ಕಾಂಗ್ರೆಸ್‌ನವರಿಗೆ ಬಿಜೆಪಿ, ಪ್ರಧಾನಿ ಮೋದಿ ಅವರು ಎಂದರೆ ಅದೇನೋ ಉರಿ. ಅವರು ಏನೇ ಹೇಳಲು, ಯಾವ ಕೆಲಸವೇ ಮಾಡಲಿ.. ಅದಕ್ಕೊಂದು ಕೊಂದು ಹುಡುಕಿ, ತಪ್ಪು ವಿಚಾರಗಳನ್ನು ಸಹ ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದರಲ್ಲಿ, ತಪ್ಪಿಗೂ ಬೆಂಬಲ ನೀಡುವುದರಲ್ಲಿ ಎತ್ತಿದ ಕೈ. ಕಾಂಗ್ರೆಸ್ ನಾಯಕರಿಗೆ ದೇಶದ ಒಳಿತಿಗಿಂತ ಪ್ರಧಾನಿ ಮೋದಿ ಅವರನ್ನು ಟೀಕಿಸುವುದು, ವಿರೋಧ ಮಾಡುವುದರಲ್ಲೇ ಅದೇನೋ ಖುಷಿ.
ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಮುಖ್ಯಮಂತ್ರಿಯ ಮಗ ಉದಯನಿಧಿ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಷಯ ಈಗಲೂ ಬಿಸಿಬಿಸಿಯಾಗಿಯೇ ಇದೆ. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು ಎನ್ನುವ ಮೂಲಕ ಭಾರತದ ಸನಾತನ ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕೆಲಸ ಮಾಡಿದ್ದ. ಇದಾದ ಬಳಿಕ ಹಲವಾರು ಮಂದಿ ಈತನ ಹೇಳಿಕೆಯನ್ನು ವಿರೋಧಿಸಿ, ಅವನಿಗೆ ಛೀಮಾರಿ ಹಾಕಿದ್ದು, ಆತನ ವಿರುದ್ಧ ದೂರು ದಾಖಲಿಸಿದ್ದು ಎಲ್ಲರಿಗೂ ತಿಳಿದಿದೆ.
ಉದಯ ನಿಧಿಯ ಹಿರಿಯರು ಸನಾತನ ಹಿಂದೂ ಧರ್ಮದಿಂದಲೇ ಕ್ರೈಸ್ತರಾಗಿ ಮತಾಂತರ ಆದವರು. ಆತನ ಹೆಸರು ಉದಯ ನಿಧಿ ಎಂಬುದು ಸಹ ಸನಾತನ ಹಿಂದೂ ಧರ್ಮದಿಂದಲೇ ಬಂದದ್ದು ಎಂಬುದನ್ನು ಆತ ಮರೆತಂತಿದೆ. ಜೊತೆಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆತ ಈ ಹಿಂದೆ ದೇವಾಲಯಗಳಿಗೆ ತೆರಳಿದ್ದು, ಆತನ ಮನೆಯವರು ದೇಗುಲದಲ್ಲಿ ತುಲಾಭಾರ ಮಾಡಿಸಿದ ವಿಡಿಯೋ, ಚಿತ್ರಗಳು ಸಹ ಸಖತ್ ವೈರಲ್ ಆಗಿದ್ದು, ಆ ಮೂಲಕವೂ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಸಾರ್ವಜನಿಕರ ಕೈಯಿಂದ ಚೆನ್ನಾಗಿ ಉಗಿಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇ ಬೇಕು.
ಇರಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಹಿಂದೂ ಧರ್ಮದ ಬಗ್ಗೆ ಉದಯ ನಿಧಿ ಸ್ಟ್ಯಾಲಿನ್ ವಿವಾದಾಕ್ಮಕ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಕರೆ ನೀಡಿದ್ದಾರೆ. ಉದಯ ನಿಧಿಯ ಹೇಳಿಕೆಯನ್ನು ಖಂಡಿಸದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರು ಈ ಹೇಳಿಕೆಗೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಹೇಳಿರುವುದನ್ನು ಖಂಡಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಈ ನಿಲುವು ಪ್ರಚೋದವಾಕಾರಿ ಮತ್ತು ಸಂವಿಧಾನ ವಿರೋಧಿ ಎಂದು ಹೇಳುವ ಮೂಲಕ ತಮ್ಮ ಹೊಲಸು ಮನಸ್ಥಿತಿ ಪ್ರದರ್ಶನ ಮಾಡಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆಯ ಮೂಲಕವೇ ಕುಖ್ಯಾತಿ ಗಳಿಸಿದೆ. ಇದೀಗ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಪರೋಕ್ಷವಾಗಿ ಉದಯ ನಿಧಿಯಂತಹ ಎಡಬಿಡಂಗಿಗಳಿಗೆ ಪ್ರೋತ್ಸಾಹ, ಬೆಂಬಲ, ಉತ್ತೇಜನ ನೀಡಿರುವ ಸಿದ್ದರಾಮಯ್ಯ ಅವರ ಹೇಳಿಕೆಯೂ ಸಾರ್ವಜನಿಕವಾಗಿ ಭಾರೀ ಟೀಕೆಗೆ ಗುರಿಯಾಗಿದೆ ಎನ್ನುವುದು ಸುಳ್ಳಲ್ಲ.
ಪ್ರಧಾನಿ ಮೋದಿ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಬಂದಿರುವ ಸಿದ್ದರಾಮಯ್ಯ, ತಪ್ಪು ಮಾಡಿ ಸಾರ್ವಜನಿಕವಾಗಿ ಛೀಮಾರಿ ಹಾಕಿಸಿಕೊಂಡಿರುವ ಉದಯ ನಿಧಿ ಸನಾತನ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿರುವ ಉದಯ ನಿಧಿ ತನ್ನ ಹೇಳಿಕೆಯನ್ನು ಹಿಂಪಡೆದು, ಸಾರ್ವಜನಿಕರ ಕ್ಷಮೆ ಕೇಳುವಂತೆ ಒತ್ತಾಯಿಸದೇ ಇರುವುದು ವಿಪರ್ಯಾಸ. ಇಂಡಿಯಾ ಒಕ್ಕೂಟದಲ್ಲಿ ಸ್ಟ್ಯಾಲಿನ್ ಪಕ್ಷವೂ ಕಾಂಗ್ರೆಸ್‌ಗೆ ಕೈ ಜೋಡಿಸಿದೆ ಎಂದ ಮಾತ್ರಕ್ಕೆ, ಉದಯ ನಿಧಿ ನೀಡಿ ದಂತಹ ಸಮಾಜದ ಸ್ವಾಸ್ಥ್ಯ ಕೊಡುವ ಹೇಳಿಕೆಗೆ ಬೆಂಬಲ ನೀಡಿರುವ ಸಿದ್ದರಾಮಯ್ಯ ಯಾವ ಸೀಮೆಯ ಮುಖ್ಯಮಂತ್ರಿ, ನಾಯಕನೆನ್ನುವುದಕ್ಕೆ ಯಾವ ಅರ್ಹತೆ ಹೊಂದಿದ್ದಾರೆ ಎಂದು ಜನರೇ ಪ್ರಶ್ನೆ ಮಾಡುವಂತಾಗಿದೆ.
ನರೇಂದ್ರ ಮೋದಿ ಅವರು ಕೇವಲ ಬಿಜೆಪಿ ನಾಯಕರಲ್ಲ. ಇಡೀ ದೇಶಕ್ಕೆ ಪ್ರಧಾನಿ. ಹೀಗಿರುವಾಗ ಅವರು ಆ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿರುವ ಸಿದ್ದರಾಮಯ್ಯ ಅವರಿಗೆ, ತಾವು ಒಂದು ರಾಜ್ಯದ ಮುಖ್ಯಮಂತ್ರಿ. ಕಾಂಗ್ರೆಸ್ ನಾಯಕನ ಹಾಗೆ ವರ್ತಿಸುವ ಮೂಲಕ ತಮ್ಮ ಸ್ಥಾನದ ಘನತೆ ಹಾಳು ಮಾಡಿಕೊಳ್ಳಬಾರದು. ಸಿ ಎಂ ಆಗಿ ತನಗೆ ಎಲ್ಲಾ ಧರ್ಮಗಳೂ ಸಮಾನ. ಎಲ್ಲರನ್ನೂ ಏಕತಾ ಭಾವದಿಂದಲೇ ನೋಡಬೇಕು. ಎಲ್ಲರಿಗೂ ಸಮಾನ ನ್ಯಾಯ ನೀಡಬೇಕು ಎಂಬುದರ ಜ್ಞಾನ ಇಲ್ಲದೇ ಹೋಗಿರುವುದು ಖೇದಕರ.
ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಹಿಂದೂ ವಿರೋಧಿ, ಪ್ರಧಾನಿ ಮೋದಿ ವಿರೋಧಿ ಮನಸ್ಥಿತಿ ಕಾಂಗ್ರೆಸ್ ಪಕ್ಷವನ್ನು ದೇಶ ವಿರೋಧಿ ಕೆಲಸಗಳಿಗೆ, ದೇಶ ದ್ರೋಹಿಗಳಿಗೆ ನೆರವಾಗುವ ಹಾಗೆ, ಬೆಂಬಲಿಸುವ ಹಾಗೆ ಮಾಡಿದೆ ಎನ್ನುವುದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷದ ಇಂತಹ ಮನಸ್ಥಿತಿ ದೇಶಕ್ಕೆ, ದೇಶವಾಸಿಗಳಿಗೆ ಅಪಾಯವೇ ಸರಿ.