ಪ್ರಚಲಿತ

ರಾಹುಲ್ ಬಾಬಾ ಕಿವಿಕೊಟ್ಟು ಕೇಳಿ.!ಹುಬ್ಬಳ್ಳಿಯಲ್ಲಿ ಘರ್ಜಿಸಿದ ಚಾಣಕ್ಯ.!ರಾಹುಲ್ ಬಾಬಾ ಹೇಳಿದ್ದನ್ನೇ ಇಮ್ರಾನ್ ಖಾನ್ ಹೇಳ್ತಾನೆ.!

ನಾಗರಿಕ ಪೌರತ್ವ ಕಾಯ್ದೆಯನ್ನು ಸಮರ್ಥಿಸಿ ಹುಬ್ಬಳ್ಳಿಯಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಚಾಣಕ್ಯ ಮಾತು ಮಾತಿನಲ್ಲೂ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಝಾಡಿಸಿದರು. ಭಾರತದಲ್ಲಿ ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ರಾಹುಲ್ ಬಾಬಾ ಟೀಕೆ ಮಾಡುತ್ತಾರೆ. ಇಲ್ಲಿ ರಾಹುಲ್ ಬಾಬಾ ಟೀಕಿಸಿದರೆ ಅದನ್ನೇ ಅಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫಾಲೋ ಮಾಡುತ್ತಾನೆ.ಇಲ್ಲಿ ರಾಹುಲ್ ಬಾಬಾ ಸಿಎಎ ವಿರೋಧಿಸಿದರೆ ಅಲ್ಲಿ ಇಮ್ರಾನ್ ಖಾನ್ ಸಿಎಎ ವಿರೋಧಿಸುತ್ತಾನೆ.ಇಲ್ಲಿ ರಾಹುಲ್ ಬಾಬಾ 370 ವಿಧಿ ರದ್ದತಿ ವಿರೋಧಿಸಿದರೆ ಅಲ್ಲಿ ಇಮ್ರಾನ್ ಖಾನ್ ಕೂಡಾ ಅದನ್ನು ವಿರೋಧಿಸುತ್ತಾನೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಹಾಗೂ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯವರಿಗೆ ಏನು ಸಂಬಂಧ? ಇಬ್ಬರೂ ಒಂದೇ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಾಗಿದ್ದಾರೆ ಎಂದು ಕಿಡಿ ಕಾರಿದರು.

ಇಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಅಮಿತ್ ಶಾ ಮಾತಿನ ಝಲಕ್ ಹೀಗಿದೆ.

*ಸಿಎಎ ಕಾಯ್ದೆಯನ್ನು ಮೊದಲು ಸರಿಯಾಗಿ ಅಧ್ಯಯನ ನಡೆಸಿ ನಂತರ ಮಾತನಾಡಿ.

* ನಿಮ್ಮೊಂದಿಗೆ ನಮ್ಮ ಸಚಿವ ಪ್ರಹ್ಲಾದ್ ಜೋಶಿಯವರನ್ನು ಚರ್ಚೆಗೆ ಕಳಿಸುತ್ತೇನೆ.ತಾಕತ್ತಿದ್ದರೆ ಚರ್ಚೆ ಮಾಡಿ.

* ಸಿಎಎ ವಿರೋಧಿಸಿದರೆ ದಲಿತರನ್ನು ಅವಮಾನಿಸಿದಂತೆ. ದಲಿತ ಪ್ರೇಮಿಗಳು ಎಂದು ನಾಟಕ ಮಾಡುವ ಕಾಂಗ್ರೆಸ್ಸಿಗರ ಬಣ್ಣ ಈಗ ಬಯಲಾಗಿದೆ.

* ಇಲ್ಲಿ ಕಾಂಗ್ರೆಸ್ ಏನಾದರೂ ನಿರ್ಧಾರ ಕೈಗೊಂಡರೆ ಅಲ್ಲಿ ಪಾಕಿಸ್ತಾನ ಹಿಂಬಾಲಿಸುತ್ತೆ. ಪಾಕಿಸ್ತಾನ ಹೇಳಿದ್ದನ್ನು ಕಾಂಗ್ರೆಸ್ ಕೇಳುತ್ತೆ. ಭಾರತದ ಕಾಂಗ್ರೆಸ್ ಪಕ್ಷ ಹಾಗೂ ಪಾಕಿಸ್ತಾನಕ್ಕೆ ಅದೇನು ಸಂಬಂಧ?

* ಅಂದು ಗಾಂಧೀಜಿ ಕೂಡಾ ಈ ಕಾಯ್ದೆಯ ಪರವಾಗಿದ್ದರು. ಈಗ ಅವರ ಪ್ರೇಮಿಗಳು ಎಂದು ಹೇಳುತ್ತಿರುವ ಕಾಂಗ್ರೆಸ್ಸಿಗರು ಈ ಕಾಯ್ದೆಯನ್ನು ವಿರೋಧಿಸುತ್ತಾರೆ. ಗಾಂಧೀಜಿ ಹೆಸರೆತ್ತುವ ಯೋಗ್ಯತೆ ಇವರಿಗಿಲ್ಲ.

* ಅಂದು ನೆಹರು  ಮತ್ತು ಲಿಯಾಖತ್ ಒಪ್ಪಂದ ಮಾಡಿಕೊಂಡಿದ್ದರು.ದೇಶ ವಿಭಜನೆ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಪೌರತ್ವ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದಾರೆ?

* ರಾಹುಲ್ ಬಾಬಾ ಕಿವಿ ಕೊಟ್ಟು ಕೇಳಿ. ಅಂದು ನೀವು ಮಾಡಿದ ತಪ್ಪನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಿ ಮಾಡಿಕೊಂಡಿದ್ದಾರೆ.ಆದರೆ ನೀವು ಇಂದು ದೇಶದ ಜನತೆಯ ಹಾದಿ ತಪ್ಪಿಸುತ್ತಿದ್ದೀರಿ. ಇದು ಒಳ್ಳೆಯದಲ್ಲ.

* ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಸುಳ್ಳು ಹೇಳಿ ಅವರನ್ನು ದಾರಿ ತಪ್ಪಿಸುತ್ತಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ. ಇದನ್ನು ನೀವು ಅರ್ಥ ಮಾಡಿಕೊಳ್ಳಿ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close