ಪ್ರಚಲಿತ

ಶಾಕಿಂಗ್.!ಚುನಾವಣೆ ಗೆಲ್ಲಲು ಅಡ್ಡದಾರಿ ಹಿಡಿದ ಕಾಂಗ್ರೆಸ್.! ನಕಲಿ ವೋಟರ್ ಐಡಿಗೆ ಮೊರೆಹೋದ ಕಾಂಗ್ರೆಸ್…

ಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ನಕಲಿ ವೋಟರ್ ಐಡಿ ಕಾರ್ಡುಗಳನ್ನು ಮುದ್ರಿಸಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು ತಂತ್ರ ಹೂಡಿದ್ದ ಕಾಂಗ್ರೆಸ್ ಇದೀಗ ಲೋಕಸಭೆ ಚುನಾವಣೆಗೂ ಅಂತದ್ದೇ ತಂತ್ರ ಹೂಡುವ ಮೂಲಕ ಮತ್ತೆ ಅಡ್ಡ ದಾರಿ ಹಿಡಿಯಲು ಮುಂದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಬಿಜೆಪಿ ಪರವಾಗಿರುವ ಪರಿಸರವನ್ನು ಕಂಡಂತಹಾ ಕಾಂಗ್ರೆಸ್ಸಿಗೆ ಇದೀಗ ಸೋಲುವ ಆತಂಕ ಸೃಷ್ಟಿಯಾಗಿದ್ದು ನಕಲಿ ಅಸ್ತ್ರಕ್ಕೆ ಮುಂದಾಗಿದೆ.

ರಿಜ್ವಾನ್ ಅರ್ಷದ್ ಪರ ನಕಲಿ ಕಾರ್ಡ್..!

ಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಈ ನಕಲಿ ಐಡಿ ಕಾರ್ಡ್ ತಯಾರಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಸಿಕ್ಕ ಖಚಿತ ಮಾಹಿತಿ ಅನ್ವಯ ಪೊಲೀಸರ ಮೂಲಕ ದಾಳಿ ನಡೆಸಿದಾಗ ನಕಲಿ ಐಡಿ ಕಾರ್ಡ್ ಪತ್ತೆಯಾಗಿದೆ. ಚಿಕ್ಕಪೇಟೆಯ ಪ್ರಭಾತ್ ಬಿಲ್ಡಿಂಗ್ ಗೆ ದಾಳಿ ನಡೆಸಿದ ಪೊಲೀಸರು ಸಾವಿರಾರು ಬೋಗಸ್ ಐಡಿ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಖಲೀಲ್ ಉಲ್ಲಾ ಸಹಿತ 18 ಜನರ ತಂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಖಚಿತವಾಗಿದ್ದು ಸತ್ತ ವ್ಯಕ್ತಿಗಳ ಹಾಗೂ ಬಾಂಗ್ಲಾ ಮತ್ತು ರೊಹಿಂಗ್ಯಾ ಮುಸ್ಲಿಮರ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ತಯಾರಿಸಲಾಗುತ್ತಿತ್ತು. ನಕಲಿ ಐಡಿ ಕಾರ್ಡ್ ಹಾಗೂ ಅದನ್ನು ತಯಾರಿಸುವ ಯಂತ್ರ ಸಹಿತ 18 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಮತದಾನ ಮಾಡಿಸೋದು ಕಾಂಗ್ರೆಸ್ಸಿಗರು ಹೆಣೆದ ವಾಮಮಾರ್ಗದ ತಂತ್ರವಾಗಿದೆ.

ನಾಮಪತ್ರ ಅಸಿಂಧುಗೊಳಿಸಿ-ಬಿಜೆಪಿ ಮನವಿ.!

ಇನ್ನು ಈ ವಿಚಾರವನ್ನು ಪರಿಣಾಮಕಾರಿಯಾಗಿ ಸ್ವೀಕರಿಸಿರುವ ಭಾರತೀಯ ಜನತಾ ಪಕ್ಷ, ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಕೃತ್ಯ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಾಧ್ಯತೆಗಳಿದ್ದು ಎಚ್ಚೆತ್ತುಕೊಳ್ಳುವ ಸೂಚನೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close