ಪ್ರಚಲಿತ

2018 ರ ಬಜೆಟ್ ನಲ್ಲಿ ಏನೇನಿದೆ ಗೊತ್ತಾ? ಅರ್ಥವಾಗಿಲ್ಲವೇ ? ಹಾಗದರೆ ಇಲ್ಲಿದೆ ಸರಳವಾದ ವಿವರಣೆ

1.ಈ ಸಲದ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು.
2.ಹಿರಿಯ ನಾಗರಿಕರ ಮೇಲೆ ವಿಶೇಷವಾದ ಕಾಳಜಿ ಮತ್ತು ಸೌಲಭ್ಯಗಳ ಬಗ್ಗೆ ಒತ್ತು.
3.ಬಡವರಿಗಾಗಿ ಜನೌಷಧಿ ಕೇಂದ್ರಗಳ ಸ್ಥಾಪನೆ!
4.ಒಂದೇ ದಿನದಲ್ಲಿ ಪಾಸ್ ಪೋರ್ಟ್ ವ್ಯವಸ್ಥೆ!
5.ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಮನೆಯ ವ್ಯವಸ್ಥೆ.
6.ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಒತ್ತು.
7.ಉಜ್ವಲ ಯೋಜನೆ ಮೂಲಕ ಗ್ಯಾಸ್ ಅನಿಲಗಳ ವಿತರಣೆ!
8. 275 ಮಿಲಿಯನ್ ಟನ್ ಗಳಷ್ಟು ಆಹಾರ ಉತ್ಪಾದನೆ!
9. ಕೃಷಿ ಉತ್ಪಾದನಾ ದರ ಶೇ 1.5 ರಷ್ಟು ಇಳಿಕೆಗೆ ಕ್ರಮ!
10.ಕೃಷಿ ಬೆಂಬಲ ಬೆಲೆ ನೇರ ರೈತರಿಗೆ ಸಿಗುವಂತೆ ಕ್ರಮ.
11.2020 ರ ಅಷ್ಟೊತ್ತಿಗೆ ರೈತರಿಗೆ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ!
12.ಎಪಿಎಂಸಿ ಮಾರುಕಟ್ಟೆಗಳನ್ನು ಇ – ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ.
13. 470 ಎಪಿಎಂಸಿಗಳನ್ನು ಇ-ನಾಮ್ ನೊಂದಿಗೆ ಜೋಡಣೆ ಮಾಡಲು ಅಗತ್ಯ ಕ್ರಮ.
14.ಎಲ್ಲಾ ಬೆಳೆಗಳು ಎಂ ಎಸ್ ಪಿ ವ್ಯಾಪ್ತಿಗೆ.
15. 22 ಸಾವಿರ ಗ್ರಾಮೀಣ ಕೃಷಿ ಮಾರುಕಟ್ಟೆಗಳಿಗೆ ಎಪಿಎಂಸಿ ಆದ್ಯತೆ.
16. ಕೃಷ್ಟಿ ಮಾರುಕಟ್ಟೆ ಅಭಿವೃದ್ಧಿಗಾಗಿ 22 ಸಾವಿರ ಕೋಟಿ ರೂ ಅನುದಾನ ಘೋಷಣೆ!!
17.ಜೈವಿಕ ಕೃಷಿಗೆ ಹೆಚ್ಚಿನ ಒತ್ತು!18.ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ! ರೈತರಿಗೆ ಬೆಳೆಗಳನ್ನು ಸಂಗ್ರಹಿಸಿಡಲು ಬೇಕಾದ ಅಗತ್ಯ ವ್ಯವಸ್ಥೆಗಳಿಗೆ ಪೂರಕವಾಗಿ ಬಜೆಟ್ ಮಂಡನೆ.
19. 42 ಮೆಗಾ ಫುಡ್ ಪಾರ್ಕ್ ಗಳ ಘೋಷಣೆ!
20.ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಲಯಕ್ಕೆ ಕೃಷಿ ಕಾರ್ಡ್ ವಿಸ್ತರಣೆ! ಮತ್ತು 10 ಸಾವಿರ ಕೋಟಿ ರೂ ಬಿಡುಗಡೆ!
21. ಟೋಮ್ಯಾಟೋ, ಆಲೂಗಡ್ಡೆ ಮತ್ತು ಈರುಳ್ಳಿಗೆ ಫುಡ್ ಪಾರ್ಕ್ ಸ್ಥಾಪನೆ!ಆಪರೇಷನ್ ಗ್ರೀನ್ ಗಾಗಿ 500 ಕೋಟಿ ರೂ ಘೋಷಣೆ!
22.ಕೃಷಿಗಾಗಿ ಹನ್ನೊಂದು ಲಕ್ಷ ಕೋಟಿ ಸಾಲದ ಗುರಿ!
ಬಡವರಿಗೆ ಬಂಪರ್ :
8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ!
2 ಕೋಟಿ ಹೊಸ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ!
51 ಲಕ್ಷ ಹೊಸ ಮನೆಗಳ ನಿರ್ಮಾಣ!
11 ಲಕ್ಷ ಮೊತ್ತದ ಕೃಷಿ ಸಾಲ ವಿತರಿಸುವ ಗುರಿ!
4 ಕೋಟಿ ಬಡವರ ಮನೆಗಳಿಗೆ ವಿದ್ಯುತ್!
ಗ್ರಾಮೀಣಾಭಿವೃದ್ಧಿಗಾಗಿ 14.34 ಲಕ್ಷ ಕೋಟಿ ರೂ ಗಳಷ್ಟು ಬಿಡುಗಡೆ!

ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಸುಧಾರಣ ಕ್ರಮಗಳು
– ಬಡತನ ನಿರ್ಮೂಲನೆಗೆ ಆದ್ಯತೆ
– ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ
– ಭಾರತದ ಆರ್ಥಿಕತೆ ಉತ್ತಮವಾಗುತ್ತಾ ಸಾಗುತ್ತಿದೆ
– ಬಡವರಿಗೆ, ಮಧ್ಯಮ ವರ್ಗದವರಿಗೆ ಅವಾಸ್ ಯೋಜನೆ
– ಉದ್ಯಮ ಸ್ಥಾಪನೆ ಸುಲಭ, ಒಂದು ದಿನದಲ್ಲಿ ಕಂಪನಿ ನೋಂದಣಿ
– ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿ
– ದೇಶದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಶ್ರಮ
– ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮ
– ರಚನಾತ್ಮಕ ಸುಧಾರಣೆಗಳ ಯಶಶ್ವಿಯಾಗಿ ಜಾರಿ
– 2018-19ನೇ ಸಾಲಿನ ದ್ವಿತೀಯಾರ್ಧದಲ್ಲಿ ದೇಶದ ಜಿಡಿಪಿ ಶೇ. 7.2 ರಿಂದ 7.5ಕ್ಕೆ ಏರಿದೆ
– ಕೃಷಿ ಅಭಿವೃದ್ಧಿಗೆ ಹೆಚ್ಚು ಆಧ್ಯತೆ
– ನೇರ ನಗದು ವರ್ಗಾವಣೆ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ
– ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಪ್ರಾರಂಭ
– ಆಹಾರ ಸಂಸ್ಕರಣೆಗೆ ಆಧ್ಯತೆ, ಅಗ್ರೊ ಪ್ರೊಸೆಸಿಂಗ್ ಪ್ರಕ್ರಿಯೆಗೆ ಮಹತ್ವ
– ಕೃಷಿಕರ ಆದಾಯ ದ್ವಿಗಣನೆಗೆ ಪ್ರಾಮುಖ್ಯತೆ
– ನೀರಾವರಿ, ಸಣ್ಣ ನೀರಾವರಿ, ಡೈರಿ ಫಾರ್ಮಿಂಗ್

ಸಾವಯವ ಕೃಷಿಗೆ ಆಧ್ಯತೆ
ಈ ಬಾರಿಯ ಬಜೆಟನಲ್ಲಿ ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.ಆ ಮೂಲಕ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ.

ಆಹಾರ ಸಂಸ್ಕರಣೆ
ಸುಮಾರು ಒಂದು ಸಾವಿರ ಹೆಕ್ಟೆರ್ ಪ್ರದೆಶದಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದೆ, ರೈತರಿಗೆ ಉತ್ತಮ ಬೆಲೆ ನಿಗದಿಗೆ ಆದ್ಯತೆ ನೀಡಲಾಗಿದೆ ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನದಲ್ಲಿ ಹೆಚ್ಚಳವಾಗಲಿದೆ.

ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ
ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸರ್ಕಾರ ರೂ. 2,000 ಕೋಟಿ ಮೊತ್ತದಲ್ಲಿ ‘ಕೃಷಿ ಮಾರುಕಟ್ಟೆ ನಿಧಿ’ ನಿಗದಿ ಪಡಿಸಿದೆ. ಬಿದಿರು ಕೃಷಿಗಾಗಿ ನಿಧಿ ಮೀಸಲಿಡಲಾಗಿದೆ.

ಮೀನುಗಾರಿಕೆ, ಪಶುಸಂಗೋಪನೆಗೆ ಅನುದಾನ
ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಸೇರಿದಂತೆ ಹಲವು ಮೂಲಸೌಲಭ್ಯ ಅಭಿವೃದ್ಧಿಗೆ ರೂ. 10 ಸಾವಿರ ಕೋಟಿ ಅನುದಾನ.

ಅಪರೇಷನ್ ಗ್ರೀನ್
ರೂ. 500 ಕೋಟಿ ಆನುದಾನದಲ್ಲಿ ಅಪರೇಷನ್ ಗ್ರೀನ್ ಯೋಜನೆಯ ಪ್ರಸ್ತಾವ ಮಾಡಿದರು.

ಉಚಿತ ಅಡುಗೆ ಅನಿಲ
ಬಡ ಕುಟುಂಬದ ಎಂಟು ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಜೇಟ್ಲಿ ಹೇಳಿದರು. ಶೀಘ್ರದಲ್ಲೇ 42 ಪುಡ್ ಪಾರ್ಕ್ ಪ್ರಾರಂಭ ಮಾಡಲಾಗುವದೆಂದರು.

ರೈತರ ಸಾಲ
ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ.

33 ಲಕ್ಷ ಮನೆ ನಿರ್ಮಾಣ
ಎಲ್ಲರಿಗೂ ಮನೆ ಸಿಗಬೇಕು ಎನ್ನುವುದು ಸರ್ಕಾರದ ಕನಸು. 2022ರವರೆಗೆ ಸುಮಾರು 33 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋರ್ಡ್
ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೇ ಕೊಡಲಾಗಿದೆ. 20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಯ್ಲಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಸೌಲಭ್ಯ ಕಲ್ಪಿಸಿದ್ದಾರೆ.

ಆರು ಕೋಟಿ ಶೌಚಾಲಯಗಳ ನಿರ್ಮಾಣ
ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಆರು ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆ
ರಾಷ್ಟ್ರೀಯ ಆರೋಗ್ಯ ಯೋಜನೆ ಮೂಲಕ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನ ನೀಡಿದ್ದಾರೆ

ಏಕಲವ್ಯ ವಸತಿ ನಿಲಯ
ಬುಡಕಟ್ಟು, ವನವಾಸಿ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ನಿಲಯ ಸ್ಥಾಪನೆ ಮಾಡಲಾಗುವದೆಂದು ಹೇಳಿದರು.

ಆರೋಗ್ಯ ವಿಮೆ
ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ರೂ. 1200 ಕೋಟಿ ಅನುದಾನ ಬಿಡುಗಡೆ. ಅತಿಹೆಚ್ಚು ಮೊತ್ತದ ಆರೋಗ್ಯ ವಿಮೆ ಸೌಲಭ್ಯವನ್ನು 50 ಲಕ್ಷ ಜನರಿಗೆ ಈ ಯೋಜನೆಯಡಿ ನೀಡಲಾಗುವುದು. ಒಂದು ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸಲಾಗುವುದು. ಈ ಯೋಜನೆ 10 ಕೋಟಿ ಕುಟುಂಬಗಳಿಗೆ ಸಿಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಎಸ್ಸಿ ಮತ್ತು ಎಸ್ಟಿ ಅನುದಾನ
ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ರೂ.56,619 ಕೋಟಿ ಹಾಗು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ರೂ. 39,135 ಕೋಟಿ ಘೋಷಣೆ ಮಾಡಲಾಗಿದೆ.

ಉದ್ಯೋಗಸೃಷ್ಟಿಗೆ ಕ್ರಮ
ಈ ಸಾಲಿನಲ್ಲಿ ಸುಮಾರು 70 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು. ಸಣ್ಣ, ಅತೀ ಸಣ್ಣ, ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು ಹಾಗು ಸಾರ್ವಜನಿಕ ಹೂಡಿಕೆಗೆ ಒತ್ತು ನೀಡಲಾಗುವುದು.

ಮುದ್ರಾ ಯೋಜನೆ
ಕೇಂದ್ರ ಸರ್ಕಾರದ ಬಹುಮುಖ್ಯ ಯೋಜನೆಯಾದ ಮುದ್ರಾ ಯೋಜನೆಗೆ ರೂ. 3 ಲಕ್ಷ ಕೋಟಿ ಅನುದಾನ ನೀಡಲಾಗಿದೆ.

ಅಮೃತ್ ಯೋಜನೆ
ಸುಮಾರು 500 ನಗರಗಳಲ್ಲಿನ ಮನೆಗಳಿಗೆ ನೀರು ಸೌಲಭ್ಯ ವಿತರಣೆಗಾಗಿ ಅಮೃತ್ ಯೋಜನೆ ಪ್ರಾರಂಭ ಮಾಡಲಾಗುವದೆಂದರು

ಸಿಸಿಟಿವಿ, ವೈಫೈ ಸೌಲಭ್ಯ
ದೇಶದ ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗು ವೈಫೈ ಸೌಲಭ್ಯ ಅಳವಡಿಸಲಾಗುವುದು. ಅಲ್ಲದೆ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 25,000 ಎಸ್ಕಲೇಟರ್ ವ್ಯವಸ್ಥೆ ಮಾಡಲಾಗುವುದು.

ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ
ದೇಶದ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುವುದು. ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವುದಾಗಿ ಪ್ರಸ್ತಾಪ.

ರೇಲ್ವೆ ಸುರಕ್ಷತೆ
ಪ್ರಸ್ತುತ ಬಜೆಟ್ ನಲ್ಲಿ ಜೇಟ್ಲಿ ಅವರು ರೇಲ್ವೆ ಸುರಕ್ಷತೆ ಹೆಚ್ಚು ಆದ್ಯತೆ ನೀಡಲಾಗುವುದು. ಜತೆಗೆ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು. 600 ಪ್ರಮುಖ ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

credit : WA

Tags

Related Articles

Close