ಪ್ರಚಲಿತ

ಭಾರತ ಮಾತೆ ಎಲ್ಲಿ, ಇಟಲಿಯ ಆ್ಯಂಟನಿಯೋ ಮೈನೋ ಎಲ್ಲಿ: ಹೋಲಿಕೆಗೂ ಅರ್ಥ ಬೇಡವೇ?

ಕಾಂಗ್ರೆಸ್ ಪಕ್ಷದ ನಾಯಕರಿಗೆ ನಕಲಿ ಗಾಂಧಿ ಕುಟುಂಬದ ಮೇಲೆ ಅದೇನು ಕುರುಡು ಪ್ರೀತಿಯೋ ಗೊತ್ತಿಲ್ಲ. ಆದರೆ ಸೋನಿಯಾ ಗಾಂಧಿ ಅಲಿಯಾಸ್ ಆ್ಯಂಟನಿಯಾ ಮೈನೋ ಮತ್ತು ಅವರ ಕುಟುಂಬವನ್ನು ಸದಾ ಕಾಲ ಪೂಜೆ ಮಾಡುತ್ತಾ, ಏನಾದರೊಂದು ಎಡವಟ್ಟು ಮಾಡುತ್ತಾ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುತ್ತಾರೆ ಎನ್ನುವುದಂತೂ ಸತ್ಯ.

ಸದ್ಯ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಒಂದು ಎಡವಟ್ಟು ಮಾಡಿಕೊಂಡಿದ್ದು, ಇದರಿಂದಾಗಿ ಭಾರೀ ಜನಾಕ್ರೋಶ ಎದುರಿಸುವಂತಾಗಿದೆ. ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ ಎಂದು ಬಿಂಬಿಸುವ ಮೂಲಕ ಈ ಬಾರಿ ತೆಲಂಗಾಣ ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ. ಭಾರತ ಮಾತೆಯಂತೆ ಸೋನಿಯಾರನ್ನು ಬಿಂಬಿಸಿ ಪೋಸ್ಟರ್ ಹಾಕಲಾಗಿದ್ದು, ಕಾಂಗ್ರೆಸ್‌ನ ಇಂತಹ ಅತಿರೇಕದ, ದುರ್ವರ್ತನೆ ವಿರುದ್ಧ ಬಿಜೆಪಿ ಸಹ ಕಿಡಿ ಕಾರಿದೆ.

ಸೋನಿಯಾರನ್ನು ಭಾರತ ಮಾತೆಗೆ ಹೋಲಿಕೆ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಚಿಗೇಡಿನ ವಿಷಯ. ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಸತತವಾಗಿ ಕುಟುಂಬವಾದವನ್ನು ದೇಶದ ಜನರ ಮೇಲೆ ಹೇರುತ್ತಿದೆ. ಇಂತಹ ವರ್ತನೆಗೆ ಕಾಂಗ್ರೆಸ್ ನಾಚಿಕೆ ಪಡಬೇಕು ಎಂದು ಬಿಜೆಪಿ ಹೇಳಿದೆ.

ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ನಡೆದ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆಯಲ್ಲಿ ಇಂತಹ ಎಡವಟ್ಟನ್ನು ಕಾಂಗ್ರೆಸ್ ಮಾಡಿದೆ. ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಸೋನಿಯಾರನ್ನು ಭಾರತ ಮಾತೆ ಗೆ ಹೋಲಿಸಿ ಹಾಕಲಾದ ಪೋಸ್ಟರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನೂ ಹಲವರ ಭಾವಚಿತ್ರಗಳನ್ನು ಹಾಕಲಾಗಿತ್ತು.

ಈ ಬಗ್ಗೆ ಕಿಡಿ ಕಾರಿರುವ ಬಿಜೆಪಿ ವಕ್ತಾರ ಶೆಹಜಾಬ್ ಪೂನಾವಾಲಾ, ಕಾಂಗ್ರೆಸ್ ಪಕ್ಷಕ್ಕೆ ಭಾರತಾಂಬೆಯನ್ನು ಅವಮಾನಿಸುವ ಗುಣ ಇದೆ ಎಂದು ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಆರಾಧನಾ ಮಿಶ್ರ ಅವರಂತಹ ನಾಯಕರು ‘ಭಾರತ್ ಮಾತಾ ಕಿ ಜೈ’ ಘೋಷಣೆ ಪಕ್ಷದ ಶಿಸ್ತಿಗೆ ವಿರುದ್ಧ ಇದೆ ಎಂದು ಹೇಳಿದ್ದರು. ಕಾಂಗ್ರೆಸ್ ‌ನ ಬಿ.ಡಿ. ಕಲ್ಲ ಅವರು ಭಾರತ್ ಮಾತಾಕಿ ‌ಜೈ ಎನ್ನುವ ಬದಲಾಗಿ ಸೋನಿಯಾ ಗಾಂಧಿಗೆ ಜೈ ಎನ್ನುವ ಮೂಲಕ ಸುದ್ದಿಯಾಗಿದ್ದರು.

ಒಟ್ಟಿನಲ್ಲಿ ದೇಶಕ್ಕೆ ಅಪಾರ ಮಾಡುವುದು, ದೇಶದ ವಿರುದ್ಧ ಮಾತನಾಡುವ ಸಂಸ್ಕೃತಿ ಕಾಂಗ್ರೆಸ್‌ನ ಹಳೆಯ ಚಾಳಿಯಾಗಿದ್ದು, ಸದ್ಯ ಭಾರತಾಂಬೆಯನ್ನೇ ಅವಮಾನಿಸಿ ಕಾಂಗ್ರೆಸ್ ಮತ್ತೊಮ್ಮೆ ಜನರೆದುರು ಬೆತ್ತಲಾಗಿದೆ.

Tags

Related Articles

Close