋಖಾ

87 Shares
Tags

Related Articles

Close