ಪ್ರಚಲಿತ

ಬಿಜೆಪಿಯನ್ನು ಟೀಕಿಸಲು ಹೋಗಿ ತಾವೇ ಟೀಕೆಗೆ ಗುರಿಯಾದರಾ ಶಾಸಕ ಹ್ಯಾರಿಸ್?

ಭಾರತೀಯ ಜನತಾ ಪಕ್ಷವನ್ನು ಟೀಕಿಸುವ ಭರದಲ್ಲಿ ತಾನೇ ಸಾರ್ವಜನಿಕರಿಂದ ಉಗಿಸಿಕೊಂಡ ಕಾಂಗ್ರೆಸ್ ನಾಯಕನ ಕಥೆ ಇದು. ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರು ಬಿಜೆಪಿಯನ್ನು ಟೀಕಿಸುವ ಜೋಶ್‌ನಲ್ಲಿ, ಬೆಂಗಳೂರು ಕರಗವನ್ನು ಟೀಕಿಸಿ, ಕೊನೆಗೆ ಈ ತಮ್ಮ ಜೋಶ್ ಟಾಕ್ ತಿರುಗುಬಾಣವಾದಾಗ ಕ್ಷಮೆ ಕೇಳಿ ನಗೆಪಾಟಿಲಿಗೀಡಾಗಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಿಕ್ಕದ್ದೇ ಛಾನ್ಸ್ ಎಂಬಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಹ್ಯಾರಿಸ್ ಬಾಯಿಂದ ಜಗದ್ವಿಖ್ಯಾತ ಬೆಂಗಳೂರು ಕರಗ ಉತ್ಸವದ ಬಗ್ಗೆ ಹಗುರವಾದ ಮಾತುಗಳು ಕೇಳಿ ಬಂದಿವೆ. ಬಿಜೆಪಿಯವರು ನಾಟಕವಾಡುತ್ತಾರೆ. ಮುಂದಿನ ಎರಡು ತಿಂಗಳು ನಾಟಕದ ಸಮಯದಲ್ಲಿ, ಹಬ್ಬ, ಕರಗದ ಸಮಯದಲ್ಲೆಲ್ಲಾ ಹಾಕೊಂಡು ಬರುತ್ತಾರಲ್ಲಾ. ಅದೇ ರೀತಿ ಈಗ ಬಿಜೆಪಿ ಯವರು ಸಹ ಬಣ್ಣದ ನಾಟಕವಾಡುತ್ತಿರುವುದಾಗಿ ನಾಲಿಗೆ ಹರಿಯಬಿಟ್ಟಿದ್ದರು.

ಕರಗವನ್ನು ಅವಮಾನಿಸುವಂತಹ ಮಾತುಗಳನ್ನಾಡಿದ ಹ್ಯಾರಿಸ್ ಮೇಲೆ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಕರಗ ಸಮಿತಿ ಸಹ ಈ ವ್ಯಕ್ತಿಯ ವಿರುದ್ಧ ಪ್ರತಿಭಟನೆ ನಡೆಸುವ ಸಿದ್ಧತೆ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡು ಕ್ಷಮೆ ಕೇಳದಿದ್ದಲ್ಲಿ ತನಗೇ ಅಪಾಯ ಎಂದು ಅರಿತ ಹ್ಯಾರಿಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಯಾಚಿಸಿದ್ದಾರೆ. ಮಾತನಾಡುವ ಭರಾಟೆಯಲ್ಲಿ ಹೀಗೆ ಮಾತನಾಡಿದ್ದೇನೆ. ನನ್ನ ತಪ್ಪಿನ ಅರಿವು ನನಗಾಗಿದೆ. ತಿಂಗಳ ಸಮುದಾಯದ ಸ್ನೇಹಿತರು ನನಗಿದ್ದಾರೆ. ಈ ಸಮುದಾಯದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿ. ನಾನು ಕರಗದ ಬಗ್ಗೆ ಏನೂ ಮಾತನಾಡಿ ಎಲ್ಲ. ನನ್ನ ಮಾತುಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೂ ನಿಮಗೆ ಯಾರಿಗೂ ನೋವಾಗಬಾರದು. ತಪ್ಪು ಭಾವಿಸಬಾರದು. ನಾನು ಆ ರೀತಿ ಎಂದೂ ಹೇಳಲ್ಲ ಎಂಬುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಎಲುಬಿಲ್ಲದ ನಾಲಿಗೆ, ಉಪ್ಪು ಹುಳಿ ತಿಂದ ದೇಹ. ಏನು ಮಾತಾಡಿದ್ರೂ ನಡಿಯುತ್ತೆ ಎನ್ನುವ ಕಾಂಗ್ರೆಸ್ ನಾಯಕರಿಗೆ ಹ್ಯಾರಿಸ್ ಅವರ ಈ ಘಟನೆ ಇನ್ನಾದರೂ ಪಾಠವಾಗಲಿ. ಬಾಯಿಗೆ ಬಂದಂತೆ ಒದರುವುದನ್ನು ಇನ್ನಾದರೂ ಬಿಟ್ಟು ಕಾಂಗ್ರೆಸ್ ಅಳಿದುಳಿದ ಕೊಂಚ ಮರ್ಯಾದೆಯನ್ನಾದರೂ ಕಾಪಾಡಿಕೊಳ್ಳುವುದನ್ನು ಕಲಿತಲ್ಲಿ ಉತ್ತಮ.

Tags

Related Articles

Close