ಪ್ರಚಲಿತ

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

ಅಧ್ಯಾಯ 19: ವಸುಧೈವ ಕುಟುಂಬಕಂ, ವಿಶ್ವಗುರು ಭಾರತ ಇದು ಆರೆಸ್ಸೆಸ್ ನ ಸಿದ್ಧಾಂತ! ವಿರೋಧಿಗಳ ಸಿದ್ಧಾಂತ ವೇನು?

ಭಾರತೀಯರಲ್ಲಿ ಒಂದು ಅಭ್ಯಾಸವಿದೆ. ನಮಗೆ ಪಾಶ್ಚಾತ್ಯರು ಒಪ್ಪಿಕೊಂಡ ವಿಷಯಗಳು ಸರ್ವಥಾ ಒಪ್ಪಿತ. ಆರೆಸ್ಸೆಸ್ ಬಗ್ಗೆಯೂ ಹಲವರು ತಮ್ಮ ವಿಚಾರಧಾರೆಗಳನ್ನು ಬದಲಿಸಿಕೊಳ್ಳಬೇಕು ಏಕೆಂದರೆ ಆರೆಸ್ಸೆಸ್ ಈಗ ಹಲವಾರು ವಿಶ್ವ ವಿದ್ಯಾಲಯಗಳಲ್ಲಿ ಕಲಿಕೆಯ ವಿಷಯವಾಗಿದೆ.ಆರೆಸ್ಸೆಸ್ ರೂಪುಗೊಂಡ ರೀತಿ, ಅದರ ತತ್ವ ಸಿದ್ಧಾಂತ, ಹೇಗೆ ಹೊಸ ಆಯಾಮಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತಾ ಇಂದಿಗೂ ಸಂಘವು ಪ್ರಸ್ತುತ ಎಂಬ ವಿಷಯ ಅಧ್ಯಯನ ಯೋಗ್ಯವೇ!
ರಾಷ್ಟ್ರ ಸಂತ್ ತುಕ್ದೋಜಿ ಮಹಾರಾಜ್ ನಾಗ್ಪುರ ಯೂನಿವರ್ಸಿಟಿ (RTMNU) ಇತ್ತೀಚೆಗೆ ಸುದ್ದಿಯಾಯಿತು. ಯಾವಾಗಲೂ ಶೈಕ್ಷಣಿಕ ಸಾಧನೆಗಳು ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗಳಿಗೆ ಸುದ್ಧಿ ಮಾಡುವ ಈ ವಿಶ್ವವಿದ್ಯಾಲಯ, ಈ ಬಾರಿ ಆರೆಸ್ಸೆಸ್ ಹಾಗೂ ದೇಶ ನಿರ್ಮಾಣದಲ್ಲಿ ಅದರ ಕೊಡುಗೆ ಎಂಬ ವಿಷಯವನ್ನು ಪ್ರಥಮ ವರ್ಷದ ಬಿಎ ಪಠ್ಯಕ್ರಮದಲ್ಲಿ ಅಳವಡಿಸಿದ ಕ್ರಮಕ್ಕಾಗಿ ವಿವಾದಕ್ಕೆ ಗುರಿಯಾಯಿತು.

ಆರೆಸ್ಸೆಸ್ ನ ವಿರೋಧಿಗಳು, ಸೀದಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಬೇಡಿಕೆ ಒಂದೇ ಆರೆಸ್ಸೆಸ್ ನಂತಹ ಸಂಘಟನೆಯ ಬಗ್ಗೆ ಪಠ್ಯಕ್ರಮವನ್ನು ಬೋಧಿಸುವುದು ತಪ್ಪು ಹಾಗಾಗಿ ಶೀಘ್ರವಾಗಿ RTMNU ಅದ ವಿಷಯವನ್ನು ಕೈ ಬಿಡುವಂತೆ ಆಗ್ರಹಿಸಿತ್ತು.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಕಲಿಸುವುದಾದರೆ ಆರೆಸ್ಸೆಸ್ ಹೇಗೆ 1942 ರ ಕ್ವಿಟ್ ಇಂಡಿಯಾ ಚಳುವಳಿಯ ವಿರೋಧಿಸಿತ್ತು, ಹೇಗೆ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿತ್ತು ಎಂದು ಕಲಿಸಿ ಎಂಬ ಹೇಳಿಕೆಯನ್ನು ನೀಡಿದರು.ಆದರೆ ಈ ಲೇಖನ ಮಾಲೆಯ ಹಿಂದಿನ ಲೇಖನಗಳಲ್ಲಿ ನಾವಾಗಲೇ ಹೇಗೆ ಈ ಎಲ್ಲಾ ಆರೋಪಗಳು ಸುಳ್ಳು ಎಂಬುದನ್ನು ನಿರೂಪಿಸಿ ತೋರಿಸಿದ್ದೇವೆ.ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ನಂತರವೂ ಸಂಘದ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ 1949ರಲ್ಲಿ ಸಂಘದ ಸಂವಿಧಾನ ರಚನೆಯಾದಾಗ ‘ಸಂಘದ ಸ್ವಯಂಸೇವಕನು ರಾಜಕೀಯದಲ್ಲಿ ಸಕ್ರಿಯನಾಗಬಯಸಿದರೆ ಆತ ಯಾವುದೇ ಪಕ್ಷಕ್ಕೆ ಸೇರಬಹುದು’ ಎಂದು ಸ್ಪಷ್ಟವಾಗಿಯೇ ಹೇಳಲಾಗಿದೆ. ಈ ಸಂವಿಧಾನ ಭಾರತೀಯ ಜನಸಂಘದ ಆರಂಭಕ್ಕೂ ಮೊದಲೇ ರಚನೆಯಾದದ್ದು. ಜನಸಂಘದ ಸ್ಥಾಪನೆಯ ನಂತರ ಅನೇಕ ಸ್ವಯಂಸೇವಕರು ಹಾಗೂ ಪ್ರಚಾರಕರು ಅದಕ್ಕಾಗಿ ಕೆಲಸ ಮಾಡುತ್ತಿದ್ದ ಹೊರತಾಗಿಯೂ ಈ ನಿಲುವಿನಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಇರುವುದು ಸ್ವಾಭಾವಿಕ. ಸಂಘವು ಇಡೀ ಸಮಾಜದ ಸಂಘಟನೆಯಾದ ಕಾರಣದಿಂದಾಗಿ ಸ್ವಾಭಾವಿಕವಾಗಿ ಸಮಾಜದ ಯಾವ ಕ್ಷೇತ್ರವೂ ಸಂಘದ ಸ್ಪರ್ಶಕ್ಕೊಳಪಡದೇ ಇರುವುದಿಲ್ಲ. ಸಂಘದ ಸ್ವಯಂಸೇವಕರು ರಾಜಕೀಯವೂ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಪಾಲ್ಗೊಳ್ಳುವರು. ಹಾಗಾಗಿ ಕೆಲವು ಸ್ವಯಂಸೇವಕರು ರಾಜಕೀಯವಾಗಿ ಸಕ್ರಿಯರಾಗಿದ್ದಾರೆಂಬ ಮಾತ್ರಕ್ಕೆ ಸಂಘ ರಾಜಕೀಯ ಮಾಡುತ್ತದೆ ಎನ್ನುವುದು, ಸಂಘವನ್ನು ರಾಜಕೀಯ ಪಕ್ಷ ಎನ್ನುವದು ಎನ್ನುವುದು ಸರಿಯಲ್ಲ. ರಾಜಕೀಯ ಪಕ್ಷವೊಂದು ಸಮಾಜದ ಒಂದು ಭಾಗವನ್ನಷ್ಟೇ ಪ್ರತಿನಿಧಿಸುತ್ತದೆ. ಅದಲ್ಲದೇ, ಸಮಾಜಕ್ಕೆ ಬೇರೆ ಮುಖಗಳೂ ಇರುತ್ತವೆ. ಆದರೆ ಸಂಘವು ಸಂಪೂರ್ಣ ಸಮಾಜದ ಸಂಘಟನೆ ಎನ್ನುವಾಗ ಈ ‘ಸಂಪೂರ್ಣ’ವು ಯಾವುದೋ ಒಂದು ‘ಭಾಗ’ದ ಭಾಗವಾಗಲು ಹೇಗೆ ಸಾಧ್ಯ?1925ರಲ್ಲಿ ಸಂಘ ಸ್ಥಾಪನೆಯಾದ ತರುವಾಯ 1930ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳವಳಿಯ ಕರೆಗೆ ಓಗೊಟ್ಟು ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರರೂ ಸೇರಿದಂತೆ ಹಲವಾರು ಸ್ವಯಂಸೇವಕರು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಈ ಮುನ್ನ ಡಾ. ಹೆಡಗೇವಾರರು ಸಂಘದ ಸರಸಂಘಸಂಚಾಲಕತ್ವವನ್ನು ಡಾ. ಪರಾಂಪಜೆಯವರಿಗೆ ವಹಿಸುವ ಮೂಲಕ ತಾನು ವೈಯಕ್ತಿಕ ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇನೆಂಬ ಸ್ಪಷ್ಟ ಸಂದೇಶ ನೀಡಿದರು. ಇದಕ್ಕಾಗಿ ವರ್ಷಗಳ ಕಾಲ ಅವರು ಕಾರಾಗೃಹವಾಸವನ್ನೂ ಅನುಭವಿಸಿದರು.

ಸ್ವಾತಂತ್ರ್ಯದ ನಂತರ ಸರ್ದಾರ್ ಪಟೇಲರು ಸಂಘವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವಂತೆ ಕೇಳಿದ್ದರು. ಆದರೆ ಶ್ರೀ ಗುರೂಜಿಯವರು ಸಂಘವು ಇಡೀ ಸಮಾಜದ ಸಂಘಟನೆಯಾಗಬಯಸುತ್ತದೆಯೇ ಹೊರತು ರಾಜಕೀಯ ಪಕ್ಷವೊಂದಕ್ಕೆ ಸೀಮಿತವಾಗುವುದಿಲ್ಲವೆಂದು ಹೇಳಿ ಈ ಪ್ರಸ್ತಾವವನ್ನು ನಿರಾಕರಿಸಿದ್ದರು. ಕೆಲವು ವರ್ಷಗಳ ನಂತರ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರು ಗುರೂಜಿಯವರನ್ನು ಭೇಟಿ ಮಾಡಿ, ಸೂಕ್ತವಾದ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ರಾಜಕೀಯ ಪಕ್ಷದ ಅನಿವಾರ್ಯತೆ ಇರುವುದರಿಂದ ಸಂಘವು ಆ ಜಾಗವನ್ನು ತುಂಬುವಂತೆ ಸಲಹೆ ನೀಡಿದರು. ಈ ಸಲಹೆಗೆ ಪ್ರತಿಯಾಗಿ ಗುರೂಜಿಯವರು ಮುಖರ್ಜಿಯವರೇ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕೆಂದೂ ಸಂಘವು ಅಗತ್ಯವಾದ ಎಲ್ಲಾ ಸಹಾಯ ಮಾಡುವುದೆಂದೂ ಹೇಳಿದರು. ಆದರೂ ಸಂಘವು ಇಡೀ ಸಮಾಜದ ಸಂಘಟನೆಯ ತನ್ನ ಕಾರ್ಯವನ್ನೇ ಮುಂದುವರಿಸುತ್ತದೆ ಎಂದು ತಿಳಿಸಿದರು.

2018ರಲ್ಲಿ ಅಖಿಲ ಭಾರತ ಪ್ರತಿನಿಧಿ ಸಭೆ(ABPS)ಯು ನಾಗಪುರದಲ್ಲಿ ಆಯೋಜನೆಗೊಂಡಿತ್ತು. ಹಿರಿಯ ಸ್ವಯಂಸೇವಕ ಎಂ. ಜಿ. ವೈದ್ಯ ಅವರು ಸರಕಾರ್ಯವಾಹರ ಆಹ್ವಾನದ ಮೇರೆಗೆ ಅದರಲ್ಲಿ ಭಾಗವಹಿಸಿದ್ದರು. (ಅವರು 1931ರಲ್ಲಿ ತಮ್ಮ 8ನೇ ವರ್ಷ ವಯಸ್ಸಿಗೇ ಸ್ವಯಂಸೇವಕರಾದವರು) ಅದೇ ದಿನ ಅವರಿಗೆ 95ವರ್ಷಗಳು ಪೂರ್ಣಗೊಳ್ಳುತ್ತಿದ್ದ ಕಾರಣ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತರು ವೈದ್ಯರನ್ನು ಸನ್ಮಾನಿಸಿದರು. ಆ ನಂತರ ಮಾತನಾಡಿದ ಎಂ. ಜಿ. ವೈದ್ಯರು, “ಸಂಘವನ್ನು ಅರ್ಥೈಸಿಕೊಳ್ಳುವುದು ಸುಲಭಸಾಧ್ಯವಾದ ಕೆಲಸವಲ್ಲ ಹಾಗೂ ಪಾಶ್ಚಾತ್ಯರ ದ್ವಂದ್ವಾತ್ಮಕ (binary) ದೃಷ್ಟಿಕೋನದ ಮೂಲಕವಂತೂ ಇದು ಅಸಾಧ್ಯವೇ ಸರಿ. ಏಕಾತ್ಮ (integral) ವಾದ ಭಾರತೀಯ ದೃಷ್ಟಿಯಿಂದ ಮಾತ್ರ ಸಂಘವನ್ನು ಅರಿಯುವುದು ಸಾಧ್ಯ” ಎಂದಿದ್ದರು.
ಆರೆಸ್ಸೆಸ್ ನ ಸಂಸ್ಥಾಪಕರಾದ ಡಾಕ್ಟರ್ ಜೀ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಮ್ಮಲ್ಲಿ ಕಾಲೇಜ್ ಆಫ್ ಆರ್ಟ್ಸ್ ಬಹಳಷ್ಟಿವೆ, ಕಾಲೇಜ್ ಆಫ್ ಹಾರ್ಟ್ಸ್ ಎಂಬುದಿಲ್ಲ. ಸಂಘ ಆ ಕೆಲಸವನ್ನು ನಿರ್ವಹಿಸಲಿದೆ.ವಿರೋಧಿಗಳು ಸಂಘದ ಬಗ್ಗೆ ಏನೇ ಹೇಳಲಿ ಸಂಘ ತನ್ನ ಕೆಲಸಗಳ ಮುಖಾಂತರ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

-Dr.Sindhu Prashanth

Tags

Related Articles

FOR DAILY ALERTS
Close