ಪ್ರಚಲಿತ

ಬಿಜೆಪಿ ಬಂದ್ರೆ ಡಿಸಿಎಂ ಆಗ್ತಾರಂತೆ ಬಳ್ಳಾರಿ ದಿಗ್ಗಜ! ಶ್ರೀ ರಾಮುಲುಗೆ ಒಲಿಯುತ್ತಂತೆ ಮಹಾ ಪಟ್ಟ!!!

ಅದು ಗಣಿನಾಡು. ಬಿಸಿಲು ಅಂದ್ರೆ ಅಲ್ಲಿ ಬಹಳ ಹತ್ತಿರದ ಸ್ನೇಹಿತ. ಮಳೆರಾಯ ಬಂದನೆಂದರೆ ಆ ನಾಡು ಒಮ್ಮೆ ಪುಳಕಿತಗೊಳ್ಳುತ್ತದೆ. ಇಂತಹ ಜಿಲ್ಲೆಯಲ್ಲಿ ರಾಜಕೀಯ ಆಟಾಟೋಪಗಳೂ ಭರ್ಜರಿ ಯಾಗಿಯೇ ನಡೆಯುತ್ತಿರುತ್ತದೆ. ಕಳೆದ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಬದಲಾವಣೆಗೆ ಬಳ್ಳಾರಿ ಜಿಲ್ಲೆಯ ಚಿತ್ರಣವೇ ಪ್ರಮುಖ ಕಾರಣವಾಗಿತ್ತು. ಭಾರತೀಯ ಜನತಾ ಪಕ್ಷದ ಭದ್ರಕೋಟೆ ಆಗಿದ್ದ ಬಳ್ಳಾರಿ ಕಾಂಗ್ರೆಸ್ ಕೋಟೆಯಾಗಿ ಪರಿವರ್ತನೆ ಆಗಿತ್ತು.

ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ರಾಮುಲು ಮತ್ತು ಅವರ ಆಪ್ತ ಸ್ನೇಹಿತ ಗಣಿ ಧನಿ ಜನಾರ್ಧನ ರೆಡ್ಡಿ ಯ ಹೊರತಾಗಿ ಬೇರಾರೂ ಅಲ್ಲಿ ತಮ್ಮ ಪಾರುಪತ್ಯವನ್ನು ಸ್ಥಾಪಿಸಿಕೊಳ್ಳುವುದು ಕಷ್ಟ ಎಂಬ ಮಾತಿದೆ. ಕಳೆದ ಬಾರಿ ಶ್ರೀ ರಾಮುಲು ಪ್ರತ್ಯೇಕ ಪಕ್ಷ ಕಟ್ಟಿದ್ದರಿಂದ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟಿದ್ದರಿಂದ ಭಾರತೀಯ ಜನತಾ ಪಕ್ಷದ ಶಾಸಕರಿಗೆ ಅಲ್ಲಿ ಹಿನ್ನೆಡೆಯಾಗಿತ್ತು. ಮಾತ್ರವಲ್ಲದೆ ಅಲ್ಲಿ ಕಾಂಗ್ರೆಸ್ ಪಕ್ಷ ಕೆಲವು ಸ್ಥಾನವನ್ನು ಜಯಿಸಿತ್ತು. ನಂತರದ ೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರ ನೇತ್ರತ್ವದ ಚುನಾವಣೆಗೆ ಮತ್ತೆ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ವಾಪಾಸಾಗಿದ್ದರು. ಇದು ಭಾರತೀಯ ಜನತಾ ಪಕ್ಷ ಕ್ಕೆ ಭಾರೀ ಬಲವನ್ನು ನೀಡಿತ್ತು.

ರೆಡ್ಡಿಯವರಿಗೆ ಹಿನ್ನೆಡೆಯಾಗಿತ್ತಾ ಶಾ ಸೂಚನೆ..?

ಈ ಹಿಂದೆ ಮಾಜಿ ಸಚಿವ ಗಣಿ ಧನಿ ಜನಾರ್ದನ ರೆಡ್ಡಿ ಅವರಿಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಹಿರಿಯ ಮುಖಂಡರು ಬಾರಿಯ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ಧಾರಿಯನ್ನು ಬೇಕು ಎಂದು ಸೂಚಿಸಿದ್ದರು ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುದ್ಧಿ ಗೋಷ್ಟಿಯಲ್ಲಿ ಜನಾರ್ದನ ರೆಡ್ಡಿಗೂ ಭಾರತೀಯ ಜನತಾ ಪಕ್ಷಕ್ಕೂ ಸಂಬಂಧವಿಲ್ಲ ಎಂಬ ಬಾಂಬ್ ಹಾಕಿ ಬಿಟ್ಟಿದ್ದರು. ಆದರೆ ಇದರ ಹಿಂದಿನ ಮರ್ಮವೇನು ಎಂಬುವುದು ಇನ್ನೂ ನಿಗೂಢ. ಇದರಿಂದ ರೆಡ್ಡಿ ಆಪ್ತ ಮಿತ್ರ ಬಳ್ಳಾರಿ ಸಂಸದ ಶ್ರೀ ರಾಮುಲು ಅವರಿಗೆ ಇರಿಸು ಮುರಿಸು ಉಂಟಾಗುತ್ತದೆ. ಸಹಜವಾಗಿ ಭಾರತೀಯ ಜನತಾ ಪಕ್ಷದ ನಾಯಕರ ಬಗ್ಗೆ ಬಳ್ಳಾರಿ ಸಂಸದ ಮುನಿಸಿಕೊಂಡಿದ್ದರು.

ಶ್ರೀ ರಾಮುಲು ಗೆ ಬಿಜೆಪಿ ನಾಯಕರಿಂದ ಬಿಗ್ ಲಿಫ್ಟ್!

ಮಾಜಿ ಸಚಿವ ಜನಾರ್ದನ ರೆಡ್ಡಿ ಗೆ ಈ ರೀತಿಯ ಶಾಕ್ ನ್ನು ಅದ್ಯಾವಾಗ ಅಮಿತ್ ಶಾ ಕೊಟ್ಟರೋ ಅಂದೇ ಶ್ರೀ ರಾಮುಲು ಕಸಿವಿಸಿಯಾಗಿದ್ದರು. ಆದರೆ ಇದರ ಮಧ್ಯೆ ಶ್ರೀ ರಾಮುಲು ಗೆ ಬಿಗ್ ಗಿಫ್ಟ್ ಒಂದು ಕಾದಿತ್ತು. ಜನಾರ್ದನ ರೆಡ್ಡಿ ಯವರನ್ನು ದೂರವಿಡುತ್ತೇವೆ ಎಂದು ಹೇಳಿದ್ದ ಬಿಜೆಪಿ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿದ್ದ ಶ್ರೀ ರಾಮುಲು ಗೆ ಮುಂದಿನ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರು ಬಳ್ಳಾರಿ ಸಂಸದ ಶ್ರೀ ರಾಮುಲು ಅವರಿಗೆ ಆಫರ್ ನ್ನು ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಬಾರಿ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ. ವೇಳೆ ನಿಮ್ಮನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂಬ ಭರವಸೆಯನ್ನು ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೀಡಿದ್ದಾರಂತೆ. ಇದಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರೂ ಓಕೆ ಎಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜನಾರ್ದನ ರೆಡ್ಡಿಯವರನ್ನು ಪಕ್ಷದಿಂದ ದೂರವಿಟ್ಟಿದ್ದೇವೆ ಎಂದು ಅಮಿತ್ ಶಾ ಹೇಳದ್ದರೂ ಕೂಡಾ ಆಂತರಿಕವಾಗಿ ಜನಾರ್ದನ ರೆಡ್ಡಿ ಅವರಿಂದ ಸಹಾಯವನ್ನು ಭಾರತೀಯ ಜನತಾ ಪಕ್ಷದ ನಾಯಕರು ಕೇಳಿದ್ದಾರೆ ಎನ್ನಲಾಗಿದೆ. ಈ ಬಾರಿ ಬಳ್ಳಾರಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹೋರಾಟವೂ ಇದೆ. ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಬಳ್ಳಾರಿ ಮತ್ತೆ ಸವಾಲಿನ ಕಣವಾಗಿ ಪರಿಣಮಿಸಿದೆ. ಹೀಗಿರುವಾಗ ಬಿಜೆಪಿಯ ಯಾವೊಬ್ಬ ನಾಯಕನನ್ನೂ ದೂರವಿಡುವ ಪ್ರಶ್ನೆಯೇ ಉದ್ಭವಿಸಲ್ಲ. ಹೀಗಾಗಿ ಜನಾರ್ದನ ರೆಡ್ಡಿಯವರನ್ನೂ ದೂರವಿಡುವ ಪ್ರಶ್ನೆ ಉದ್ಭವಿಸಲ್ಲ.

ಒಟ್ಟಾರೆ ಈ ಬಾರಿ ಶ್ರೀ ರಾಮುಲು ಅವರ ಮುಂದಾಳತ್ವದಲ್ಲಿ ಬಳ್ಳಾರಿ ಕದನ ನಡೆಯಲಿದ್ದು ಬಹುತೇಕ ಸ್ಥಾನಗಳನ್ನು ಗಳಿಸುವ ಲಕ್ಷಣಗಳೂ ಗೋಚರಿಸುತ್ತಿದೆ. ಹೀಗಾಗಿ ಮುಂದಿನ ಸರ್ಕಾರದಲ್ಲಿ ಶ್ರೀ ರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನದ ಪಟ್ಟ ಬಹುತೇಕ ಖಚಿತ ಎಂದೂ ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close