ಪ್ರಚಲಿತ

ಪ್ರಮಾಣ ವಚನ ಸ್ವೀಕರಿಸಿದ ಮರು ಘಳಿಗೆಯೆ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಮೂಲಭೂತವಾದಿ ಇಸ್ಲಾಮಿ ಸಿದ್ಧಾಂತದ ಪಿಎಫ್ಐ ನಾಯಕರನ್ನು ಭೇಟಿಯಾಗಿದ್ದೇಕೆ?

ವರದಿಗಳ ಪ್ರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ ) ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಎರಡೂ ಸಂಘಟನೆಗಳು ಮೂಲಭೂತವಾದಿ ಇಸ್ಲಾಮಿ ಸಿದ್ದಾಂತವನ್ನು ಪ್ರತಿಪಾದಿಸುತ್ತವೆ. ಈ ಸಂಘಟನೆಗಳು ರಾಷ್ಟ್ರವಿರೋಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂದು ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಆರೋಪ ಮಾಡಿದೆ. ವಿಧಾನ ಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೆ ಕ್ಷಣಗಳ ಒಳಗಾಗಿ ಕುಮಾರಸ್ವಾಮಿ ಈ ಎರಡು ಸಂಘಟನೆಗಳನ್ನು ಭೇಟಿಯಾಗಿದ್ದು ಯಾಕೆ?

ವಿಧಾನಸಭಾ ಚುನಾವಣೆಗಳಲ್ಲಿ ಈ ತೀವ್ರಗಾಮಿ ಇಸ್ಲಾಮಿ ಪಕ್ಷಗಳೊಂದಿಗೆ ಕಾಂಗ್ರೆಸ್ ಪಕ್ಷವು ಕೈ ಕುಲುಕಿಕೊಂಡಿದ್ದವು ಎನ್ನುವುದು ಜಗಜ್ಜಾಹೀರಾದ ಸತ್ಯ. ಕಾಗ್ರೆಂಸ್ಸಿಗೆ ಚುನಾವಣೆಯಲ್ಲಿ ಬೆಂಬಲ ನೀಡಲು ಪಿಎಫ್ಐ ಮತ್ತು ಎಸ್ ಡಿ ಪಿ ಐ ತಮ್ಮ ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡಿದ್ದವು. ಕಾಂಗ್ರೆಸಿನ ದಯೆಯಿಂದ “ಮುಲಾಜಿನ” ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಈ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಸಂಘಟನೆಗಳನ್ನು ಭೇಟಿಯಾಗಿರುವುದರ ಉದ್ದೇಶ ಇನ್ನು ಮುಂದೆ ತಾನೂ ಕೂಡಾ ಕಾಂಗ್ರೆಸಿನ ಹಾದಿ ತುಳಿದು ಇಂಥ ಸಂಘಟೆನೆಗಳ ಪಾಲನೆ ಪೋಷಣೆ ಮಾಡುತ್ತೇನೆ ಎಂಬುದಾಗಿದೆಯೆ?

ರಾಷ್ಟ್ರೀಯ ಗುಪ್ತಚರ ಇಲಾಖೆ(ಎನ್ ಐ ಎ) ಹಿಂದೂ ಮುನ್ನಾನಿ ಯ ಸದಸ್ಯ ಸಿ.ಸಸಿಕುಮಾರ್ ಅವರ ಕೊಲೆಯಲ್ಲಿ ಪಿಎಫ್ಐನ ಸದಸ್ಯರ “ಕೈ” ಇರುವುದನ್ನು ಮನಗಂಡಿದೆ ಮತ್ತು ಆತನ ಮೇಲೆ ಚಾರ್ಜ್ ಶೀಟ್ ಕೂಡಾ ದಾಖಲಿಸಿರುತ್ತದೆ. ಈ ಎರಡೂ ಸಂಘಟನೆಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿವೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಈ ಗುಂಪುಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದೆಯೆಂದು ಆರೋಪಿಸಿ ಎನ್ ಐ ಎಯು ಗೃಹ ಸಚಿವಾಲಯಕ್ಕೆ ಪ್ರತ ಬರೆದಿರುತ್ತದೆ. ದೇಶದಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಡೆಸುವುದು ಮತ್ತು ಬಾಂಬುಗಳನ್ನು ತಯಾರಿಸುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಂಘಟನೆಗಳು ನಿರತವಾಗಿವೆ ಆದ್ದರಿಂದ ಈ ಸಂಘಟನೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿ ನಿಷೇಧಿಸಬೇಕೆಂದು ಸಚಿವಾಲಕ್ಕೆ ಕೇಳಿಕೊಂಡಿದೆ.

ಇಂತಹ ಭಯೋತ್ಪಾದಕ ಸಂಘಟನೆಗಳನ್ನು ಭೇಟಿಯಾಗುವ “ಮುಲಾಜು ಮುಖ್ಯಮಂತ್ರಿ” ದೇಶಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ? ತಾನೂ ಕೂಡಾ ಕಾಂಗ್ರೆಸಿನ ಪದ ಚಿನ್ಹೆಗಳಲ್ಲಿ ನಡೆದು, ಹಿಂದೂ ಮಾರಣಹೋಮ ಮಾಡುವ, ಲವ್ ಜಿಹಾದ್ ನಡೆಸುವ ಇಂತಹ ಕಟ್ಟರ್ ಇಸ್ಲಾಮಿಕ್ ಸಂಘಟನೆಗಳ ಮೇಲೆ ತನ್ನ ಅಭಯ “ಹಸ್ತ”ವನ್ನಿಡುತ್ತೇನೆ ಎಂದು ಇದರ ಅರ್ಥವೆ? ಕೇರಳದಲ್ಲಿ ಕಾರ್ಯನಿರ್ವಹಿಸುವ ಈ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದೆ ಎನ್ನಲಾಗುತ್ತಿದೆ. ಜಾರ್ಖಂಡ್ ಸರಕಾರ ಈ ಸಂಘಟನೆಗೆ ತನ್ನ ರಾಜ್ಯದಲ್ಲಿ ನಿಷೇಧ ಹೇರಿದೆ. ಆದರೆ ಕರ್ನಾಟಕದ ಮುಲಾಜು ಮುಖ್ಯಮಂತ್ರಿ ಇಂತವರ ಜೊತೆ ನಿಂತು ಫೋಟೋಗೆ ಪೋಸು ನೀಡುತ್ತಿದ್ದಾರೆ. ದೇಶಕ್ಕಿಂತ ಅಧಿಕಾರದ ಕುರ್ಚಿಯೆ ಮೇಲೆನ್ನುವ ಮುಲಾಜಿಗೆ ಬಿದ್ದವರಿಂದ ದೇಶಪ್ರೇಮದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ. ಮುಖ್ಯಮಂತ್ರಿಯ ಅಭಯ ಹಸ್ತ ದೊರಕಿರುವ ಈ ಗುಂಪುಗಳು ಮುಂದೊಂದು ದಿನ ಕರ್ನಾಟಕದಲ್ಲಿ ಐಸಿಸ್ ಬಾವುಟ ಹಾರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.

-ಶಾರ್ವರಿ

Tags

Related Articles

Close