ಪ್ರಚಲಿತ

ಬಿಗ್ ಬ್ರೇಕಿಂಗ್! ರಾಹುಲ್ ಗಾಂಧಿಗೆ ಜೈಲು.! ರಾಹುಲ್ ಗಾಂಧಿಯನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದ ಆರ್‍ಎಸ್‍ಎಸ್..!

“ಮಾಡಿದ್ದುಣ್ಣೋ ಮಹರಾಯ” ಅಂತಾರಲ್ಲಾ… ಹಾಗೇ ಇದ್ದಿದ್ದರೆ ಈ ಪುಣ್ಯಾತ್ಮ ಇಂದು ಅದೆಲ್ಲೋ ಆರಾಮವಾಗಿ ತನ್ನ ರಾಜಕೀಯದ ಕೆಲಸಗಳನ್ನು ನೋಡುತ್ತಿದ್ದನೋ ಏನೋ. ಆದರೆ ಅದನ್ನು ಬಿಟ್ಟು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡಲು ಹೋಗಿ ಇದೀಗ ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕಾಗಿ ವಿಫಲ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಆದರೆ ಈತ ಮಾಡಿದ ಆ ಯಡವಟ್ಟು ಇಂದು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದೆ. 

ರಾಹುಲ್ ಗಾಂಧಿ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ. ಈತ ಮಾಡಿದ ಘನಕಾರ್ಯವೇ ಇಂದು ಈತನನ್ನು ಜೈಲು ಪಾರಾಗುವ ಸನಿಹಕ್ಕೆ ತಂದು ನಿಲ್ಲಿಸುವಂತೆ ಮಾಡಿದೆ. ಕಾಂಗ್ರೆಸ್ ಅಂದರೆ ಹಾಗೇನೆ ಬಿಡಿ. ದೇಶಭಕ್ತಿಯನ್ನೇ ಜೀವಾಳವಾಗಿರಿಸಿ, ದೇಶಕ್ಕಾಗಿ ನಿರಂತರವಾಗಿ ಯಾವುದೇ ಸ್ವಾರ್ಥವಿಲ್ಲದೆ ದುಡಿಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಕಂಡರೆ ಈ ಕಾಂಗ್ರೆಸ್ ಪಕ್ಷಕ್ಕೆ ಸಾಂಪ್ರದಾಯಿಕ ಧ್ವೇಷ. ಅದನ್ನು ರಾಹುಲ್ ಗಾಂಧಿಯೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಅನ್ನೋದೇ ಖೇದಕರ.

ಗಾಂಧಿಯನ್ನು ಕೊಂದಿದ್ದು ಆರ್‍ಎಸ್‍ಎಸ್..?

2014ರ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಈ ಕಾರಣಕ್ಕಾಗಿ ಅದೇನೇನೋ ಹೇಳಿಕೆಗಳನ್ನು ನೀಡಿ ದೇಶದ ಜನರ ಮುಂದೆ ತಾನೋರ್ವ ನಿಶ್ಪ್ರಯೋಜಕ ಎಂಬುವುದನ್ನು ಸಾಭೀತುಪಡಿಸುತ್ತಿದ್ದರು. ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧವಾಗಿ ನೀಡಿದ್ದ ಹೇಳಿಕೆಯೊಂದು ಭಾರೀ ಕೋಲಾಹಲಗಳಿಗೆ ಕಾರಣವಾಗಿತ್ತು.

” ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಹತ್ಯೆ ಮಾಡಿಸಿದ್ದು ಕೂಡಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ” ಎಂಬ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದರು. ಗಾಂಧಿ ಹತ್ಯೆಯಲ್ಲಿ ಸಂಘದ ಪಾತ್ರ ಇಲ್ಲ ಎಂಬ ಮಹತ್ವದ ತೀರ್ಪನ್ನು ನ್ಯಾಯಾಲಯ ದಶಕಗಳ ಹಿಂದೆನೇ ನೀಡಿದ್ರೂ ಇಂತಹಾ ದಡ್ಡತನದ ಹೇಳಿಕೆಗಳನ್ನು ರಾಹುಲ್ ಗಾಂಧಿ ನೀಡಿದ್ದರು. ಇದು ರಾಷ್ಟ್ರವ್ಯಾಪಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಜನತೆ ಆಕ್ರೋಶಗೊಂಡಿದ್ದರು.

Image result for rssflag

ಈ ಮಧ್ಯೆ ರಾಜೇಶ್ ಎಂಬವರು ಮುಂಬೈನ ಬೀವಂಡಿ ಕೋರ್ಟ್‍ನಲ್ಲಿ ರಾಹುಲ್ ಗಾಂಧಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 499 ಹಾಗೂ 500ರಂತೆ ರಾಹುಲ್ ಗಾಂಧಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಕೆಲ ವಿಚಾರಣಗಳನ್ನು ಮುಗಿಸಿ ಇಂದು ಮತ್ತೆ ರಾಹುಲ್ ಗಾಂಧಿಯನ್ನು ಕೋರ್ಟ್‍ಗೆ ಹಾಜರಾಗುವಂತೆ ಸೂಚಿಸಿತ್ತು.

ಅಂತೆಯೇ ಇಂದು ಮುಂಬೈನ ಬೀವಂಡಿ ಕೋರ್ಟ್‍ಗೆ ಆಗಮಿಸಿದ ರಾಹುಲ್ ಗಾಂಧಿ ಕೋರ್ಟ್ ಕಟಕಟೆಯಲ್ಲಿ ನಿಂತು ನಾನೇನೂ ಮಾಡೇ ಇಲ್ಲ. ನಾನು ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷನೋರ್ವ ಇಂದು ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ.

ರಾಹುಲ್‍ಗೆ ಜೈಲು ಶಿಕ್ಷೆ ನೀಡಿ-ವಕೀಲ..!

ದೂರುದಾರನ ಪರವಾಗಿ ವಾದ ಮಾಡಿದ ವಕೀಲರು ರಾಹುಲ್ ಗಾಂಧಿಗೆ ಜೈಲು ಶಿಕ್ಷ ಆಗಬೇಕೆಂದು ಕೋರ್ಟ್‍ನಲ್ಲಿ ಮನವಿ ಮಾಡಿದ್ದಾರೆ. “ರಾಹುಲ್ ಗಾಂಧಿಯವರು ಬಹಿರಂಗ ಸಮಾವೇಶವೊಂದರಲ್ಲಿ ಆಧಾರ ರಹಿತವಾದ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೋಟ್ಯಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯುಂಟಾಗಿದೆ. ಮಾತ್ರವಲ್ಲದೆ ದೇಶದ ಇತಿಹಾಸವನ್ನು ತಿರುಚಿ ಸುಳ್ಳು ಮಾಹಿತಿಯನ್ನು ಜನರಿಗೆ ನೀಡುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಇದು ಅಕ್ಷಮ್ಯ. ರಾಹುಲ್ ಗಾಂಧಿಯವರ ಇಂತಹಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಾಗಿದೆ” ಎಂದು ವಾದ ಮಾಡಿದ್ದಾರೆ. ಇದಕ್ಕುತ್ತರಿಸಿದ ರಾಹುಲ್ ಗಾಂಧಿಯವರು “ನಾನು ತಪ್ಪಿತಸ್ಥನಲ್ಲ” ಎಂದು ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಿದ್ದಾರೆ.

Image result for rahul

ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳೆಯರು ಚಡ್ಡಿ ಹಾಕುತ್ತಾರಾ ಎಂಬ ನೀಚ ಪ್ರಶ್ನೆಯನ್ನು ಕೇಳಿದ್ದ ರಾಹುಲ್ ಗಾಂಧಿಯ ವಿರುದ್ಧವೂ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅಜ್ಞಾನದ  ಹೇಳಿಕೆಯನ್ನು ನೀಡುವುದೇ ಬಂಡವಾಳವನ್ನಾಗಿರಿಸಿಕೊಂಡ ರಾಹುಲ್ ಗಾಂಧಿ ಇದೀಗ ತಾನು ಮಾಡಿದ ತಪ್ಪಿಗೆ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿಗೆ ಬಂದಿದೆ. ಸಂಘದ ಪರವಾಗಿ ಕಠಿಣ ಸಾಕ್ಷ್ಯಾಧಾರಗಳು ಇದ್ದು, ರಾಹುಲ್ ಗಾಂಧಿ ಜೈಲುಪಾಲಾಗುವ ಸಾಧ್ಯತೆಯೂ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close