ಪ್ರಚಲಿತ

ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚಿಸಬೇಕೆ? ಅವರು ನಿಜವಾಗಿಯೂ ಗಾಂಧೀಜಿಯನ್ನು ನಿಂದಿಸಿದರೇ?! ಮಾಧ್ಯಮಗಳು ಹರಡಿದ ಸುಳ್ಳು ಸುದ್ದಿ ಅನಂತ್ ಕುಮಾರ್ ಅವರನ್ನು ಸಿಕ್ಕಿಹಾಕಿಸಿತೇ?!

ನೈತಿಕತೆ ಅಧಪತನಕ್ಕಿಳಿದರೆ ಏನಾಗುತ್ತದೆ ಗೊತ್ತೇ?…ಬಹಳಷ್ಟು ದಿನಗಳಿಂದ ಶಹೀನ್ ಭಾಗ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ..ಅಲ್ಲಿ ಪ್ರತಿಭಟನೆ ಮಾಡುತ್ತಿರುವವರಿಗೆ ಮಿನರಲ್ ವಾಟರ್,ಬಿರಿಯಾನಿಗಳ ಸಪ್ಲಯ್ ಕೂಡಾ ನಡೆಯುತ್ತಿದೆ.ಅಷ್ಟರಲ್ಲೇ ಮೊನ್ನೆ ಮಹಾಶಯನೊಬ್ಬ ಪ್ರತಿಭಟನಾ ನಿರಂತರ ಮೇಲೆ ಗುಂಡು ಹಾರಿಸಿದ..ಅವನನ್ನು ಪೊಲೀಸರು ಬಂಧಿಸಿದರು..ಆದರೆ ವಿಷಯ ಅಷ್ಟಕ್ಕೇ ಮುಗಿಯಲಿಲ್ಲ..ಪತ್ರಿಕೆಗಳು ಮತ್ತು ಮಾಧ್ಯಮಗಳು ಅವನ ಮೇಲೆ ಸಂಶೋಧನೆ ನಡೆಸಿ ಅವನ ಫೇಸ್ಬುಕ್ ನಲ್ಲಿ ಅವನು ರಾಮಭಕ್ತ ಎಂದು ಬರೆದುಕೊಂಡಿದ್ದಾನೆ ಆದ್ದರಿಂದ ಅವನು ಸಂಘ ಅಥವಾ ಬಿಜೆಪಿಯವನೇ ಹೌದು ಎಂದು ಪತ್ರಿಕೆಗಳು ತೀರ್ಪನ್ನೂ ನೀಡಿದವು..ಎರಡು ದಿನಗಳ ಕಾಲ ಸಂಪೂಣವಾಗಿ ಈ ದಾಳಿಯನ್ನು ಬಿಜೆಪಿ ಯಾ ತಲೆಗೆ ಕಟ್ಟುವಂತಹ ಸಂಪೂರ್ಣ ಪ್ರಯತ್ನ ನಡೆಯಿತು.ಟಿವಿ ಯಲ್ಲಿ ನಾ ಮುಂದು ತಾ ಮುಂದು ಎಂಬಂತೆ ಚರ್ಚೆಗಳನ್ನೂ ನಡೆಸಲಾಯಿತು.ಅಷ್ಟರಲ್ಲೇ ಅವನು ಆಮ್ ಆದ್ಮಿ ಪಕ್ಷದ ಸದಸ್ಯ ಎಂಬುದು ಬೆಳಕಿಗೆ ಬಂತು..ಈಗ ಎಲ್ಲಾ ಮಾಧ್ಯಮಗಳೂ ಈ ವಿಚಾರದಲ್ಲಿ ಮೌನದ ಮೊರೆ ಹೋಗಿವೆ. ಆದರೆ ಇವೆಲ್ಲದರ ಮಧ್ಯದಲ್ಲಿ ಮಾಧ್ಯಮಗಳ ಹೊಸ ಸಂಶೋಧನೆ ಉತ್ತರ ಕನ್ನಡದ ಶಾಸಕರಾದ ಶ್ರೀ ಅನಂತ ಕುಮಾರ್ ಹೆಗಡೆಯವರು ಗಾಂಧೀಜಿಯ ಸ್ವಾತಂತ್ರ ಹೋರಾಟವನ್ನು ನಾಟಕ ಎಂದು ಕರೆದಿದ್ದಾರೆ ಎಂಬುದು.

ಹೆಗಡೆಯವರ ಸುತ್ತ ವಿವಾದಗಳೇಳುವುದೇನೂ ಇಂದು ನಿನ್ನೆಯ ವಿಚಾರವಲ್ಲ.ಅವರು ಭಾಷಣದಲ್ಲಿ ಸ್ವಾತಂತ್ರ ವೀರ ಸಾವರ್ಕರ್ ಮತ್ತು ಇತರರನ್ನು ಹೊಗಳಿದ್ದರು,ಶಸ್ತ್ರ ಮತ್ತು ಶಾಸ್ತ್ರ ಎರಡು ವಿಧಾನದ ನಂಬಿಕೆಯಲ್ಲಿ ಸ್ವಾತಂತ್ರ ಹೋರಾಟ ನಡೆದಿತ್ತು.ಇತಿಹಾಸದ ಪುಟಗಳಲ್ಲಿ ಶಾಸ್ತ್ರವನ್ನು ನಂಬಿ ಹೋರಾಟ ಮಾಡಿದವರನ್ನು ಮಾತ್ರ ವೈಭವೀಕರಿಸಿ ಶಸ್ತ್ರ ಹಿಡಿದವರನ್ನು ಉಪೇಕ್ಷಿಸಲಾಗಿದೆ ಎಂದು ಹೇಳಿದ್ದರು.ಕಾರ್ಯಕ್ರಮವು ನಡೆದದ್ದು ಬೆಂಗಳೂರಿನಲ್ಲಾದಕಾರನ  ಹೆಗಡೆಯವರ ಭಾಷಣವು ಕನ್ನಡದಲ್ಲೇ ಇತ್ತು.ಆದರೆ ರಾಷ್ಟ್ರೀಯ ಮಾಧ್ಯಮಗಳು ಕನ್ನಡವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಭಾಷಣವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಅನಂತ್ ಕುಮಾರ್ ಹೆಗಡೆಯವರು ಮಹಾತ್ಮಾಗಾಂಧಿಯನ್ನು ಅವಮಾನಿಸಿದ್ದಾರೆ ಎಂದು ತಮ್ಮ ೨೪*೭ ಮಾಧ್ಯಮದಲ್ಲಿ ಅರಚಿಕೊಳ್ಳಲು ಪ್ರಾರಂಭಿಸಿದರು.ಕನ್ನಡದ ಮಾಧ್ಯಮಗಳೂ ಸಹಾ ಅರ್ಧರ್ಧ ಭಾಷಣವನ್ನು ಕೇಳಿ ಬಿಸಿ ಬಿಸಿ ಸುದ್ದಿ ಹಂಚಲು ಪ್ರಾರಂಭಿಸಿತು..ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಎಂಬುದನ್ನು ನಿಜವಾಗಿಯೂ ಅರಿತುಕೊಳ್ಳುವ ಮನಸ್ಸಿದ್ದರೆ ಅವರ  ಭಾಷಣ ಯು ಟ್ಯೂಬ್ ನಲ್ಲಿ ಲಭ್ಯವಿದೆ,ಯಾರು ಬೇಕಾದರೂ ಎಷ್ಟು ಸಾರಿಬೇಕಾದರೂ ನೋಡಿ,ಕೇಳಿ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು.ಇಂಡಿಯಾ ಟುಡೇ ಮತ್ತು ಏನ್ ಡಿ ಟಿವಿ ಬಹಳಷ್ಟು ವರ್ಷಗಳಿಂದ ಇಂತಹಾ ಟ್ವಿಸ್ಟೆಡ್ ನ್ಯೂಸ್ ಗಳನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡಿದೆ..ಯಾವುದನ್ನೇ ಆಗಲಿ ಹೇಳಿದ ಮೇಲೆ ಕೊನೆಯಲ್ಲೊಂದು ಪ್ರಶ್ನಾರ್ಥಕ ಚಿನ್ಹೆ ಅಥವಾ ಆಶ್ಚರ್ಯಕರ ಚಿನ್ಹೆ ಉಪಯೋಗಿಸಿಬಿಟ್ಟರೆ ಅವರು ಟೆಕ್ನಿಕಲಿ ಸೇಫ್..ಉದಾಹರಣೆಗೆ ಅವಳು ಕೊಲೆ ಮಾಡಿದಳು ಎಂಬುದನ್ನು ಅವಳು ಕೊಲೆ ಮಾಡಿದಳು? ಅಥವಾ ಅವಳು ಕೊಲೆ ಮಾಡಿದಳು ! ಎಂದುಬಿಟ್ಟರೆ ಅವರು ಹೇಳಿದ್ದು ನಿಜವೋ ಅವರು ಕೇಳಿದ್ದು ಪ್ರಶ್ನೆಯೋ ಅಥವಾ ಆಶ್ಚರ್ಯವೋ ಎಂದು ಯಾರು ವಿಮರ್ಶಿಸುತ್ತಾ ಕೂರುತ್ತಾರೆ? ಅವರು ಹೇಳಿದ್ದು ನಿಜವೆಂದೇ ನೋಡುಗರು ಭಾವಿಸುತ್ತಾರೆ..ಆದರೆ ಯಾವಾಗ ಅವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಾಯಿತೋ ಆಗ ಅವರು ಎರಡೂ ಚಿಹ್ನೆಗಳ ಸಂಪೂರ್ಣ ಉಪಯೋಗ ಪಡೆದುಕೊಳ್ಳುತ್ತಾರೆ ಮತ್ತು ನಾವು ಆರೀತಿ ಹೇಳಿದ್ದಲ್ಲ ಪ್ರಶ್ನಿಸಿದ್ದು ಎಂದು ಜಾರಿಕೊಳ್ಳುತ್ತಾರೆ.ಅಲ್ಲಿಗೆ ಮಾಧ್ಯಮಗಳ ಹಾವೂ ಸಾಯಲಿಲ್ಲ ಕೋಲೂ ಮುರಿಯಲಿಲ್ಲ. ಆದರೆ ದೂರುದಾರ?ಅನುಭವಿಸಿದ ಮಾನಸಿಕ ತುಮುಲ?

ಅದನ್ನೆಲ್ಲಾ ಬಿಟ್ಟು ಅನಂತ ಕುಮಾರ್ ಹೆಗ್ದೆಯವರನ್ನೂ ಇದೇ ರೀತಿಯ ಟ್ವಿಸ್ಟೆಡ್ ನ್ಯೂಸ್ ಗೆ ಈಗ ಬಲಿಯಾಗಿಸಿದ್ದಾರೆ.ಮೊದಲಿನಿಂದಲೂ ಅನೇಕ ವಿವಾದ ಹೊಂದಿರುವ ಹೆಗಡೆ ಪ್ರಖರ ಹಿಂದುತ್ವವಾದಿ ಎಂಬುದು ಅನೇಕರಿಗೆ ತಿಳಿದಿದೆ..ಆದರಿಂದ ಅನಂತ್ ಕುಮಾರ್ ಹೆಗಡೆ ಈ ರೀತಿ ಹೇಳಿದ್ದಾರೆ ಅಂದರೆ ಜನರೂ ಬಹುಬೇಗ ನಂಬುವ ಸಾಧ್ಯತೆಗಳು ಹೆಚ್ಚಿರುವುದರಿಂದ ಅವರನ್ನೇ ಸುಲಭವಾದ ತುತ್ತನ್ನಾಗಿಸಲಾಗಿದೆ.ಪ್ರಖರ ಹಿಂದೂವಾದಿಗಳನ್ನು ಲಿಬರಲ್ ಗಳು ಹೇಗೆ ಗುರಿಯಾಗಿಸುತ್ತಿದ್ದಾರೆ ಎಂಬುದು ಹಲವು ದಿನಗಳಿಂದ ಕಾಣಿಸುತ್ತಿದೆ.ಮೊದರು ವಿಮಾನದಲ್ಲಿ ಅರ್ನಾಬ್ ರನ್ನು ಗುರಿಯಾಗಿಸಿದರೆ ನಂತರ ಮಹೇಶ್ ವಿಕ್ರಂ ಹೆಗಡೆಯವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರಿಯಾಗಿಸಿದರು,ಆದರೆ ಆ ಸಮಯದಲ್ಲಿ ಮಹೇಶ್ ಹೆಗಡೆ ತೋರಿದ ಸಮಯೋಚಿತ ವರ್ತನೆಯಿಂದ ಅವರ ಉಪಾಯ ತಿರುಗಿಬಿತ್ತು..ಅದಕ್ಕೀಗ ಎಷ್ಟು ಕೆಣಕಿದರೂ ವಿವಾದಾತ್ಮಕ ಹೇಳಿಕೆ ಹೊರಬರುವುದಿಲ್ಲ ಎಂದು,ನೀಡಿದ ಹೇಳಿಕೆಯನ್ನೇ ತಿರುಚಿ ವಿವಾದವನ್ನಾಗಿಸುವ ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ.ಕಂತೆಗೆ ತಕ್ಕ ಬೋಂಟೆ ಎಂಬಂತೆ ಇನಹುದನ್ನೇ ಕಾದು ಕುಳಿತಿರುವ ವಿರೋಧ ಪಕ್ಷ ಇದನ್ನೇ ಉಪಯೋಗಿಸಿಕೊಂಡು ಸಭಾತ್ಯಾಗ  ಮಾಡಿದ್ದಾರೆ..ತೆರಿಗೆಯ ಹಣ ಎಲ್ಲಿ ಹೋಗುತ್ತಿದೆ ಎಂಬುದಕ್ಕೆ ಉತ್ತರಗಳು ಇಲ್ಲಿವೆ ನೋಡಿ.ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸುವುದು ಜಗಳ ಮಾಡಿ ಪಾರ್ಲಿಮೆಂಟ್ ಬಹಿಷ್ಕರಿಸಲು ಅಲ್ಲವಲ್ಲ. ಸಲೀಸಾಗಿ ಕಲಾಪಗಳು ನಡೆದರೆ ಮೋದಿ ಸರಕಾರ ಮತ್ತಿನ್ನೇನು ಒಳ್ಳೆ ಕೆಲಸ ಮಾಡಿ ಕ್ರೆಡಿಟ್ ತೆಗೆದುಕೊಳ್ಳುತ್ತದೋ ಎಂಬ ಭಯದಲ್ಲೇ ಕಾಂಗ್ರೆಸ್ ದಿನದೂಡುತ್ತಿರುವ ಹಾಗಿದೆ.ಅದಕ್ಕೆ ಕಲಾಪವೇ ನಡೆಯದಂತೆ ಮಾಡಬಹುದು ಎಂಬುದು ಅವರ ಉಪಾಯ…ಅವರ ಇಂತಹಾ ಉಪಾಯಕ್ಕೆ ಅನಂತಕುಮಾರ್ ಹೆಗಡೆ ಅವರನ್ನು ಅದು ದಾಳವಾಗಿ ಬಳಸಿಕೊಳ್ಳುತ್ತಿದೆ ಅಷ್ಟೇ.

Deepashree.M.

Tags

Related Articles

FOR DAILY ALERTS
Close