ಪ್ರಚಲಿತ

ಶಾಕಿಂಗ್‌! ಬಜೆಟ್ ಮಂಡನೆ ದಿನವೇ ಮೈತ್ರಿ ಸರಕಾರ ಅಂತ್ಯ.!? ಬಿಜೆಪಿ ಹೇಳಿಕೆಗೆ ತಬ್ಬಿಬ್ಬಾದ ಕಾಂಗ್ರೆಸ್-ಜೆಡಿಎಸ್!

ಕಾಂಗ್ರೆಸ್ ಮತ್ತು ಜೆಡಿಎಸ್‌ ಒಟ್ಟಾಗಿ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡುವಲ್ಲಿ ಯಶಸ್ವಿಯಾದರೂ ಕೂಡ ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಮಾತ್ರ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಒಂದಲ್ಲಾ ಒಂದು ವಿಚಾರಕ್ಕೆ ಮನಸ್ಥಾಪ ಉಂಟಾಗುತ್ತಿದ್ದು, ಸದ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರ ನಡುವಿನ ಸಮರ ತಾರಕಕ್ಕೇರುವಂತಿದೆ. ಯಾಕೆಂದರೆ ಈ ಹಿಂದಿನ ಸರಕಾರದ ಜಾರಿಗೊಳಿಸಿದ್ದ ಬಜೆಟನ್ನೇ ಮುಂದುವರಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲಹೆ ನೀಡುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾರ ಮಾತಿಗೂ ಕ್ಯಾರೇ ಅನ್ನದೆ ಬಜೆಟ್ ಮಂಡನೆ ಮಾಡಿಯೇ ಸಿದ್ಧ ಎಂದು ಸಿದ್ದರಾಮಯ್ಯನವರ ವಿರುದ್ಧ ತೊಡೆತಟ್ಟಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಭಾರತೀಯ ಜನತಾ ಪಕ್ಷದ ಮುಖಂಡರು ನೀಡಿದ ಹೇಳಿಕೆಗೆ ಇಡೀ ಮೈತ್ರಿ ಸರಕಾರವೇ ನಡುಗಿ ಹೋಗಿದೆ. ಮೈತ್ರಿ ಸರಕಾರದಲ್ಲಿ ಇಷ್ಟು ದಿನ ಭಿನ್ನಾಭಿಪ್ರಾಯಗಳು ಕಂಡುಬರುತ್ತಲೇ ಇದ್ದರೂ ಸುಮ್ಮನಿದ್ದ ಬಿಜೆಪಿ ಮುಖಂಡರು ಇದೀಗ ಸರಕಾರದ ಬಗ್ಗೆ ಹೇಳಿಕೆ ನೀಡಿ, ರಾಜ್ಯ ಸರಕಾರ ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದ್ದಾರೆ.!

ಬಜೆಟ್ ಮಂಡನೆ ದಿನ ಏನಾಗುತ್ತೋ ಕಾದು ನೋಡಿ..!

ಒಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯನವರು ವಿರೋಧ ವ್ಯಕ್ತಪಡಿಸುತ್ತಿದ್ದು ಎರಡೂ ಪಕ್ಷಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರ ಮಧ್ಯೆ ಇದೀಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಿ ಮಾತೂಕತೆ ನಡೆಸಿದ್ದಾರೆ. ಇದನ್ನು ಕಂಡು ರಾಜ್ಯ ಸರಕಾರದಲ್ಲಿ ಇನ್ನಷ್ಟು ಭಯ ಹುಟ್ಟಿಕೊಂಡಿದೆ. ಯಾಕೆಂದರೆ ಈವರೆಗೆ ಏನೂ ಹೇಳಿಕೆ ನೀಡದ ಬಿಜೆಪಿ ಮುಖಂಡರ ಇಂತಹ ನಡೆ ಕಂಡು ಕಂಗಾಲಾಗಿದ್ದಾರೆ. ಮೈತ್ರಿ ಸರಕಾರದ ಆಯಸ್ಸು ಕೇವಲ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದಿರುವ ಬಿಎಸ್‌ವೈ ಹೇಳಿಕೆ ಕಂಡು ಕಾಂಗ್ರೆಸ್ ಮತ್ತು ಜೆಡಿಎಸ್‌ ಅಕ್ಷರಶಃ ತತ್ತರಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ , ಬಿಜೆಪಿ ಚಾಣಕ್ಯ ಅಮಿತ್ ಷಾ ಅವರು ಯಾವ ತಂತ್ರ ಹೂಡಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಅಮಿತ್ ಷಾ ಭೇಟಿಯಾದ ಒಂದೇ ದಿನಕ್ಕೆ ಬಿಎಸ್‌ವೈ ಇಂತಹ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಕೆರಳಿಸಿದೆ.!

ಮತ್ತೊಂದೆಡೆ ಯಡಿಯೂರಪ್ಪ ನವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಮುಖಂಡ , ಜಗದೀಶ್ ಶೆಟ್ಟರ್ ಅವರು ಕೂಡ ಇದೇ ರೀತಿ ಹೇಳಿಕೊಂಡಿದ್ದಾರೆ. ಸರಕಾರ ರಚನೆಯಾದ ದಿನದಿಂದಲೇ ಕಾಂಗ್ರೆಸ್-ಜೆಡಿಎಸ್ ನಾಯಕರ ಒಳಜಗಳ ಆರಂಭವಾಗಿದೆ. ಈ ಜಗಳ ಇದೀಗ ಬಹಿರಂಗವಾಗಿಯೇ ನಡೆಯುತ್ತಿದೆ, ಸ್ವತಃ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರೇ ಇದೀಗ ಜಿದ್ದಿಗೆ ಬಿದ್ದಿರುವುದು ಮೈತ್ರಿ ಸರಕಾರಕ್ಕೆ ಹೊಡೆತ ಬೀಳುವುದು ಖಂಡಿತ ಎಂದಿದ್ದಾರೆ. ಬಜೆಟ್ ಮಂಡನೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ವಾಗ್ವಾದ ಹೆಚ್ಚುತ್ತಿರುವುದರಿಂದ ಬಜೆಟ್ ಮಂಡನೆ ದಿನವೇ ಭಾರೀ ಆಘಾತ ಎದುರಾಗಲಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ನೀಡಿದ್ದಾರೆ.!

ನಾವು ಸರ್ಕಾರ ಬೀಳಿಸಲ್ಲ – ಯಾವಾಗ ಬೀಳುತ್ತೋ ಗೊತ್ತಿಲ್ಲ..!

ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಯಾರೂ ಕೆಡವಲು ಪ್ರಯತ್ನಿಸಬೇಕಾದ ಅವಶ್ಯಕತೆ ಇಲ್ಲ. ಇನ್ನು ಸ್ವಲ್ಪ ದಿನದಲ್ಲಿ ಅವರೇ ಮೈತ್ರಿ ಕಡಿದುಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿರುವ ಜಗದೀಶ್ ಶೆಟ್ಟರ್, ನಮ್ಮ ಪಕ್ಷ ಮೈತ್ರಿಯನ್ನು ಮುರಿಯಲು ಪ್ರಯತ್ನಿಸುತ್ತಿಲ್ಲ, ಯಾಕೆಂದರೆ ಮೈತ್ರಿ ಮಾಡಿಕೊಂಡ ದಿನದಿಂದಲೇ ಆ ಎರಡೂ ಪಕ್ಷಗಳ ಮುಖಂಡರ ವೈಮನಸ್ಸು ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಎರಡೂ ಪಕ್ಷಗಳ ಮುಖಂಡರ ಜಗಳವೇ ಮೈತ್ರಿ ಸರಕಾರವನ್ನು ಕಿತ್ತು ಹಾಕುತ್ತದೆ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿಯ ರಾಜ್ಯ ನಾಯಕರಾಗಿರುವಂತಹ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರು ನೀಡಿರುವ ಈ ಹೇಳಿಕೆಯಿಂದಾಗಿ ಬಿಜೆಪಿಗರಲ್ಲಿ ಹೊಸ ಕುತೂಹಲ ಉಂಟಾಗಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌‌ನಲ್ಲಿ ಭಾರೀ ಬಿರುಗಾಳಿ ಬೀಸಿದಂತಾಗಿದೆ ಎಂಬುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಸ್ವತಃ ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರೇ ಪರಸ್ಪರ ಕಚ್ಚಾಟ ಆರಂಭಿಸುತ್ತಿದ್ದು ಯಾವ ಕ್ಷಣದಲ್ಲೂ ಸರಕಾರ ಮಗುಚಿ ಬೀಳಬಹುದು..!

–ಅರ್ಜುನ್

Tags

Related Articles

Close