ಪ್ರಚಲಿತ

ಮೋದೀಜೀಯ ವಿದೇಶಿ ಪ್ರವಾಸವನ್ನು ಟೀಕಿಸುವವರಿಗೆ ಮತ್ತೊಂದು ಆಘಾತ!! ಎಸ್‍ಸಿಒ ಶೃಂಗ ಸಭೆಯಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ- ಚೀನಾ!!

ನಮ್ಮ ಮೋದೀಜೀಯವರು ದೇಶದ ಅಭಿವೃದ್ಧಿಗಾಗಿಯೇ ಸದಾ ಚಿಂತಿಸುತ್ತಿರುತ್ತಾರೆ!! ಕೆಲ ವಿರೋಧಿಗಳು ಮೋದೀಜೀ ವಿದೇಶಿ ಪ್ರವಾಸ ಮಾಡುವುದನ್ನೇ ದೂರುತ್ತಿರುತ್ತಾರೆ ಆದರೆ ಅವರು ಯಾತಕ್ಕಾಗಿ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ ಎಂದು ಸರಿಯಾಗಿ ತಿಳಿದ ಮೇಲೆ ಮೋದಿಜೀಯನ್ನು ಧೂಷಿಸಿದರೆ ಒಳಿತು!! ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ತಾವೇನೂ ಮಾಡಿಲ್ಲ!! ಆದರೆ ಮೋದೀಜೀ ಮಾತ್ರ ಎಲ್ಲವನ್ನೂ ಸಲಿಸಾಗಿಯೇ ಮಾಡುತ್ತದ್ದಾರೆ ಎಂಬ ಉರಿಯಲ್ಲಿ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದು ವಿರೋಧ ಪಕ್ಷಗಳಿಗೆ ತಮಗಂಟಿದ ರೋಗದ ಹಾಗೆ ಮಾತುನಾಡುತ್ತಾರೆ!! ಮೊದಲು ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯಲ್ಲಿ ಭಾರತದ ಸ್ಥಿತಿಯೇ ಅತಂತ್ರವಾಗಿತ್ತು!! ಆದರೆ ಈಗ ಮೋದೀ ಯುಗ!! ಶತ್ರು ರಾಷ್ಟ್ರಗಳೇ ಮೋದೀಯನ್ನು ಅಪ್ಪಿಕೊಳ್ಳುತ್ತದೆ!!

Image result for modi

ಯಾವಾಗ ತಮ್ಮ ದೇಶಕ್ಕೆ ಮೋದೀಜೀ ಸ್ಪರ್ಶವಾಗುತ್ತದೆ ಎಂದು ಕಾದು ಕುಳಿತುಕೊಳ್ಳುತ್ತಿದ್ದಾರೆ!! ಮೊದಲು ಭಾರತದ ಹೆಸರು ಕೇಳುವಾಗಲೇ ಉರಿಯುತ್ತಿದ್ದ ದೇಶವೆಲ್ಲಾ ಮೋದೀಜೀ ಅಧಿಕಾರವಹಿಸಿಕೊಂಡ ಬಳಿಕ ನಮಗೆ ಭಾರತ ದೇಶವೇ ಸ್ಪೂರ್ತಿ ಎಂದು ಹೇಳುತ್ತಿದೆ!! ಭಾರತವನ್ನು ಯಾವ ದೇಶವಾದರೂ ಕೆಣಕಿದರೆ ಮೋದೀಜೀಯ ಒಂದೇ ಮಾತಿಗೆ ತಲೆಬಾಗುತ್ತಿದೆ!! ಇದುವರೆಗೆ ಪಾಕಿಸ್ಥಾನದ ಜೊತೆ ಸೇರಿಕೊಂಡಿದ್ದ ಚೀನಾ ಕೂಡಾ ಪಾಕ್ ಸ್ನೇಹ ಬಿಟ್ಟು ಮೋದೀಜೀಯ ಕೈ ಹಿಡಿದಿದೆ ಎಂದರೆ ಮೋದೀಯ ಆಡಳಿತದ ಕಾರ್ಯ ವೈಖರಿಯು ಎಲ್ಲಿಯವರೆಗೆ ತಲುಪಿದೆಯಲ್ಲವೇ?!! ಇದೀಗ ಎಸ್‍ಸಿಓ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಮೊದೀಜೀ ಚೀನಾದೊಂದಿಗೆ ಬಲುದೊಡ್ಡ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ!!

Related image

ಎರಡು ಮಹತ್ವ ಒಪ್ಪಂದಕ್ಕೆ ಸಹಿ ಹಾಕಿದ ಭಾರತ -ಚೀನಾ

ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ನಿನ್ನೆ ಸಹಿ ಹಾಕಿವೆ. ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲು ಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಿನ್ನೆ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ಹಂಚಿಕೆ ಹಾಗೂ ಭಾರತದಿಂದ ಬಾಸುಮತಿಯೇತರ ಅಕ್ಕಿ ಆಮದು ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದ್ದಾರೆ.

 

ಹೊಸ ಒಪ್ಪಂದದ ಪ್ರಕಾರ, ಚೀನಾ ಬ್ರಹ್ಮಪುತ್ರ ನದಿಯಲ್ಲಿ ಮೇ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಿದೆ. ಇದರಿಂದ ಅಸ್ಸಾಂನಲ್ಲಿ ತಲೆದೋರುವ ಪ್ರವಾಹವನ್ನು ಎದುರಿಸಲು ಭಾರತವು ಅಗತ್ಯ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಭಾಗವಾಗಿ ನಡೆದ ಚರ್ಚೆಯಲ್ಲಿ ಭಯೋತ್ಪಾದನೆ, ಉಗ್ರಗಾಮಿತ್ವ ಹಾಗೂ ತೀವ್ರಗಾಮಿತ್ವದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಿದ್ದಾರೆ. ವೂಹಾನ್ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿ ಮತ್ತು ಕ್ಸಿ ಅವರು ಪ್ರಗತಿ ಸಾಧಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ!! ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ-ಚೀನಾದ ಸಂಬಂಧ ಗಟ್ಟಿಯಾಗುತ್ತಿದೆ ಎಂಬುವುದಕ್ಕೆ ಬೇರೆ ನಿದರ್ಶನ ಬೇಕೆ?!

  • ಪವಿತ್ರ
Tags

Related Articles

Close