ಪ್ರಚಲಿತ

ಸಾವಿರಾರು ಕಾರ್ಯಕರ್ತರ ಜೊತೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ಮುಂದಾದ ಅಧ್ಯಕ್ಷ..?! ಕರಾವಳಿಯಲ್ಲಿ ಭುಗಿಲೆದ್ದ ಕೈ ಆಕ್ರೋಶ.!

ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಕೇಳಿದರೆ ಸಿಗುವ ಉತ್ತರ ಒಂದೇ ಚುನಾವಣೆ , ಚುನಾವಣೆ, ಚುನಾವಣೆ. ಇಡೀ ರಾಜ್ಯದಲ್ಲಿ ದಿನಬೆಳಗಾದರೆ ಸಾಕು ವಿಧಾನಸಭಾ ಚುನಾವಣೆಯ ಗದ್ದಲವೇ ಕೇಳಿಬರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿವೆ. ಕರ್ನಾಟಕವನ್ನು ಹೇಗಾದರೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಅಧಿಕಾರ ನಡೆಸಲು ಪಣ ತೊಟ್ಟಿವೆ. ಇತ್ತ ಆಡಳಿತ ರೂಢಿ ಕಾಂಗ್ರೆಸ್ ವಿರುದ್ಧ ಜನತೆ ತಿರುಗಿಬಿದ್ದಿದ್ದು, ಕಾಂಗ್ರೆಸ್ ಗೆ ಸೋಲಿನ ಭೀತಿ ಮತ್ತಷ್ಟು ಹೆಚ್ಚಿದೆ. ಯಾಕೆಂದರೆ ಒಂದೆಡೆ ಕಾಂಗ್ರೆಸ್ ಗೆ ರಾಜ್ಯದ ಜನತೆಯ ತಲೆನೋವಾದರೆ ಇತ್ತ ಸ್ವತಃ ಕಾಂಗ್ರೆಸ್ ಪ್ರಭಾವಿ ನಾಯಕರೇ ಪಕ್ಷ ಬಿಟ್ಟು ಬೇರೆ ಪಕ್ಷದ ಕಡೆ ಮುಖ ಮಾಡಿ ನಿಂತಿದ್ದಾರೆ.!

ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಂಡಾಯ ಎದ್ದಿದ್ದು, ಕಾಂಗ್ರೆಸ್ ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಟಿಕೆಟ್ ನೀಡಲಾಗುತ್ತದೆ ಎಂದು ಬೇಕಾಬಿಟ್ಟಿ ಆಡಿಸಿ ಇದೀಗ ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೆ ವಂಚಿಸಿರುವುದು ಟಿಕೆಟ್ ಆಕಾಂಕ್ಷೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಯುವ ನಾಯಕನ ಸೈನ್ಯ ಬಿಜೆಪಿಯ ಕಡೆಗೆ..!

ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳಲ್ಲೂ ಯುವಕರ ಪಾತ್ರ ಬಹಳ ಪ್ರಮುಖವಾದದ್ದು. ಯಾಕೆಂದರೆ ಪ್ರತೀ ಪಕ್ಷದ ಪ್ರಚಾರ ಕಾರ್ಯದಲ್ಲೂ ಯುವ ಪಡೆ ಹೆಚ್ಚಿನ ಉತ್ಸಾಹದಿಂದ ಅಖಾಡಕ್ಕೆ ಇಳಿಯುತ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನ ಅಧ್ಯಕ್ಷ ಮಿಥುನ್ ರೈ ಇದೀಗ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದ ಕಡೆ ಮುಖ ಮಾಡಿ ನಿಂತಿದ್ದಾರೆ. ಯಾಕೆಂದರೆ ಮಿಥುನ್ ರೈ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡು ಪಕ್ಷ ಹಾಗು ಯುವಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದರು. ಆ ಭಾಗದಲ್ಲಿ ಮಿಥುನ್ ರೈ ಕಾಂಗ್ರೆಸ್ ಅಭ್ಯರ್ಥಿ ಎಂದೇ ಮನೆ ಮಾತಾಗಿತ್ತು. ಆದರೆ ಲೆಕ್ಕಾಚಾರ ಎಲ್ಲಾ ಉಲ್ಟಾ ಹೊಡೆದಿದೆ. ಯಾಕೆಂದರೆ ಕ್ಷೇತ್ರದ ಕಾಂಗ್ರೆಸ್ ಶಾಸಕರ ದುರಾಸೆಗೆ ಮಿಥುನ್ ರೈ ಬಲಿಯಾಗಿದ್ದಾರೆ. ಈವರೆಗೂ ಯುವ ನಾಯಕನಿಗೆ ಈ ಬಾರಿ ಮಣೆ ಹಾಕಲಾಗುತ್ತದೆ ಎಂದು ಕುಣಿಸಿದ ಕಾಂಗ್ರೆಸ್, ಇದೀಗ ಕೊನೆಯ ಹೊತ್ತಿಗೆ ತಿರುಗಿಬಿದ್ದಿದೆ. ಆದ್ದರಿಂದಲೇ ಕಾಂಗ್ರೆಸ್ ನ ಈ ನೀತಿಗೆ ಬೇಸತ್ತ ಮಿಥುನ್ ರೈ ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ತಯಾರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.!

ಮಿಥುನ್ ರೈ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಇದ್ದುಕೊಂಡು ಕರಾವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದರು. ಯುವಕರು ರೈ ಬೆನ್ನ ಹಿಂದೆ ನಿಂತು ಎಲ್ಲಾ ಕೆಲಸಗಳಿಗೂ ತಯಾರಾಗಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ನೀಡದೇ ಇರುವುದರಿಂದ ಮಿಥುನ್ ರೈ ಹಾಗೂ ಬೆಂಬಲಿಗರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಒಂದು ವೇಳೆ ಮಿಥುನ್ ರೈ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇ ಆದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಕಾಂಗ್ರೆಸ್ ತೊರೆಯುವುದು ಖಚಿತ. ಯುವಕರನ್ನು ಕಳೆದುಕೊಂಡು ಅಖಾಡಕ್ಕಿಳಿಯುವ ಧೈರ್ಯ ಕಾಂಗ್ರೆಸ್ ನಾಯಕರಲ್ಲೂ ಇಲ್ಲ. ಈಗಾಗಲೇ ಪಕ್ಷದ ವಿರುದ್ಧ ಅಸಮಧಾನ ಹೊರಹಾಕಿದ ಮಿಥುನ್ ರೈ ಮುಂದಿನ ನಡೆ ಏನೆಂಬೂದು ಕಾದು ನೋಡಬೇಕಾಗಿದೆ.!

ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಗೆ ಬಂಡಾಯದ ಬಿಸಿ ಜೋರಾಗಿಯೇ ತಟ್ಟಿದ್ದು, ಪ್ರಭಾವಿ ನಾಯಕರ ದಂಡೇ ಬಿಜೆಪಿಯ ಕಡೆ ಬರುತ್ತಿದೆ. ಎಲ್ಲಾ ರೀತಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಕುತೂಹಲ ಕೆರಳಿಸುತ್ತಿದ್ದು, ಪಕ್ಷದ ಮುಖಂಡರ ನಡೆಯೂ ಭಾರೀ ಕೋಲಾಹಲ ಉಂಟು ಮಾಡಿದೆ.!

–ಅರ್ಜುನ್

 

Tags

Related Articles

Close