ಪ್ರಚಲಿತ

ಮಾನವೀಯತೆಯ ಉತ್ತಮ ಉದಾಹರಣೆಗಳು ಎಂದು ಪ್ರಧಾನಿ ಮೋದಿ ಹೇಳಿದ್ಯಾರಿಗೆ ಗೊತ್ತೇ?

ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದ ಅಧ್ಯಾಯ ಕೊನೆಗೂ ಸುಖಾಂತ್ಯಗೊಂಡಿದೆ. ಈ ಸುರಂಗ ದೊಳಗೆ ಕಳೆದ ಹದಿನೇಳು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ ನಲವತ್ತೊಂದು ಕಾರ್ಮಿಕರು ಕೊನೆಗೂ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಅವರನ್ನು ಯಾವುದೇ ಅಪಾಯವಿಲ್ಲದ ಹಾಗೆ ಹೊರತರುವ ಕೆಲಸವನ್ನು ನಮ್ಮ ರಕ್ಷಣಾ ಪಡೆಗಳು ಮಾಡಿದ್ದು, ಆ ಮೂಲಕ ಮತ್ತೆ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಹಂಚಿಕೊಂಡಿದ್ದು, ಉತ್ತರ ಕಾಶಿಯಲ್ಲಿ ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯದ ಯಶಸ್ಸು ನಮ್ಮೆಲ್ಲರನ್ನೂ ಭಾವುಕರನ್ನಾಗಿಸಿದೆ. ಸುರಂಗ ದೊಳಗೆ ಸಿಲುಕಿಕೊಂಡವರ ಧೈರ್ಯ, ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವೆಂದೇ ಹೇಳಲು ಬಯಸುತ್ತೇನೆ. ನಿಮ್ಮ ಎಲ್ಲರಿಗೂ ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ನಾನು ಬಯಸುತ್ತೇನೆ. ದೀರ್ಘ ಕಾಲದ ಕಾಯುವಿಕೆಯ ಬಳಿಕ ಇದೀಗ ಈ ನಮ್ಮ ಸ್ನೇಹಿತರು ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಿದ್ದಾರೆ. ಇದು ತೃಪ್ತಿ ನೀಡುವ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ಈ ಸವಾಲಿನ ಸಮಯದಲ್ಲಿ ಎಲ್ಲಾ ಕುಟುಂಬಗಳು ತೋರಿದ ಧೈರ್ಯ, ತಾಳ್ಮೆಯನ್ನು ನಾನು ಪ್ರಶಂಸಿಸುತ್ತೇನೆ. ಈ ರಕ್ಷಣಾ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ನಾವು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಕಾರ್ಮಿಕ ಬಂಧುಗಳಿಗೆ‌ ಹೊಸ ಜೀವನ ಕಟ್ಟಿಕೊಡುವ ಕೆಲಸವನ್ನು ಸುರಂಗದೊಳಗೆ ಸಿಲುಕಿದವರನ್ನು ರಕ್ಷಣೆ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.‌ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು ಮಾನವೀಯತೆಗೆ ಅದ್ಭುತ ಉದಾಹರಣೆಗಳಾಗಿದ್ದಾರೆ ‌ಎಂದು ಪ್ರಧಾನಿ ತಿಳಿಸಿದ್ದಾರೆ.

ಉತ್ತರಾಖಂಡ ರಾಜ್ಯದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸುರಂಗದಲ್ಲಿ ಸಿಲುಕಿ ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಜೊತೆಗೆ ಸುರಂಗ ನಿರ್ಮಾಣ ಮಾಡಿದ ಪ್ರದೇಶದಲ್ಲಿದ್ದು, ಸುರಂಗ ನಿರ್ಮಾಣ ಹಿನ್ನೆಲೆ ಕೆಡವಲಾದ ಶಿವನ ಮಂದಿರವನ್ನು ಮತ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಈ ದುರಂತಕ್ಕೆ ಅಲ್ಲಿದ್ದ ಶಿವಾಲಯವನ್ನು ನೆಲಸಮ ಮಾಡಿದ್ದೇ ಕಾರಣ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಆದ್ದರಿಂದ ಈ ಶಿವಾಲಯವನ್ನು ಮರು ನಿರ್ಮಾಣ ಮಾಡುವುದಾಗಿ ದಾಮಿ ತಿಳಿಸಿದ್ದಾರೆ.

ಈ ರಕ್ಷಣಾ ಕಾರ್ಯದಲ್ಲಿ ದೇಶ ವಿದೇಶಗಳ ಹಲವರು ಭಾಗವಹಿಸಿದ್ದು, ಈ ಕಾರ್ಯಕ್ಕೆ ಜಯ ದೊರೆತಿದೆ. ಎಷ್ಟೇ ಖರ್ಚಾದರೂ ಸುರಂಗದವಸಲ್ಲಿ ಸಿಲುಕಿದವರನ್ನು ಯಶಸ್ವಿಯಾಗಿ ಹೊರ ತರುವಂತೆ ಪ್ರಧಾನಿ ಮೋದಿ ಅವರೂ ಸೂಚಸಿದ್ದು, ಯಶಸ್ವಿ ಕಾರ್ಯಾಚರಣೆ ಸಂತಸ ನೀಡಿರುವುದಾಗಿಯೂ ದಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

Tags

Related Articles

Close