ಪ್ರಚಲಿತ

ಬಾಂಬ್ ಇಟ್ಟವರ ಬೆಂಬಲಕ್ಕೆ ನಿಂತರಾ ಕುಮಾರಸ್ವಾಮಿ.? ಪೊಲೀಸರಿಗೆ ಎಚ್ಚರಿಕೆ ನೀಡಿದ ಮಾಜಿ ಸಿಎಂ..!!

ಮಂಗಳೂರಿನ ಕೆಂಜಾರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು ರಾಜ್ಯವೇ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ಯಾವುದಾದರೂ ವಿಧ್ವಂಸಕ ಕೃತ್ಯಗಳನ್ನು ನಡೆಸಬೇಕು ಎಂಬ ಹಠ ಹೊಂದಿರುವ ಮತೀಯವಾದಿಗಳು ಈಗ ಈಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟಿಸುವ ವಿಫಲ ಯತ್ನ ನಡೆಸಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಎಲ್ಲರಲ್ಲೂ ದಿಗ್ಭ್ರಮೆ ಉಂಟಾಗಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಎಂಬ ಸುದ್ದಿ ಕೇಳುತ್ತಲೇ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೊಲೀಸರ ಕಾರ್ಯವನ್ನು ಆರಂಭದಲ್ಲೇ ಸಂಶಯಿಸಿದ್ದಾರೆ. “ಬಾಂಬ್ ಇಟ್ಟವರನ್ನು ಪತ್ತೆ ಹಚ್ಚಲು ತುಂಬಾನೆ ಸುಲಭ.ಆದರೆ ಪೊಲೀಸರು ಅಮಾಯಕರನ್ನು ಬಂಧಿಸುವ ಸಾಧ್ಯತೆ ಇದೆ. ತನಿಖೆ ನಡೆಸದೆ ೧೫ ದಿನಗಳ ನಂತರ ಅಮಾಯಕರನ್ನು ಪೊಲೀಸರು ಬಂಧಿಸುತ್ತಾರೆ.ಪೊಲೀಸರು ಸುಳ್ಳು ಕಥೆ ಸೃಷ್ಟಿಸುತ್ತಾರೆ. ನಾನು ಪೊಲೀಸರನ್ನು ನಂಬಲ್ಲ” ಎಂದು ಹೇಳಿದ್ದಾರೆ.

ಪೊಲೀಸರ ಧೈರ್ಯ ಕುಗ್ಗಿಸುವ ಮಾತುಗಳನ್ನು ಕುಮಾರಸ್ವಾಮಿ ಇದೇ ಮೊದಲು ಆಡಿಲ್ಲ. ಇತ್ತೀಚೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹತ್ಯೆಗೆ ಯತ್ನ ಪ್ರಕರಣಗಳಲ್ಲಿಯೂ ಇದೇ ಹೇಳಿಕೆ ನೀಡಿ ಬಂಧಿತರು ನಿರಪರಾಧಿಗಳು ಎಂದಿದ್ದರು. ಇದೀಗ ಬಾಂಬ್ ಪತ್ತೆ ಪ್ರಕರಣ ಗಂಭೀರ ಸ್ವರೂಪದಲ್ಲಿರುವಾಗಲೇ ಈ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಕಾರಣರಾಗಿದ್ದಾರೆ.

-ಏಕಲವ್ಯ

 

Tags

Related Articles

FOR DAILY ALERTS
Close