ಪ್ರಚಲಿತ

ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಶಾಹೀನ್ ಬಾಗ್ ಬಿಕೋ ಎನ್ನುತ್ತಿತ್ತು! ಕೇಜ್ರಿವಾಲ್ ಸರ್ಕಾರದ ಅತೀ ದೊಡ್ಡ ಚುನಾವಣಾ ಪ್ರಚಾರ ಸಮಾವೇಶ – ಶಾಹೀನ್ ಬಾಗ್!

ತ್ತೀಚೆಗೆ ಭಾರತದಲ್ಲಿ ಅತಿಹೆಚ್ಚು ಚರ್ಚೆಗೆ ಕಾರಣವಾಗಿರುವುದು ಪೌರತ್ವ ತಿದ್ದುಪಡಿ ಕಾಯಿದೆ ಎಂಬುವುದು ನಮಗೆಲ್ಲ ಗೊತ್ತೇ ಇದೆ. ೧೯೫೫ ರಲ್ಲಿಯೇ ಜಾರಿಗೆ ಬಂದ ಈ ಕಾಯಿದೆಗೆ ಒಂದಷ್ಟು ಬದಲಾವಣೆಗಳನ್ನು ತರಲೇಬೇಕು ಎಂದು ನಮ್ಮ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ಪಣತೊಟ್ಟಿರುವುದು ಗೊತ್ತೇ ಇದೆ. ಹಾಗೂ ಆ ಬದಲಾವಣೆಗಳನ್ನು ತರುವುದರಿಂದ ಅದೇನೋ ತಲೆಹೋಗುವ ವಿಷಯಾ ಇಲ್ಲದಿರುವುದರಿಂದ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲೂ ಈ ಬಿಲ್ ಪಾಸ್ ಕೂಡ ಆಗಿದೆ. ಆದರೆ ಈ ಕಾಯಿದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆಯೂ ಎದ್ದಿತ್ತು. ಅದರಲ್ಲೂ ಕಾಂಗ್ರೆಸ್ ಸೇರಿದಂತೆ ಕೆಲ ಸೆಕ್ಯೂಲರ್ ಪಕ್ಷಗಳು, ಹಾಗೂ ಈಗೀಗ ಸೆಕ್ಯುಲರ್ ಆಗುತ್ತಿರುವ ಶಿವಸೇನೆಯಂತಹ ಸಾಂದರ್ಭಿಕ ಜಾತ್ಯಾತೀತರೂ ಕೂಡ ಈ ಕಾಯಿದೆಯನ್ನು ವಿರೋಧಿಸುವುದರ ಜೊತೆಗೆ ಜಾತಿ- ಜಾತಿಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡಿದ್ದಂತೂ ಸತ್ಯ!

ಅದರಲ್ಲೂ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಹೋರಾಟ ನಮಗೆಲ್ಲಾರಿಗೂ ಗೊತ್ತೆ ಇದೆ. ಹೌದು ಸತತ ಎರಡು ತಿಂಗಳಿನಿಂದ ದೇಶದೆಲ್ಲೆಡೆ ಸಿಎಎ ವಿರುದ್ಧದ ಹೋರಾಟದಲ್ಲಿ ಅದೆಷ್ಟು ನಷ್ಷ- ಕಷ್ಟಗಳು ಉಂಟಾಗಿದೆ ಎಂದು ನಾವೆಲ್ಲರೂ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಅದೆಷ್ಟೇ ಬೆಂಕಿ ಹಚ್ಚಿದರೂ, ಕಲ್ಲೆಸೆದರೂ ಕಿರುಚಿದರೂ- ಚೀರಿದರೂ ಯಾವುದಕ್ಕೂ ಜಗ್ಗದ ಕೇಂದ್ರ ಸರ್ಕಾರವನ್ನು ಕಂಡು ಸುಸ್ತಾದ ಪ್ರತಿಭಟನಾಕಾರರು ಒಂದು ಹೊಸ ತಂತ್ರ ರೂಪಿಸಿದರು. ಅದೇನುಗೊತ್ತೇ..? ಗಂಡಸರೆನಿಸಿಕೊಂಡವರೆಲ್ಲ ಮನೆಯಲ್ಲಿ ಕೂತು ತಮ್ಮ ಹೆಂಡತಿ ಮಕ್ಕಳನ್ನು ರೋಡಿಗೆ ತಂದು ಪ್ರತಿಭಟನೆ ನಡೆಸಿದರು ಅದರಲ್ಲೂ ಅವರ ಪ್ರತಿಭಟಣೆಯ ಪ್ರದರ್ಶನವಂತೂ ಅಮೋಘ!, ವರ್ಣನೆಗೆ ಸಿಲುಕದ್ದು. ಹೌದು ಸ್ವಾಮಿ ಬಿಟ್ಟಿ ಊಟ, ಹಣ ಹಾಗೂ ಇತರೆ ಬಹುಮಾನದ ಆಸೆಗಾಗಿ ರೋಡಿಗಿದವರ ನಿಜ ಬಣ್ಣ ಈಗ ಬಯಲಾಗಿದೆ. ಹೌದು ಇಂದು ಅದೇ ಪ್ರತಿಭಟನಾಕಾರರು ದೆಹಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಣ್ಮರೆಯಾಗಿದ್ದಾರೆ. ಶಾಹಿನ್ ‌ಬಾಗ್ ರಸ್ತೆಯೆಲ್ಲ ಖಾಲಿ ಖಾಲಿಯಾಗಿದೆ. ಅದರಲ್ಲೂ ಒಂದು ಒಳ್ಳೆಯ ವಿಷಯವೆಂದರೆ ಅವರು ಕೊನೆಗು ಅವರ ಇಷ್ಟು ದಿನದ ನಾಟಕಕ್ಕೆ ಮಂಗಳ ಹಾಡಿದ್ದಾರೆ. ಅವರ ಕೆಟ್ಟ ನಾಟಕೀಯ ಪ್ರದರ್ಶನಕ್ಕೆ ಬೇಸತ್ತಿದ್ದ ಭಾರತೀಯರು ಇಂದು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಶಾಹಿನ್‌ ಬಾಗ್ ಪ್ರತಿಭಟಣಾಕಾರರು ತಮ್ಮ ಜಾಗ ಖಾಲಿ ಮಾಡಿದ ಕಾರಣ ಇಷ್ಟೇ ಶಾಹಿನ್‌ಬಾಗ್‌ನಲ್ಲಿರುವ ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಮಾನತುಲ್ಲಾ ಖಾನ್ ಜಯಗಳಿಸಿದ್ದಾನೆ. ಅವರ ಇಷ್ಟೂ ದಿನದ ಶ್ರಮ ಫಲ ನೀಡಿದ್ದು ಇದಕ್ಕೆ ಮೂಲ ಕಾರಣ.

ಅಂದ್ರೇ ಇಷ್ಟು ದಿನ ಶಾಹಿನ್‌ಬಾಗ್‌ನಲ್ಲಿ ನಡೆದದ್ದು ಬರೀ ನಾಟಕ ಪ್ರದರ್ಶನನಾ?

ಹೌದು ಇಷ್ಟು ದಿನ ಗಂಟಲು ಕಿತ್ತು ಹೋಗುವ ಹಾಗೆ ರಸ್ತೆಯಲ್ಲಿ ನಿಂತು ಬೊಬ್ಬಿರಿಯುತ್ತಿದ್ದವರು ಚುನಾವಣಾ ಫಲಿತಾಂಶ ಹೊರಬಿದ್ದಂತೆ ನಾಪತ್ತೆಯಾಗಿದ್ದಾರೆ. ಹಾಗಾದರೆ ಶಾಹಿನ್‌ಬಾಗ್ ಹೋರಾಟ, ಪ್ರತಿಭಟನೆಯೆಲ್ಲವೂ ಚುನಾವಣೆಗಾಗಿ ನಡೆದ ನಾಟಕ ಪ್ರದರ್ಶನವಲ್ಲವೇ ಸ್ವಾಮಿ? ನಮಗೂ ಶಾಹಿನ್ ಬಾಗ್ ಹೋರಾಟಗಾರಿಗೂ ಯಾವುದೇ ರೀತಿಯ ಸಂಬಂಧವಿಲ್ಲ , ನಾವು ಅವರಿಗೆ ಯಾವ ರೀತಿಯಲ್ಲೂ ಬೆಂಬಲ ನೀಡುತ್ತಿಲ್ಲ ಎಂದಿದ್ದ ಕೇಜ್ರಿವಾಲ್‌ನ ನಿಜಬಣ್ಣ ಇಂದು ಬಯಲಾಗಿದೆ. ಅದ‌ಕ್ಕೆ ಶಾಹೀನ್ ಬಾಗ್ ಹೋರಾಟದ ಸಲುವಾಗಿ ಕೇಜ್ರಿವಾಲ್ ಪಕ್ಷದ ೪ ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿರುವುದೆ ಸಾಕ್ಷಿ . ಬಿಜೆಪಿಯವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಕೇಜ್ರಿವಾಲ್ ಈಗ ಮಾಡಿದ್ದಾದ್ರು ಏನು ? ಪರೋಕ್ಷವಾಗಿ ಶಾಹೀನ್‌ಬಾಗ್ ಪ್ರತಿಭಟನೆಗೆ ಬೆಂಬಲ ನೀಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡು ಇಂದು ತನಗೇನು ಗೊತ್ತಿಲ್ಲವೆಂಬತ್ತೆ ನಾಟಕಮಾಡುತ್ತಿದ್ದಾರೆ. ಬಿಜೆಪಿಯವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕಿಸಿದವರು ಇಂದು ಮಾತ್ರ ತಮ್ಮ ಕಣ್ಣಿಗೆ ಪೊರೆಬಂದವರಂತೆ ವರ್ತಿಸುತ್ತಿದ್ದಾರೆ.

ಅದೆನೇ ಇರಲಿ ಸಿಎಎ ವಿರುದ್ಧದ ಪ್ರತಿಭಟನೆಯ ದೂರಿನಲ್ಲಿ ರಾಜಕೀಯ ಮಾಡಿ ಇಂದು ದೆಹಲಿಯಲ್ಲಿ ತನ್ನ ಗದ್ದುಗೆ ಗಟ್ಟಿಪಡಿಸಿಕೊಂಡ ಕೇಜ್ರಿವಾಲ್ ಸಕಲಕಲಾವಲ್ಲಭನೆಂದು ಸಾಬೀತು ಪಡಿಸಿದ್ದಾರೆ.

-ಕಾವ್ಯ ಅಂಚನ್

Tags

Related Articles

FOR DAILY ALERTS
Close