ಪ್ರಚಲಿತ

ಭಾರತದ ಐಟಿ ವಲಯದಲ್ಲಿ ಇಸ್ರೇಲಿನ ಸಂಪೂರ್ಣ ಸಹಕಾರ!! ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊತ್ತ ಮೊದಲ ಬಾರಿಗೆ ಒಂದಾಗಿ ಇಂಡೋ-ಇಸ್ರೇಲ್ “ಸ್ಕಲರೇಟರ್” ಕಾರ್ಯಕ್ರಮಕ್ಕೆ ಮುನ್ನುಡಿ!!

ಸರಿ ಸುಮಾರು ಇಪ್ಪತ್ತೈದು ವರ್ಷಗಳ ನಂತರ ಭಾರತ-ಇಸ್ರೇಲ್ ಸಂಬಂಧದಲ್ಲಿ ಗಟ್ಟಿತನ ಕಾಣುತ್ತಿದೆ. ಪ್ರಧಾನ ಮಂತ್ರಿ ಮೋದಿಯವರ ಪ್ರಬಲ ವಿದೇಶಾಂಗ ನೀತಿಯ ಫಲವಾಗಿ ಭಾರತ ಇವತ್ತು ವಿಶ್ವದ ಪುಟ್ಟ, ಆದರೆ ಅತಿ ಬಲಿಷ್ಟ ರಾಷ್ಟ್ರದ ಜೊತೆ ಘನ ಮಿತೃತ್ವ ಸ್ಥಾಪಿಸಿದೆ. ಈ ಮಿತೃತ್ವದ ಫಲವಾಗಿ ಮೊತ್ತ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಕೆಲಸ ಮಾಡಲಿವೆ.

‘ಸ್ಕಲರೇಟರ್’ ಎಂದು ಹೆಸರಿಸಲಾದ ಈ ಕಾರ್ಯಕ್ರಮವು ಎರಡು ರಾಷ್ಟ್ರಗಳ ನಡುವಿನ ಸಹಯೋಗದಲ್ಲಿ ವೇಗವರ್ಧಿಸುವ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿದೆ. ಸ್ಟಾರ್ಟ್ ಅಪ್ ಉದ್ಯಮಕ್ಕೆ ವೇಗ ನೀಡುವ ಈ ಕಾರ್ಯಕ್ರಮದಿಂದಾಗಿ ಜಾಗತಿಕ ಮಾರ್ಕೆಟ್ ನಲ್ಲಿ ಈ ಎರಡೂ ದೇಶಗಳು ದೊಡ್ಡ ಮಟ್ಟದ ಆಟಗಾರರಾಗುವ ದೂರದೃಷ್ಟಿ ಈ ಕಾರ್ಯಕ್ರಮದ ಹಿಂದಿದೆ. ದಕ್ಷಿಣ ಭಾರತದಲ್ಲಿ ಇಸ್ರೇಲ್ ನ ದೂತಾವಾಸ ಆಕ್ಸೆಂಚರ್ ಮತ್ತು ನ್ಯಾಷನಲ್ ಅಸೋಸಿಯೇಷನ್ ​​ಆಫ್ ಸಾಫ್ಟ್ ವೇರ್ ಅಂಡ್ ಸರ್ವಿಸಸ್ ಕಂಪನಿಗಳು (NASSCOM) ಪ್ರಾರಂಭಿಸಲಿವೆ.

ಜಂಟಿ ಸಹಯೋಗದ ಕ್ಷೇತ್ರಗಳು:

cloud computing,
artificial intelligence,
automation,
blockchain and extended reality

ತಂತ್ರಜ್ಞಾನದ ಪ್ರಯೋಜನ ಪಡೆಯುವ ಕ್ಷೇತ್ರಗಳು:
ರಕ್ಷಣಾ ಕ್ಷೇತ್ರ, ಕೃಷಿ, ಆಳವಾದ ತಂತ್ರಜ್ಞಾನ, ಆರೋಗ್ಯ ಮತ್ತು ಜೀವ ವಿಜ್ಞಾನ ಮತ್ತು ವಿದ್ಯುತ್ ಶಕ್ತಿ.

NASSCOM ಕಂಪನಿಯು 10,000 ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಇಸ್ರೇಲ್ ಮತು ಭಾರತ ಜಂಟಿಯಾಗಿ ಹೊಸ ಹೊಸ ಆವಿಷ್ಕಾರದಲ್ಲಿ ತೊಡಗುವುದರಿಂದ ಇನ್ನು ಮೂರು ವರ್ಷಗಳಲ್ಲಿ ಎರಡೂ ದೇಶಗಳಿಗೂ ಭಾರೀ ಪ್ರಮಾಣದ ವಿದೇಶೀ ಹರಿವು ಹರಿದು ಬರಲಿದೆ ಎಂದು 70% ತಂತ್ರಜ್ಞಾನ ವಿಶೇಷಜ್ಞರು ಭವಿಷ್ಯ ನುಡಿಯುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿನ NASSCOM ಸ್ಟಾರ್ಟ್ಅಪ್ ವೇರ್ ಹೌಸ್ ನಲ್ಲಿ ಪ್ರಾರಂಭ ಮಾಡಲಾಗುವುದು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲು ಆಸಕ್ತಿ ಇರುವ ಪ್ರತಿಭಾವಂತ ವ್ಯಕ್ತಿಗಳು ತಮ್ಮದೆ ಸ್ಟಾರ್ಟ್ ಅಪ್ ಕಂಪನಿಗಳನ್ನು ಸ್ಥಾಪಿಸಲು ಈ ಕಾರ್ಯಕ್ರಮ ನೆರವಾಗಲಿದೆ.

1948 ರಲ್ಲಿ ಜನ್ಮ ತಾಳಿದ ಪುಟ್ಟ ದೇಶವೊಂದು ಇವತ್ತು ವಿಶ್ವದ ಸ್ಟಾರ್ಟ್ ಅಪ್ ದಿಗ್ಗಜನಾಗಿ ಬೆಳೆದು ಬಂದ ಪರಿ ಯಾರನ್ನೂ ಆಶ್ಚರ್ಯ ಪಡುವಂತೆ ಮಾಡುತ್ತಿದೆ. ಯಾವುದೇ ಮೂಲ ಸೌಕರ್ಯಗಳು ಇಲ್ಲದೆಯೂ ಕಠಿಣ ಪರಿಶ್ರಮದಿಂದ ಬೆಳೆದ ಇಸ್ರೇಲ್ ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರ. ಕ್ರೈಸ್ತ ಮತ್ತು ಮುಸಲ್ಮಾನರಿಂದ ನಿತ್ಯ ಬೆದರಿಕೆ ಎದುರಿಸುವ ಈ ಪುಟ್ಟ ರಾಷ್ಟ್ರವನ್ನು ಕಂಡರೆ ಉಗ್ರರೂ ಗಡಗಡ ನಡುಗುತ್ತಾರೆ. ಇಸ್ರೇಲಿನೆಡೆ ಕಣ್ಣೆತ್ತಿ ನೋಡುವ ದಾರ್ಷ್ಟ್ಯ ಯಾರಲ್ಲೂ ಇಲ್ಲ! ಇಸ್ರೇಲನ್ನು ನೋಡಿ ಜಗತ್ತಿನ ಇತರ ದೇಶಗಳು ಕಲಿತುಕೊಳ್ಳಬೇಕು. ತಡವಾಗಿಯಾದರೂ ಭಾರತ ಇದನ್ನು ಮನಗಂಡಿದೆ ಮತ್ತು ಇಸ್ರೇಲ್ ಜೊತೆ ಜೊತೆಗೆ ಹೆಜ್ಜೆ ಇಟ್ಟು ವಿಶ್ವದ ಬಲಿಷ್ಟ ರಾಷ್ಟ್ರವಾಗಿ ಹೊರ ಹೊಮ್ಮಿ ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ಕಾಡಲಿದೆ.

-ಶಾರ್ವರಿ

Tags

Related Articles

Close