ದೇಶರಾಜ್ಯ

ಹಲಾಲ್ ವಿರುದ್ಧ ಬಹಿರಂಗವಾಗಿ ನಿಂತ ರಾಜ್ಯ ಬಿಜೆಪಿ!

ಕೆಲ ಸಮಯದ ಹಿಂದೆ ದೊಡ್ಡ ಪ್ರಮಾಣ‌ದಲ್ಲಿ ಸುದ್ದಿಯಾಗಿದ್ದ ಹಲಾಲ್ ವಿವಾದ ನಿಮ್ಮೆಲ್ಲರಿಗೂ ನೆನಪಿರಬಹುದು. ಯಾವುದೋ ಒಂದು ಧರ್ಮದ ಹಲಾಲ್ ಆಚರಣೆ, ಹಲಾಲ್ ಹೆಸರಲ್ಲಿ ಆಹಾರ ಪದಾರ್ಥಗಳನ್ನು ಎಂಜಲಾಗಿಸಲಾಗುತ್ತದೆ ಎಂದೆನ್ನುವ ವೈರಲ್ ವಿಡಿಯೋ‌ಗಳನ್ನು ಸಹ ನೀವು ಗಮನಿಸಿರಬಹುದು. ಹಾಗೆಯೇ ಮುಸ್ಲಿಮರು ಆಚರಿಸುವ ಹಲಾಲ್‌ನಿಂದ ಅಪಾಯವನ್ನು ಅರಿತ ಹಿಂದೂಗಳು ಜಟ್ಕಾ ಕಟ್ ಎಂಬ ಹೊಸ ವಿಧಾನವನ್ನು ಅನುಸರಿಸಿದ್ದು ಸಹ ನಿಮ್ಮೆಲ್ಲರಿಗೂ ತಿಳಿದಿರಬಹುದು. ಈ ಹಲಾಲ್‌ಗೆ ಸಂಬಂಧಿಸಿದಂತೆ ಸದ್ಯ ಇರುವ ಹೊಸ ವಿಚಾರದತ್ತ ನಾವಿಲ್ಲಿ ನೋಡೋಣ.

ಕೆಲವು ಧಾರ್ಮಿಕ ಸಂಸ್ಥೆ‌ಗಳು ಆಹಾರ ಪದಾರ್ಥ‌ಗಳಿಗೆ ಹಲಾಲ್ ಪ್ರಮಾಣ‌ಪತ್ರ ನೀಡುತ್ತಿವೆ. ಈ ಸಂಸ್ಥೆಗಳು ‘ಧಾರ್ಮಿಕ ಸಂಸ್ಥೆ‌ಗಳು’ ಎಂಬುದಾಗಿ ನೋಂದಣಿಯಾಗಿದ್ದು, ಇಂತಹ ಸಂಸ್ಥೆಗಳಿಗೆ ಪ್ರಮಾಣ ಪತ್ರ ನೀಡುವ ಯಾವುದೇ ಅಧಿಕಾರ ಇರುವುದಿಲ್ಲ. ಈ ಸಂಬಂಧ ಖಾಸಗಿ ವಿಧೇಯಕ ಮಂಡನೆಗೆ ಸಭಾಪತಿಗಳಿಗೆ ಪತ್ರ ಬರೆಯಲಾಗಿದ್ದು, ಆ ಅವಕಾಶ ನೀಡಲಾದಲ್ಲ ಈ ಸಂಬಂಧ ಹಲಾಲ್ ವಿರುದ್ಧ ವಿಧೇಯಕ ಮಂಡಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರ‌ದ ಅನುಮತಿ ಇಲ್ಲದೆಯೇ ಧಾರ್ಮಿಕ ಸಂಸ್ಥೆ‌ಗಳು ಈ ಪ್ರಮಾಣಪತ್ರ ನೀಡುತ್ತಿವೆ. ಯಾವುದೇ ಖಾಸಗಿ, ಧಾರ್ಮಿಕ ಸಂಸ್ಥೆ‌ಗಳು, ವ್ಯಕ್ತಿಗಳಿಗೆ ಸರ್ಕಾರ ಈ ಅನುಮತಿ, ಅಧಿಕಾರ ನೀಡಿಲ್ಲ. ಯಾವುದೇ ವಸ್ತುವಾಗಲಿ ಎಫ್ಎಸ್‌ಎಸ್‌ಎ‌ಐ ಹೊರತಾಗಿ ಮತ್ಯಾರೂ ಪ್ರಮಾಣ ಪತ್ರ ನೀಡಿದಲ್ಲಿ ಅಥವಾ ಪಡೆದಲ್ಲಿ ಅದು ಅಪರಾಧ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಹಲಾಲ್ ಅನ್ನು ಕೆವಲ ಮಾಂಸಾಹಾರಕ್ಕೆ ಮಾತ್ರ ಹಾಕಲಾಗುತ್ತಿಲ್ಲ. ಆಸ್ಪತ್ರೆ, ಖಾದ್ಯಗಳ ಮೇಲೆ, ಇನ್ನೂ ಅನೇಕ ಕಡೆಗಳಲ್ಲಿ ಹಲಾಲ್ ಮುದ್ರೆ ಬಳಕೆ ಕಾಣಬಹುದು. ಇಂತಹ ಪ್ರಮಾಣಪತ್ರ ನೀಡಲು ಧಾರ್ಮಿಕ ಸಂಸ್ಥೆ‌ಯವರಿಗೆ ಏನು ಹಕ್ಕಿದೆ? ಅವರೇ ನೀಡುವುದಾದಲ್ಲಿ ಆಹಾರ ಇಲಾಖೆ ಇರುವುದಾದರೂ ಏಕೆ? ಇಂತಹ ಪ್ರಮಾಣ ಪತ್ರ‌ಗಳನ್ನು ಧಾರ್ಮಿಕ ಸಂಸ್ಥೆ‌ಗಳು ನೀಡುವುದಾದಲ್ಲಿ ಆಹಾರ ಇಲಾಖೆಗೆ ಕೆಲಸ ಏನಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ‌ಯೂ ಹಲಾಲ್ ಕಾಣಬಹುದು ಎಂದು ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಹಲಾಲ್ ದಂಧೆಯಿಂದ ಸರ್ಕಾರ ನಷ್ಟ ಅನುಭವಿಸುವಂತಾಗಿದೆ. ತೆರಿಗೆ ಹಣಕ್ಕೂ ಇದು ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ, ಹಲಾಲ್ ವಿರುದ್ಧ ಖಾಸಗಿ ವಿಧೇಯಕ ಮಂಡಿಸಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಕಾನೂನು ತಜ್ಞರು, ಶಾಸಕರ ಜತೆಗೂ ಚರ್ಚೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.

ಮುಸಲ್ಮಾನ ಸಂಪ್ರದಾಯ‌ಗಳಿಗೆ ಬದ್ಧವಾಗಿ ಈ ಹಲಾಲ್ ಆಚರಣೆ ರೂಢಿಯಲ್ಲಿದೆ. ಈ ಪದ್ಧತಿ‌ಯನ್ನು ಎಲ್ಲರ ಮೇಲೆಯೂ ಹೇರುವುದರ ವಿರುದ್ಧ ಇತರ ಧರ್ಮದ ಜನರ ವಿರೋಧವಿದೆ. ಕೆಲ ಸಮಯದ ಹಿಂದೆ ಹಲಾಲ್ ವಿರುದ್ಧ ಸಾರ್ವಜನಿಕ ವಲಯದಲ್ಲಿ‌ಯೂ ಕೂಗು ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ರವಿಕುಮಾರ್ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.

Tags

Related Articles

Close