ಅಂಕಣ

ಪೊಲೀಸ್ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿಗಳನ್ನ ತನ್ನ ಸೋದರ – ಸೋದರಿಯರಂತೆ ಪ್ರೀತಿಸುವ ಭಾರತದ ಏಕೈಕ IPS ಅಧಿಕಾರಿ ನಿಜ ಜೀವನದ ಸಿಂಘಂ ಅಣ್ಣಾ ಮಲೈ ಅವರ ಮಾನವೀಯ ಮುಖದ ಅನಾವರಣ

ಹೆಸರಿನಲ್ಲಿ ಮಾತ್ರ ಅಣ್ಣನಿಲ್ಲ ಬದಲಾಗಿ ಅಣ್ಣಾ ಮಲೈ ಮನಸಿನಲ್ಲೂ ಒಬ್ಬ ದೊಡ್ಡಣ್ಣನಿದ್ದಾನೆ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಂದು ಕರ್ನಾಟಕೊಬ್ಬ ಎಸ್.ಪಿ. ಸಾಂಗ್ಲಿಯಾನ ಸಿಕ್ಕಿದ್ದರೆ ಇಂದು ಎಸ್.ಪಿ. ಅಣ್ಣಾ ಮಲೈ ಅಂಥ ದಕ್ಷ-ಪ್ರಾಮಾಣಿಕ ಮತ್ತು ಮಾನವೀಯ ಹೃದಯದ ವ್ಯಕ್ತಿ ಸಿಕ್ಕಿದ್ದಾರೆ. ಅಣ್ಣಾ ಮಲೈ ಹೆಸರು ಕೇಳಿದರೆ ಭ್ರಷ್ಟರು ಮತ್ತು ಅಪರಾಧಿಗಳು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಆದರೆ ಅವರ ಕೈ ಕೆಳಗಿನ ಸಹೋದ್ಯೋಗಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಸಾಮಾನ್ಯವಾಗಿ ಅಧಿಕಾರದಲ್ಲಿ ಮೇಲಿರುವ ವ್ಯಕ್ತಿಗಳು ತಮ್ಮ ಕೈ ಕೆಳಗಿನ ವ್ಯಕ್ತಿಗಳನ್ನು ತುಛ್ಚವಾಗಿ ನೋಡುತ್ತಾರೆ. ಅದರಲ್ಲೂ ಪೋಲೀಸ್ ಇಲಾಖೆಯಲ್ಲಂತೂ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳಿಂದ ಮನೆಯ ಕೆಲಸಗಳನ್ನೂ ಮಾಡಿಸುತ್ತಾರೆ ಕೆಲ ದರ್ಪದ ಮೇಲಾಧಿಕಾರಿಗಳು.

ಆದರೆ ನಮ್ಮ ಅಣ್ಣಾ ಮಲೈ ಅಂಥವರಲ್ಲ. ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ತಮ್ಮ ಒಡ ಹುಟ್ಟಿದ ಸಹೋದರ ಸಹೋದರಿಯರಂತೆ ಕಾಣುತ್ತಾರೆ ಎನ್ನುವುದನ್ನು ಸ್ವತಃ ಅವರದೆ ಇಲಾಖೆಯ ಕೆಳ ಹಂತದ ಸಿಬ್ಬಂದಿಯೊಬ್ಬರು ಬರೆದಿದ್ದಾರೆ. ಅಣ್ಣಾ ಮಲೈ ಅವರ ಬಗ್ಗೆ ಇರುವ ಗೌರವ ಸಿಬ್ಬಂದಿಯ ಬರವಣಿಗೆಯಿಂದ ತಿಳಿದು ಬರುತ್ತದೆ.

ಪೋಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಯೊಬ್ಬರು ಬರೆದಂತಹ ಮಾತುಗಳು ಎನ್ನಲಾಗುವ ಬರವಣಿಗೆಯ ಸಾರಾಂಶ ಇಂತಿದೆ:

“ವ್ಯಕ್ತಿ ಮತ್ತು ವ್ಯಕ್ತಿತ್ವ 100% ಪರಿಶುದ್ದವಾಗಿ ಇರುವುದು ಜಗತ್ತಿನ ಅಧ್ಬುತವೇ ಸರಿ . ಇದಕ್ಕೆ ಉತ್ತಮ ಉದಾಹರಣೆ ಅಣ್ಣಾಮಲೈ ಎಂಬ ಹೆಸರಿನ ನಿಷ್ಟಾವಂತ ಎಸ್.ಪಿ. ಬ್ರಿಟಿಷರ ಕಾಲದಲ್ಲಿದ್ದ ಗುಲಾಮಗಿರಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವ ಇಂದಿನ ಪೊಲೀಸ್ ವ್ಯವಸ್ಥೆಯಲ್ಲಿ ಈ ವ್ಯವಸ್ಥೆಗೆ ವಿರುದ್ದವಾಗಿ ನಡೆದು ಕೆಳಹಂತದ ಸಿಬ್ಬಂದಿಗಳು ಗುಲಾಮರಲ್ಲ, ಅವರು ಪ್ರಜಾ ಸೇವಕರು ಎನ್ನುವ ರೀತಿಯಲ್ಲಿ ಪ್ರೋತ್ಸಾಹವನ್ನ‌ ನೀಡಿ ಎದೆತಟ್ಟುವ ಧೀಮಂತ ವ್ಯಕ್ತಿತ್ವದ ಅಧಿಕಾರಿ‌ ಅಣ್ಣಾ ಮಲೈ.

ಮೊನ್ನೆ ನಡೆದ ಚುನಾವಣೆ ಸಂಬಂಧಿತ ಕರ್ತವ್ಯಕ್ಕೆ ಹೋಗಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಹಣ್ಣು – ನೀರು – ಜ್ಯೂಸ್ – ಬಿಸ್ಕತ್ ನೀಡಿದ್ದಾರೆ. ಅದೆಲ್ಲಕ್ಕಿಂತ ಮಿಗಿಲಾಗಿ ಅಮೃತ ಸಮಾನವಾದ ಮುತ್ತಿನಂತ ಮಾತು ( ನಿಮ್ಮ ಆರೋಗ್ಯದ ಕಡೆ ಗಮನ ನೀಡಿ ) ಎಂದು ತನ್ನ ಸಿಬ್ಬಂದಿಗಳಿಗೆ ಪತ್ರ ಬರೆದು ನೀಡಿರುವುದು ಸಾವಿರಾರು ಕೆಳಹಂತದ ಸಿಬ್ಬಂದಿಗಳಿಗೆ 100 ಆನೆಯ ಬಲವನ್ನ ತರಿಸಿದ್ದು ಸುಳ್ಳಲ್ಲ . ಹುಡುಕಿದರೂ ಸಾಸಿವೆ ಕಾಳಿನಷ್ಟು ತಪ್ಪಿಗೆ ಸಿಗದ ಕಪ್ಪು ಚುಕ್ಕೆಯಷ್ಟು ಕಳಂಕ ಹೊಂದಿರದ ಸಿಬ್ಬಂದಿಗಳ ನೋವಿಗೆ ಸ್ಪಂದಿಸುವ ವಜ್ರಕ್ಕಿಂತ ಬೆಲೆಬಾಳುವ ವ್ಯಕ್ತಿತ್ವದ ಇಂತಹ ಉನ್ನತ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿದ್ದರೆ ದಿನದ 24 ಗಂಟೆಯೂ ಹೆಗಲು ಕೊಟ್ಟು ದುಡಿಯಲು ನಾವುಗಳೆಲ್ಲರೂ ಸಿದ್ದ ಎಂದು ಕರ್ನಾಟಕ ರಾಜ್ಯದ ಎಲ್ಲಾ ಪೊಲೀಸರ ಪರವಾಗಿ ನಾನು ಹೇಳಲು ಇಚ್ಛಿಸುತ್ತೇನೆ .

ಉನ್ನತ ಹುದ್ದೆ ಪಡೆಯುವುದು ಸಾಧನೆಯಲ್ಲ ಉನ್ನತ ಹುದ್ದೆಯ ಘನತೆ ಮತ್ತು ಯೋಗ್ಯತೆಯನ್ನು ಕಾಪಾಡಿಕೊಂಡು ಹೋಗುವುದೇ ನಿಜವಾದ ಸಾಧನೆ ಎಂಬುದು ನನ್ನ ಅನಿಸಿಕೆ . ಕಾಂಜೀಪೀಂಜಿ ನಟ‌ನಟಿಯರನ್ನ‌- ಹೊಲಸು ರಾಜಕಾರಣಿಗಳನ್ನ ಹೊತ್ತು ಮೆರೆಸುವ ಕರ್ನಾಟಕದ ನಾಗರೀಕರೆ ನಿಜ ಜೀವನದ ನಾಯಕ ಅಣ್ಣಾಮಲೈ ರವರಂತವರ ಬಗ್ಗೆ ಕೂಡ ತಿಳಿದುಕೊಳ್ಳೋಕೆ ಪ್ರಯತ್ನಿಸಿ‌.”

ಕೆಳ ಹಂತದ ಓರ್ವ ಪೋಲೀಸ್ ಸಿಬ್ಬಂದಿ ಅಣ್ಣಾ ಮಲೈ ಅವರ ಬಗ್ಗೆ ಈ ಮಾತುಗಳನ್ನು ಹೇಳಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿ. ಇಲಾಖೆಯ ಪ್ರತಿಯೊಬ್ಬರೂ ಅಣ್ಣಾ ಮಲೈ ಅಂತಹ ಸಿಂಘಂ ವ್ಯಕ್ತಿತ್ವದೊಂದಿಗೆ ಮಗುವಿನ ಮನಸ್ಸನ್ನೂ ಹೊಂದಿದರೆ ರಾಜ್ಯದಲ್ಲಿ ಕುಖ್ಯಾತಿ ಪಡೆದಿರುವ ಪೋಲೀಸ್ ಇಲಾಖೆಯ ಬಗ್ಗೆ ಜನತೆಗೂ ಅಭಿಮಾನ ಮತ್ತು ಗೌರವ ಮೂಡುವುದು. ಅಣ್ಣಾ ಮಲೈ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ. ಕರ್ನಾಟಕಕ್ಕೆ ಮಾತ್ರವಲ್ಲ ಇಡಿಯ ದೇಶಕ್ಕೆ ಅಣ್ಣಾ ಮಲೈ ಅಂತಹ ಅಧಿಕಾರಿಗಳು ಸಿಗಲಿ.

-ಶಾರ್ವರಿ

Tags

Related Articles

Close