ದೇಶ

ಸದನದಲ್ಲೇ ಮತಾಂತರದ ವಿರುದ್ಧ ಗುಡುಗಿದ ಶಾ! ಕೇಂದ್ರದ ಯೋಜನೆಯಂತೆ ಜಾರಿಯಾಗುತ್ತಾ ಮತಾಂತರ ನಿಷೇಧ ಕಾಯ್ದೆ?

ಬಲವಂತದ ಮತಾಂತರದಿಂದ ನಮ್ಮ ದೇಶದ ಭದ್ರತೆ‌ಗೆ ಅಪಾಯ ಇದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಸತ್ತಿನ‌ಲ್ಲಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಲವಂತ‌ದ ಮತಾಂತರ‌ಗಳಂತಹ ಚಟುವಟಿಕೆ‌ಗಳಿಗೆ ಆಸ್ಪದ ನೀಡುವುದಿಲ್ಲ. ಕೇಂದ್ರ ಸರ್ಕಾರದ ನಿಯಮಗಳನ್ನು ಯಾರು ಪಾಲನೆ ಮಾಡುವುದಿಲ್ಲವೋ, ಯಾರು ಬಲವಂತದ ಮತಾಂತರದಲ್ಲಿ ತೊಡಗಿಸಿಕೊಳ್ಳುತ್ತಾರೆಯೋ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬಲವಂತ‌ದ ಮತಾಂತರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ‌ದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಬಲವಂತದ ಮತಾಂತರ ತಡೆಗೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದರೆ ಪ್ರಸ್ತುತ ಇರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಲವಂತದ ಮತಾಂತರ‌ದ ವಿರುದ್ಧ ಕಾನೂನಾತ್ಮಕ ನಿಲುವು ತೆಗೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದ್ದಾರೆ.

ಆ ಮೂಲಕ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಸುಳಿವನ್ನು ಅಮಿತ್ ಶಾ ಅವರು ನೀಡಿದ್ದಾರೆ.

Tags

Related Articles

Close