ಪ್ರಚಲಿತ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಜನಾರ್ದನ ರೆಡ್ಡಿ..! ಆಡಿಯೋ ಸೀಕ್ರೆಟ್ ಬಹಿರಂಗ ಪಡಿಸಿದ ಬಳ್ಳಾರಿ ದೊರೆ..!

ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಯಾರನ್ನೂ ತಲೆ ಹಿಡಿಯಬಹುದು ಎಂಬ ವಿಚಾರ ಇದೀಗ ರಹಸ್ಯವಾಗಿ ಉಳಿದಿಲ್ಲ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ನಡೆಸಲು ಅವಕಾಶ ನೀಡದಿದ್ದರೂ ವಾಮಾಮಾರ್ಗ ದ ಮೂಲಕ ಅಧಿಕಾರವನ್ನು ಹಿಡಿದು ಮತ್ತೆ ರಾಜ್ಯದಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಬೇಕೆಂಬುವುದು ಕಾಂಗ್ರೆಸ್ ಕನಸು. ಜನತಾ ದಳಕ್ಕೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿ ಭಾರತೀಯ ಜನತಾ ಪಕ್ಷ ವನ್ನು ದೂರ ಇಡಬೇಕು ಎನ್ನುವ ಏಕೈಕ ಉದ್ದೇಶದಿಂದ ಇದೀಗ ಜೆಡಿಎಸ್‌ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದೆ.!

ಆಡಿಯೋ ಶಾಕ್ ನೀಡಿದ್ದ ಕಾಂಗ್ರೆಸ್..!

ಇನ್ನು ಭಾರತೀಯ ಜನತಾ ಪಕ್ಷದ ಬಲವನ್ನು ಹೇಗಾದರೂ ಮಾಡಿ ಮೊಟಕುಗೊಳಿಸಬೇಕೆಂಬ ಹಠದಲ್ಲಿದ್ದ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಕಾಂಗ್ರೆಸ್ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡಿದ್ದಾರೆ ಎಂದು ಆರೋಪಿಸಿತ್ತು. ಜನಾರ್ದನ ರೆಡ್ಡಿಯವರು ಕಾಂಗ್ರೆಸ್ ಶಾಸಕ ಬಸವರಾಜ್ ಗೆ ಕರೆ ಮಾಡಿ ೧೦೦ ಕೋಟಿಯ ಆಫರ್ ಇಟ್ಟಿದ್ದರು ಎಂದು ಆರೋಪ ಮಾಡಿ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಮಾತನಾಡಿದ ಆಡಿಯೋ ಬಿಡುಗಡೆ ಮಾಡಿದ್ದರು.

Related image

ಸಿಡಿದೆದ್ದ ರೆಡ್ಡಿ..!

ಯಾವಾಗ ಕಾಂಗ್ರೆಸ್ ಇಂತಹ ಒಂದು ಆರೋಪ ಮಾಡಿತೋ ಅದರ ಮರುಕ್ಷಣವೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಬಿಡುಗಡೆಗೊಳಿಸಿದ ಆ ಆಡಿಯೋ ನಕಲಿ ಎಂದು ಜನಾರ್ದನ ರೆಡ್ಡಿ ಹೇಳಿಕೊಂಡಿದ್ದಾರೆ.

“ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರ ನ ವಂಶಸ್ಥರು ಎಂಬಂತೆ ನಾಟಕ ಮಾಡುತ್ತಿದ್ದಾರೆ. ಕಳೆದ ೬ ದಶಕಗಳಿಂದ ಇವರು ಸಂವಿಧಾನವನ್ನು ಎಷ್ಟು ಬಾರಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುವುದು ದೇಶದ ಜನತೆಗೆ ಗೊತ್ತಿದೆ. ಈಗಲೂ ಅದೇ ಹಾದಿಯಲ್ಲಿ ಜನರನ್ನು ಧಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ನಾಳೆ ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ಸೋಲಿನ ಭೀತಿಯಿಂದ ಅನಾವಶ್ಯಕ ವಾಗಿ ನನ್ನ ಹೆಸರಿನ ನಕಲಿ ಆಡಿಯೋ ಒಂದನ್ನು ಬಿಡುಗಡೆ ಮಾಡಿ ನನಗೆ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಕೆಟ್ಟ ಹೆಸರನ್ನು ತರುವ ಷಡ್ಯಂತ್ರ ಇದಾಗಿದೆ. ನಾಡಿನ ಜನತೆಗೆ ಗೊತ್ತಿದೆ ಇವರ ಬಣ್ಣ. ಆಡಿಯೋ ದಲ್ಲಿರುವ ಧ್ವನಿಯನ್ನು ನನ್ನ ಹಾಗೆ ಮಾತನಾಡುವ ರೀತಿ ಆಧುನಿಕ ತಂತ್ರಜ್ಞಾನ ದಿಂದ ಸಿದ್ದಪಡಿಸಿಕೊಂಡು ನಕಲಿ ಆಡಿಯೋ ಬಿಡುಗಡೆ ಯಾವುದೇ ಸಂಬಂಧ ಇರುವುದಿಲ್ಲ” ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿಕೊಂಡಿದ್ದಾರೆ.

ಇನ್ನು ಕರ್ನಾಟಕ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಟಿ ನಡೆಸಿ ಈ ಆಡಿಯೋ ನಕಲಿ. ಇದನ್ನು ವಿಜ್ಞಾನ ಕೇಂದ್ರ ದಲ್ಲಿ ತಪಾಸಣೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಎದುರು ತಾವು ಸರ್ಕಾರ ರಚಿಸಬೇಕು ಎಂಬ ಹಠದಿಂದ ಈ ಕೃತ್ಯಕ್ಕೆ ಇಳಿದಿದ್ದ ಕಾಂಗ್ರೆಸ್ ಗೆ ಇದೀಗ ಮುಖಭಂಗವಾಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close