ಪ್ರಚಲಿತ

ಸಿಎಂಗೆ ಐಬಿ ಶಾಕ್.! ಗುಪ್ತಚರ ಇಲಾಖೆಯಿಂದ ನೀಡಿರುವ ಸಂದೇಶದಲ್ಲಿ ಏನಿದೆ ಗೊತ್ತಾ..? ಭುಗಿಲೇಳಲಿದೆಯಂತೆ ಭಿನ್ನಮತ..!

ಅದ್ಯಾವಾಗ 38 ಸ್ಥಾನಗಳನ್ನು ಗಳಿಸಿದ ಕುಮಾರ ಸ್ವಾಮಿ ನೇತೃತ್ವದ ಜನತಾ ದಳ ಪಕ್ಷಕ್ಕೆ 78 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತೋ ಅಂದೇ ಈ ರಾಜ್ಯದಲ್ಲಿ ಮಹಾ ಸರ್ಕಾರ ಕಂಟಕವೊಂದು ಕಾದಿತ್ತು. ರಾಜ್ಯದ ಬಹುತೇಕ 90%ರಷ್ಟು ಜನರು ಈ ಸರ್ಕಾರ 6 ತಿಂಗಳು ನೆಟ್ಟಗೆ ಪೂರೈಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ ಇದೀಗ ಬಂದ ಸುದ್ಧಿ ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಈಗಾಗಲೇ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಸಂಪುಟ ಕಂಟಕ ಆರಂಭವಾಗಿದ್ದು, ದಿನೇ ದಿನೇ ಆಕಾಂಕ್ಷಿಗಳು ಹೆಚ್ಚಾಗ ತೊಡಗಿದ್ದಾರೆ. ಒಂದು ಪಕ್ಷವಾಗಿದ್ದರೆ ಅದೇಗೋ ಸುಧಾರಿಸಬಹುದಿತ್ತೋ ಏನೋ. ಆದರೆ ಮೈತ್ರಿ ಪಕ್ಷವಾಗಿದ್ದ ಕಾರಣ 2 ಪಕ್ಷಗಳ ನಾಯಕರನ್ನು ಮನವೊಲಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಕಾರಣದಿಂದಾಗಿ ಸಂಪುಟದ ಬಗ್ಗೆ ಸ್ವತಃ ಕುಮಾರ ಸ್ವಾಮಿಗೇ ಭಾರೀ ತಲೆ ನೋವಾಗಿದೆ.

ಈ ಮಧ್ಯೆ ಗುಪ್ತಚರ ಇಲಾಖೆಯಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಶಾಕಿಂಗ್ ಸಂದೇಶವೊಂದು ಬಂದಿದೆ. “ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಭುಗಿಲೇಳುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್‍ನ 11 ಶಾಸಕರು ಭಾರತೀಯ ಜನತಾ ಪಕ್ಷದ ಸಂಪರ್ಕದಲ್ಲಿದ್ದಾರೆ. ಮಂತ್ರಿ ಸ್ಥಾನ ಸಿಗದೇ ಇದ್ದ ಪಕ್ಷದಲ್ಲಿ ಈ ಎಲ್ಲಾ ಶಾಸಕರು ಬಂಡಾಯ ಸಾರುವ ಲಕ್ಷಣಗಳು ಗೋಚರಿಸುತ್ತಿದೆ. ಈ ಬಗ್ಗೆ ಸ್ಚಲ್ಪ ಗಮನ ಕೊಡುವುದು ಒಳಿತು” ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 

ಗುಪ್ತಚರ ಇಲಾಖೆಯ ಮಾಹಿತಿಯಂತೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಶಿವಾನಂದ ಪಾಟೇಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್,ಕಂಪ್ಲಿ ಶಾಸಕ ಆನಂದ್ ಸಿಂಗ್, ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಸಹಿತ 11 ಮಂದಿ ಕಾಂಗ್ರೆಸ್ ಶಾಸಕರು ಭಾರತೀಯ ಜನತಾ ಪಕ್ಷದ ಸಂಪರ್ಕದಲ್ಲಿದ್ದು, ಮಂತ್ರಿ ಸ್ಥಾನ ಸಿಗದೇ ಇದ್ದಲ್ಲಿ ಕಾಂಗ್ರೆಸ್ ತೊರೆಯುವ ಸೂಚನೆ ಇದೆ ಎಂದು ಐಬಿ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ವರದಿ ಸಲ್ಲಿಸಿದೆ

ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಗುಪ್ತಚರ ಇಲಾಖೆ ನೀಡಿರುವ ವರದಿಯಮನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ನೀಡಿದ್ದು, ಪರಂ ಆ ವರದಿಯನ್ನು ಕೈಕಮಾಂಡ್‍ಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದೀಗ ಕಾಂಗ್ರೆಸ್ ಹಾಗೂ ಜನತಾ ದಳ ನಾಯಕರಿಗೆ ಹೊಸ ಟೆನ್ಷನ್ ಆರಂಭವಾಗಿದ್ದು ಸಂಪುಟ ಸರ್ಕಸ್ ಮುಂದುವರೆದಿದೆ. ಇನ್ನು ಅಮೇರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ದೇಶಕ್ಕೆ ಮರಳಿದ ನಂತರವೇ ಸಂಪುಟ ವಿಸ್ತರಣೆ ಮಾಡುವುದೆಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close