ಅಂಕಣ

ದಕ್ಷಿಣ ಗಂಗೆ’ಯೆಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ನದಿಯ ಹುಟ್ಟಿಗೆ ವಿಘ್ನವಿನಾಶಕನಾದ ಗಣೇಶ ಕಾರಣನೇ? ಕಾವೇರಿಯ ಹುಟ್ಟಿನ ಹಿಂದೆ ಅಡಗಿದೆ ರೋಚಕ ಕಥೆ!!

ಷಾಢ ಮಾಸ ಕಳೆದು ಶ್ರಾವಣ ಮಾಸ ಪ್ರಾರಂಭವಾಯಿತು ಎಂದರೆ ಹಿಂದು ಧರ್ಮಿಯರಿಗೆ ಹಬ್ಬ ಹರಿದಿನಗಳ ಸಂಭ್ರಮ. ನಾಗರ ಪಂಚಮಿಯಿಂದ ಪ್ರಾರಂಭವಾಗಿ, ಶ್ರೀಕೃಷ್ಣ ಜನ್ಮಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ದೀಪಾವಳಿ ನೂರಾರು ಹಬ್ಬಗಳ ಸಂಭ್ರಮ. ಅದರಲ್ಲೂ ಭಾದ್ರಪದ ಶುಕ್ಲಪಕ್ಷದ ಚತುರ್ಥಿಯೆಂದು ಬರುವ ಗಣೇಶ ಚತುರ್ಥಿ ಭಾರತ ಮಾತ್ರವಲ್ಲದೇ ದೇಶವಿದೇಶಗಳಲ್ಲಿ ವೈವಿಧ್ಯಮಯವಾಗಿ ಗಣೇಶನನ್ನು ಸ್ತುತಿಸುತ್ತಾರೆ!! ಆದರೆ ಕರ್ನಾಟಕದ ಕಾವೇರಿ ನದಿಯ ಉಗಮಕ್ಕೂ ವಿಘ್ನವಿನಾಶಕನಾದ ಗಣಪತಿಗೂ ಇರುವ ಸಂಬಂಧವಾದರೂ ಏನು ಗೊತ್ತೇ??

ಕಾವೇರಿ ‘ದಕ್ಷಿಣ ಗಂಗೆ’ ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿಯಾಗಿ ಮೆರೆಯುತ್ತಿದ್ದಾಳೆ!! ಈ ನದಿಯು ಒಂದು ಕಾರಂಜಿಯ ರೂಪದಲ್ಲಿ ಉದ್ಬವಿಸುತ್ತಿದ್ದು, ಇಲ್ಲಿನ ನೀರು ಭೂಮಿಯ ಒಳಗಿನಿಂದ ಹರಿಯುತ್ತದೆ ಎನ್ನುವ ಪ್ರತೀತಿಯೂ ಇಲ್ಲಿದೆ.

ಕಾವೇರಿ ಜಲಾನಯನ ಪ್ರದೇಶ 27,700 ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ ‘ದಕ್ಷಿಣ ಗಂಗೆ’ ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿಯಾಗಿದ್ದು, ಕಾವೇರಿ ನದಿಯ ಹೊರಗಿನ ಭಾಗವು ದೇವಾಲಯದಿಂದ ಸ್ವಲ್ಪ ದೂರದಲ್ಲಿದೆ. ಈ ದೇವಾಲಯವು ತಾಯಿ ಕಾವೇರಿಗೆ ಸಮರ್ಪಿತವಾದುದಾಗಿದ್ದು, ದೇವಿ ಕಾವೇರಿ ಮಾತ್ರವಲ್ಲದೆ ಇಲ್ಲಿ ಭಗವಾನ್ ಅಗಸ್ತೀಶ್ವರ ದೇವರನ್ನೂ ಕೂಡ ಪೂಜಿಸಲಾಗುತ್ತದೆ. ಇಲ್ಲಿ ಅಗಸ್ತ್ಯ ಋಷಿಗೆ ನದಿ ಮತ್ತು ಗಣೇಶ ದೇವರು ಇವರ ನಡುವೆ ಒಂದು ರೀತಿಯ ಸಂಬಂಧವಿದೆ ಎಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ, ಕಾವೇರಿ ನದಿಯನ್ನು ಅಗಸ್ತ್ಯಯ ಋಷಿಯು ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದರು ಎಂದು ಪ್ರತೀತಿ ಇದೆ.

Image result for lord ganesha with river kaveri

ಅಷ್ಟಕ್ಕೂ ಈ ಗಣೇಶನಿಗೂ ಕಾವೇರಿಯ ಉಗಮಕ್ಕೂ ಕಾರಣವಾದರೂ ಏನು ಗೊತ್ತೇ?

ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ, ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು. ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು.

ದಾರಿಯಲ್ಲಿ ತೆರಳುತ್ತಿರುವ ವೇಳೆ ಅವರು ಬಾಲಕನೊಬ್ಬನನ್ನು ಭೇಟಿಯಾದರು. ವಾಸ್ತವವಾಗಿ, ಆ ಬಾಲಕ ವೇಷಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಜಾಗವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿದರು. ಆ ಸಂದರ್ಭದಲ್ಲಿ ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟ.

Image result for lord ganesha with river kaveri

ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಇನ್ನೊಂದು ಕಥೆಯ ಪ್ರಕಾರ, ಅಗಸ್ತ್ಯ ಮಹಾಮುನಿಯು ಲೋಪಾಮುದ್ರೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾರೆ!! ಅದಕ್ಕೆ ಲೋಪಾಮುದ್ರೆ ಮೊದಲು ನಿರಾಕರಿಸುತ್ತಾಳೆ. ನಂತರ ದಾರಿಯಲ್ಲಿ ತೆರಳುತ್ತಿರುವ ವೇಳೆ ಅಗಸ್ತ್ಯ ಮಹಾಮುನಿ ಭೇಟಿಯಾದಾಗ, ಲೋಪಾಮುದ್ರೆಯು ತನ್ನನ್ನು ಎಂದೂ ಕಾಯಿಸಬಾರದು, ಕಾಯಿಸಿದರೆ ನಾನು ಸ್ವತಂತ್ರಳು. ಇದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಅದಕ್ಕೆ ಓಪ್ಪಿದ ಅಗಸ್ತ್ಯಮುನಿಯು ಲೋಪಾ ಮುದ್ರೆಯನ್ನು ಮದುವೆಯಾಗುತ್ತಾನೆ.

ಒಂದು ದಿನ ಅಗಸ್ತ್ಯಮುನಿಯು ತನ್ನ ಶಿಷ್ಯಂದಿರಿಗೆ ಪಾಠ ಮಾಡುತ್ತಾ ತಲ್ಲೀನನಾಗಿ ಸಮಯವನ್ನು ಮರೆತು ಬಿಡುತ್ತಾನೆ. ಆಗ ಲೋಪಾಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲದಲ್ಲಿ ಹಾರಿ ನದಿಯಾಗಿ ಹರಿಯುತ್ತಾಳೆ. ಅವಳು ಕವೇರನೆಂಬ ಮುನಿಯ ಮಗಳಾದುದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ. ಇನ್ನು ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ, ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದನೆಂದು ನಂಬಲಾಗಿದೆ.

Related image

ಒಟ್ಟಿನಲ್ಲಿ ಗಣೇಶನಿಂದಲೇ ಕಾವೇರಿಯ ಉಗಮವಾಯಿತು ಎಂದು ಹೇಳಲಾಗುತ್ತಿದ್ದು, ಕಾವೇರಿ ಜನ್ಮಸ್ಥಳವಾಗಿರುವ ತಲಕಾವೇರಿ ತಲುಪಲು ಮೊದಲು ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ಮತ್ತೊಂದು ಯಾತ್ರಾ ಸ್ಥಳವಾದ ಮಡಿಕೇರಿಯಿಂದ ಭಾಗಮಂಡಲವನ್ನು ದಾಟಬೇಕು. ಇಲ್ಲಿ, ಕಾವೇರಿ ನದಿಗೆ ತನ್ನ ಎರಡು ಉಪನದಿಗಳಾದ ಕನ್ನಿಕೆ ಮತ್ತು ಸುಜ್ಯೋತಿಗಳೂ ಸೇರಿಕೊಳ್ಳುತ್ತವೆ. ಈ ಮೂರು ನದಿಗಳ ಸಂಗಮದಿಂದಾಗಿ ಈ ಜಾಗವು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ, ಇದನ್ನು ತ್ರಿವೇಣಿ ಸಂಗಮ ಎಂದೂ ಕರೆಯಲಾಗುತ್ತದೆ. ತ್ರಿವೇಣಿ ಸಂಗಮದಿಂದ ಹತ್ತಿರವಿರುವ ಪ್ರಸಿದ್ದ ಭಗಂಡೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾಗಿದ್ದು, ಇಲ್ಲಿ ಮಹಾವಿಷ್ಣು, ಗಣಪತಿ ಮತ್ತು ಸುಬ್ರಹ್ಮಣ್ಯ ದೇವರುಗಳನ್ನೂ ಪೂಜಿಸಲಾಗುತ್ತದೆ.

ಮೂಲ:https://www.ganapatibappa.com/

– ಅಲೋಖಾ

Tags

Related Articles

FOR DAILY ALERTS
Close