ಪ್ರಚಲಿತ

ರಾಮನಗರದಲ್ಲಿ ಹಿಂದೂ ಗರ್ಜನೆ! ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಮೊಳಗಿತು ದೇಶಭಕ್ತಿಯ ಜಯಘೋಷ!

ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಹಾಗೂ ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆ. ಸೆಪ್ಟೆಂಬರ್ ೨೭, ೧೯೧೫ ರ ವಿಜಯದಶಮಿಯ ಪುಣ್ಯ ದಿನದಂದು ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಕಟ್ಟಿದ ಒಂದು ಸಣ್ಣ ಸಂಘಟನೆ ಇಂದು ಜಗತ್ತಿನಾದ್ಯಂತ ಬೆಳೆದು ನಿಂತಿದೆ. ಜನ ಮನಗಳಲ್ಲಿ ದೇಶಭಕ್ತಿ ಹುಟ್ಟಿಸಿದ ಕೀರ್ತಿಯೂ ಈ ಸಂಘಟನೆಗೆ ಸಲ್ಲಬೇಕು. ಭಾರತಮಾತೆ ಎಂದೆಂದಿಗೂ ರತ್ನಗರ್ಭಿಣಿ ಅನ್ನೋ ಮಾತು ನನಗೆ ಈ ಸಂಘವನ್ನು ನೋಡಿ ಅಕ್ಷರಶಃ ಸತ್ಯ ಎನಿಸಿದ್ದು ಮಾತ್ರ ಸುಳ್ಳಲ್ಲ..! ಹೌದು ಗಾಳಿ,ಮಳೆ, ಬಿಸಿಲು ಎನ್ನುವುದನ್ನೂ ನೋಡದೇ ಸದಾ ಭಾರತ ಮಾತೆಯ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರುವ ಈ ಜಗನ್ಮಾತೆಯ ಸುಪುತ್ರರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರು ಸರಿಸಾಟಿಯಾಗದು. ಹೌದು ಆರ್‌ಎಸ್‌ಎಸ್ ಬಗ್ಗೆ ಹೇಳಲು ನನ್ನ ಬಳಿ ಪದಗಳ ಕೊರತೆಯಾಗುತ್ತಿರುವುದು ಮಾತ್ರ ಸತ್ಯ..

ಅದೇ ರೀತಿ ನಿನ್ನೆ ರೇಷ್ಮೇನಗರಿ ಎಂದೇ ಹೆಸರುವಾಸಿಯಾದ ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನೆ ಬಹಳ ವಿಜೃಂಭಣೆಯಿಂದ ನಡೆದದ್ದು ಮಾತ್ರ ವಿಶೇಷವಾಗಿತ್ತು. ಇಡೀ ಊರಿಗೆ ಊರೇ ಕೇಸರೀಮಯಗೊಂಡಿದ್ದು ಕೇಸರಿ ರಣಕಹಳೆ ಮೊಳಗಿತ್ತು. ನಿನ್ನೆ ಮಧ್ಯಾಹ್ನ ಸರಿಸುಮಾರು ೩ ಗಂಟೆಗೆ ನಗರದ ಬಾಲಗೇರಿ ಹಾಗೂ ಕೆಂಪೇಗೌಡ ಸರ್ಕಲ್‌ನಿಂದ ಎರಡು ಮಾರ್ಗಗಳಲ್ಲಿ ಪಥಸಂಚಲನವನ್ನ ನಡೆಸಿದ ಗಣವೇಷಧಾರಿಗಳ ಗುಂಪು ಜನರ ಕಣ್ಣುಕುಕ್ಕುವಂತಿತ್ತು ಪುಷ್ಪಾಂಕಾರ, ರಂಗೋಲಿಯ ಸೊಬಗಿನಿಂದ ಕೂಡಿತ್ತು, ಅದರಲ್ಲೂ ಹಿಂದೂ ಹೃದಯ ಸಾಮ್ರಾಟ್ ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಜೀ ಈ ಪಥಸಂಚಲನದಲ್ಲಿ ಭಾಗವಹಿಸಿದ್ದು, ಈ ಹಿಂದೂ ಹುಲಿಗಳ ಹೆಜ್ಜೆಯ ಧನಿ ವಿರೋಧಿಗಳಿಗೆ ಎದೆನಡುಕ ಹುಟ್ಟಿಸಿದ್ದು ಮಾತ್ರ ಅಕ್ಷರಶಃ ಸತ್ಯ.

ಹೌದು ಹಿಂದೂಹುಲಿಗಳ ಸುನಾಮಿಯನ್ನು ಕಂಡು ಬೆಚ್ಚಿ ಬಿದ್ದಿದ್ದ ಹಾಗೂ ಅರೆ ಜೀವಕ್ಕೆ ಬಂದಿದ್ದ ಆರ್‌ಎಸ್‌ಎಸ್ ವಿರೋಧಿಗಳನ್ನು ತನ್ನ ಸಿಂಹಘರ್ಜನೆಯಲ್ಲಿಯೇ ಭಟ್ ಜೀ ಬೆವರಿಲಿಸಿದ್ದು ಮಾತ್ರ ಮೈ ರೋಮಾಂಚವೆನಿಸಿದು ಹಾಗೂ ನನ್ನ ಧರ್ಮದ ಮೇಲೆ ಇನ್ನೂ ಅಪಾರ ಪ್ರೀತಿ ಗೌರವ ಹೆಚ್ಚಾಗಿಸಿತು. ಹಿಂದೂಗಳ ಎದೆಮೇಲೆ ಕಾಲಿಟ್ಟು ಕಪಾಲಿ ಬೆಟ್ಟವನ್ನು ಏಸುಬೆಟ್ಟವನ್ನಾಗಿ ಮಾಡಲು ಸಂಚು ರೂಪಿಸಿರುವ ಡಿಕೆಶಿಯಂತಹ ಕೆಲ ರಾಜಕಾರಣಿಗಳ ಕುರಿತು ಮಾತನಾಡಿದ ಕಲ್ಲಡ್ಕದ ಹಿಂದೂ ಹುಲಿ ಕಾಶ್ಮೀರ ನಮ್ಮ ಜೊತೆಯಲ್ಲಿ ಸೇರಿಕೊಂಡಿದ್ದು ಅಲ್ಲಿಗೆ ನಾವು ಹೋಗಿ ಬರಬಹುದು. ಅದೇ ರೀತಿ ರಾಮನಗರದ ಬಾಲಗೇರಿಗೆ ಹೋಗಿ ಬರಬಹುದು. ಇನ್ನೊಂದು ಸ್ವಲ್ಪ ಪಿಓಕೆ ಬಾಕಿಯಿದೆ ನಾಲಬಂದವಾಡಿ ( ಮುಸಲ್ಮಾನರು ಹೆಚ್ಚಿನದಾಗಿ ಅಲ್ಪ ಹಿಂದೂಗಳು ವಾಸಿಸುವ ಬಡಾವಣೆ) ಅದೇನು ಇನ್ನು ಸ್ವಲ್ಪದಿನದಲ್ಲೇ ನಮ್ಮ ಕೈ ಸೇರಲಿದೆ ಎಂದ ಭಟ್ ಜೀ, ರಾಮನಗರದ ದುರ್ದೈವ ರಾಮನಗರ ಪರಂಪರೆ ಇಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಬದಲಾಗಿ ರಾವಣನ ಪರಂಪರೆ ಇಲ್ಲಿ ಬೆಳೆಯುವಂತಾಗಿದೆ. ಅಧಿಕಾರದ ದರ್ಪ, ದೌರ್ಜನ್ಯದಿಂದ ಅಧಿಕಾರ ನಡೆಸಲು ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನಿಮ್ಮ ಅಧಿಕಾರವು ಜಾಸ್ತಿ ದಿನ ಉಳಿಯಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಡಿಕೆಶಿಯವರಿಗೆ ಚಾಟಿ ಬೀಸಿದ್ದು ಮಾತ್ರ ಸತ್ಯ. ಅದೇ ರೀತಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಪರೋಕ್ಷವಾಗಿ ತುಪ್ಪ ಸುರಿಯುತ್ತಿದ್ದವರ ಬಗ್ಗೆ ಮಾತನಾಡಿ ಗಲಭೆ ನಡೆದದ್ದು ಮಂಗಳೂರಿನಲ್ಲೋ ಅಥವಾ ಕಾಶ್ಮೀರದಲ್ಲೋ ಅನ್ನುವಂತೆ ಭಾಸವಾಗುತ್ತಿತ್ತು ಎಂದರು. ಅಂಬೇಡ್ಕರ್ ಕೇವಲ ದಲಿತರ ಬಂಧೂ ಎಂದು ಬಿಂಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ವಿರುದ್ಧ ಮಾತನಾಡುತ್ತ ಅಂಬೇಡ್ಕರ್ ಬರೀ ದಲಿತರ ಬಂಧುವಲ್ಲ ಅವರು ನಮ್ಮೆಲ್ಲರ ರಾಷ್ಟ್ರೀಯ ಬಂಧು ಎಂದು ಸಾರಿ ಹೇಳಿದರು. ಅದನಂತರ ಕನಕಪುರಕ್ಕೆ ಭೇಟಿ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಭಟ್ ಜೀ ಕೆಲವರು ಕಪಾಲಿ ಬೆಟ್ಟದಲ್ಲಿ ಈಗಾಗಲೇ ೧೧ ಅಡಿ ಎತ್ತರದ ಯೇಸುವಿನ ಪ್ರತಿಮೆ ನಿಲ್ಲಿಸಿದ್ದು, ೧೧೩ ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಹೊರಟಿದ್ದಾರೆ. ಅವರು ಮುನೇಶ್ವರ ಕಲ್ಲಿನ ಮೇಲೆ ಶಿಲುಬೆ ನಿಲ್ಲಿಸಿದ್ದು ಅಲ್ಲೇ ಪಕ್ಕದಲ್ಲಿ ಇರುವ ಕೆರೆಗೆ ಪಾದ್ರಿ ಕೆರೆ ಎಂದು ನಾಮಕರಣ ಬೇರೆ ಮಾಡಿದ್ದಾರೆ. ಅದ್ಯಾವಾಗ ಪಾದ್ರಿ ಕೆರೆಯಾಯಿತು ಎಂದು ಪ್ರಶ್ನಿಸಿದ ಅವರು ಇಲ್ಲಿನ ಜನರಿಗೆ ಜಮೀನಿನ ಆಸೆ ತೋರಿಸಿ ಮತಾಂತರ ಮಾಡಲಾಗಿದ್ದು ಹಿಂದೂ ಪುರವನ್ನು ಕ್ರಿಸ್ಚಿಯನ್ ಪುರ ಮಾಡಲು ಮುಂದಾಗಿದ್ದಾರೆಯೇ ಎಂದು ಅನ್ಯಾಯದ ಪರ ಧ್ವನಿ ಎತ್ತಿದರು, ಇದು ಕ್ರಿಸ್ತನ ನಾಡಲ್ಲ, ಶ್ರೀ ಕೃಷ್ಣನ ನಾಡು ನೆನಪಿಡಿ ಎಂದು ಎಚ್ಚರಿಕೆಯ ಮಾತನ್ನಾಡಿದರು. ಮುಂದೆ ಮಾತನಾಡುತ್ತಾ ಅವರು ಸ್ವತಂತ್ರ ಭಾರತದ ವೇಳೆ ದುರ್ಬಲ ಹಾಗೂ ಹೇಡಿ ನಾಯಕತ್ವವಿತ್ತು. ಆದರೆ ಇದೀಗ ಕಾಲ ಬದಲಾಗುತ್ತಿದೆ ಹಿಂದೂರಾಷ್ಟ್ರದಲ್ಲಿ ಅತ್ಯಂತ ಪ್ರಬಲವಾದ ಹಿಂದೂ ನಾಯಕ ಗದ್ದುಗೆಗೇರಿದ್ದು ಪ್ರಬಲವಾದ ನಾಯಕತ್ವ ನಮ್ಮಲ್ಲಿದ್ದು ಭಯೋ‌ತ್ಪಾದಕರ ಜನ್ಮಸ್ಥಳವಾಗಿರುವ ಪಾಕಿಸ್ತಾನದಂತಹ ರಾಷ್ಟ್ರಕ್ಕೂ ಸಿಂಹಸ್ವಪ್ನವಾಗಿದೆ ನಮ್ಮ ಬಲಿಷ್ಠ ಆಡಳಿತ. ಇದೇ ವೇಳೆ ಪೌರತ್ವ ತಿದ್ದುಪಡಿ ವಿರುದ್ಧ ನಡೆಯುತ್ತಿರುವ ಅನಾವಶ್ಯಕ ಗಲಭೆ ಗದ್ದಲಗಳ ವಿರುದ್ಧ ಧನಿ ಎತ್ತಿದ ಅವರು ಹೊರದೇಶದಿಂದ ಬಂದು ದೇಶದಲ್ಲಿರುವ ಎರಡ್ಮೂರು ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿಲ್ಲ, ಭೂಮಿ ಕೊಟ್ಟಿಲ್ಲ ಏನೇನೂ ಕೊಟ್ಟಿಲ್ಲ. ಆ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವುದಕ್ಕಾಗಿ ಪೌರತ್ವ ಕಾಯ್ದೆ ತಂದಿರುವುದು. ಪೌರತ್ವವನ್ನು ಕೊಡುತ್ತಿರುವುದೇ ವಿನಃ ತೆಗೆಯುತ್ತಿರುವುದಲ್ಲವೆಂದು ಸ್ಪಷ್ಟವಡಿಸಿದರು.

ಅದೇ ರೀತಿ ತನ್ನ ಮಾತಿನ ಕೊನೆಯಲ್ಲಿ ಆಡಿದ ಮಾತಂತೂ ಎಲ್ಲರ ಮನತಟ್ಟಿತು. ಅದೇನೆಂದರೆ ಅಂದು ಸ್ವಾಮಿ ವಿವೇಕಾನಂದರು ಚಿಕಾಗೋ ದಲ್ಲಿ ಭಾಗವಹಿಸದ್ದು ಸರ್ವಧರ್ಮ ಸಮ್ಮೇಳನದಲ್ಲಿ ಅಲ್ಲ ಬದಲಾಗಿ ಅದು ವರ್ಲ್ಡ್ ರಿಲಿಜಿಯನ್ ಕಾನ್ಫರೆನ್ಸ್, ರಿಲಿಜಿಯನ್ ಅನ್ನೋದು ಒಂದು ಮತ ಮಾತ್ರವಾಗಿದ್ದು ಕ್ರೈಸ್ತ ಧರ್ಮವೇ ಶ್ರೇಷ್ಠ ಎಂದು ಬಿಂಬಿಸಲು ಮಾಡಿದ್ದ ಕಾರ್ಯಕ್ರಮವಾಗಿತ್ತು. ಆದರೆ ಆ ಕಾರ್ಯಕ್ರಮದ ಬಳಿಕ ಅಲ್ಲಿ ನೆರೆದಿದ್ದ ಸರ್ವರೂ ಹಿಂದೂ ಧರ್ಮಕ್ಕೆ ತಲೆಬಾಗಿ ನಮಿಸಿದರು, ಸ್ವಾಮೀಜೀ ಧರಿಸಿದ್ದ ಕೇಸರಿ ವಸ್ತ್ರವನ್ನು ಮುಟ್ಟಿದರೆ ಪಾವನರಾಗುತ್ತೇವೆ ಎಂಬುದು ಆ ದಿನವೇ ಜಗತ್ತಿಗೆ ಅರಿವಾಗಿತ್ತು ಎಂದರು. ಒಟ್ಟಾರೆ ಹೇಳಾಬೇಕಾದರೆ ನಿನ್ನೆ ರಾಮನಗರದಲ್ಲಿ ನಡೆದ ಪಥಸಂಚಲನ ವಿರೋಧಿಗಳಲ್ಲಿ ನಡುಕ ಹುಟ್ಟಿಸಿದ್ದು ಮಾತ್ರ ನಿಸ್ಸಂಶಯ..! ಅದೇನೆಯಾಗಲಿ ಹಿಂದೂರಾಷ್ಟ್ರದಲ್ಲಿ ಬರೀ ಹಿಂದೂಗಳ ದರ್ಬಾರ್ ನಡೆಯಲಿ, ಇಲ್ಲಿ ಪ್ರತಿಯೊಬ್ಬ ಹಿಂದೂ ಕೂಡ ಹಿಂದೂವಾಗಿಯೇ ಬಾಳಲಿ ತನ್ನ ಧರ್ಮದ ಮಹತ್ವವನ್ನು ಅರಿಯದೆ ಅನ್ಯ ದೇಶಿಯರ ಮಾಯೆಯ ಬಳೆಗೆ ಸಿಲುಕದೇ ಹಿಂದೂರಾಷ್ಟ ಕಟ್ಟಲು ಕೋಟ್ಯಾನುಕೋಟಿ ಹಿಂದೂಗಳು ಕೈ ಜೋಡಿಸುವಂತಾಗಲಿ ಅನ್ನುವುದೇ ನನ್ನ ಈ ಬರವಣಿಗೆಯ ಕಳಕಳಿ.

ಕಾವ್ಯ ಅಂಚನ್

Tags

Related Articles

FOR DAILY ALERTS
Close