ಅಂಕಣ

ತನ್ನನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಕಾರಣ ಕರಾವಳಿಯ ಕುವರ ಅಪ್ಪಟ ದೇಶಭಕ್ತ ಜಾರ್ಜ್ ಫೆರ್ನಾಂಡಿಸ್ ಅವರನ್ನು ಕಡೆವರೆಗೂ ದೆವ್ವದಂತೆ ಕಾಡಿದರು “ಖಾನ್ ಗ್ರೆಸ್ಸಿನ” ಮೇಡಮ್ ಜಿ

ಕನ್ನಡ ಕರಾವಳಿಯ ಮಂಗಳೂರಿನ ಕ್ಯಾಥೋಲಿಕ್ ಪರಿವಾರದಲ್ಲಿ ಹುಟ್ಟಿದ ಜಾರ್ಜ್ ಫೆರ್ನಾಂಡಿಸ್ ಎಂದರೆ ಸಾಕು, ಕರ್ನಾಟಕ ಮಾತ್ರವಲ್ಲ ಇಡಿ ದೇಶದ ಜನರೆ ಕೈ ಮುಗಿಯುತ್ತಾರೆ. ಅಂತಹ ವ್ಯಕ್ತಿತ್ವ ಜಾರ್ಜ್ ರದ್ದು. ಈ ದೇಶಭಕ್ತರೆಂದರೆ ಹಾಗೆ, ಯಾರು ದೇಶವನ್ನು ಪ್ರೀತಿಸುತ್ತಾರೋ ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಾರೆ. ಜಾರ್ಜ್ ಮತ್ತು ಅಬ್ದುಲ್ ಕಲಾಂ ಅವರ “ಮತ” ಅವರನ್ನು ಪ್ರೀತಿಸುವ ದೇಶಭಕ್ತರಿಗೆ ಅಡ್ಡಿ ಎನಿಸುವುದೇ ಇಲ್ಲ!! ಅಟಲ್ ಬಿಹಾರಿ ವಾಜಪೇಯಿ ಬಳಿಕ, ದೇಶದಲ್ಲಿಅವರಷ್ಟೆ ಅಭಿಮಾನಿಗಳನ್ನು ಹೊಂದಿರುವ ವ್ಯಕ್ತಿ ಇದ್ದರೆ ಅದು ಜಾರ್ಜ್ ಫೆರ್ನಾಂಡಿಸ್.

ಅಪ್ಪಟ ದೇಶ ಭಕ್ತ, ಬಂಡಾಯವೆ ಇವರ ಗುರುತು, ಛಲಗಾರ, ವಾಗ್ಪಟು, ಮಾನವತಾವಾದಿ ಜಾರ್ಜ್ ಅವರ ಜೀವನವೆ ಒಂದು ಯಶೋಗಾಥೆ. ಕಠಿಣ ಪರಿಶ್ರಮದಿಂದ ಶೂನ್ಯದಿಂದ ನಭಕ್ಕೇರಿದ ಛಲದಂಕ ಮಲ್ಲ. ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಜಾರ್ಜ್ ಸಂಸತ್ತಿನಲ್ಲಿ ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು!! ಕಾರ್ಮಿಕ ಚಳುವಳಿಯ ಅಗ್ರಗಣ್ಯ ನೇತಾರರಾಗಿದ್ದ “George, The Giant Killer” ಇಂದಿರಾ “ಹಿಟ್ಲರ್ ದೀದಿ”ಗೆ ಬಹು ದೊಡ್ಡ ತಲೆನೋವಾಗಿದ್ದರು. ಜಯಪ್ರಕಾಶ್ ನಾರಾಯಣ್ ಗರಡಿಯಲ್ಲಿ ಪಳಗಿದ ಜಾರ್ಜ್ ಹೆಸರೆತ್ತಿದರೆ ಇಂದಿರಾ ಗಾಂಧಿಗೂ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿತ್ತು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಇಂದಿರಾಗಾಂಧಿ ಸರಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರ್ಜ್ ರನ್ನು ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಇದು “ಬರೋಡಾ ಡೈನಮೈಟ್” ಪ್ರಕರಣವೆಂದೆ ಖ್ಯಾತಿ ಪಡೆದಿದೆ.

ಮುಂದೆ ಇಂದಿರಾ ಸರಕಾರ ಇವರನ್ನು ಬಂಧಿಸಿ ಜೈಲಿಗಟ್ಟಿತು. ಸೆರೆಮನೆಯಲ್ಲಿ ಕೈದಿಯಾಗಿದ್ದಾಗ ಸಹ ಕೈದಿಗಳಿಗೆ ಭಗವದ್ಗೀತೆ ಓದಿ ಹೇಳಿದವರು ಜಾರ್ಜ್!! ಜೈಲಿನಿಂದಲೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಬರೋಬ್ಬರಿ 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರದಲ್ಲಿ ಕೈಗಾರಿಕಾ ಸಚಿವರಾದರು. ಸಚಿವಾರಾಗಿದ್ದ ಕಾಲದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಐಬಿಎಮ್ ಮತ್ತು ಕೋಕೋಕೋಲಾ ಕಂಪನಿಗಳನ್ನೆ ಗಂಟು ಮೂಟೆ ಕಟ್ಟುವಂತೆ ಮಾಡಿದವರು ಜಾರ್ಜ್.

ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಿದವರು ಜಾರ್ಜ್. ಅಟಲ್ ಸರಕಾರದಲ್ಲಿ ದೇಶದ ರಕ್ಷಣಾ ಸಚಿವರಾಗಿದ್ದಾಗ ಕಾರ್ಗಿಲ್ ಯುದ್ದವನ್ನು ಸಮರ್ಥವಾಗಿ ನಿಭಾಯಿಸಿದ್ದವರು ಜಾರ್ಜ್. ಗುಜರಾತ್ ದಂಗೆಯ ಸಮಯದಲ್ಲಿ ಮೋದಿ ಅವರ ಆಹ್ವಾನದ ಮೇರೆಗೆ ಗುಜರಾತಿಗೆ ತೆರಳಿ ಭಾರತೀಯ ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಕ್ಷಣಾ ಕಾರ್ಯದಲ್ಲಿ ನಿರತರಾದವರು ಜಾರ್ಜ್. ಜಾರ್ಜ್ ಎನ್ನುವುದು ಒಂದು ವ್ಯಕ್ತಿ ಅಲ್ಲ, ಅದು ದೇಶ ಪ್ರೇಮದ ಸಾಕಾರ ಮೂರ್ತ ಸ್ವರೂಪ!

ಆರಂಭದ ದಿನಗಳಿಂದಲೂ ಗಾಂಧಿ ಪರಿವಾರದೊಂದಿಗೆ ದ್ವೇಷ ಕಟ್ಟಿಕೊಂಡಿದ್ದರಿಂದಾಗಿ ಆ ಪರಿವಾರದ ಸದಸ್ಯರಿಗೆ ಅವರನ್ನು ಕಂಡರಾಗುತ್ತಿರಲಿಲ್ಲ. ಅದರಲ್ಲೂ ಸೋನಿಯಾ ಗಾಂಧಿಯನ್ನು ಬಹಿರಂಗವಾಗಿಯೆ ಟೀಕಿಸುತ್ತಿದ್ದುದ್ದರಿಂದ ಮೇಡಮ್ ಜಿ ಗೆ ಜಾರ್ಜ್ ಅನ್ನು ಕಂಡರೆ ಕೆಂಡಾಮಂಡಲ ಕೋಪ. ಸೋನಿಯಾ ಗಾಂಧಿಯನ್ನು ಟೀಕಿಸುತ್ತಿದ್ದರು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರ ಮೇಲೆ ‘ಕಾಫಿನ್‌ಗೇಟ್‌'(ಶವಪೆಟ್ಟಿಗೆ) ಹಗರಣ, ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳ ಆರೋಪ ಹೊರಿಸಲಾಯಿತು. ಕಾರ್ಗಿಲ್ ಯುದ್ದ ಸಂಧರ್ಭದಲ್ಲಿ ಶವಪೆಟ್ಟಿಗೆ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ ಅನ್ನುವ ಸುಳ್ಳು ಆರೋಪ ಹೊರಿಸಲಾಯಿತು.

ಆದರೆ ವಾಸ್ತವವಾಗಿ ಅವು ಶವಪೆಟ್ಟಿಗೆಯಾಗಿರಲಿಲ್ಲ, ಅಲ್ಯೂಮಿನಿಯಂ ಕ್ಯಾಸ್ಕೆಟ್ಗಳಾಗಿದ್ದವು! ಗುಲಾಮ ಮಾಧ್ಯಮಗಳಿಗೆ ಅಲ್ಯೂಮಿನಿಯಂ ಶಬ್ದಕ್ಕಿಂತ ‘ಶವಪೆಟ್ಟಿಗೆ’ ಎನ್ನುವ ಶಬ್ದ ಹೆಚ್ಚು ರುಚಿಸಿದ ಕಾರಣ ಜಾರ್ಜ್ ಮೇಲೆ ಅಪವಾದ ಹೊರಿಸಲು ಸುಲಭವಾಯಿತು. ಆರೋಪ ಹೊರಿಸಿದ್ದೆ ಬಂತು, ತನ್ನ ಜೀವಮಾನದಲ್ಲಿ ಯಾವ ಆರೋಪವನ್ನು ಸಾಬೀತು ಮಾಡಲೂ ಕಾಂಗ್ರೆಸ್ ಕೈಯಲ್ಲಿ ಸಾಧ್ಯವಾಗಲೆ ಇಲ್ಲ. ಜಾರ್ಜ್ ರನ್ನು ಬಲ್ಲವರಿಗೆ ಅವರು ಯಾವತ್ತೂ ದೇಶದ್ರೋಹದ ಕೆಲಸ ಮಾಡುವುದಿಲ್ಲ ಎನ್ನುವುದು ಗೊತ್ತು. ಆದರೂ ಮೇಡಮ್ ಜಿ ಮತ್ತು ಬಳಗ ಅವರನ್ನು ದೆವ್ವದಂತೆ ಬೆಂಬತ್ತಿದರು.

ತನಗೆ “ಜಿ ಹುಜೂರ್” ಎನ್ನದ ವ್ಯಕ್ತಿಯ ಮೇಲೆ ಆರೋಪ ಹೊರಿಸುವುದು, ಅವರ ಚಾರಿತ್ರ್ಯ ಹರಣ ಮಾಡಿ ಮಾನಸಿಕ ಕಿರುಕುಳ ಕೊಡುವುದು ಮೇಡಮ್ ಜಿಯ ಮೆಚ್ಚಿನ ಹವ್ಯಾಸ. ಅಬ್ದುಲ್ ಕಲಾಂ. ಜಾರ್ಜ್ ಫೆರ್ನಾಂಡಿಸ್, ತನ್ನದೇ ಪಕ್ಷದ ನರಸಿಂಹ ರಾವ್, ಪ್ರಣಬ್ ಮುಖರ್ಜಿ ಅಂತಹವರನ್ನು ಮೇಡಮ್ ಜೀ ದ್ವೇಷಿಸುವುದು ಅವರೆಲ್ಲ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೆಂದು. ಇಡಿಯ ದೇಶವೆ ತನ್ನ ಕಾಲು ನೆಕ್ಕಿಕೊಂಡು ಬಿದ್ದಿರಬೇಕು ಎಂದು ಮೇಡಮ್ ಜಿ ಮನದಾಸೆ. ಆದರೆ ಇದು ಸ್ವಾಭಿಮಾನಿಗಳ ದೇಶ ಭಾರತ. ಮೇಡಮ್ ಜಿ ಏನು ರಾಣಿ ವಿಕ್ಟೋರಿಯಾ ಅಲ್ಲ, ಯಕಶ್ಚಿತ್ ಬಾರ್ ನರ್ತಕಿ. ರಾಣಿ ವಿಕ್ಟೋರಿಯಾಗೂ ಸಲಾಂ ಹೊಡೆಯುವ ಬರಗೆಟ್ಟ ಪರಿಸ್ಥಿತಿ ದೇಶಭಕ್ತರಿಗಿಲ್ಲ. ದೇಶದ್ರೋಹಿ ಮನಸ್ಥಿತಿಯ ಕಾಂಗ್ರೆಸಿನ ಗುಲಾಮರು ಈಕೆಯ ತಾಳಕ್ಕೆ ಥಕ ಥೈ ಕುಣಿಯಬಹುದು ಆದರೆ ದೇಶ ಭಕ್ತರಲ್ಲ.

ಅಲ್ಜೈಮರ್ಸ್ ಖಾಯಿಲೆಗೆ ತುತ್ತಾದ ಜಾರ್ಜ್ ಫೆರ್ನಾಂಡಿಸ್ ರವರು ಇವತ್ತು ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ. ಅವರ ಇರುವಿಕೆಯ ಪರಿವೆಯೂ ದೇಶದ ಜನರಿಗಿಲ್ಲ. ಅಟಲ್ ಜಿ ಮತ್ತು ಜಾರ್ಜ್ ಫೆರ್ನಾಂಡಿಸ್ ಅವರಂತಹ ಮಹಾನ್ ದೇಶಭಕ್ತರಿಬ್ಬರು ಕಡೆಗಾಲದಲ್ಲಿ ಅನಾಮಿಕ ಜೀವನವನ್ನು ಕಳೆಯಬೇಕಾಗಿ ಬಂದಿರುವುದು ದುರ್ದೈವ. ಅವರ ಆರೋಗ್ಯವೇನಾದರೂ ಚೆನ್ನಾಗಿದ್ದಿದ್ದರೆ ಭಾರತದ ಅಭಿವೃದ್ದಿ ಕಂಡು ಹಿರಿ ಜೀವಗಳು ಆನಂದ ಭಾಷ್ಪ ಸುರಿಸುತ್ತಿದ್ದವು. ದೇವರು ಆ ಹಿರಿ ಜೀವಗಳಿಗೆ ಸದಾ ಮಂಗಲವನ್ನೀಯಲಿ ಎನ್ನುವುದಷ್ಟೆ ದೇಶ ಭಕ್ತರ ಅಭಿಲಾಷೆ…

ಜಾರ್ಜ್ ಫೆರ್ನಾಂಡಿಸ್ ರವರೆ ನಿಮಗೆ ಹುಟ್ಟು ಹಬ್ಬದ(ಜೂನ್ 3) ಶುಭಾಶಯಗಳು.. ನಿಮ್ಮನ್ನು ಸದಾ ನೆನಪಿಸುತ್ತೇವೆ…..

-ಶಾರ್ವರಿ

Tags

Related Articles

Close