ಪ್ರಚಲಿತ

ಮ್ಯಾನ್ಮಾರಿನಲ್ಲಿ ಹಿಂದೂಗಳ ಮಾರಣಹೋಮ ನಡೆಸಿದ ರೋಹಿಂಗ್ಯಾಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರವಾಗುವಂತೆ ಬಲವಂತ ಪಡಿಸಿದ್ದರು ಎನ್ನುತ್ತದೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ವರದಿ!!

ಜ್ಯಾತ್ಯಾತೀತರ ಕಣ್ಣಿನ ಕಣ್ಮಣಿ, ಪಾಪದ ಅಮಾಯಕ, ನಿರಾಶ್ರಿತ ರೋಹಿಂಗ್ಯಾಗಳ ಕ್ರೂರ ಮುಖದ ಅನಾವರಣ ಆಗಿದೆ. ಇದನ್ನ ಧೃಢಪಡಿಸಿರುವುದು ಬೇರಾರು ಅಲ್ಲ, ವಿಶ್ವದ ಅತ್ಯಂತ ದೊಡ್ಡ ಮತ್ತು ಪ್ರತಿಷ್ಟಿತ ಮಾನವಾಧಿಕಾರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಶನಲ್!! ಮಾನವ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನಡೆಸಿದ ತನಿಖೆಯಲ್ಲಿ ಮ್ಯಾನ್ಮಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೋಹಿಂಗ್ಯಾ ಭಯೋತ್ಪಾದಕರು ರಾಖಿನೆ ಪ್ರಾಂತ್ಯದಲ್ಲಿ ಇದುವರೆಗೂ 100 ಹಿಂದೂಗಳ ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ ಎನ್ನುವುದನ್ನು ‘ಬಿಬಿಸಿ ವರ್ಲ್ಡ್’ ವರದಿ ಮಾಡಿದೆ. ಈ ವರದಿಯ ಪ್ರಕಾರ, ಬರ್ಮಾ ಸೈನ್ಯದ ವಿರುದ್ಧ ಬಂಡಾಯದ ಸಮಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸಲಾಗಿದೆ. ಬರ್ಮಾದ ರಾಖಿನೆ ಪ್ರಾಂತ್ಯದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ ಈ ಸಂಘರ್ಷದ ಬಳಿಕ ಅವರನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ರಾಖಿನೆಯ ಉತ್ತರ ಮಾಂಗ್ಡಾವ್ ಗ್ರಾಮಗಳ ಅಂಚಿನಲ್ಲಿ ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಆರ್ಸಾ) ಕಳೆದ ಆಗಸ್ಟಿನಲ್ಲಿ ಹಿಂದೂಗಳ ಸಾಮೂಹಿಕ ಮಾರಣ ಹೋಮ ನಡೆಸಿದೆ. “ವಿವೇಚನೆ ಇಲ್ಲದ ಈ ಕ್ರೂರ ಕಾರ್ಯದಲ್ಲಿ, ಆರ್ಸಾದ ಸದಸ್ಯರು ಹಿಂದು ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ವಶಪಡಿಸಿಕೊಂಡು, ಅವರನ್ನು ಭಯಪಡಿಸಿ ಅವರದೆ ಹಳ್ಳಿಯ ಹೊರಗೆ ಅವರ ಕೊಲೆ ಮಾಡಿದೆ “ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಹೇಳಿದೆ. ಹಿಂದೂಗಳ ಸ್ವತ್ತನ್ನು ದರೋಡೆ ಮಾಡಿದ ಬಳಿಕ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಬಂಧಿಸಿ ಹಳ್ಳಿಯ ಹೊರವಲಯಕ್ಕೆ ಕರೆತರಲಾಗಿದೆ. ಅದರಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಪುರುಷರಿಂದ ಪ್ರತ್ಯೇಕಿಸಿ ಮೊದಲು 53 ಪುರುಷರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿದೆ. ಹಿಂದೂ ಮಹಿಳೆಯರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವಂತೆ ಭಯೋತ್ಪಾದಕರು ಬಲವಂತ ಮಾಡಿದ್ದರು ಎಂದೂ ಅಮ್ನೆಸ್ಟಿ ಹೇಳಿದೆ.

ಅಮ್ನೆಸ್ಟಿ ಪ್ರಕಾರ, ಕಪ್ಪು ಮತ್ತು ಸರಳ ಉಡುಪುಗಳನ್ನು ಧರಿಸಿದ್ದ ಸಶಸ್ತ್ರ ರೋಹಿಂಗ್ಯಾ ಭಯೋತ್ಪಾದಕರು ಬೆಳಗ್ಗೆ 8 ಗಂಟೆ ಸುಮಾರಿಗೆ ಅಹ ನೇಕ್ ಖಾ ಮಾಂಗ್ ಸಿಯಕ್ ಎಂಬ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ ಮತ್ತು ಹಳ್ಳಿಗರನ್ನು ಸುತ್ತುವರಿದು ಅವರ ಮಾರಣಹೋಮ ನಡೆಸಿದ್ದಾರೆ. ಬದುಕುಳಿದ ಎಂಟು ಹಳ್ಳಿಗರು ತಮ್ಮ ಸಂಬಂಧಿಕರನ್ನು ಕೊಂದಿರುವುದನ್ನು ನೋಡಿದ್ದಾಗಿಯೂ ಅಥವಾ ಅವರ ಕಿರಿಚುವಿಕೆಯನ್ನು ಕೇಳಿದ್ದಾಗಿಯೂ ಹೇಳಿದ್ದಾರೆ. ಮ್ಯಾನ್ಮಾರ್ ಸರ್ಕಾರ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಎರಡು ಸಾಮೂಹಿಕ ಸಮಾಧಿಗಳನ್ನು ಪತ್ತೆಹಚ್ಚಿದಾಗ, ಅರ್ಸಾ ಭಯೋತ್ಪಾದಕರು ಹಿಂದೂಗಳನ್ನು ಕೊಂದಿರುವುದಾಗಿ ಅನುಮಾನ ವ್ಯಕ್ತ ಪಡಿಸಿತ್ತು ಆದರೆ ಕೊಲೆಯ ಆರೋಪವನ್ನು ಉಪಾಯವಾಗಿ ಬೌದ್ಧ ಧರ್ಮೀಯರ ಮೇಲೆ ಹೊರಿಸಲಾಗಿತ್ತು. ಈಗ ಅಮ್ನೆಸ್ಟಿ ಸಂಸ್ಥೆಯ ತನಿಖೆಯಿಂದ ಕೊಲೆನಡೆಸಿರುವುದು ಬೌದ್ಧ ಧರ್ಮೀಯರಲ್ಲ ಬದಲಾಗಿ ರೋಹಿಂಗ್ಯಾ ಗುಂಪುಗಳು ಎಂದು ಧೃಢ ಪಟ್ಟಿದೆ. ಜಮ್ಮುವಿನ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರದ ಆರೋಪವನ್ನು ಹಿಂದೂಗಳ ಮೇಲೆ ಹೊರಿಸಿರುವುದರ ಹಿಂದೆ ಅಲ್ಲಿನ ರೋಹಿಂಗ್ಯಾಗಳನ್ನು ಸುರಕ್ಷಿತವಾಗಿಡುವ ಹುನ್ನಾರವೆಂದು ಈಗಾಗಲೆ ತಿಳಿದಿದೆ. ಜಗತ್ತಿನಾದ್ಯಂತ ರೋಹಿಂಗ್ಯಾಗಳು ಅಕ್ರಮ ಚಟುವಟಿಗಳಲ್ಲಿ ಭಾಗಿಯಾಗುತ್ತಿರುವುದು ವರದಿಯಾಗುತ್ತಿದೆ.

ಈಗಲಾದರೂ ಭಾರತದ ಸರಕಾರಗಳು ಎಚ್ಚೆತ್ತುಕೊಳ್ಳುವುದೆ? ರೋಹಿಂಗ್ಯಾಗಳು ಪಾಪದ ಅಮಾಯಕರೆಂದು ಬಿಂಬಿಸುವ ಮಾಧ್ಯಮಗಳು ಈ ವಿಷಯಗಳನ್ನು ಮುಚ್ಚಿಟ್ಟಿರುತ್ತವೆ. ಭಾರತದಲ್ಲಿ ಜಮ್ಮು-ಕಾಶ್ಮೀರ, ಕೇರಳ, ಬಂಗಾಳ ಮತ್ತು ಕರ್ನಾಟಕದಲ್ಲಿ ರೋಹಿಂಗ್ಯಾ ಮುಸಲ್ಮಾನರು ಅಕ್ರಮವಾಗಿ ನೆಲೆಸಿರುವುದನ್ನು ಈಗಾಗಲೆ ರಾಷ್ಟ್ರೀಯ ಭದ್ರತಾ ದಳ ಧೃಡ ಪಡಿಸಿದೆ. ರೋಹಿಂಗ್ಯಾಗಳ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರುತ್ತಿದೆ ಎಂದು ರೋಹಿಂಗ್ಯಾ ಶಿಬಿರಗಳಿರುವ ಪ್ರದೇಶಗಳ ಮೂಲನಿವಾಸಿಗಳು ಹೇಳುತ್ತಲೆ ಬಂದಿದ್ದಾರೆ. ತಮ್ಮ ವೋಟ್ ಬ್ಯಾಂಕ್ ರಾಜನೀತಿಗಾಗಿ ರೋಹಿಂಗ್ಯಾಗಳಿಗೆ ಕೆಂಪು ಚಾದರ ಹಾಸಿ ಬರಮಾಡಿಕೊಳ್ಳುತ್ತಿರುವ ಹಿಂದೂ ವಿರೋಧಿ ನೀತಿಯ ದೇಶದ್ರೋಹಿ ಸರ್ಕಾರಗಳು ಇಲ್ಲಿ ರೋಹಿಂಗ್ಯಾಗಳಿಗೆ ಸಕಲ ಸೌಲಭ್ಯಗಳನ್ನು ನೀಡಿ ಅವರ ಉದರ ಪೋಷಣೆ ಮಾಡಿಸಿ ಹಿಂದೂಗಳ ಮಾರಣ ಹೋಮಕ್ಕೆ ಅವರನ್ನು ಅಣಿಗೊಳಿಸುತ್ತಿವೆ. ಮೋದಿ ಸರ್ಕಾರ ರೋಹಿಂಗ್ಯಾಗಳನ್ನು ಹೊರದಬ್ಬಲು ನಿರ್ಣಯಗಳನ್ನು ತೆಗೆದುಕೊಳ್ಳುವ ಬೆನ್ನಿಗೆ ಇಲ್ಲಿನ ಜಾತ್ಯಾತೀತರು ಬೊಬ್ಬೆ ಹೊಡೆಯಲು ಶುರುವಿಟ್ಟು ಕೊಳ್ಳುತ್ತಾರೆ. ದೇಶದ ಸುರಕ್ಷತೆಗಿಂತಲೂ ತಮ್ಮ ರಾಜನೀತಿಯೆ ಹೆಚ್ಚು ಎನ್ನುವ ಇಂತಹ ದೇಶದ್ರೋಹಿ ಪಕ್ಷಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನರೆಲ್ಲರೂ ಒಂದಾಗಬೇಕು.

-ಶಾರ್ವರಿ

Tags

Related Articles

Close