ಪ್ರಚಲಿತ

ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದ ರಾಹುಲ್ ಗಾಂಧಿಯ ಚಳಿ ಬಿಡಿಸಿದ ದೇಶವಾಸಿಗಳು!!

ಕಾಂಗ್ರೆಸ್ ಸರಕಾರದ ಅಧಿಕಾರದ ಅವಧಿಯಲ್ಲಿ ದೇಶಕ್ಕಾಗಿ ಯಾವ ರೀತಿ ಸೇವೆಯನ್ನು ಸಲ್ಲಿಸಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ!! ಅಷ್ಟು ವರ್ಷಗಳ ಕಾಲ ದೇಶವನ್ನು ಆಡಳಿತ ನಡೆಸಿದರೂ ಸಹ ಬಡ ಜನತೆಯನ್ನು ಅಭಿವೃದ್ಧಿ ಮಾಡುವ ಕಾರ್ಯಕ್ಕೆ ತೊಡಗದೆ ಹಾಗೇ ಇದ್ದರು!! ತಮ್ಮ ಆಡಳಿತಾವಧಿಯಲ್ಲಿ ಶೋಕಿ ಮಾಡಿದ್ದಲ್ಲದೆ ದೇಶದ ಅಭಿವೃದ್ಧಿಯನ್ನು ಮಾಡುವ ಬದಲು ಇಡೀ ದೇಶವನ್ನು ಕೊಳ್ಳೆ ಹೊಡೆದಿದ್ದೇ ಜಾಸ್ತಿ!! ಇದ್ದ ಬದ್ದ ಹಗರಣಗಳನ್ನು ಮಾಡಿ ಭಾರತದ ಆಸ್ತಿಯನ್ನೆಲ್ಲಾ ಕೊಳ್ಳೆ ಹೊಡೆದಿದ್ದಲ್ಲದೆ ಭಾರತದ ಅಭಿವೃದ್ಧಿಯನ್ನಂತು ಮಾಡಿಲ್ಲ!! ಜನರಿಗೆ ಉಪಯೋಗವಾಗುವಂತಹ ಯಾವುದೇ ಒಂದು ಅಭಿವೃದ್ಧಿಯನ್ನು ಮಾಡಿಲ್ಲ!!

ಪ್ರಧಾನಿ ನರೇಂದ್ರ ಮೋದಿಜೀಯವರು ಆಡಳಿತದ ಚುಕ್ಕಾಣಿಯನ್ನು ಹಿಡಿದ ಬಳಿಕ ಕೇವಲ ನಾಲ್ಕು ವರ್ಷದಲ್ಲಿ ಮಾಡಿದ ಸಾಧನೆ ಅಪಾರ!! ಯಾವತ್ತೂ ತಾನೊಬ್ಬ ಪ್ರಧಾನಿ ಎಂದು ಎಂದು ಅಹಂಕಾರ ಮಾತುಗಳನ್ನಾಡದೆ ನಾನೊಬ್ಬ ಪ್ರಧಾನ ಸೇವಕ ಎಂದು ತಾನೇ ಹೇಳುವ ಮೂಲಕ ಈಗಾಗಲೇ ಜನರ ಮನಗೆದ್ದಿದ್ದಾರೆ!! ಕೇವಲ 4 ವರ್ಷಗಳಲ್ಲಿ ಮೋದಿ ಆಡಳಿತ ನಡೆಸಿದ ಪರಿಯನ್ನು ಕಂಡು ಇಡೀ ಭಾರತದ ಜನತೆ ಮುಂದೆಯೂ ಅವರನ್ನೇ ಪ್ರಧಾನಿಯನ್ನಾಗಿ ಮಾಡಬೇಕೆಂದು ಹಾತೊರೆಯುತ್ತಿದ್ದಾರೆ!! ಆದರೆ ಕಾಂಗ್ರೆಸ್ ಆಡಳಿತವನ್ನು ತೆಗಳುವುದು ಬಿಟ್ಟರೆ ಯಾರೂ ಹೊಗಳುವವರಿಲ್ಲ!!

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ತಾಯಿ ಜತೆ ವಿದೇಶಕ್ಕೆ ತೆರಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಷಿಯಲ್ ಮೀಡಿಯಾದ ಬಿಜೆಪಿ ಟ್ರೋಲ್ ಸ್ನೇಹಿತರೇ ನಾನು ಭಾರತದಲ್ಲಿ ಇಲ್ಲವೆಂದು ತುಂಬಾ ಕೆಲಸ ಮಾಡಬೇಡಿ ನಾನು ಶೀಘ್ರದಲ್ಲಿಯೇ ಹಿಂತಿರುಗುತ್ತೇನೆ ಎಂದು ಕಿಚಾಯಿಸಿದ್ದಾರೆ!!

ಇದೀಗ ಸೋನಿಯಾಗಾಂಧಿಗೆ ಆರೋಗ್ಯದ ಸಮಸ್ಯೆ ಕಾಡಿದ್ದು ರಾಹುಲ್ ಗಾಂಧೀ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಹೊರದೇಶಕ್ಕೆ ಕರೆದುಕೊಂಡು ಹೋಗಿದ್ದು!! ಇದೀಗ ಟ್ವಿಟರ್‍ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ!! ಇಷ್ಟು ವರ್ಷಗಳ ಕಾಲ ಭಾರತದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದರೂ ಒಂದು ಸರಿಯಾದ ಅಸ್ಪತ್ರೆಯನ್ನು ಕಟ್ಟಿಲ್ಲ!! ಒಂದು ವೇಳೆ ಇಂತಹ ಎಲ್ಲಾ ಸವಲತ್ತುಗಳಿರುವ ಆಸ್ಪತ್ರೆಯನ್ನು ಕಟ್ಟುತ್ತಿದ್ದರೆ ಇಂದು ಇಂತಹ ಪರಿಸ್ಥಿತಿಯಾಗುತ್ತಿತ್ತಾ? ವಿದೇಶದಲ್ಲಿ ಸಿಗುವ ಚಿಕಿತ್ಸೆಗಳು ಭಾರತದಲ್ಲೇ ಸಿಗುವಂತೆ ಮಾಡುತ್ತಿದ್ದರೆ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತಾ, ಇಂದು ನಿಮ್ಮ ತಾಯಿಯವರಿಗೆ ಇಲ್ಲಿಯೇ ಚಿಕಿತ್ಸೆಯನ್ನು ಕೊಡಬಹುದಿತ್ತಲ್ಲವೇ ಇದಕ್ಕೆಲ್ಲಾ ಕಾರಣ ನಿಮ್ಮ ದುರಾಡಳಿತವೇ ಎಂದು ಟ್ವಿಟರ್‍ನಲ್ಲಿ ಕಾಲೆಳೆದಿದ್ದಾರೆ!!

ರಾಹುಲ್ ಗಾಂಧಿ ಟ್ವೀಟ್‍ಗೆ ಟಾಂಗ್ ಕೊಟ್ಟಿರುವ ಬಿಜೆಪಿ, ನಾವು ಸೋನಿಯಾ ಗಾಂಧಿ ಅರೋಗ್ಯ ಚೆನ್ನಾಗಿರಲೆಂದು ಬಯಸುತ್ತೇವೆ. ಅದೇ ರೀತಿ ಕರ್ನಾಟದ ಹೆಣ್ಣು ಮಕ್ಕಳು ಸಂಪುಟ ರಚನೆಯನ್ನು ಎದುರು ನೋಡುತ್ತಿದ್ದು ಅವರಿಗೆ ರಾಜ್ಯ ಸರ್ಕಾರದ ಸೇವೆ ಆರಂಭಿಸಲಿದೆಯೇ. ನೀವು ವಿದೇಶಕ್ಕೆ ಹೊರಡುವ ಮುನ್ನವೇ ಸರ್ಕಾರ ಕಾರ್ಯಗತವಾಗಲಿದೆ ಎಂದು ನೀವು ಅಭಯ ನೀಡುವಿರಾ ಎಂದು ಟ್ವೀಟ್ ಮಾಡಿದ್ದಾರೆ!! ಇದೇ ವೇಳೆ ನೀವು ವಿದೇಶದಲ್ಲಿದ್ದರೂ ಅಲ್ಲಿಂದಲೇ ನಮಗೆ ಮನೋರಂಜನೆ ಒದಗಿಸುವಿರೆಂದು ನಾವು ಹಾರೈಸುತ್ತೇವೆ ಎಂದು ಬಿಜೆಪಿ ರಾಹುಲ್ ಗಾಂಧಿ ಕಾಲೆಳೆದಿದೆ. 2011ರಲ್ಲಿ ಸೋನಿಯಾ ಗಾಂಧಿ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದೀಗ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದು ವಾರದ ನಂತರ ರಾಹುಲ್ ಗಾಂಧಿ ಭಾರತಕ್ಕೆ ಮರಳಬಹುದು. ಆದರೆ ಸೋನಿಯಾ ಅವರು ಮಾತ್ರ ಹೆಚ್ಚಿನ ದಿನ ವಿದೇಶದಲ್ಲೇ ಕಳೆಯಲಿದ್ದಾರೆ.

ಪ್ರಧಾನಿ ನರೇಂದ್ರ ಸರಕಾರವು ಕೇವನ ನಾಲ್ಕು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಕೆಲಸಮಾಡಿದ್ದನ್ನು 70 ವರ್ಷಗಳಲ್ಲಿ ಕಾಂಗ್ರೆಸ್ಸಿಗರು ಅಧಿಕಾರ ನಡೆಸಿರೂ ಯಾವ ಒಂದು ಅಭಿವೃದ್ಧಿ ಕಾರ್ಯವನ್ನು ಮಾಡಲು ಸಾಧ್ಯವಾಗಿಲ್ಲ ಎಂದರೆ ನಿಜವಾಗಿಯೂ ಅಸಹ್ಯಕರ ಇಂತಹ ಸರಕಾರ ಮುಂದೆ ನಮಗೆ ಬೇಕಾ ಎಂಬುವುದನ್ನು ಒಮ್ಮೆ ಯೋಚಿಸಿ !!

  • ಪವಿತ್ರ
Tags

Related Articles

Close