ಪ್ರಚಲಿತ

ಬ್ರೇಕಿಂಗ್! ಬಿಜೆಪಿ ಜೊತೆ ಕೈಜೋಡಿಸಿ ಮೈತ್ರಿ ಸರಕಾರ ಉರುಳಿಸುತ್ತಾರಾ ಸಿದ್ದರಾಮಯ್ಯ.! ತೆರೆಮರೆಯಲ್ಲಿ ನಡೆಯುತ್ತಿರುವ ರಾಜಕೀಯ ಆಟ ತಿಳಿದವರಾರು..?

ಅದ್ಯಾವ ಗಳಿಗೆಯಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತೋ ರಾಜ್ಯ ರಾಜಕಾರಣಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ. ರಾಜ್ಯದಲ್ಲಿ ಜನಾದೇಶದ ಪ್ರಕಾರ ಅಧಿಕಾರ ಹಿಡಿಯಬೇಕಿದ್ದ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕೈಜೋಡಿಸಿಕೊಂಡು ಜನರ ಅಭಿಪ್ರಾಯಕ್ಕೆ ಮಣ್ಣು ಹಾಕಿ ಅಧಿಕಾರದ ಆಸೆಗೆ ಬಿದ್ದು ಅಪವಿತ್ರ ಮೈತ್ರಿ ಮಾಡಿಕೊಂಡುಬಿಟ್ಟರು. ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಮುಂದುವರಿಸುವುದಾಗಿ ಎರಡೂ ಪಕ್ಷಗಳ ಮುಖಂಡರು ಲೆಕ್ಕಾಚಾರ ಹಾಕಿದ್ದರೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಂಟಕ ಮಾತ್ರ ತಪ್ಪಿದ್ದಲ್ಲ. ಯಾಕೆಂದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ ದಿನದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಮಧಾನಗೊಂಡಿದ್ದಾರೆ. ದಿನ ಕಳೆದಂತೆ ರಾಜ್ಯ ಸರಕಾರದ ವಿರುದ್ಧ ಅಸಮಧಾನ ಹೊರ ಹಾಕುತ್ತಲೇ ಇರುವ ಸಿದ್ದರಾಮಯ್ಯನನ್ನು ಮೈತ್ರಿ ಸರಕಾರ ಕ್ಯಾರೇ ಅನ್ನುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಇದೀಗ ಸಿದ್ದರಾಮಯ್ಯನವರು ಭಾರತೀಯ ಜನತಾ ಪಕ್ಷದ ಜೊತೆ ಕೈಜೋಡಿಸುತ್ತಾರಾ ಎಂಬ ಸಂಶಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.!

ವಿಧಾನಸಭಾ ಚುನಾವಣೆಯ ಫಲಿತಾಂಶವೇ ಮುಖ್ಯ ಕಾರಣ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತೊಡೆತಟ್ಟಿ ನಿಂತವರು. ಯಾವುದೇ ವಿರೋಧವನ್ನೂ ಲೆಕ್ಕಿಸದೆ ಕೇಂದ್ರ ಸರಕಾರವನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ದರಾಮಯ್ಯನವರಿಗೆ ವಿಧಾನಸಭಾ ಚುನಾವಣೆಯಲ್ಲಿ ವರದಾನವಾಗುತ್ತದೆ ಎಂಬ ಲೆಕ್ಕಾಚಾರವಿತ್ತು. ಆದರೆ ಸಿದ್ದಣ್ಣನ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು, ತಮ್ಮ ಹೇಳಿಕೆಗಳೇ ಮುಳುವಾಯಿತು ಎಂಬುದು ಸಿದ್ದರಾಮಯ್ಯನವರಿಗೆ ಚುನಾವಣೆಯ ಫಲಿತಾಂಶದ ದಿನ ಗೊತ್ತಾಗಿತ್ತು. ಯಾಕೆಂದರೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಮತ್ತು ಸಿದ್ದರಾಮಯ್ಯನವರು ತನ್ನ ಸ್ಥಾನ ಕಳೆದುಕೊಂಡು ಸ್ವತಃ ಪಕ್ಷದಿಂದಲೇ ಮೂಲೆಗುಂಪಾಗಿದ್ದರು. ಇತ್ತ ತನ್ನ ಬದ್ಧ ವೈರಿ ಕುಮಾರಸ್ವಾಮಿ ಅವರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅವರನ್ನೇ ಸಿಎಂ ಆಗಿ ನೇಮಿಸಿತ್ತು. ಆದ್ದರಿಂದಲೇ ಇದೀಗ ಸಿದ್ದರಾಮಯ್ಯನವರು ಮೈತ್ರಿ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂಶಯ ಉಂಟಾಗಿದ್ದು, ಇದಕ್ಕೆ ಪೂರಕ ಎಂಬಂತೆ ತಮ್ಮ ಬೆಂಬಲಿತ ಶಾಸಕರ ಜೊತೆ ಗೌಪ್ಯ ಸಭೆ ಕೂಡ ನಡೆಸಿದ್ದಾರೆ.!

ಬಿಜೆಪಿ ಜೊತೆ ಕೈಜೋಡಿಸುತ್ತಾರಾ ಮಾಜಿ ಸಿಎಂ..!

ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಲು ತಂತ್ರ ರೂಪಿಸುತ್ತಿದ್ದರೆ, ಇದೀಗ ಸಿದ್ದರಾಮಯ್ಯನವರ ನಡೆ ಗಮನಿಸಿದಾಗ ಇವರು ಬಿಜೆಪಿ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರಾ ಎಂಬ ಸಂಶಯ ಮೂಡುವುದು ಸಹಜ. ಯಾಕೆಂದರೆ ಸಿದ್ದರಾಮಯ್ಯನವರು ಬಿಜೆಪಿ ಜೊತೆ ಕೈಜೋಡಿಸಿದರೆ ಇತ್ತ ಮೈತ್ರಿ ಸರಕಾರ ಉರುಳುವುದು ಗ್ಯಾರಂಟಿ. ಸಿದ್ದರಾಮಯ್ಯನವರಿಗೂ ಬಿಜೆಪಿಯಲ್ಲಿ ಒಂದು ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಸಿದ್ದಣ್ಣನಲ್ಲೂ ಇರಬಹುದು. ಯಾಕೆಂದರೆ ಬಿಜೆಪಿ ಚಾಣಕ್ಯ ಅಮಿತ್ ಷಾ ಯಾವ ರೀತಿಯಲ್ಲಿ ತಂತ್ರ ರೂಪಿಸಿ ಮೈತ್ರಿ ಸರಕಾರ ಉರುಳಿಸುತ್ತಾರೆ ಎಂಬೂದು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯನವರ ಇತ್ತೀಚಿನ ನಡವಳಿಕೆ ಗಮನಿಸಿದಾಗ ಸರ್ಕಾರ ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂಬುದು ಮಾತ್ರ ಸ್ಪಷ್ಟ.!

 

ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಸಮ್ಮಿಶ್ರ ಸರಕಾರ ಮುಂದುವರಿಯಲು ಕಷ್ಟ ಎಂದು ಈಗಾಗಲೇ ಕಾಂಗ್ರೆಸ್‌ನ ಕೆಲ ಶಾಸಕರು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬಿಜೆಪಿ ಹೈಕಮಾಂಡ್ ಚಮತ್ಕಾರ ಸೃಷ್ಟಿಸಬಹುದು.!

source:
https://m.dailyhunt.in/news/india/kannada/oneindia+kannada-epaper-thatskannada/sittaadha+siddaraamayya+bijepiya+kendra+naayakarige+dil-newsid-91124257?ss=wsp&s=a

–ಅರ್ಜುನ್

Tags

Related Articles

Close