ಪ್ರಚಲಿತ

ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆ: ಉದ್ಯೋಗ ಸೃಷ್ಟಿಯ ನಿಗದಿತ ಗುರಿ ಸಾಧನೆ

ಭಾರತದ ದೊಡ್ಡ ಸವಾಲುಗಳಲ್ಲೊಂದು ನಿರುದ್ಯೋಗ ಸಮಸ್ಯೆ. ಶಿಕ್ಷಣ ಪಡೆದವರು, ಪಡೆಯದವರು ಎಲ್ಲರಿಗೂ ನಿರುದ್ಯೋಗ ಎಂಬುದು ಸಾಕಷ್ಟು ಸಂಕಷ್ಟವನ್ನೇ ತಂದೊಡ್ಡುತ್ತಿದೆ ಎನ್ನುವುದು ಸತ್ಯ. ಈ ಪಿಡುಗನ್ನು ದೂರ ಮಾಡಿ, ದೇಶದ ಯುವಕರನ್ನು ಉದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ, ದುಡಿಮೆಯ ದಾರಿಯನ್ನು ಸೃಷ್ಟಿಸಿಕೊಡುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿರುವುದು ಎಲ್ಲರಿಗೂ ಗೊತ್ತು.

ದೇಶದ ಜನರಿಗೆ ಉದ್ಯೋಗಾವಕಾಶದ ನೆಲೆಯನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಿದೆ. ಜೊತೆಗೆ ಸ್ವ ಉದ್ಯೋಗದ ಕನಸು ಹೊತ್ತವರಿಗೂ ಆತ್ಮನಿರ್ಭರ, ಸ್ವಾವಲಂಬಿ ಭಾರತದ ಕಲ್ಪನೆಯ ಮೂಲಕ ಸ್ವಂತ ಉದ್ಯೋಗಗಳನ್ನು ಆರಂಭಿಸುವ ಮೂಲಕ ಜೀವನ ನಡೆಸಲು ಅನುಕೂಲಗಳನ್ನು ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಾಡಿಕೊಟ್ಟಿದೆ. ಇದು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು ಮತ್ತು ದೇಶವನ್ನು ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗೆಯೇ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೀನ ಉದ್ಯೋಗ ಪ್ರೋತ್ಸಾಹ ಯೋಜನೆಯಾದ ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆ ಆರಂಭ ಮಾಡಿದೆ. ಈ ಯೋಜನೆಗೆ ಹಾಕಿಕೊಳ್ಳಲಾಗಿದ್ದ ಆರಂಭಿಕ ಉದ್ಯೋಗ ಸೃಷ್ಟಿಯ ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಈ ಯೋಜನೆಗೆ ಸಂಬಂಧಿಸಿದ ಹಾಗೆ ಮಾರ್ಚ್ 2022 ರಲ್ಲಿ ನೋಂದಣಿಯ ಕೊನೆಯ ದಿನದ ವರೆಗೆ ದೇಶಾದ್ಯಂತ ಸುಮಾರು 7.18 ಮಿಲಿಯನ್ ಜನರಿಗೆ ಉದ್ಯೋಗದ ಕನಸು ಈಡೇರಿಸಿಕೊಳ್ಳುವ ಗುರಿಯನ್ನು ಕೇಂದ್ರದ ಮೋದಿ ಸರ್ಕಾರ ಇರಿಸಿಕೊಂಡಿತ್ತು. 2023 ರ ಜುಲೈ 31 ರೊಳಗಾಗಿ ನಿಗದಿತ ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. 7.58 ಮಿಲಿಯನ್‌ಗೂ ಅಧಿಕ ಜನರು ಈ ಯೋಜನೆಯ ಮೂಲಕ ತಮ್ಮ ಉದ್ಯೋಗದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಆ ಮೂಲಕ ನಿರುದ್ಯೋದಿಂದ ಬಳಲುತ್ತಿದ್ದ ಕೆಲ ಮಂದಿಯ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ.

ಈ ಯೋಜನೆ ಆರಂಭವಾದ ಬಳಿಕ ದೇಶದಲ್ಲಿ ಈವರೆಗೆ ಒಟ್ಟಾರೆ ಒಂದು ಲಕ್ಷದ ಐವತ್ತೆರಡು ಸಾವಿರದ ಮುನ್ನೂರ ಒಂಬತ್ತು ಸಂಸ್ಥೆಗಳು, ಅರವತ್ತು ಲಕ್ಷದ ನಲವತ್ತು ನಾಲ್ಕು ಸಾವಿರದ ನನೂರ ನೂರ ಐವತ್ತೈದು ಜನರಿಗೆ ಉದ್ಯೋಗ ನೀಡಿವೆ. ಎಲ್ಲಾ ತರದ ಅರ್ಹತಾ ಷರತ್ತುಗಳನ್ನು ಪೂರೈಸಿದ ನಂತರ ಈ ಯೋಜನೆಯಡಿ 9669 ಕೋಟಿ 63 ಲಕ್ಷ ರೂ.ಗಳ ಪ್ರಯೋಜನವನ್ನು ಸಂಬಂಧಪಟ್ಟ ಸಚಿವಾಲಯ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ .ನೋಂದಾಯಿತ ಸಂಸ್ಥೆಗಳು ಉದ್ಯೋಗದಾತರಿಗೆ ಹಣಕಾಸಿನ ಸಹಾಯ ಮಾಡುವ ಮೂಲಕ ನೂತನ ಉದ್ಯೋಗಾವಕಾಶಗಳ ಸೃಷ್ಟಿಗೂ ಉತ್ತೇಜನ ನೀಡಲು ವಿನ್ಯಾಸಗೊಳಿಸಲಾದ ಯೋಜನೆಯನ್ನು ಅಕ್ಟೋಬರ್ 2020 ರಲ್ಲಿ ಪ್ರಾರಂಭಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Tags

Related Articles

Close